Categories
ಮಲ್ನಾಡ್

ದೇವರ ದೀಪದಿಂದ ಮನೆಗೆ ಬೆಂಕಿ!

  • ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ
  • ಶಿವಮೊಗ್ಗ ನಗರದಲ್ಲಿ ಘಟನೆ

ಶಿವಮೊಗ್ಗ: ದೇವರಿಗೆ ಹಚ್ಚಿದ ದೀಪ ಹಾಸಿಗೆ ಮೇಲೆ ಬಿದ್ದು ಹಾಸಿಗೆ ಹೊತ್ತಿ ಉರಿದಿರುವ ಘಟನೆ ಶಿವಮೊಗ್ಗ ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ನಡೆದಿದೆ.
ಕೆ.ಆರ್.ಪುರಂನ ನಂದಿನಿ ಎಂಬುವರ ಮನೆಯಲ್ಲಿ ದೇವರಿಗೆ ದೀಪ ಹಚ್ಚಿ ಸಂಬಂಧಿಕರ ಮನೆ ತರೀಕೆರೆಗೆ ಹೋದಾಗ ಈ ಘಟನೆ ನಡೆದಿದೆ. ಕೂದಲೆಳೆ ಅಂತರದಲ್ಲಿ ದೊಡ್ಡ ದುರಂತ ತಪ್ಪಿದೆ.


ಹಾಸಿಗೆಗೆ ಬೆಂಕಿ ತಗುಲಿ ಅಕ್ಕಪಕ್ಕದ ಮನೆಯವರಿಗೆ ಹೊಗೆ ಕಾಣಿಸಿದ್ದರಿಂದ ತಕ್ಷಣವೇ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಮನೆ ಬೀಗ ಒಡೆದು ಹಾಸಿಗೆ ಹೊರಗೆ ತಂದು ನೀರು ಹಾಕಿ ಆರಿಸಲಾಗಿದೆ. ಮನೆಯ ಇತರೆ ವಸ್ತುಗಳಿಗೆ ಹಾನಿಯಾಗಿಲ್ಲ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.