Categories
ಹುಬ್ಬಳ್ಳಿ

ಅಪಘಾತಕ್ಕೆ ಒಂದೇ ಕುಟುಂಬದ 5 ಮಂದಿ ಬಲಿ

  • ಗೋಕಾಕ್ ಬಳಿ ಭೀಕರ ಅಪಘಾತ

ಬೆಳಗಾವಿ: ದೀಪಾವಳಿ ಎಷ್ಟು ಒಳ್ಳೆಯ ಹಬ್ಬವೋ ಅಷ್ಟೇ ಕೆಡುಕು ಕೂಡ. ಅಮಾವಾಸ್ಯೆ ಅನೇಕ ಕೆಟ್ಟ ಘಟನೆಗಳಿಗೆ ಸಾಕ್ಷಿಯಾಗಿದೆ. ಈ ನಡುವೆ ಬೆಳಗಾವಿ ಜಿಲ್ಲೆ ಗೋಕಾಕ್ ಬಳಿ ಭೀಕರ ಅಪಘಾತದಲ್ಲಿ ಪುಟ್ಟ ಬಾಲಕಿ ಸೇರಿ ಒಂದೇ ಕುಟುಂಬದ ನಾಲ್ವರು ದುರ್ಮರಣಕ್ಕೀಡಾದ ಘಟನೆ ನಡೆದಿದೆ.


ಗೋಕಾಕ್ ಮಮದಾಪೂರ ಕ್ರಾಸ್ ಸಮೀಪ ಕಾರೊಂದಕ್ಕೆ ಟಾಟಾ ಏಸ್ ಢಿಕ್ಕಿಯಾದ ಪರಿಣಾಮ 4 ವರ್ಷದ ಓರ್ವ ಬಾಲಕಿ, ಇಬ್ಬರು ಮಹಿಳೆಯರು ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದೆ. ಮೃತರೆಲ್ಲರೂ ರಾಮದುರ್ಗ ತಾಲೂಕಿನ ಮುರಕಟ್ನಾಳ್ ಗ್ರಾಮದವರೆನ್ನಲಾಗಿದೆ.ಗಾಯಾಳುಗಳನ್ನು ಗೋಕಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಗೋಕಾಕ್ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.