ಹಲವೆಡೆ ಮತದಾರರ ಪ್ರಶ್ನೆ ಬೆಂಗಳೂರು: ಗ್ರಾಮ ಪಂಚಾಯತ್ ಮೊದಲ ಹಂತದ ಚುನಾವಣೆ ಮುಕ್ತಾಯಗೊಂಡಿದೆ.ರಾಜ್ಯದ ಬಹುತೇಕ ಕಡೆ ಶಾಂತಿಯುತ ಮತದಾನವಾಗಿದೆ. ಆದರೆ ವಿಧಾನಸಭಾ, ಲೋಕ ಸಭಾ ಚುನಾವಣೆಯಲ್ಲಿ ತಮಗೆ ಯಾವ ಅಭ್ಯರ್ಥಿಯೂ ಇಷ್ಟ ಇಲ್ಲ. ಆದರೆ ಮತದಾನದ ಹಕ್ಕು ಚಲಾಯಿಸಲು “ನೋಟಾ” ಆಯ್ಕೆ ನೀಡಲಾಗಿದೆ. ಆದರೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಈ ಆಯ್ಕೆ ನೀಡಿಲ್ಲ. ಬ್ಯಾಲೆಟ್ ಪೇಪರ್ ಮೇಲೆ ಮತ ಹಾಕಲು ಅವಕಾಶ ನೀಡಲಾಗಿದೆ. ಆದರೆ ನೋಟಾ ಆಯ್ಕೆ ನೀಡಿಲ್ಲ. ಈ ಹಿಂದೆ 17 ಎ ಎಂಬ ಫಾರ್ಮ್ ಮೇಲೆ ಬರೆದುಕೊಡಬಹುದಿತ್ತು. ಆದರೆ ಈಗ ಆ ಫಾರ್ಮ್ ಕೂಡ ಇಲ್ಲ. ಈ ಬಗ್ಗೆ ಮತಗಟ್ಟೆ ಅಧಿಕಾರಿಗಳಿಗೂ ಮಾಹಿತಿ ಇರಲಿಲ್ಲ ಎಂದು ಕೆಲವರು ಹೇಳಿದ್ದಾರೆ.
Author: Nammur Express Admin
ರಾತ್ರಿ, ಹಗಲು ಕರಾಮತ್ತುಕರೋನಾ ಭಯ ಕಾಣಲಿಲ್ಲ..ಮತ ಮಾರಿಕೊಂಡರೆ ಮತದಾರರು? ಶಿವಮೊಗ್ಗ: ಗ್ರಾಮ ಪಂಚಾಯತ್ ಚುನಾವಣೆ ಪಕ್ಷಾತೀತವಾಗಿ ನ್ಯಾಯ ಸಮ್ಮತವಾಗಿ ನಡೆಸಲು ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. ಆದರೆ ಅದು ಸುಳ್ಳಾಗಿದೆ.ಬಹುತೇಕ ಕಡೆ ಹಣ, ಹೆಂಡ, ಪ್ರಭಾವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕರಾಮತ್ತು ಮಾಡಿದೆ.ಒಂದು ಮತಕ್ಕೆ 100 ರೂ ನಿಂದ ಹಿಡಿದು 2000 ರೂ.ವರೆಗೆ ಬಿಕಾರಿಯಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.ಸೋಮವಾರ ಮತ್ತು ಮಂಗಳವಾರ ಬೆಳಗ್ಗೆವರೆಗೆ ಹಣ, ಹೆಂಡ ಹಂಚಲಾಗಿದೆ. ಕೆಲವೆಡೆ ವಸ್ತುಗಳನ್ನು ಕೂಡ ನೀಡಲಾಗಿದೆ.ಶಿವಮೊಗ್ಗ ಗ್ರಾಮಾಂತರದಲ್ಲಿ ಕುಕ್ಕರ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು.ಇನ್ನು ಚುನಾವಣಾ ಅಕ್ರಮದ ಮೇಲೆ ಇಲಾಖೆ ನಿಗಾ ಇದ್ದರೂ ಹಲವೆಡೆ ಕರಾಮತ್ತು ನಡೆದಿದೆ.ಕರೋನಾ ನಿಯಮ ಕೂಡ ಎಲ್ಲಿಯೂ ಕಾಣಲಿಲ್ಲ. ಆದರೆ ಆಶಾ ಕಾರ್ಯಕರ್ತೆಯರು ಮತದಾರರಿಗೆ ಸ್ಯಾನಿಟೈಸರ್ ಮಾಡಿದ್ದಾರೆ.
ಎಲ್ಲೆಡೆ ಶಾಂತಿಯುತ ಮತದಾನ-113 ಗ್ರಾಮ ಪಂಚಾಯತಿಗಳ ಮತ ಸಮರಕ್ಕೆ ತೆರೆಸ್ನೇಹದ ಜತೆ ಗ್ರಾಮ ಪಂಚಾಯತ್ ಚುನಾವಣೆ! ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ 3 ತಾಲೂಕು ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್ ಸಮರ ತೆರೆ ಕಂಡಿದೆ. 3 ತಾಲೂಕಿನ 113 ಗ್ರಾಮ ಪಂಚಾಯತ್ ಚುನಾವಣೆಯ 3, 284 ಜನರ ಅಭ್ಯರ್ಥಿಗಳ ಭವಿಷ್ಯ ಡಿ.30ರಂದು ಗೊತ್ತಾಗಲಿದೆ.ಡಿ.22ರಂದು ಬೆಳಗ್ಗೆ 7ರಿಂದ ಆರಂಭಗೊಂಡ ಮೊದಲ ಹಂತದ ಚುನಾವಣೆಯ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆಜಿಲ್ಲೆಯಲ್ಲಿ ಶೇ.83ರಷ್ಟು ಮತದಾನವಾಗಿದೆ. 82 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.ತೀರ್ಥಹಳ್ಳಿಯಲ್ಲಿ ಶೇ.81.33, ಭದ್ರಾವತಿಯಲ್ಲಿ ಶೇ.82.07 ಹಾಗೂ ಶಿವಮೊಗ್ಗದಲ್ಲಿ ಶೇ.84.91 ರಷ್ಟು ಮತದಾನವಾಗಿದೆ. ತೀರ್ಥಹಳ್ಳಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ, ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್ ಮತದಾನ ಮಾಡಿದ್ದಾರೆ.ಬಹುತೇಕ ಎಲ್ಲಾ ಕಡೆ ಶಾಂತಿಯುತ ಮತದಾನವಾಗಿದೆ. ಎಲ್ಲಾ ಅಭ್ಯರ್ಥಿಗಳು ಪರಸ್ಪರ ಸಹಕಾರ, ಸ್ನೇಹದಿಂದ ಚುನಾವಣೆ ಮಾಡಿದ್ದಾರೆ. ಎಲ್ಲಾ ಕಡೆ ಸ್ಯಾನಿಟೈಸರ್ ಮಾಡಲಾಗಿತ್ತು. ಪೊಲೀಸ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ಹಳ್ಳಿಗಳ ಆಡಳಿತದ ಬೆನ್ನೆಲುಬು ಗ್ರಾಮ ಪಂಚಾಯತ್ ಆಡಳಿತಕ್ಕೆ ಕೊನೆಗೂ ಮತದಾನ ನಡೆದಿದೆ.ಹಿರಿಯರು, ಯುವ…
ಇನ್ನೇನಿದ್ರೂ ಮತದಾನ!ಎಲ್ಲೆಡೆ ಬಂದೋಬಸ್ತ್ಮತದಾರನೇ ಬಾಸ್..! ತೀರ್ಥಹಳ್ಳಿ: ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರ ಮುಕ್ತಾಯವಾಗಿದೆ.ಚುನಾವಣೆಗೆ ತಾಲ್ಲೂಕು ಆಡಳಿತ ಸರ್ವ ಸಿದ್ದತೆ ನಡೆಸಿದ್ದು, ಮುಂಜಾನೆಯಿಂದಲೇ ಮತದಾನ ಶುರುವಾಗುತ್ತದೆ. ಅತ್ಯಂತ ಅಚ್ಚುಕಟ್ಟು, ಶಿಸ್ತುಬದ್ದವಾಗಿ ಚುನಾವಣೆ ನಡೆಸಲು ಮತಗಟ್ಟೆಗೆ ತೆರಳಲು ಸಿಬ್ಬಂದಿಗಳಿಗೆ ತಾಲ್ಲೂಕು ಆಡಳಿತ ಸಂಪೂರ್ಣ ಭದ್ರತೆಯ ವ್ಯವಸ್ಥೆಯೊಂದಿಗೆ ಚಾಲನೆ ನೀಡಲಾಯಿತು. ತೀರ್ಥಹಳ್ಳಿ ಪಟ್ಟಣದ ಅನಂತಮೂರ್ತಿ ಪ್ರೌಢಶಾಲೆ ಆವರಣದಲ್ಲಿ ತಹಶೀಲ್ದಾರ್ ಡಾ. ಶ್ರೀಪಾದ, ತಾಪಂ ಇಒ ಡಾ.ಆಶಾಲತಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಂದ್ರಪ್ಪ, ಡಿವೈಎಸ್‌ಪಿ ಡಾ.ಸಂತೋಷ್ ಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಪ್ರವೀಣ್, ಸಬ್ ಇನ್ಸ್‌ಪೆಕ್ಟರ್ ಯಲ್ಲಪ್ಪ, ಮಾಳೂರು ಸಬ್ ಇನ್ಸ್‌ಪೆಕ್ಟರ್ ಸುರೇಶ್, ಆಗುಂಬೆ ಸಬ್ ಇನ್ಸ್‌ಪೆಕ್ಟರ್ ದೇವರಾಜು ಸೇರಿ ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ಸುಮಾರು 4೦೦ ಪೊಲೀಸ್ ಸಿಬ್ಬಂದಿ, 125 ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಮತಗಟ್ಟೆ ಅಧಿಕಾರಿಗಳು ಸುಮಾರು 850, ಒಟ್ಟು ಅಂದಾಜು 1500 ಸಿಬ್ಬಂದಿಗಳು, 35 ಸರ್ಕಾರಿ ಕೆಎಸ್ ಆರ್‌ಸಿ ಬಸ್ ಗಳು 25 ಸರ್ಕಾರಿ ವಾಹನಗಳು, ಜೀಪು-ಕಾರುಗಳೊಂದಿಗೆ ಸೂಕ್ತ ಭದ್ರತೆಯೊಂದಿಗೆ ಮತಗಟ್ಟೆಗೆ ತೆರಳುವ…
ನಾನುಭಾರತೀಯ…ಪ್ರಜಾಪ್ರ ಭುತ್ವ ನಮ್ಮ ಶಕ್ತಿಮತದಾನ ನಮ್ಮ ನಿಮ್ಮ ಹಕ್ಕು..ಗ್ರಾಮದ ಆಡಳಿತವೇ ದೇಶದ ಉಸಿರುನಿಮ್ಮ ಮತ…ನಿಮ್ಮ ಹಕ್ಕುತಪ್ಪದೇ ಮತದಾನ ಮಾಡಿ..ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಿ…ಇದು ನಮ್ಮ ಕಳಕಳಿ.ಡಿ.22, ಮಂಗಳವಾರ, ಸಮಯ ಬೆಳಗ್ಗೆ 7ರಿಂದ ಸಂಜೆ 5.ಕರೋನಾ ನಿಯಮ ಪಾಲಿಸಿ…ಭಾರತವನ್ನು ಕಾಪಾಡೋಣ..!
ಅಮಾನತು ಮಾಡಲು ಆದೇಶನೊಂದ ರೈತನ ಪರ ನಾನಿದ್ದೇನೆಗಿಡದಲ್ಲಿ ಹೆಸರಲ್ಲಿ ಕಾಂಗ್ರೆಸ್ ರಾಜಕೀಯ! ತೀರ್ಥಹಳ್ಳಿ: ಬೀಸುವಿನಲ್ಲಿ ನಡೆದ ಘಟನೆ ಖಂಡನೀಯ. ಅಡಿಕೆ ಗಿಡ ಕಡಿಸಿದ ಅಧಿಕಾರಿ ಅಮಾನತು ಮಾಡಲು ಒತ್ತಾಯಿಸಿದ್ದೇನೆ. ಎಲ್ಲಾ ರೈತರ ಪರ ನಾನಿದ್ದೇನೆ. ಈ ಘಟನೆಯಲ್ಲಿ ರಾಜಕೀಯ ಬೇಡ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಘಟನೆ ಖಂಡಿಸಿ ಕಾಂಗ್ರೆಸ್ ನಾಯಕ ಕಿಮ್ಮನೆ ಧರಣಿ ಬಗ್ಗೆ Nammur Express ಜತೆ ಮಾತನಾಡಿದ ಆರಗ ಜ್ಞಾನೇಂದ್ರ, ಈ ಘಟನೆ ಖಂಡನೀಯ. ಅಧಿಕಾರಿ ಅಮಾನತು, ಕಠಿಣ ಕ್ರಮ ತೆಗೆದುಕೊಳ್ಳಲು ಈಗಾಗಲೇ ಅರಣ್ಯ ಸಚಿವ ಆನಂದ್ ಸಿಂಗ್ ಜತೆ ಮಾತುಕತೆ ಮಾಡಿದ್ದೇನೆ. ಸಿಎಂ ಜೊತೆ ನಾಳೆ ಚರ್ಚೆ ನಡೆಸುತ್ತೇನೆ. ಯಾವ ರೈತನಿಗೂ ಹೀಗೆ ಆಗಲು ಬಿಡುವುದಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಪಕ್ಷಕ್ಕೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲ್ಲಲು ಆಗಲ್ಲ ಅಂತ ಗೊತ್ತಾಗಿ ಈ ನಾಟಕ ಶುರು ಮಾಡಿದೆ. ನಾವು ರೈತರ ಪರ ಇದ್ದೇವೆ ಎಂದು ಹೇಳಿದ್ದಾರೆ.
ರಾಜಕೀಯ ಪ್ರೇರಿತ ಕೃತ್ಯ ಕಿಮ್ಮನೆ ಆರೋಪಅರಣ್ಯ ಇಲಾಖೆ ಎದುರು ಕಿಮ್ಮನೆ ರಾತ್ರಿ ಧರಣಿಮಲೆನಾಡಿನಲ್ಲಿ ಮಿಂಚಿನ ಸಂಚಲನ ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀಸು ಗ್ರಾಮದಲ್ಲಿ ರೈತ ರಂಜನ್ ಎಂಬುವರ 2000 ಅಡಿಕೆ ಗಿಡಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಡಿದಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿ ಅರಣ್ಯ ಇಲಾಖೆ ಎದುರು ರಾತ್ರಿ ಧರಣಿ ಆರಂಭಿಸಿದ್ದಾರೆ. ಬೀಸು ಗ್ರಾಮದಿಂದ ಸುಪ್ರಿತಾ ರಂಜನ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು, ಬಿಜೆಪಿ ನಾಮಪತ್ರ ವಾಪಾಸ್ ತೆಗೆಯುವಂತೆ ದಬ್ಬಾಳಿಕೆ ಮಾಡಿತ್ತು. ಇದಾಗದ ಕಾರಣ ಈಗ ಶಾಸಕರ ಒತ್ತಡಕ್ಕೆ ಮಣಿದು ಅರಣ್ಯ ಅಧಿಕಾರಿಗಳು 2000 ಅಡಿಕೆ ಗಿಡ ಕಡಿದಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ. ಜೊತೆಗೆ ರೈತರಿಗೆ ನ್ಯಾಯ ಸಿಗುವವರೆಗೆ ರಾತ್ರಿ ಇಡೀ ಧರಣಿ ಮಾಡುವುದಾಗಿ ಕಿಮ್ಮನೆ ರತ್ನಾಕರ್ nammur express ಮಾಧ್ಯಮಕ್ಕೆ ತಿಳಿಸಿದ್ದಾರೆ. ಬಗರ್ ಹುಕುಂ ಜಾಗದಲ್ಲಿ ಸಾಗುವಳಿ ಮಾಡಿದ್ದ ರೈತನ ತೋಟ ಕಡಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಜೊತೆಗೆ ನ್ಯಾಯ…
ಕಿತ್ತಂದೂರಲ್ಲಿ ನೆಲೆಸಿರುವ ದೇವತೆ150 ವರ್ಷದ ಹಿಂದೆ ಘಟ್ಟದ ಕೆಳಗಿಂದ ಬಂತುಭಕ್ತರ ಸಮ್ಮುಖದಲ್ಲಿ ದೀಪೋತ್ಸವ..! ತೀರ್ಥಹಳ್ಳಿ: ಕೋಣಂದೂರು ಸಮೀಪದ ಕಿತ್ತಂದೂರಿನ ಶ್ರೀ ರಕ್ತೇಶ್ವರಿ ಬನದಲ್ಲಿ ಕಾರ್ತಿಕ ದೀಪೋತ್ಸವ ಭಕ್ತರ ಸಮ್ಮುಖದಲ್ಲಿ ನಡೆಯಿತು. ಸುಮಾರು 150 ವರ್ಷದ ಹಿಂದೆ ಘಟ್ಟದ ಕೆಳಗಿನಿಂದ ಬಂದು ನೆಲೆ ನಿಂತಿರುವ ದೇವರ ಬನದಲ್ಲಿ ಭಕ್ತರ ಕೋರಿಕೆ ನೆರವೇರಿಸುವ ದೇವತೆಗೆ ವಿಶೇಷ ಪೂಜೆ ನಡೆಸಲಾಯಿತು. ಇನ್ನು ಕಿತ್ತಂದೂರು ರಾಮಕೃಷ್ಣ ಭಟ್ ಅವರ ತಂದೆ ತಿಪ್ಪಾ ಭಟ್ ಈ ದೇವತೆ ಪ್ರತಿಷ್ಠಾಪನೆ ಮಾಡಿದ್ದು, ಇದೀಗ ಈ ದೇವತೆ ಗ್ರಾಮದ ಜನರ ಕಾಯುವ ದೇವತೆಯಾಗಿದ್ದಾಳೆ. ಕಾಡಿನಲ್ಲಿ ನೆಲೆಸಿರುವ ಕಾರಣಕ್ಕೆ ವನದುರ್ಗಿ ಎಂದೂ ಕರೆಯಲಾಗುತ್ತದೆ. ಸುಮಾರು 100 ಕ್ಕೂ ಹೆಚ್ಚು ಕುಟುಂಬಗಳು ಈ ದೇವರ ಭಕ್ತರಾಗಿದ್ದಾರೆ. 2016-17ರಲ್ಲಿ ದೇವತೆಯ ಹೆಸರಿನಲ್ಲೇ ಉದ್ಯಮ ಸ್ಥಾಪನೆ ಮಾಡಿರುವ ಹುಲ್ಲತ್ತಿ ಪ್ರಗತೀಪರ ರೈತ, ಶ್ರೀ ರಕ್ತೇಶ್ವರಿ ಫುಡ್ ಅಂಡ್ ಬೇವರೀಸ್ ಮಾಲಿಕ ಯಜ್ನನಾರಾಯಣ್ ಭಟ್ ಕೆ.ಎಸ್ ಅವರ ನೇತೃತ್ವದಲ್ಲಿ ಎಲ್ಲಾ ಭಕ್ತರ ಸಮ್ಮುಖದಲ್ಲಿ ದೇವತೆಯನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಗಿತ್ತು.…
ಡಿಜಿಟಲ್ ಕ್ಷೇತ್ರಕ್ಕೆ ಕಾಲಿಟ್ಟ “ನ್ಯಾಷನಲ್ ಸಮೂಹ ಸಂಸ್ಥೆ”ಮೊಬೈಲ್ಸ್, ಟೀವಿ ಸೇರಿ ಡಿಜಿಟಲ್ ವಸ್ತುಗಳು ಲಭ್ಯ ತೀರ್ಥಹಳ್ಳಿ: ತೀರ್ಥಹಳ್ಳಿಗೆ ಇದೀಗ ಹೊಸ ಹೊಸ ಉದ್ಯಮಗಳು ಕಾಲಿಡುತ್ತಿವೆ. ಈ ನಡುವೆ ಹೊಸ ಶೋ ರೂಂಗಳು ಗ್ರಾಹಕರನ್ನು ಸೆಳೆಯುತ್ತಿವೆ. ತೀರ್ಥಹಳ್ಳಿ ಸೇರಿ ರಾಜ್ಯದ ಹೆಸರಾಂತ ಸಂಸ್ಥೆಯಾದ ನ್ಯಾಶಿನಲ್ ಸಮೂಹ ಸಂಸ್ಥೆ ಇದೀಗ ಡಿಜಿಟಲ್ ಕ್ಷೇತ್ರಕ್ಕೂ ಎಂಟ್ರಿಯಾಗಿದೆ. ನ್ಯಾಷನಲ್ ಸಂಸ್ಥೆ ಈಗಾಗಲೇ ಗುತ್ತಿಗೆ. ಗ್ಯಾಸ್ ಏಜೆನ್ಸಿ, ಸೂಪರ್ ಮಾರ್ಕೆಟ್, ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ಸ್, ನ್ಯಾಷನಲ್ ಎಂಟರ್‍ಪ್ರೈಸಸ್, ರೈನ್ ಲ್ಯಾಂಡ್ ಆಟೋ ಕಾರ್ಪ್ ಪ್ರೈ.ಲಿ ಮೂಲಕ ಉತ್ತಮ ಹೆಸರು ಪಡೆದಿದೆ. ಇದೀಗ ತೀರ್ಥಹಳ್ಳಿಯ ಗಾಂಧಿ ಚೌಕ ಸಮೀಪದಲ್ಲಿ ಎಂಐ ಎಕ್ಸ್‍ಕ್ಲ್ಯೂಸಿವ್ ಶೋ ರೂಂ ಬುಧವಾರ ಆರಂಭ ಮಾಡಿದೆ. ಆಜಾದ್ ರಸ್ತೆಯ ನ್ಯಾಷಿನಲ್ ಎನ್‍ಕ್ಲೇವ್‍ನಲ್ಲಿ ಆರಂಭಗೊಂಡ ಈ ಶೋ ರೂಂನಲ್ಲಿ ಎಲ್‍ಇಡಿ ಟೀವಿ, ಮೊಬೈಲ್ಸ್, ಲ್ಯಾಪ್‍ಟಾಪ್, ಮೊಬೈಲ್ ಬಿಡಿಭಾಗಗಳು, ಫ್ಯಾಷನ್ ವಸ್ತುಗಳು, ಸೌಂಡ್ ಸಿಟ್ಟಮ್ಸ್ ಲಭ್ಯವಿದೆ. ಈಗಾಗಲೇ ಎಂಐ ಬ್ರಾಂಡ್ ಇಡೀ ದೇಶದಲ್ಲೇ ಹೆಸರು ಪಡೆದಿದೆ. ಉತ್ತಮ ಗುಣಮಟ್ಟ,…
ಪತಿ ಸಿದ್ದಾರ್ಥ್ ಹುದ್ದೆ ಅಲಂಕರಿಸಿದ ಪತ್ನಿಕಂಪನಿ ಕಟ್ಟಲು ಮಾಸ್ಟರ್ ಪ್ಲಾನ್..? ಬೆಂಗಳೂರು: ದೇಶದ ಕಾಫಿ ಹಾಗೂ ಹೋಟೆಲ್ ಉದ್ಯಮದಲ್ಲಿ ನಂ.1 ಸ್ಥಾನ ಅಲಂಕಾರ ಮಾಡಿದ್ದ ಕೆಫೆ ಕಾಫಿ ಡೇ ಸಂಸ್ಥೆಯ ಸಂಸ್ಥಾಪಕ ವಿ ಜಿ ಸಿದ್ದಾರ್ಥ್ ಹೆಗ್ಡೆ ಅವರ ನಿಧನದ ಬಳಿಕ ಅವರ ಪತ್ನಿ ಮಾಳವಿಕ ಇದೀಗ ಹೊಸ ಸಿಇಓ ಆಗಿ ನೇಮಕಗೊಂಡಿದ್ದಾರೆ.ಮಾಳವಿಕ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ರವರ ಪುತ್ರಿ ಹಾಗೂ ಸಿದ್ದಾರ್ಥ್ ಅವರ ಧರ್ಮ ಪತ್ನಿ.ಕಂಪೆನಿಯ ನಿರ್ದೇಶಕ ಮಂಡಳಿಯು ಸಿ ಎಚ್ ವಸುಂಧರಾ ದೇವಿ, ಗಿರಿ ದೇವನೂರು ಹಾಗೂ ಮೋಹನ ರಾಘವೇಂದ್ರ ಕೊಂಡಿ ಅವರನ್ನು ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಕಗೊಳಿಸಲಾಗಿದೆ. 2019ರ ಆಗಸ್ಟ್ ತಿಂಗಳಲ್ಲಿ ನೇತ್ರಾವತಿ ನದಿಯಲ್ಲಿ ಆಕಸ್ಮಿಕವಾಗಿ ಬಿದ್ದು ನಂತರ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದೀಗ ಕಂಪನಿ ಬೆಳೆಸುವ ಹೊಣೆ ಪತ್ನಿ ಮೇಲಿದೆ.ಸಾವಿರಾರು ಉದ್ಯೋಗಿಗಳಿಗೆ ಇದು ಮಹತ್ವದ ಹಂತವಾಗಿದೆ. ಹೊಸ ಬ್ಯುಸಿನೆಸ್ ಪ್ಲಾನ್ ಜೊತೆ ಹೊಸ ಭರವಸೆ ಮೂಡಿದೆ.