Author: Nammur Express Admin

ಗೆಳೆಯ ಅಕ್ಷಯ್ ಜತೆ ಹಸೆಮಣೆ ನಿಹಾರಿಕಕೊರೊನಾ ಹಿನ್ನೆಲೆ ಕೆಲವೇ ಆಪ್ತರಿಗಷ್ಟೇ ಆಹ್ವಾನ ಬೆಂಗಳೂರು: ಸ್ಯಾಂಡಲ್ವುಡ್ ನಟ ರಮೇಶ್ ಅರವಿಂದ್ ‌ಹಾಗೂ ಅರ್ಚನ‌ ದಂಪತಿ ಪುತ್ರಿ ನಿಹಾರಿಕ ಅವರು ಗೆಳೆಯ ಅಕ್ಷಯ್ ಅವರೊಂದಿಗೆ ಸಪ್ತಪದಿ ತುಳಿದರು. ಬನ್ನೇರುಘಟ್ಟ ರಸ್ತೆಯಲ್ಲಿರುವ ರೆಸಾರ್ಟ್ ನಲ್ಲಿ ಸೋಮವಾರ ನಡೆದ ವಿವಾಹ ಮಹೋತ್ಸವದಲ್ಲಿ ಅಕ್ಷಯ್ ಅವರು ದಾಂಪತ್ಯ ‌ಜೀವನಕ್ಕೆ ಕಾಲಿಟ್ಟರು. ಕೊರೊನಾ ಹಿನ್ನೆಲೆಯಲ್ಲಿ ಮದುವೆಗೆ ಕೆಲವೇ ಆಪ್ತರಿಗೆ ಆಹ್ವಾನ ‌ನೀಡಲಾಗಿತ್ತು. ನಿಹಾರಿಕ ಹಾಗೂ ಅಕ್ಷಯ್ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಎರಡೂ ಕುಟುಂಬದವರ ಸಮ್ಮುಖದಲ್ಲಿ ಮದುವೆ ಸಮಾರಂಭ ‌ನೆರವೇರಿತು. ನಿಹಾರಿಕ ಹಾಗೂ ಅಕ್ಷಯ್ ಅವರ ಆರತಕ್ಷತೆ 2021ರ ಜನವರಿ 16ರಂದು ನಡೆಯಲಿದ್ದು, ಅಂದು ಚಿತ್ರರಂಗ ಸೇರಿದಂತೆ ‌ಹಲವು ಕ್ಷೇತ್ರದ ಪ್ರಮುಖರಿಗೆ ಆಹ್ವಾನ ‌ನೀಡಲಾಗುತ್ತದೆ ಎಂದು ತಿಳಿದು ಬಂದಿದೆ. ‌ತಮ್ಮ ಮಗಳ ಮದುವೆ ಸಮಾರಂಭದ ಫೋಟೋಗಳನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ನಟ ರಮೇಶ್ ಅರವಿಂದ್, ನಿಮ್ಮ ಪ್ರೀತಿ, ಆಶಿರ್ವಾದ ನವ ಜೋಡಿಯ ಮೇಲಿರಲಿ ಎಂದು ವಿನಂತಿಸಿದ್ದಾರೆ.

Read More

ಮಂಡಗದ್ದೆ -ಕೀಗಡಿ ಬಳಿ ದುರಂತ ಘಟನೆ35 ವರ್ಷದ ವಿವಾಹಿತ ಸಾವುಕರೋನಾದಿಂದ ಊರಿಗೆ ಮರಳಿದ್ದ ಯುವಕ! ತೀರ್ಥಹಳ್ಳಿ: ಹುಲಿ ಕಡಜಲು ಹುಳ ಹೊಡೆದು ಯುವಕನೊಬ್ಬ ಮೃತಪಟ್ಟ ಘಟನೆ ತೀರ್ಥಹಳ್ಳಿ ತಾಲೂಕುಮಂಡಗದ್ದೆ ಸಿಂಗನ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಭವಿಸಿದೆ. ಕೀಗಡಿ ಜಯರಾಮ ಗೌಡರ ಪುತ್ರ ಅಖಿಲೇಶ್(35) ಹುಲಿ ಕಡಜಲು ಹುಳ(ವಿಷಪೂರಿತ ಜೇನು ಹುಳ) ಕಚ್ಚಿ ಸಾವನ್ನು ಕಂಡಿದ್ದಾರೆ. ಬೆಂಗಳೂರಿನಲ್ಲಿದ್ದ ಅಖಿಲೇಶ್ ಕರೋನಾ ಹಿನ್ನೆಲೆ ಊರಿಗೆ ಮರಳಿದ್ದರು. ಭಾನುವಾರ ಮನೆಯಲ್ಲಿ ಕೊನೆ ತೆಗೆಯುವ ವೇಳೆ ತೋಟಕ್ಕೆ ಹೋಗಿದ್ದಾಗ ಹುಳಗಳು ಹೊಡೆದಿವೆ.ಕೂಡಲೇ ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತಂದೆ ಎದುರೇ ಮಗನ ಬಾಯಿಂದ ನೊರೆ ಬಂದು ಸಾವನ್ನು ಕಂಡಿರುವುದು ದುರಂತ.ಅಖಿಲೇಶ್ ವಿವಾಹಿತರಾಗಿದ್ದು,ಪತ್ನಿ,2 ತಿಂಗಳ ಪುಟ್ಟ ಮಗು ಇದೆ.ಕರೋನಾ ಹಿನ್ನೆಲೆ ಊರಿಗೆ ಬಂದಿದ್ದರು ಎಂಬುದಾಗಿ ತಿಳಿದು ಬಂದಿದೆ.ತೀರ್ಥಹಳ್ಳಿ ತಾಲೂಕಿನ ಮಹಿಷಿ ಮತ್ತು ಬಳಗಟ್ಟೆ ಬಳಿ ಜೇನು ಹುಳಗಳು ಹೊಡೆದು ಸಾವನ್ನಪ್ಪಿದ ಘಟನೆ ನಡೆದಿತ್ತು.

Read More

500ಕ್ಕೂ ಹೆಚ್ಚು ಮಂದಿಯಿಂದ ನಡಿಗೆರಾಜಕೀಯ ಗಿಮಿಕ್ ಎಂದ ಶಾಸಕ ಜ್ಞಾನೇಂದ್ರ! ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಆರಗ ಸಮೀಪದ ಬೀಸುವಿನಲ್ಲಿ ಬಗರ್ ಹುಕುಂ ರೈತನ 2000 ಸಾವಿರ ಅಡಿಕೆ ಗಿಡ ಕಡಿದ ಪ್ರಕರಣ ಖಂಡಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನಾಯಕತ್ವದಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆ ಯಶಸ್ವಿಯಾಗಿದೆ.ಶನಿವಾರ ಬೆಳಗ್ಗೆ 8ರಿಂದ ಶುರುವಾದ ಪಾದಯಾತ್ರೆ ಆರಗ-ಸಂಕದಹೊಳೆ ಮಾರ್ಗವಾಗಿ ತೀರ್ಥಹಳ್ಳಿ ತಲುಪಿತು. ಸುಮಾರು 300 ಜನ ಕಾರ್ಯಕರ್ತರು ನಾಯಕನ ಜತೆ ಹೆಜ್ಜೆ ಹಾಕಿದರು. ತೀರ್ಥಹಳ್ಳಿಯ ಅರಣ್ಯ ಅಧಿಕಾರಿಗಳ ಕಚೇರಿ ಎದುರು ಅರಣ್ಯ ಅಧಿಕಾರಿಗಳ ಪ್ರತಿಕೃತಿ ದಹನ ಮಾಡಲಾಯಿತು. ಬಳಿಕ ಅರಣ್ಯ ಇಲಾಖೆ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್, ತೀರ್ಥಹಳ್ಳಿಯಲ್ಲಿ ಅಧಿಕಾರಿಗಳು ಶಾಸಕರ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ನಾಮಪತ್ರ ಸಲ್ಲಿಸಿದ್ದಕ್ಕೆ ಈ ಕೃತ್ಯವನ್ನು ಮಾಡಿಸಿದ್ದಾರೆ. ಆರ್‍ಎಫ್‍ಒ ಪ್ರೆಶರ್ ಇದೆ ಎಂದು ಹೇಳುತ್ತಾರೆ. ಜ್ಞಾನೇಂದ್ರ ಪ್ರೆಸರ್..ಗ್ರಾಮ ಪಂಚಾಯತ್ ಚುನಾವಣೆ ಪ್ರೆಸರ್ರೋ ಎಂದು ಕಿಮ್ಮನೆ ಲೇವಡಿ ಮಾಡಿದರು. ನಾನು ಯಾರಿಗೂ…

Read More

ದೆಹಲಿಯಲ್ಲಿ ಬಡವರಿಗೆ ಕ್ಯಾಂಟೀನ್ರಾಜಕಾರಣಿಗಳಿಗೆ ಮಾದರಿಯಾದ ಯುವ ಸಂಸದ ನವದೆಹಲಿ: ಮನೆಯಿಲ್ಲದ ಮತ್ತು ನಿರ್ಗತಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ಊಟ ಒದಗಿಸುವ ನಿಟ್ಟಿನಲ್ಲಿ ಮಾಜಿ ಕ್ರಿಕೆಟಿಗ, ದೆಹಲಿ ಸಂಸದ ಗೌತಮ್ ಗಂಭೀರ್ ಎಲ್ಲಾ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.ದೆಹಲಿಯ ಗಾಂಧಿನಗರ ಮಾರುಕಟ್ಟೆಯಲ್ಲಿ ಒಂದು ರೂಪಾಯಿಗೆ ತಟ್ಟೆ ಊಟ ನೀಡುವ ‘ಜನ ರಸೋಯಿ’ ಕ್ಯಾಂಟೀನ್ ಅನ್ನು ಪೂರ್ವ ದೆಹಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ ಉದ್ಘಾಟಿಸಿದರು. ಪೂರ್ವ ದೆಹಲಿಯ ವಿವಿಧ ಭಾಗಗಳಲ್ಲಿ ಈ ರೀತಿಯ ಐದರಿಂದ ಆರು ಕ್ಯಾಂಟೀನ್​ಗಳನ್ನು ಶೀಘ್ರದಲ್ಲೇ ತೆರೆಯಲಾಗುವುದು. ಹಾಗೆಯೇ ಮುಂದಿನ ದಿನಗಳಲ್ಲಿ ಮಯೂರ್ ವಿಹಾರ್ ಜಿಲ್ಲೆಯಲ್ಲಿ ‘ಜನ ರಸೋಯಿ’ ಕ್ಯಾಂಟೀನ್​ಗಳನ್ನು ತೆರೆಯುವ ಚಿಂತನೆ ಇದೆ ಎಂದರು.ಒಂದು ರೂಪಾಯಿಗೆ ನೀಡುವ ತಟ್ಟೆ ಊಟವು ಅತ್ಯಂತ ಪೌಷ್ಟಿಕ, ಗುಣಮಟ್ಟ, ಆರೋಗ್ಯಕರ ಮತ್ತು ರುಚಿಕರ ಆಹಾರವಾಗಿರಲಿದೆ. ಪ್ರತಿದಿನ 500 ಜನರಿಗೆ ಆಹಾರ ನೀಡಲಾಗುವುದು. ಎರಡನೇ ಬಾರಿ ಆಹಾರ ಸೇವನೆಗೂ ಅವಕಾಶ ಇರಲಿದೆ. ಅನ್ನ, ದಾಲ್, ತರಕಾರಿ ಸಾಂಬಾರು ಇರಲಿದೆ ಎಂದು ಗಂಭೀರ್ ಹೇಳಿದರು. ಊಟ ಸೇವನೆ ಸಂದರ್ಭದಲ್ಲಿ…

Read More

ಆರಗ ಬಳಿ ಬೀಸುವಿನಿಂದ ತೀರ್ಥಹಳ್ಳಿಗೆ ಡಿ.26ಕ್ಕೆ ಪಾದಯಾತ್ರೆಅರಣ್ಯ ಅಧಿಕಾರಿಗಳ ನಡೆ ವಿರುದ್ಧ ಹೋರಾಟ ತೀರ್ಥಹಳ್ಳಿ: ರೈತರ ಮೇಲೆ ದೌರ್ಜನ್ಯ ಎಸಗುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆರಗ ಸಮೀಪದಿಂದ ತೀರ್ಥಹಳ್ಳಿಯ ಅರಣ್ಯ ಕಚೇರಿವರೆಗೆ ಡಿ.26ರಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಈ ಮೂಲಕ ಮತ್ತೆ ಕಿಮ್ಮನೆ ಪಾದಯಾತ್ರೆ ರಾಜಕೀಯಕ್ಕೆ ಮರಳಿದ್ದಾರೆ. ಡಿ.26ರ ಶನಿವಾರ ಬೆಳಿಗ್ಗೆ 7:30 ರಿಂದ ಆರಗ ಸಮೀಪ ಬೀಸುವಿನಲ್ಲಿ ಅರಣ್ಯ ಅಧಿಕಾರಿಗಳು ರಂಜಿತ ಎಂಬುವರ ಬಗರುಕುಂ ಸಾಗುವಳಿ ಭೂಮಿಯಲ್ಲಿ 2000 ಅಡಿಕೆ ಗಿಡಗಳನ್ನು ಕಡಿದು ನಾಶ ಮಾಡಿದ ಬಗ್ಗೆ ಸರ್ಕಾರ ಈವರೆಗೆ ಅರಣ್ಯ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಜರುಗಿಸುವುದಿಲ್ಲ ಆದ್ದರಿಂದ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಹಾಗೂ ಅರಣ್ಯ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಈ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.ಬೀಸುವಿನ ರೈತ ರಂಜಿತ್ ಮನೆಯಿಂದ ಕಡೆಗದ್ದೆ ಆರಗ ಸಂಕದ ಹೊಳೆ ಮಾರ್ಗವಾಗಿ ತೀರ್ಥಹಳ್ಳಿ ಅರಣ್ಯ ಇಲಾಖೆಯವರಿಗೆ ಪಾದಯಾತ್ರೆ ನಡೆಯಲಿದೆ. ತೀರ್ಥಹಳ್ಳಿ ಸೊಪ್ಪುಗುಡ್ಡೆಯಲ್ಲಿರುವ ಕಾಂಗ್ರೆಸ್ ಕಚೇರಿಯಿಂದ ಆರಗದ ಬೀಸುವಿಗೆ ಬಸ್…

Read More

ಮಾಜಿ ಪ್ರಧಾನಿ ವಾಜಿಪೇಯಿ 96ನೇ ಜನ್ಮ ದಿನಬಿಜೆಪಿ ಪಕ್ಷದಿಂದ ಹಿರಿಯ ನಾಯಕನಿಗೆ ನಮನ ನವ ದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯಿ ಅವರ 96ನೇ ಜನ್ಮ ದಿನವನ್ನು ದೇಶದೆಲ್ಲೆಡೆ ಆಚರಿಸಲಾಗುತ್ತಿದೆ.ಭಾರತ ಕಂಡ ಅಪ್ರತಿಮ ಪ್ರಧಾನಿಗಳಲ್ಲಿ ಒಬ್ಬರಾದ ವಾಜಪೇಯಿ ಅವರ ಫೋಟೋ, ಅವರ ಬದುಕಿನ ಬರಹಗಳುಳ್ಳ ವಾಜಿಪೇಯಿ ಇನ್ ಪಾರ್ಲಿಮೆಂಟ್ ಪುಸ್ತಕವನ್ನು ಪ್ರಧಾನಿ ಮೋದಿ ಬಿಡುಗಡೆಗೊಳಿಸಲಿದ್ದಾರೆ.ದೇಶದಲ್ಲೆಡೆ ಅವರ ಹುಟ್ಟು ಹಬ್ಬದ ಆಚರಣೆ ನಡೆಯಲಿದೆ.

Read More

ಡಿ.28ರಂದು ವಿವಾಹ: ಮನೆಯಲ್ಲಿ ಸಂಭ್ರಮಜನವರಿ ಎರಡನೇ ವಾರ ಅರತಕ್ಷತೆ ಬೆಂಗಳೂರು: ಕನ್ನಡ ಚಿತ್ರರಂಗದ ಸ್ಟಾರ್ ನಟ ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ.ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಗಳ ಪುತ್ರಿ ನಿಹಾರಿಕ ಅವರ ಮದುವೆ ಅಕ್ಷಯ್ ಅವರೊಂದಿಗೆ ಇದೇ ಡಿಸೆಂಬರ್ 28 ರಂದು ನಡೆಯಲಿದೆ. ‌ನಿಹಾರಿಕ ಹಾಗೂ ಅಕ್ಷಯ್ ಒಂದೇ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈಗ ನವಜೀವನಕ್ಕೆ ಅಡಿಯಿಡುತ್ತಿದ್ದಾರೆ.ಇವರ ವಿವಾಹ ಮಹೋತ್ಸವ ಎರಡು ಕುಟಂಬಗಳ ಸದಸ್ಯರ ಸಮ್ಮುಖದಲ್ಲಿ ಕರೋನಾ ನಿಯಮಾನುಸಾರ ನಡೆಯಲಿದೆ.ಜನವರಿ ಎರಡನೇ ವಾರದಲ್ಲಿ ಆರತಕ್ಷತೆ ಆಯೋಜಿಸಲಾಗಿದ್ದು, ಅಂದು ಚಿತ್ರರಂಗ‌ ಸೇರಿದಂತೆ ಎಲ್ಲಾ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ.ನಾನು ಚಿತ್ರರಂಗಕ್ಕೆ ಬಂದ ದಿನದಿಂದಲೂ‌ ಕರ್ನಾಟಕದ ಜನತೆ, ಚಿತ್ರರಸಿಕರು ಹಾಗೂ ಮಾಧ್ಯಮದವರು ನೀಡಿರುವ ಪ್ರೋತ್ಸಾಹ ಅಷ್ಟಿಷ್ಟಲ್ಲ.‌ನಿಮ್ಮ ಪ್ರೀತಿಯ ಆಶೀರ್ವಾದ ಮದುಮಕ್ಕಳ ಮೇಲೆ ಸದಾ ಇರಲಿ ಎಂದು ರಮೇಶ್ ಅರವಿಂದ್ ಮನವಿ ಮಾಡಿದ್ದಾರೆ.

Read More

ಜನರ ಆಕ್ರೋಶಕ್ಕೆ ಮಣಿದ ಸರ್ಕಾರಆದೇಶ ವಾಪಾಸ್: ಜನ ನಿರಾಳ ಬೆಂಗಳೂರು: ರಾಜ್ಯದಲ್ಲಿ ಹೇರಲಾಗಿರುವ ರಾತ್ರಿ ಕರ್ಫ್ಯೂ ಆದೇಶ ಸರ್ಕಾರ ವಾಪಾಸ್ ಪಡೆದಿದೆ.ಬ್ರಿಟನ್ ಹಾಗೂ ಇತರ ದೇಶಗಳಲ್ಲಿ ಪತ್ತೆಯಾದ ರೂಪಾಂತರ ಹೊಂದಿದ ಕೋವಿಡ್ ವೈರಸ್ ಹರಡುವಿಕೆ ತಡೆಯಲು ಈ ಆದೇಶ ಮಾಡಲಾಗಿತ್ತು. ಆದರೆ ಜನರಿಂದ ಈ ಆದೇಶದ ವಿರುದ್ಧ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಇದೀಗ ಸರ್ಕಾರ ಆದೇಶ ವಾಪಾಸ್ ಪಡೆದಿದೆ.ಸರ್ಕಾರ ಆದೇಶ ಮರು ಪರಿಶೀಲಸಿ, ಸಂಪುಟ ಸಹೋದ್ಯೋಗಿಗಳ ಹಾಗೂ ಹಿರಿಯ ಅಧಿಕಾರಿಗಳ ಅಭಿಪ್ರಾಯದ ಮೇರೆಗೆ ರಾತ್ರಿ ಕರ್ಫ್ಯೂವನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ ಎಂದು ಸಿಎಂ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಸಾರ್ವಜನಿಕರು ಸ್ವಯಂ ನಿರ್ಭಂಧ ವಿಧಿಸಿಕೊಂಡು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಅನಗತ್ಯವಾಗಿ ಸಂಚರಿಸದಂತೆ ಹಾಗೂ ಸರ್ಕಾರ ವಿಧಿಸಿದ ಕೋವಿಡ್ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಈ ವೈರಾಣುವಿನ ಹರಡುವಿಕೆ ತಡೆಯಲು ಸರ್ಕಾರ ಕೋರಿದೆ.

Read More

ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ನಿಷೇಧಾಜ್ಞೆಜನವರಿ 2ರವರೆಗೆ ಕರ್ಪ್ಯೂ ಬೆಂಗಳೂರು: ಮತ್ತೆ ಕರೋನಾ ಆರ್ಭಟ ಶುರುವಾಗಿದೆ. ಇಂಗ್ಲೆಂಡ್ ಮೂಲಕ ಭಾರತಕ್ಕೆ ಹೊಸ ಕರೋನಾ ಬಂದಿದೆ. ರಾಜ್ಯದಲ್ಲೂ ಕೂಡ ಈ ಕರೋನಾ ಮತ್ತೆ ಭೀತಿ ಸೃಸ್ಟಿಸಿದೆ.ಡಿ.23ರಿಂದ 10 ದಿನಗಳವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.ಆರೋಗ್ಯ ಸಚಿವ ಸುಧಾಕರ್ ಜೊತೆ ಚರ್ಚೆ ನಡೆಸಿ ಮಾತನಾಡಿದಜನವರಿ 2 ರವರೆಗೆ ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ನೈಟ್ ಕರ್ಫ್ಯೂ ಜಾರಿಯಾಗಲಿದೆ. ತುರ್ತು ಸೇವೆಗಳಿಗೆ ಮಾತ್ರ ನೈಟ್ ಕರ್ಫ್ಯೂ ವೇಳೆ ಅವಕಾಶ ನೀಡಲಾಗುತ್ತದೆ. ಉಳಿದ ಎಲ್ಲ ಸೇವೆಗಳಿಗೆ ನಿರ್ಬಂಧ ವಿಧಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಹೊಸ ವರ್ಷಾಚರಣೆ ಸಂಭ್ರಮ, ಪಾರ್ಟಿಗಳಿಗೆ ಅವಕಾಶ ಇಲ್ಲ.ಹೊರ ದೇಶಗಳಿಂದ ಬಂದವರ ಮೇಲೆ ನಿಗಾ ವಹಿಸಲಾಗುತ್ತದೆ ಎಂದು ಹೇಳಿದ್ದಾರೆ.

Read More

ಮತ್ತೆ ಕರೋನಾ ಅಟ್ಟಹಾಸದ ಸೂಚನೆಇಂಗ್ಲೆಂಡ್ ದೇಶದಿಂದ ಬಂದವರ ಪತ್ತೆ ಶುರು! ಬೆಂಗಳೂರು: ಕರೋನಾ ಅಟ್ಟಹಾಸ ಕೊಂಚ ತಣ್ಣಗಾಗಿ ಇನ್ನೇನು ಜನ ಜೀವನ ಚೇತರಿಕೆಯಲ್ಲಿ ಸಾಗುತ್ತಿರುವಾಗ ಇದೀಗ ಮತ್ತೊಂದು ವೈರಸ್‌ ಸದ್ದು ಮಾಡುತ್ತಿದೆ.ಕರೋನಾದ ಮತ್ತೊಂದು ರೂಪ ಎನ್ನಲಾದ ಓ50 ಟಥಿ ವೈರಸ್ ಇಂಗ್ಲೆಂಡ್ ದೇಶದಲ್ಲಿ ಭೀಕರ ಸದ್ದು ಮಾಡುತ್ತಿದೆ. ಅಲ್ಲಿ ಲಾಕ್‌ಡೌನ್ ಮಾಡಲಾಗಿದೆ. ಅಲ್ಲಿಂದ ಭಾರತಕ್ಕೆ ಬಂದವರ ಮೇಲೆ ನಿಗಾ ವಹಿಸಲಾಗುತ್ತಿದೆ. ಈಗಾಗಲೇ ಮುಂಬೈ ಅಲ್ಲಿ ರಾತ್ರಿ ಲಾಕ್ ಡೌನ್ ಮಾಡಲಾಗುತ್ತಿದೆ. ಅದೇ ರೀತಿ, ಇಂಗ್ಲೆಂಡ್‌ನಿಂದ ಶಿವಮೊಗ್ಗಕ್ಕೆ ಬಂದವರ ಮೇಲೂ ಆರೋಗ್ಯ ಇಲಾಖೆ ಕಣ್ಣಾವಲಿಟ್ಟಿದೆ. ಸರ್ಕಾರದ ಸೂಚನೆ ಮೇರೆಗೆ ಇಂಗ್ಲೆಂಡ್‌ನಿಂದ ಪ್ರತಿ ತಾಲೂಕು, ಜಿಲ್ಲೆಗೆ ಬಂದವರ ಪತ್ತೆ ಕಾರ್ಯ ಶುರುವಾಗಿದೆ.ಹತ್ತು ದಿನದ ಹಿಂದೆ ಇಂಗ್ಲೆಂಡ್‌ನಿಂದ ಬಂದವರನ್ನು ಗುರುತಿಸಿ, ಪರೀಕ್ಷೆಗೆಒಳಪಡಿಸಲಾಗುತ್ತಿದೆ.ಶಂಕಿತರನ್ನು ಕ್ಯಾರಂಟೈನ್‌ನಲ್ಲಿ ಇರಿಸಲಾಗಿದೆ. ಅಂತವರನ್ನು ಮನೆಯಿಂದ ಹೊರಬರಬಾರದು,ಯಾರೊಂದಿಗೂ ಸಂಪರ್ಕ ಇರದಂತೆ ಆರೋಗ್ಯಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಇಂಗ್ಲೆಂಡ್ ಸೇರಿ ಇತರೆ ದೇಶಗಳಿಂದ ಆಗಮಿಸಿದವರು ಸ್ವಯಂ ನಿರ್ಬಂಧ ಹಾಕಿಕೊಂಡು ಅರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕಿದೆ. Iಜu ನಮ್ಮೂರ್ ಎಕ್ಸ್ಪ್ರೆಸ್…

Read More