Categories
ಬೆಂಗಳೂರು

ಕಾಫಿ ಡೇಗೆ ಮಾಳವಿಕಾ ಸಿಇಓ

  • ಪತಿ ಸಿದ್ದಾರ್ಥ್ ಹುದ್ದೆ ಅಲಂಕರಿಸಿದ ಪತ್ನಿ
  • ಕಂಪನಿ ಕಟ್ಟಲು ಮಾಸ್ಟರ್ ಪ್ಲಾನ್..?


ಬೆಂಗಳೂರು: ದೇಶದ ಕಾಫಿ ಹಾಗೂ ಹೋಟೆಲ್ ಉದ್ಯಮದಲ್ಲಿ ನಂ.1 ಸ್ಥಾನ ಅಲಂಕಾರ ಮಾಡಿದ್ದ ಕೆಫೆ ಕಾಫಿ ಡೇ ಸಂಸ್ಥೆಯ ಸಂಸ್ಥಾಪಕ ವಿ ಜಿ ಸಿದ್ದಾರ್ಥ್ ಹೆಗ್ಡೆ ಅವರ ನಿಧನದ ಬಳಿಕ ಅವರ ಪತ್ನಿ ಮಾಳವಿಕ ಇದೀಗ ಹೊಸ ಸಿಇಓ ಆಗಿ ನೇಮಕಗೊಂಡಿದ್ದಾರೆ.
ಮಾಳವಿಕ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ರವರ ಪುತ್ರಿ ಹಾಗೂ ಸಿದ್ದಾರ್ಥ್ ಅವರ ಧರ್ಮ ಪತ್ನಿ.ಕಂಪೆನಿಯ ನಿರ್ದೇಶಕ ಮಂಡಳಿಯು ಸಿ ಎಚ್ ವಸುಂಧರಾ ದೇವಿ, ಗಿರಿ ದೇವನೂರು ಹಾಗೂ ಮೋಹನ ರಾಘವೇಂದ್ರ ಕೊಂಡಿ ಅವರನ್ನು ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಕಗೊಳಿಸಲಾಗಿದೆ.


2019ರ ಆಗಸ್ಟ್ ತಿಂಗಳಲ್ಲಿ ನೇತ್ರಾವತಿ ನದಿಯಲ್ಲಿ ಆಕಸ್ಮಿಕವಾಗಿ ಬಿದ್ದು ನಂತರ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದೀಗ ಕಂಪನಿ ಬೆಳೆಸುವ ಹೊಣೆ ಪತ್ನಿ ಮೇಲಿದೆ.
ಸಾವಿರಾರು ಉದ್ಯೋಗಿಗಳಿಗೆ ಇದು ಮಹತ್ವದ ಹಂತವಾಗಿದೆ. ಹೊಸ ಬ್ಯುಸಿನೆಸ್ ಪ್ಲಾನ್ ಜೊತೆ ಹೊಸ ಭರವಸೆ ಮೂಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.