Categories
ಮಲ್ನಾಡ್

ಮದವೇರಿದ ಸಕ್ರೇಬೈಲಿನ ಮಣಿಕಂಠ…!

  • ಮದಗಜದ ಕಾಳಗ
  • ಆನೆಗೆ ಹೆದರಿ ದೂರ ಓಡಿದ ಮಾವುತ

ಶಿವಮೊಗ್ಗ: ಸಕ್ರೇಬೈಲಿನ ಆನೆಬಿಡಾರದಲ್ಲಿ ಆನೆಯೊಂದು ಮದವೇರಿದ ಕಾರಣ ಎರಡು ಆನೆಗಳ ಮೇಲೆ ಆಕ್ರಮಣಕಾರಿ ದಾಳಿ ನಡೆಸಿದ ಘಟನೆ ನಡೆದಿದೆ.
ಶಿವಮೊಗ್ಗ ಗಾಜನೂರು ಸಮೀಪದ ಸಕ್ರೇಬೈಲು ಆನೆಬಿಡಾರದ ಮಣಿಕಂಠ ಎಂಬ ಹೆಸರಿನ ಆನೆಯು ಮದವೇರಿದ ಕಾರಣ ಆಕ್ರಮಣಕಾರಿಯಾಗಿ ವರ್ತನೆ ತೋರಿತ್ತು. ಆನೆಯ ಅತಿಯಾದ ಆರ್ಭಟಕ್ಕೆ ಹೆದರಿ ಕಾವಾಡಿ ಹಾಗೂ ಮಾವುತ ದೂರ ಓಡಬೇಕಾಯಿತು.


ನಂತರ ಬಿಡಾರದ ಆನೆಗಳಾದ ಬಾಲಣ್ಣ ಹಾಗೂ ಇನ್ನೊಂದು ಮರಿಯಾನೆಯ ಮೇಲೆ ಮಣಿಕಂಠ ದಾಳಿ ನಡೆಸಿತ್ತು. ಬಾಲಣ್ಣ ಮತ್ತು ಮರಿಯಾನೆ ನೀರಿಗೆ ಹೋದರೂ ಅಲ್ಲೂ ಬೆನ್ನಟ್ಟಿ ದಂತದಿಂದ ದಾಳಿ ನಡೆಸಿತು. ಆನೆ ದಾಳಿಯನ್ನು ನಿಂತ್ರಿಸಲಾಗದೇ ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ಬಾಲಣ್ಣ ಆನೆಯ ಮಾವುತ ಗೌಸ್ ನೀರಿಗೆ ಹಾರಬೇಕಾಯಿತು.

ಆನೆಯ ವರ್ತನೆ ಕಂಡು ಇತರ ಆನೆಗಳನ್ನು ಕ್ರಾಲ್ ಇರುವ ಸ್ಥಳಕ್ಕೆ ಶಿಫ್ಟ್ ಮಾಡಿದರು.ಕೆಲವು ಕಾಲ ಆನೆಗಳ ವೀಕ್ಷಣೆಗೆ ಕ್ರಾಲ್ ಬಳಿಯೇ ಅವಕಾಶ ನೀಡಲಾಯಿತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.