ಶಿರುಪತಿಯಲ್ಲಿ ಮೊಳಗಿದ ಜನಪದ ಕಲರವತೀರ್ಥಹಳ್ಳಿ ಜಾನಪದ ಪರಿಷತ್ ಕಾರ್ಯಕ್ರಮ ತೀರ್ಥಹಳ್ಳಿ: ಸೂವಿರೋ…ಸಂಗಯ್ಯ..ಸೂವಿರೋ ಲಿಂಗಯ್ಯ….ದೀಪಗಳ ಹಬ್ಬ ದೀಪಾವಳಿಯಂದು ಮಲೆನಾಡಿನ ಅನಾದಿ ಕಾಲದ ಕಲೆ ಅಂಟಿಗೆ ಪಿಂಟಿಗೆ ಎಲ್ಲೆಡೆ ಕಂಡು ಬರುತ್ತದೆ. ಆದರೆ ಆಧುನೀಕತೆಯ ನಾಗಾಲೋಟಕ್ಕೆ ಈ ಕಲೆ ಗತಿಸುವ ಅಪಾಯದಲ್ಲಿದೆ.ದೀಪಾವಳಿಯ ರಾತ್ರಿಗಳಲ್ಲಿ ಜ್ಯೋತಿ ಹಿಡಿದು ಮನೆ ಮನೆಯಲ್ಲಿ ಹಾಡು ಹೇಳಿ ರಾತ್ರಿ ಕಳೆಯುವ ಅಪರೂಪದ ಕಲೆ ಅಂಟಿಗೆ ಪಿಂಟಿಗೆ. ಅಂಟಿಗೆ ಪಿಂಟಿಗೆ ಜಾನಪದ ಕಲೆಯು ಮಲೆನಾಡಿನ ತೀರ್ಥಹಳ್ಳಿ ಭಾಗದಲ್ಲಿಯೇ ಆರಂಭಗೊಂಡಿತು ಎನ್ನಲಾಗುತ್ತದೆ. ಅಂಟಿಗೆ ಅಂದರೆ ದೀಪವನ್ನು ಅಂಟಿಸುವುದು. ದೀಪದಿಂದ ದೀಪ ಹಚ್ಚುತ್ತಾ ತಂಡದಲ್ಲಿ ಮನೆ ಮನೆಗೆ ತೆರಳಿ ಮಲೆನಾಡಿನ ಬದುಕು, ಪರಿಸರಕ್ಕೆ ಸಂಬಂಧಿಸಿದ ಹಾಡುಗಳನ್ನು ಹೇಳುತ್ತಾ ಸಾಗುವ ಈ ಜಾನಪದ ಕಲೆಗೆ ತನ್ನದೆ ಆದ ವೈಶಿಷ್ಟ್ಯವಿದೆ. ಈ ಬಗ್ಗೆ ಶಿವಮೊಗ್ಗ ಜಿಲ್ಲಾ ಜಾನಪದ ಪರಿಷತ್ತಿನ ಉಪಾಧ್ಯಕ್ಷ ಡಿ.ಸಿ.ದೇವರಾಜ್ ಮಾಹಿತಿ ನೀಡಿದರು. ತೀರ್ಥಹಳ್ಳಿಗೆ ಸಮೀಪದ ಶಿರುಪತಿಯ ಶ್ರೀ ವ್ಯಾಘ್ರ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ನ.16 ರಂದು ಸಂಜೆ ತೀರ್ಥಹಳ್ಳಿ ತಾಲೂಕು ಜಾನಪದ ಪರಿಷತ್ತು, ತಾಲೂಕು ಕನ್ನಡ…
Author: Nammur Express Admin
ನ.20ಕ್ಕೆ “ಕಿರಣ್ ಹೆಲ್ತ್ ಕೇರ್” ಶುಭಾರಂಭಪ್ರಸಿದ್ಧ ವೈದ್ಯ ಡಾ.ಗಣೇಶ ನಾಯಕ್ ಮಾಲಿಕತ್ವದ ಆಸ್ಪತ್ರೆ ತೀರ್ಥಹಳ್ಳಿ: ಆರೋಗ್ಯ ಮತ್ತು ಚಿಕಿತ್ಸೆ ಸೇವೆಗಳಲ್ಲಿ ಕರಾವಳಿ ಮತ್ತು ಮಲೆನಾಡು ಮುಂಚೂಣಿಯಲ್ಲಿದೆ. ಈ ನಡುವೆ ಕರಾವಳಿ ಮ್ತು ಮಲೆನಾಡಿನ ಸಂಪರ್ಕ ಕೊಂಡಿಯಾಗಿರುವ ತೀರ್ಥಹಳ್ಳಿಯಲ್ಲಿ ಇದೀಗ ಕಿರಣ್ ಹೆಲ್ತ್ ಕೇರ್ ಎಂಬ ಹೈಟೆಕ್ ಆಸ್ಪತ್ರೆ ಶುಭಾರಂಭ ಮಾಡಲಿದೆ. ದಶಕಗಳ ಕಾಲ ಆರೋಗ್ಯ ಸೇವೆಯನ್ನು ಮಲೆನಾಡಿನ ಜನತೆಗೆ ನೀಡಿರುವ ಡಾ.ಗಣೇಶ್ ನಾಯಕ್ ಮಾಲಿಕತ್ವದ ಈ ಆಸ್ಪತ್ರೆ ಅತ್ಯಾಧುನಿಕ ಹಾಗೂ ಹೈಟೆಕ್ ಸೌಲಭ್ಯ ಹೊಂದಿದೆ. ಜೊತೆಗೆ ಶಾಂತ ಪ್ರದೇಶದಲ್ಲಿದ್ದು, ನ.20ಕ್ಕೆ ಉದ್ಘಾಟನೆಗೊಳ್ಳಲಿದೆ.ನೂತನ ಆಸ್ಪತ್ರೆಯ ಉದ್ಘಾಟಕರಾಗಿ ಡಾ.ವೆಂಕಟೇಶ್ (FMMC,Manipal) ಹಾಗೂ ಮುಖ್ಯ ಅತಿಥಿಗಳಾಗಿ ಟಿ.ವಿ.ಗಜೇಂದ್ರನಾಥ್ ಮತ್ತು ಹೇಮಲತಾ ಕೊರಣ್ಣನವರ್ ಆಗಮಿಸಲಿದ್ದಾರೆ. ತೀರ್ಥಹಳ್ಳಿಯ ಕೊಪ್ಪ ಸರ್ಕಲ್‍ನಿಂದ ಸರ್ಕಾರಿ ಪಿಯು ಕಾಲೇಜಿಗೆ ಹೋಗುವ ಮಾರ್ಗದಲ್ಲಿ ಆರಂಭವಾಗಿರುವ ಕಿರಣ್ ಹೆಲ್ತ್‍ಕೇರ್‍ನ ಶುಭಾರಂಭಕ್ಕೆ ಸರ್ವರನ್ನೂ ಡಾ.ಗಣೇಶ್ ನಾಯಕ್ ಹಾಗೂ ಕುಟುಂಬ ವರ್ಗ ಸ್ವಾಗತಿಸಿದೆ. ತೀರ್ಥಹಳ್ಳಿಯಲ್ಲಿ ಈಗಾಗಲೇ ಮೇಳಿಗೆ, ಅನುರಾಧಾ, ಮಾನಸ, ಪ್ರಶಾಂತಿ ಚಿಕಿತ್ಸಾಲಯ, ಪೂಜ್ಯಪಾದ ಸೇರಿದಂತೆ ಅನೇಕ ಆಸ್ಪತ್ರೆಗಳಿವೆ.…
ಕನ್ನಡಪರ ಸಂಘಟನೆಗಳ ಆಕ್ರೋಶದ ಕಿಡಿಡಿ.5ಕ್ಕೆ ಕರ್ನಾಟಕ ಬಂದ್..? ಬೆಂಗಳೂರು: ಮಸ್ಕಿ ಮತ್ತು ಬಸವ ಕಲ್ಯಾಣ ಉಪ ಚುನಾವಣೆ ಮುಂದಿಟ್ಟುಕೊಂಡು ಅಲ್ಲಿ ಮ್ಯಾಜಿಕ್ ಮಾಡಿ ಮರಾಠರನ್ನು ಒಲಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಆದರೆ ಈ ನಡೆ ಇದೀಗ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ಕನ್ನಡಪರ ಸಂಘಟನೆಗಳು ಡಿ.5ಕ್ಕೆ ರಾಜ್ಯ ಬಂದ್‍ಗೆ ಕರೆ ನೀಡಿವೆ. ಎಲ್ಲಾ ಜಿಲ್ಲೆಗಳಲ್ಲೂ ಈಗ ಹೋರಾಟ ಶುರು ಆಗಿದೆ. ಮರಾಠಾ ಪ್ರಾಧಿಕಾರ ಸ್ಥಾಪನೆ ನಿರ್ಧಾರ ಮುಂಬರುವ ದಿನಗಳಲ್ಲಿ ತೆಲುಗು, ತಮಿಳು ಮತ್ತು ಮಲಯಾಳಂ ಅಭಿವೃದ್ಧಿ ಅಧಿಕಾರಿಗಳನ್ನು ಸ್ಥಾಪಿಸಲು ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಮುಖ್ಯಮಂತ್ರಿಗಳು ತಕ್ಷಣ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಕನ್ನಡಪರ ಸಂಘಟನೆಗಳ ನಾಯಕರು ಆಗ್ರಹಿಸಿದ್ದಾರೆ. ರಾಯಚೂರು ಜಿಲ್ಲೆಯ ಮಸ್ಕಿ ನಾಲಾ ನೀರಾವರಿ ಯೋಜನೆಗೆ ಮತ್ತು ಮರಾಠಾ ಅಭಿವೃದ್ಧಿ ಪ್ರಾಧಿಕಾರ(ಎಂಡಿಎ) ಸ್ಥಾಪನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ಮೂಲಕ ಮರಾಠ ಪ್ರೇಮ ಮೆರೆದಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.50 ಕೋಟಿ…
ಅತೀ ಬಣ್ಣನೆ ಸರಿಯಲ್ಲ: ಈಶ್ವರಪ್ಪ ಗುಟುರುಬಿಜೆಪಿ ಅಂದರೆ ವ್ಯಕ್ತಿ ಅಲ್ಲ, ಸಂಘಟಿತ ಗೆಲುವು… ಶಿವಮೊಗ್ಗ: ಸಿಎಂ ಯಡಿಯೂರಪ್ಪ ಪುತ್ರ ಬಿಜೆಪಿ ನಾಯಕ ವಿಜಯೇಂದ್ರ ಅವರ ಅತಿಯಾದ ಬಣ್ಣನೆ ಇದೀಗ ಪಕ್ಷದ ಹಿರಿಯ ನಾಯಕರಿಗೆ ಇರುಸು ಮುರುಸು ಉಂಟುಮಾಡಿದೆ. ಈ ಬಗ್ಗೆ ಸ್ವತಃ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪರವರೇ ಅಸಮಾಧಾನ ಹೊರ ಹಾಕಿದ್ದಾರೆ. ಬಿಜೆಪಿ ಎಂದಿಗೂ ಒಬ್ಬ ವ್ಯಕ್ತಿಯ ಮೇಲೆ ಚುನಾವಣೆ ಮಾಡುವುದಿಲ್ಲ. ಸಂಘಟಿತ ಪ್ರಯತ್ನದಿಂದ ಚುನಾವಣೆ ಮಾಡಿ ಗೆಲುವು ಸಾಧಿಸುತ್ತಿದ್ದೇವೆ. ಆದರೆ, ವಿಜಯೇಂದ್ರ ಅವರನ್ನು ವೈಭವೀಕರಿಸುವ ಕೆಲಸಗಳನ್ನು ಕೆಲವರು ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದು, ಇದೀಗ ರಾಜಕೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ. ಶಿವಮೊಗ್ಗದಲ್ಲಿ ಮಾತನಾಡಿರುವ ಅವರು, ಚುನಾವಣೆ ಸಂದರ್ಭದಲ್ಲಿ ಪ್ರತಿ ಕ್ಷೇತ್ರಕ್ಕೂ 4-5 ಮಂದಿ ಉಸ್ತುವಾರಿಯಾಗಿ ನಮ್ಮ ನಾಯಕರು ನೇಮಿಸುತ್ತಾರೆ. ಅದೇ ಮಾದರಿಯಲ್ಲಿಯೇ ಶಿರಾ ಹಾಗೂ ರಾಜರಾಜೇಶ್ವರಿ ನಗರಕ್ಕೂ ಉಸ್ತುವಾರಿ ನೇಮಿಸಲಾಗಿತ್ತು. ಶಿರಾದಲ್ಲಿ ಕೆಲಸ ಮಾಡಿದಂತೆಯೇ ರಾಜರಾಜೇಶ್ವರಿ ನಗರದಲ್ಲಿ ಸಚಿವ ಅಶೋಕ್ ಅವರು ಕೆಲಸ ಮಾಡಿದ್ದಾರೆ. ಚುನಾವಣೆ ಗೆಲುವಿನಲ್ಲಿ ವಿಜಯೇಂದ್ರ ಅವರ…
ಶೀತಗಾಳಿ, ಮೋಡದ ವಾತಾವರಣಅಡಿಕೆ,ಭತ್ತ ಬೆಳೆದ ರೈತರಿಗೆ ಆತಂಕ ಬೆಂಗಳೂರು: ರಾಜ್ಯದಲ್ಲಿ ಈಶಾನ್ಯ ಮುಂಗಾರು ಚುರುಕಾಗಿದ್ದು, ಮೋಡ ಕವಿದ ವಾತಾವರಣ ಜೊತೆಗೆ ಅನೇಕ ಕಡೆ ಅಸಾಧಾರಣಾ ಮಳೆಯಾಗುವ ಸಾಧ್ಯತೆಗಳಿವೆ. ಇನ್ನು ದೀಪಾವಳಿ ದಿನ ಹಲವು ಕಡೆ ಮೋಡದ ವಾತಾವರಣ, ಶೀತಗಾಳಿ ಕಂಡು ಬಂದಿದೆ.ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಚಾಮರಾಜನಗರ ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಹಾಗೂ ಪೂರ್ವ ಭಾಗದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾತಾವರಣದಲ್ಲಿ ಉಂಟಾಗುತ್ತಿರುವ ಬದಲಾವಣೆಗಳಿಂದಾಗಿ ಮೋಡ ಕವಿದ ವಾತಾವರಣವಿದ್ದು, ಹಲವೆಡೆ ತಣ್ಣನೆಯ ಗಾಳಿ ಬೀಸುತ್ತಿದೆ. ಇದರಿಂದ ಕೆಲವೆಡೆ ಚದುರಿದಂತೆ ಸಾಧಾರಣ ಮಳೆಯಾಗಬಹುದು. ಭಾರೀ ಮಳೆಯಾಗುವ ಮುನ್ಸೂಚನೆಗಳಿಲ್ಲ ಎಂದೂ ಹವಾಮಾನ ಇಲಾಖೆ ತಿಳಿಸಿದೆ. ರೈತರಿಗೆ ಸಂಕಷ್ಟ!: ಚಳಿಗಾಲ ಶುರುವಾದರೂ ಇನ್ನೂ ಮಳೆಯ ಲಕ್ಷಣ ರೈತರಿಗೆ ಸಂಕಟ ತಂದಿದೆ. ಇದು ಕೊಯ್ಲು ಸಮಯವಾದ್ದರಿಂದ ಈಗ ಮಳೆ ಬಂದರೆ ನಷ್ಟ. ಮಲೆನಾಡು ಮತ್ತು ಕರಾವಳಿಯಲ್ಲಿ ಭತ್ತ ಮತ್ತು ಅಡಿಕೆ ಕೊಯ್ಲು…
ಮೈಸೂರಿನ ಟಿ.ನರಸೀಪುರದಲ್ಲಿ ಘಟನೆಚುನಾವಣೆ ಖರ್ಚಿಗೆ ಹಣ ಕೊಡದಿದ್ದಕ್ಕೆ ಸಿಟ್ಟು ಮೈಸೂರು: ಚುನಾವಣೆ ಖರ್ಚಿಗೆ ಹಣ ನೀಡದ ಕಾರಣಕ್ಕೆ ದೀಪಾವಳಿ ಹಬ್ಬದಂದೇ ಪತ್ನಿಯನ್ನು ಕೊಂದು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವ ಅಮಾನುಷ ಘಟನೆ ಮೈಸೂರಿನ ಟಿ.ನರಸೀಪುರದಲ್ಲಿ ನಡೆದಿದೆ.ಟಿ.ನರಸೀಪುರದ ದೊಡ್ಡಮುಲಗೂಡು ಗ್ರಾಮದ ಮಾಜಿ ಗ್ರಾಪಂ ಸದಸ್ಯ ರಮೇಶ್(30) ಪತ್ನಿಯ ಕೊಲೆ ಮಾಡಿ ಬೆಂಕಿ ಹಚ್ಚಿದ ದುಷ್ಕರ್ಮಿ. ಪತ್ನಿ ಶಾಂತಮ್ಮ(22) ಪತಿಯಿಂದ ಸಾವನ್ನಪ್ಪಿರುವ ದುರ್ದೈವಿ. ರಮೇಶ್ ಕೃತ್ಯದ ನಂತರ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗೆ ಪೆÇೀಲೀಸರು ಶೋಧಕಾರ್ಯ ನಡೆಸಿದ್ದಾರೆ. ಬನ್ನೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಕಾಕ್ ಬಳಿ ಭೀಕರ ಅಪಘಾತ ಬೆಳಗಾವಿ: ದೀಪಾವಳಿ ಎಷ್ಟು ಒಳ್ಳೆಯ ಹಬ್ಬವೋ ಅಷ್ಟೇ ಕೆಡುಕು ಕೂಡ. ಅಮಾವಾಸ್ಯೆ ಅನೇಕ ಕೆಟ್ಟ ಘಟನೆಗಳಿಗೆ ಸಾಕ್ಷಿಯಾಗಿದೆ. ಈ ನಡುವೆ ಬೆಳಗಾವಿ ಜಿಲ್ಲೆ ಗೋಕಾಕ್ ಬಳಿ ಭೀಕರ ಅಪಘಾತದಲ್ಲಿ ಪುಟ್ಟ ಬಾಲಕಿ ಸೇರಿ ಒಂದೇ ಕುಟುಂಬದ ನಾಲ್ವರು ದುರ್ಮರಣಕ್ಕೀಡಾದ ಘಟನೆ ನಡೆದಿದೆ. ಗೋಕಾಕ್ ಮಮದಾಪೂರ ಕ್ರಾಸ್ ಸಮೀಪ ಕಾರೊಂದಕ್ಕೆ ಟಾಟಾ ಏಸ್ ಢಿಕ್ಕಿಯಾದ ಪರಿಣಾಮ 4 ವರ್ಷದ ಓರ್ವ ಬಾಲಕಿ, ಇಬ್ಬರು ಮಹಿಳೆಯರು ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದೆ. ಮೃತರೆಲ್ಲರೂ ರಾಮದುರ್ಗ ತಾಲೂಕಿನ ಮುರಕಟ್ನಾಳ್ ಗ್ರಾಮದವರೆನ್ನಲಾಗಿದೆ.ಗಾಯಾಳುಗಳನ್ನು ಗೋಕಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಗೋಕಾಕ್ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಬೈಲ್, ಹಣ, ಚಿನ್ನ ಇವರ ಟಾರ್ಗೆಟ್ಸರ್ಕಾರಗಳೇ, ಅಪಾಯದ ಸೂಚನೆ: ಹುಷಾರ್..! ಬೆಂಗಳೂರು: ಕರೋನಾ ಕಾರಣದಿಂದ ದೇಶದಲ್ಲಿ ಲಕ್ಷ ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಲಕ್ಷಾಂತರ ಉದ್ಯಮಗಳು ಮುಚ್ಚಿವೆ. ಇದರ ಎಫೆಕ್ಸ್ ಎಲ್ಲಾ ಕ್ಷೇತ್ರದ ಮೇಲೆ ಬೀಳುತ್ತಿದೆ. ಈ ನಡುವೆ ಕೆಲಸ, ದುಡಿಮೆ, ಹಣವಿಲ್ಲದೆ ಕೆಲವು ಯುವಕರು ಇದೀಗ ಹಿಂಸೆ, ಅಪರಾಧದತ್ತ ಇಳಿಯುತ್ತಿದ್ದಾರೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.ರಾಜ್ಯದ ರಾಜಧಾನಿ ಬೆಂಗಳೂರಿ ಸೇರಿ ಪ್ರತಿ ಊರಲ್ಲೂ ದರೋಡೆ, ಮೊಬೈಲ್, ಚಿನ್ನ, ಹಣ ಕಳ್ಳತನ ಹೆಚ್ಚಿದೆ. ಇದು ಅಪಾಯಕಾರಿ ವಿಷಯ ಕೂಡ!. ಬೆಂಗಳೂರಿನ ಹೋಟೆಲ್‍ವೊಂದರಲ್ಲಿ ರಿಸೆಫನಿಸ್ಟ್ ಆಗಿದ್ದ ಅಮೀರ್ ಅಹ್ಮದ್ ಎಂಬ 28 ವರ್ಷದ ಯುವಕ ಕೆಲಸ ಕಳೆದುಕೊಂಡ ಬಳಿಕ ಪಿಣ್ಯ ಕಾರ್ಖಾನೆ ಬಳಿ ಗ್ರಾಹಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದು ಜೈಲು ಸೇರಿದ್ದಾನೆ. ಬೆಂಗಳೂರಿನ ಆಟೋ ಚಾಲಕನೊಬ್ಬ ವೃದ್ಧೆಯ ಮಾಂಗಲ್ಯ ಎಗರಿಸಿ ಸುವರ್ಣ ನ್ಯೂಸ್ ಕಚೇರಿಗೆ ತಂದು ಕೊಟ್ಟಿದ್ದ. ದೀಪಾವಳಿ ಮುನ್ನ ದಿನವೇ ರಾಯಚೂರಲ್ಲಿ ಹುಡುಗರು ಕದ್ದಿದ್ದಾರೆ. ಕಟ್ಟಡ ಕಾರ್ಮಿಕರಾಗಿದ್ದ ಯುವಕರು…
ಹೊಸನಗರದ ರಿಪ್ಪಿನಪೇಟೆಯಲ್ಲಿ ಘಟನೆಲಕ್ಷಾಂತರ ಮೌಲ್ಯದ ಚಿನ್ನ ಕಳ್ಳತನ ಹೊಸನಗರ: ಮಲೆನಾಡಿನಲ್ಲಿ ದಿನೇ ದಿನೇ ಕಳ್ಳತನ, ದರೋಡೆ ಹೆಚ್ಚುತ್ತಿದೆ. ಈ ನಡುವೆ ಹೊಸನಗರದ ರಿಪ್ಪಿನಪೇಟೆಯ ಬಳಿ ಮತ್ತೊಂದು ದರೋಡೆ ಲಕ್ಷ್ಮಿ ಪೂಜೆಯ ದಿನ ನಡೆದಿದೆ.ಹೌದು. ಶನಿವಾರ ಎಲ್ಲೆಡೆ ದೀಪಾವಳಿ ಖರೀದಿ, ಲಕ್ಷ್ಮಿ ಪೂಜೆ ಸಂಭ್ರಮ. ಹೀಗೆಯೇ ತಾಲೂಕಿನ ಗವಟೂರು ಬಳಿಯ ಹುಳಿಗದ್ದೆ ಶಿವಕುಮಾರ ಎಂಬುವರ ಮನೆ ನುಗ್ಗಿ ಹಣ ಮತ್ತು ಚಿನ್ನಾಭರಣ ದೋಚಿದ್ದಾರೆ. ಶಿವಕುಮಾರ್ ರಿಪ್ಪಿನಪೇಟೆಯಲ್ಲಿದ್ದ ತಮ್ಮ ಅಂಗಡಿ ಪೂಜೆಗೆ ಮನೆ ಮಂದಿಯೆಲ್ಲಾ ಮನೆ ಬೀಗ ಹಾಕಿ ಹೋಗಿದ್ದರು. ಇದನ್ನು ಗಮನಿಸಿದ ಕಳ್ಳರು ಮನೆ ದೋಚಿದ್ದಾರೆ. ಸುಮಾರು 10 ಸಾವಿರ ಹಣ ಮತ್ತು 1.5 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿದೆ ಎನ್ನಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗದ ಬಳಿ ಯುವತಿಯ ಮೃತ ದೇಹ ಪತ್ತೆ ಶಿವಮೊಗ್ಗ: ಮೊಬೈಲ್ ಮಾತು ಅತಿಯಾದರೆ ಅಪಾಯ ಎಂಬುದಕ್ಕೆ ಇಲ್ಲೊಂದು ಪ್ರಕರಣ ಸಾಕ್ಷಿಯಾಗಿದೆ. ಬೆಂಗಳೂರಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ರೈಲು ಬೋಗಿಯ ಡೋರ್ ಬಳಿ ಮೊಬೈಲ್‍ನಲ್ಲಿ ಮಾತನಾಡುತ್ತಾ ನಿಂತಿದ್ದ ಯುವತಿ ಆಯತಪ್ಪಿ ನದಿಗೆ ಬಿದ್ದು ಮೃತಪಟ್ಟಿದ್ದಾಳೆ. 2 ದಿನಗಳ ಬಳಿಕ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಮತ್ತು ಸ್ಥಳೀಯರ ನೆರವಿನೊಂದಿಗೆ ಶವ ಪತ್ತೆಯಾಗಿದೆ. ನಡೆದಿದ್ದೇನು?: ನ.12ರಂದು ಶಿವಮೊಗ್ಗ ಮೂಲದ ಸಹನಾ(24) ಬೆಂಗಳೂರಿಂದ ಶಿವಮೊಗ್ಗಕ್ಕೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ಶಿವಮೊಗ್ಗ ಸಮೀಪದ ತುಂಗಾ ಸೇತುವೆ ಬಳಿ ಆಕೆ ರೈಲಿನಲ್ಲಿ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದ ಕಾರಣ ಆಯತಪ್ಪಿ ಕೆಳಗೆ ಬಿದ್ದಿದ್ದರು. ಬಳಿಕ ಆಕೆಯ ಪತ್ತೆಗಾಗಿ ಎಲ್ಲರೂ 2 ದಿನ ಸಾಹಸ ಮಾಡಿದ್ದರು. ನ.14ರಂದು ಮೃತದೇಹ ಪತ್ತೆಯಾಗಿದೆ. ಶಿವಮೊಗ್ಗದ ಗಾಡಿಕೊಪ್ಪದ ಸಹನಾ ಸಿಎ ವ್ಯಾಸಂಗ ಮಾಡುತ್ತಿದ್ದರು. ಮೊಬೈಲ್, ಬಸ್, ವಾಹನ ಅಥವಾ ಯಾವುದೇ ಕಡೆ ಮೊಬೈಲ್‍ನಲ್ಲಿ ಮಾತನಾಡುವಾಗ ಎಚ್ಚರಿಕೆ ವಹಿಸುವುದು ಒಳಿತು. ಇದು ನಮ್ಮ ಕಾಳಜಿ ಮತ್ತು ಕಳಕಳಿ.