ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತಶಿವಮೊಗ್ಗ ನಗರದಲ್ಲಿ ಘಟನೆ ಶಿವಮೊಗ್ಗ: ದೇವರಿಗೆ ಹಚ್ಚಿದ ದೀಪ ಹಾಸಿಗೆ ಮೇಲೆ ಬಿದ್ದು ಹಾಸಿಗೆ ಹೊತ್ತಿ ಉರಿದಿರುವ ಘಟನೆ ಶಿವಮೊಗ್ಗ ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ನಡೆದಿದೆ.ಕೆ.ಆರ್.ಪುರಂನ ನಂದಿನಿ ಎಂಬುವರ ಮನೆಯಲ್ಲಿ ದೇವರಿಗೆ ದೀಪ ಹಚ್ಚಿ ಸಂಬಂಧಿಕರ ಮನೆ ತರೀಕೆರೆಗೆ ಹೋದಾಗ ಈ ಘಟನೆ ನಡೆದಿದೆ. ಕೂದಲೆಳೆ ಅಂತರದಲ್ಲಿ ದೊಡ್ಡ ದುರಂತ ತಪ್ಪಿದೆ. ಹಾಸಿಗೆಗೆ ಬೆಂಕಿ ತಗುಲಿ ಅಕ್ಕಪಕ್ಕದ ಮನೆಯವರಿಗೆ ಹೊಗೆ ಕಾಣಿಸಿದ್ದರಿಂದ ತಕ್ಷಣವೇ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಮನೆ ಬೀಗ ಒಡೆದು ಹಾಸಿಗೆ ಹೊರಗೆ ತಂದು ನೀರು ಹಾಕಿ ಆರಿಸಲಾಗಿದೆ. ಮನೆಯ ಇತರೆ ವಸ್ತುಗಳಿಗೆ ಹಾನಿಯಾಗಿಲ್ಲ.
Author: Nammur Express Admin
ಹೊಸ ಭರವಸೆಯೊಂದಿಗೆ ಎಲ್ಲೆಡೆ ಪೂಜೆಉದ್ಯಮ ನೆಲಕಚ್ಚಿಸಿದ್ದ ಕರೋನಾ ರಾಕ್ಷಸ! ಬೆಂಗಳೂರು: ಹೊಸ ವರ್ಷದಿಂದ ಬಹುತೇಕ ಪಾತಾಳಕ್ಕೆ ಬಿದ್ದಿದ್ದ ಉದ್ಯಮ ಕ್ಷೇತ್ರ ಇನ್ಮುಂದೆ ಬೆಳವಣಿಗೆ ಕಾಣುವ ಲಕ್ಷಣಗಳು ಗೋಚರಿಸುತ್ತಿವೆ. ಎಲ್ಲಾ ಕಡೆ ದೀಪಾವಳಿ, ಲಕ್ಷ್ಮಿ ಪೂಜೆ ಬಳಿಕ ಹೊಸ ಜೋಷ್ ಕಾಣುತ್ತಿದೆ. ಮಹಾ ನಗರ, ಪಟ್ಟಣ, ಹಳ್ಳಿ ಸೇರಿ ಎಲ್ಲೆಡೆ ಕರೋನಾ ರಾಕ್ಷಸನ ಅಬ್ಬರದಿಂದ ವ್ಯವಹಾರ, ಉದ್ಯಮ ಕ್ಷೇತ್ರ ಪಾತಾಳಕ್ಕೆ ಬಿದ್ದಿತು. ದಿನದ ಉಳಿತಾಯದಲ್ಲಿ ಖೋತಾ ಆಗಿತ್ತು. ಪ್ರತಿ ಊರಲ್ಲೂ ನೂರಾರು ಉದ್ಯಮಗಳು ಶಾಶ್ವತವಾಗಿ ಬಂದ್ ಆದವು..ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡರು, ಉದ್ಯಮಿಗಳು ಸಾಲದ ಶೂಲಕ್ಕೆ ಬಿದ್ದರು. ಈ ಕಹಿ ನೆನಪಿನ ನಡುವೆಯೇ ಆಯುಧಪೂಜೆ, ಲಕ್ಷ್ಮಿ ಪೂಜೆ, ದೀಪಾವಳಿ ಎಲ್ಲರ ಬದುಕಲ್ಲೂ ಮತ್ತೆ ಹೊಸ ಬೆಳಕು ನೀಡುವ ಸೂಚನೆ ನೀಡಿದೆ. ಶನಿವಾರ ಪ್ರತಿ ಅಂಗಡಿಯಲ್ಲೂ ಲಕ್ಷ್ಮಿ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗಿದೆ. ವಾಹನ ಯಂತ್ರಗಳಿಗೂ ಪೂಜೆ ನೀಡಿ ಹೊಸದಾಗಿಯೇ ಉದ್ಯಮ ಶುರು ಮಾಡಿದಷ್ಟು ಪೂಜೆ ಮಾಡಲಾಗಿದೆ. ಕರೋನಾ ಭಯದಿಂದ ದೂರವಾಗಿ ಉದ್ಯಮ ಗಟ್ಟಿಗೊಳಿಸುವ…
ದೀಪಾವಳಿ ಸಂಭ್ರಮದಲ್ಲಿ ಮಿಂದೆದ್ದ ಜನ!ಎಲ್ಲೆಡೆ ಜನವೋ ಜನ..ಪೂಜೆ, ಪುನಸ್ಕಾರ ಬೆಂಗಳೂರು: ಕರೋನಾ ಇಡೀ ದೇಶವನ್ನು ಮಂಕು ಮಾಡಿದ್ದು, ಇದೀಗ ಬೆಳಕಿನ ಹಬ್ಬ ದೀಪಾವಳಿ ಈ ಕರೋನಾ ಕತ್ತಲನನ್ನು ಕೊಂಚ ಬೆಳಕು ಮಾಡಿದೆ.ಜನ ನಕರಾತ್ಮಕ ಚಿಂತನೆಯಿಂದ ಕೊಂಚ ಹೊರಬರುವಂತೆ ಮಾಡಿದೆ. ದೀಪಾವಳಿ ಹಬ್ಬಕ್ಕೂ ಮುನ್ನ 2 ದಿನದಿಂದ ಎಲ್ಲಾ ಕಡೆ ಜನರ ಭಯಬಿಟ್ಟು, ಪಾಸಿಟಿವ್ ಎನರ್ಜಿಯಿಂದ ಕೆಲಸ ಮಾಡುತ್ತಿದ್ದುದು ಕಂಡು ಬಂತು. ಇನ್ನು ಪ್ರತಿ ಊರಿನ ಮಾರುಕಟ್ಟೆಗಳು ಅಂಗಡಿಗಳು ರಶ್ ಆಗಿದ್ದವು. ವ್ಯವಹಾರದಲ್ಲೂ ಕೊಂಚ ಚೇತರಿಕೆ ಕಂಡಿತು. ಇದು ಎಲ್ಲಾ ಕಡೆ ಮಾಮೂಲಾಗಿತ್ತು. ಇನ್ನು ಜನತೆ ಹೆಚ್ಚು ಹೆಚ್ಚು ಖರೀದಿಯಲ್ಲಿ ತೊಡಗಿದ್ದರು. ಮನೆ ಮಂದಿಯೆಲ್ಲಾ ಸೇರಿ ಇದೇ ಮೊದಲ ಬಾರಿಗೆ ಹಬ್ಬ ಆಚರಿಸಿದ್ದಾರೆ. ಏಕೆಂದರೆ ಕೆಲಸದ ಸಲುವಾಗಿ ದೂರದ ಊರಲ್ಲಿದ್ದ ಮನೆ ಮಕ್ಕಳು ಈ ಬಾರಿ ಕರೋನಾ ಕಾರಣ ಮನೆಯಲ್ಲಿಯೇ ಇದ್ದಾರೆ. ಪಟಾಕಿ ಅಬ್ಬರವಿಲ್ಲದೆ ಇದ್ದರೂ ಹಸಿರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಪಟ್ಟಣಗಳಲ್ಲಿ ಜನರ ಸಂಖ್ಯೆ ಕಡಿಮೆ ಕಂಡಿತು. ಎಲ್ಲಿಯೂ ಪಟಾಕಿ ಅವಘಡ…
ಹೃದಯಾಘಾತದಿಂದ ವಿಧಿವಶಕನ್ನಡ ಪತ್ರಿಕೋದ್ಯಮದ ರೆಬೆಲ್ ಸ್ಟಾರ್ ಬೆಂಗಳೂರು: ಕನ್ನಡ ಪತ್ರಿಕೋದ್ಯಮ, ತನಿಖಾ ಮಾಧ್ಯಮದ ಭೀಷ್ಮ, ಬರಹಗಾರ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. 62 ವರ್ಷದ ರವಿ ಬೆಳಗೆರೆ( 1958-2020) ಬೆಂಗಳೂರಿನ ಪದ್ಮನಾಭನಗರದಲ್ಲಿರುವ ತಮ್ಮ ಹಾಯ್ ಬೆಂಗಳೂರು ಕಚೇರಿಯಲ್ಲಿ ರಾತ್ರಿ ಊಟ ಮುಗಿಸಿ, ನಿದ್ರೆ ಮಾಡುತ್ತಿದ್ದಾಗ ಅಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಪತ್ರಿಕೋದ್ಯಮದ ಕಂಡ ಸಾಧಕ ಮರೆಯಾಗಿದ್ದಾನೆ. ಕನಕಪುರ ಮುಖ್ಯ ರಸ್ತೆಯ ಗುಬ್ಳಾಳದ ಕರಿಶ್ಮಾ ಹಿಲ್ಸ್ನ ರವಿ ಬೆಳಗೆರೆಯವರ ನಿವಾಸದಲ್ಲಿ ಮೃತದೇಹವನ್ನು ಇರಿಸಲಾಗಿದೆ. ರವಿ ಬೆಳಗೆರೆಯವರ ಕನಸಿನ ಕೂಸಾಗಿದ್ದ ಪದ್ಮನಾಭನಗರದ ಪ್ರಾರ್ಥನಾ ಶಾಲೆಯ ಅವರಣಕ್ಕೆ ಮೃತದೇಹವನ್ನು ಶಿಫ್ಟ್ ಮಾಡಲು ಸಿದ್ಧತೆ ನಡೆಸಲಾಗಿದೆ. ಬನಶಂಕರಿ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗಿದೆ. ಬ್ರಾಹ್ಮಣ ವಿಧಿವಿಧಾನದ ಪ್ರಕಾರ ಅಂತ್ಯ ಸಂಸ್ಕಾರ ನನಡೆಯಲಿದೆ. ರವಿ ಬೆಳಗೆರೆಯವರು ಮೊದಲ ಪತ್ನಿ ಲಲಿತಾ, ಎರಡನೇ ಪತ್ನಿ ಯಶೋಮತಿ, ನಾಲ್ವರು ಮಕ್ಕಳಾದ ಕರ್ಣ, ಭಾವನಾ ಬೆಳಗೆರೆ, ಚೇತನಾ ಬೆಳಗೆರೆ, ಹಿಮವಂತ ಬೆಳಗೆರೆ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು,…
ಶೀಘ್ರದಲ್ಲಿ ಮನೆ ಮನೆಗೆ…ಅತೀ ಹೆಚ್ಚು ವೀಕ್ಷಕರ ಗರಿ ನಿಮ್ಮ ಊರಿನ, ನಿಮ್ಮ, ರಾಜ್ಯದ ಎಲ್ಲಾ ಮಹತ್ವದ, ನಿಖರ, ವಿಶ್ಲೇಷಿತ, ವಿಭಿನ್ನ ಸುದ್ದಿ, ಲೈವ್ ಸುದ್ದಿಗಾಗಿnammurexpress.in ಕ್ಲಿಕ್ ಮಾಡಿ. ಪ್ರತಿ ದಿನ ಸುದ್ದಿ ಪಡೆಯಿರಿ. ರಾಜ್ಯದ ವಿಭಿನ್ನ ಡಿಜಿಟಲ್ ಮಾಧ್ಯಮ ಸುದ್ದಿ ಸಂಸ್ಥೆನಿಮ್ಮ ಊರಿನ ಮತ್ತು ರಾಜ್ಯದ ಎಲ್ಲಾ ಸುದ್ದಿಗಳಿಗಾಗಿ “ಓಂಒಒUಖ ಇಘಿPಖಇSS” ಫೇಸ್ಬುಕ್ ಮತ್ತು ಯೂಟ್ಯೂಬ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿರಿ. ಶೇರ್ ಮಾಡಿರಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ.ಶೀಘ್ರದಲ್ಲಿ ಚಾನೆಲ್, ಆಪ್, ನ್ಯೂಸ್ ನೆಟ್ವರ್ಕ್, ಆಡ್ಸ್ ಹೌಸ್ ಶುರುವಾಗಲಿದೆ
ಬಸವ ಕಲ್ಯಾಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧೆ? ಬೆಂಗಳೂರು: ಭಾರೀ ಕುತೂಹಲ ಮೂಡಿಸಿದ್ದ ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಜೊತೆಗೆ ಸಿಎಂ ಪುತ್ರ ವಿಜಯೇಂದ್ರ ಅವರೂ ಗೆದ್ದಿದ್ದಾರೆ. ಈ ನಡುವೆ ವಿಜಯೇಂದ್ರ ಪವರ್ ಮತ್ತೊಮ್ಮೆ ಸಾಭೀತಾಗಿದೆ. ಈ ನಡುವೆ ಹೊಸದೊಂದು ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಯಡಿಯೂರಪ್ಪ ಅವಧಿಯಲ್ಲೇ ಮಗ ವಿಜಯೇಂದ್ರ ಅವರನ್ನು ರಾಜಕೀಯ ಅಖಾಡಕ್ಕೆ ತರಲು ಮಾಸ್ಟರ್ ಪ್ಲಾನ್ ಮಾಡಲಾಗುತ್ತಿದೆ. ಬಹುತೇಕ ಲಿಂಗಾಯತ ಸಮಾಜ ಹೆಚ್ಚಿರುವ ಬಸವ ಕಲ್ಯಾಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಆದರೆ ಇದು ಸುಳ್ಳೋ ಸತ್ಯವೋ ಈ ಬಗ್ಗೆ ಸ್ವತಃ ಬಿಎಸ್‍ವೈ ಸ್ಪಷ್ಟನೆ ನೀಡಿದ್ದಾರೆ. ವಿಜಯೇಂದ್ರ ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಈಗ ಸ್ಪರ್ಧಿಸುವುದಿಲ್ಲ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ವರಿಷ್ಠರು ಅಪೇಕ್ಷಿಸಿದರೆ ಸ್ಪರ್ಧಿಸಲಿದ್ದಾರೆ,” ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಆದರೆ ವಿಜಯೇಂದ್ರ ಈಗಲೇ ಸಿದ್ಧರಾಗಿದ್ದಾರೆ ಎನ್ನಲಾಗಿದೆ.
ಆರ್.ಆರ್.ನಗರ ಮುನಿರತ್ನ ಮತ್ತೆ ಬಾಸ್ಮೊದಲ ಬಾರಿಗೆ ಶಿರಾದಲ್ಲಿ ಖಾತೆ ಓಪನ್ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಮುಖಭಂಗ ಬೆಂಗಳೂರು: ರಾಜ್ಯದಲ್ಲಿ ನಡೆದ ಬೆಂಗಳೂರು ನಗರದ ಆರ್.ಆರ್.ನಗರ ಮತ್ತು ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಪ್ರತಿ ಪಕ್ಷಗಳ ಗೆಲುವಿನ ಆಸೆಗೆ ತಣ್ಣೀರು ಎರಚಿದೆ.ಆರ್.ಆರ್.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‍ನ ಕುಸುಮಾ ಅವರಿಗೆ ಹಿನ್ನಡೆಯಾಗಿದೆ. ಕಾಂಗ್ರೆಸ್ ನಿಂದ ಎರಡು ಬಾರಿ ಗೆಲುವು ಸಾಧಿಸಿದ್ದ ಮುನಿರತ್ನ ಅವರು ಈ ಬಾರಿ ಬಿಜೆಪಿ ಸೇರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಮುನಿರತ್ನ ಅವರು ಅಂತಿಮವಾಗಿ 57,672 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಬಿಜಿಪಿಯ ಮುನಿರತ್ನ ಅವರು ಒಟ್ಟು 1,25,665 ಮತಗಳನ್ನು ಪಡೆದರೆ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು 67,993 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.ಖಾತೆ ಓಪನ್!: ತುಮಕೂರು ಜಿಲ್ಲೆಯ ಶಿರಾ…
ಚುರುಕು ಪಡೆದ ಯೋಗೇಶ ಗೌಡ ಕೊಲೆ ಕೇಸ್ಜಾಮೀನು ಪ್ರಕ್ರಿಯೆಗೆ ಕರೋನಾ ಅಡ್ಡಿ..! ಹುಬ್ಬಳ್ಳಿ: ಮಳೆ ನಿಂತ್ರೂ ಮರದಿಂದ ನೀರು ಬೀಳೋದು ನಿಲ್ಲೋದಿಲ್ಲ ಅನ್ನೋ ಹಾಗೇ ಜಿಪಂ ಸದಸ್ಯ ಯೋಗೇಶಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನವಾದರೂ ಸಿಬಿಐ ಡ್ರಿಲ್ ಮಾತ್ರ ನಿಂತಿಲ್ಲ..! ಸಿಬಿಐ ಅಧಿಕಾರಿಗಳು ಸುದೀರ್ಘ ಮೂರು ದಿನಗಳ ತನಿಖೆಯ ಬಳಿಕ ಧಾರವಾಡದ 3ನೇ ಹೆಚ್ಚುವರಿ ನ್ಯಾಯಾಲಯ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು 14 ದಿನ ಮುದ್ದೆ ಮುರಿಯುವ ಹಾಗೆ ತೀರ್ಪು ನೀಡಿದೆ. ಇದರ ಬೆನ್ನಲ್ಲೇ ವಿನಯ ಪರ ನ್ಯಾಯವಾದಿ ಬಾಹುಬಲಿ ಧನವಾಡೆ ಜಾಮೀನು ಅರ್ಜಿ ಸಲ್ಲಿಸಿದರು. ಆದರೆ, ಕುಲಕರ್ಣಿ ಜಾಮೀನು ಪ್ರಕ್ರಿಯೆಗೆ ಸದ್ಯ ಕರೋನಾ ವೈರಸ್ ಅಡ್ಡಿಯಾಗಿದೆ. ಕೋವಿಡ್ 19 ನಿಯಮಾವಳಿ ಪ್ರಕಾರ ಯಾವುದೇ ಅರ್ಜಿಯನ್ನು ನ್ಯಾಯಾಧೀಶರು ನೇರವಾಗಿ ವಿಚಾರಣೆ ಮಾಡದೇ ಆ ಅರ್ಜಿಯನ್ನು ಸ್ಯಾನಿಟೈಸ್ ಮಾಡಿಸಿ 24 ಗಂಟೆಯ ಬಳಿಕವೇ ವಿಚಾರಣೆಗೆ ಕೈಗೆತ್ತಿಕೊಳ್ಳಲಿದ್ದಾರೆ. ಹೀಗಾಗಿ ಬುಧವಾರ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ. ಈ…
ಸಾವಿರಾರು ಜನರಿಂದ ತೀರ್ಥಹಳ್ಳಿಯಲ್ಲಿ ಬೃಹತ್ ಹೋರಾಟಸರ್ಕಾರದಿಂದ ಹೋರಾಟ ಹತ್ತಿಕ್ಕುವ ಯತ್ನ? ತೀರ್ಥಹಳ್ಳಿ: ಈಡಿಗ ಸಮುದಾಯದ ಕುಲದೈವ ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯನ್ನು ಸರ್ಕಾರ ವಶಪಡಿಸಿಕೊಳ್ಳಲು ಹೊರಟಿರುವ ಧಮನಕಾರಿ ನೀತಿಯನ್ನು ಖಂಡಿಸಿ ತೀರ್ಥಹಳ್ಳಿಯಲ್ಲಿ ಬೃಹತ್ ಹೋರಾಟ ನಡೆದಿದ್ದು, ಈಡಿಗ ಸಮುದಾಯದ ಸಾವಿರಾರು ಮಂದಿ ಭಾಗವಹಿಸಿದ್ದರು. “ಶ್ರೀ ಸಿಗಂದೂರು ಉಳಿಸಿ” ಹೋರಾಟ ತೀರ್ಥಹಳ್ಳಿಯ ಕೋಳಿಕಾಲು ಗುಡ್ಡದ ಈಡಿಗರ ಭವನದಲ್ಲಿ ಬೃಹತ್ ಸಭೆ ನಡೆಸಿ ಶುರು ಮಾಡಲಾಯಿತು. ತೀರ್ಥಹಳ್ಳಿ ಮತ್ತು ಹೊಸ ನಗರ ತಾಲೂಕಿನ ಮೂಲೆ ಮೂಲೆಯಿಂದ ಈಡಿಗ ಸಮುದಾಯದ ಜನ ಆಗಮಿಸಿದ್ದರು. ಸುಮಾರು 1100 ಮಂದಿ ಹೋರಾಟದಲ್ಲಿ ಭಾಗಿಯಾಗುವ ಮೂಲಕ ಈಡಿಗ ಬಲ ಪ್ರದರ್ಶನ ಕೂಡ ಮಾಡಿದರು. ಈಡಿಗರ ಸಂಘದಿಂದ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯನ್ನು ಡಿವೈಎಸ್‍ಪಿ ಮತ್ತು ಪೊಲೀಸ್ ಉನ್ನತ ಅಧಿಕಾರಿಗಳ ಸರ್ಕಾರದ ಆದೇಶದ ಮೇರೆಗೆ ತಡೆಯುವ ಯತ್ನ ಮಾಡಿದರು. ಆದರೆ ಹೋರಾಟಗಾರರು ಮೆರವಣಿಗೆ ನಡೆಸಿದರು. ಅಡಿಕೆ ಮತ್ತು ಕೃಷಿ ಸಮಯವಾದರೂ ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕಿನ ಈಡಿಗ ಸಮುದಾಯ ಸಿಗಂದೂರು ಹೋರಾಟಕ್ಕೆ ಕೈ…
42 ಕಿ.ಮೀ ನಡಿಗೆ: 3000 ಮಂದಿ ಸಾಥ್ಮಲೆನಾಡಲ್ಲಿ ಪ್ರತಿಧ್ವನಿಸಿದ ಕಸ್ತೂರಿ ರಂಗನ್ ಹೋರಾಟಡಿ.31ರ ಗಡುವಿಗೆ ಬ್ರೇಕ್ ಹಾಕುತ್ತಾ ಹೋರಾಟದ ಕಿಚ್ಚು ತೀರ್ಥಹಳ್ಳಿ: ಸಹಕಾರಿ ನಾಯಕ ಡಾ.ಆರ್.ಎಂ.ಮಂಜುನಾಥ ಗೌಡ ಸಾರಥ್ಯದಲ್ಲಿ ಕಸ್ತೂರಿ ರಂಗನ್ ವರದಿ ಮತ್ತು ಅಕೇಶಿಯಾ ನೆಡುತೋಪು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ 3 ದಿನಗಳ 42 ಕಿ.ಮೀ ಪಾದಯಾತ್ರೆ ಸೋಮವಾರ ತೆರೆ ಕಂಡಿದೆ. ಈ ನಡುವೆ ಈ ಹೋರಾಟ ಯಶಸ್ವಿ ಕೂಡ ಆಡಗಿದೆ. ಸೋಮವಾರ ತಾಲೂಕು ಕಚೇರಿ ಎದುರು ಆಯೋಜಿಸಿದ್ದ ಬೃಹತ್ ಸಭೆಯಲ್ಲಿ ವರದಿ ವಿರುದ್ಧದ ಆಕ್ರೋಶ ಹೆಚ್ಚಾಗಿದೆ. ಬಿದರಗೋಡಿನಿಂದ ತೀರ್ಥಹಳ್ಳಿವರೆಗಿನ ಪಾದಯಾತ್ರೆಯಲ್ಲಿ ಸುಮಾರು 3000 ಂಂದಿ ಭಾಗಿಯಾಗಿದ್ದಾರೆ. ಮಲೆನಾಡಿನ ಜನರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಲು ಬಿಡಬಾರದು. ಎಲ್ಲಾ ರಾಜಕಾರಣಿಗಳು ಪಕ್ಷಾತೀತವಾಗಿ ಈ ಬಗ್ಗೆ ಹೋರಾಟ ಮಾಡಬೇಕು ಎಂಬ ಆಗ್ರಹ ವ್ಯಕ್ತವಾಯಿತು. ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ, ನಾಯಕರಾದ ಮಧು ಬಂಗಾರಪ್ಪ, ಬೇಳೂರು ಗೋಪಾಲಹೃಷ್ಣ, ಪರಿಸರಹೋರಾಟಗಾರರಾದ ಕಲ್ಕುಳಿ ವಿಠಲ ಹೆಗ್ಡೆ, ಕಲ್ಲಹಳ್ಳ ಶ್ರೀಧರ್, ಅಶೋಕ್ ಕೆ.ಎಲ್ ಮುಂತಾದವರು ಮಂಜುನಾಥ ಗೌಡರ ಈ ಹೋರಾಟದ…