Author: Nammur Express Admin

ಗ್ರಾಮ ಪಂಚಾಯತ್ ಸದಸ್ಯ ದ್ವೇಷಕ್ಕೆ ಬಲಿ ಕಲಬುರ್ಗಿ: ಜಮೀನು ವಿವಾದಕ್ಕೆ ಸಂಬಂಧಿಸಿ ಗ್ರಾಮ ಪಂಚಾಯತ್ ಸದಸ್ಯನೋರ್ವನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಕಲಬುರ್ಗಿ ನಗರದಲ್ಲಿ ನಡೆದಿದೆ. ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಶಿವಲಿಂಗಪ್ಪ ಭೋಗಶೆಟ್ಟಿ(53) ಕೊಲೆಯಾದಾತ. ಏಳು ಜನರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಕಲಬುರ್ಗಿ ಡಿಸಿಪಿ ಕಿಶೋರ್ ಬಾಬು ಮಾಹಿತಿ ನೀಡಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯನೂ ಆಗಿದ್ದ ಈತ ಕಾಂಗ್ರೆಸ್ ಮುಖಂಡನಾಗಿ ಒಂದಷ್ಟು ರಾಜಕೀಯ ಚಟುವಟಿಕೆಗಳನ್ನು ಮಾಡುತ್ತಿದ್ದ. ಕಲಬುರ್ಗಿ ನಗರದ ಕೈಲಾಶ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಸೋಮವಾರ ರಾತ್ರಿ ಮನೆ ಬಳಿ ನಿಂತಾಗ ಏಕಾಏಕಿ ಬಂದೆರಗಿದ ದುಷ್ಕರ್ಮಿಗಳ ಗುಂಪು, ಕೊಲೆ ಮಾಡಿ ಪರಾರಿಯಾಗಿದೆ. ತೀವ್ರ ರಕ್ತಸ್ರಾವದಿಂದ ಬಿದ್ದ ಸ್ಥಳದಲ್ಲಿಯೇ ವ್ಯಕ್ತಿ ಸಾವನ್ನಪ್ಪಿದ್ದಾನೆ. ಭೂ ವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಪೆÇಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಕಡಗಂಚಿ ಗ್ರಾಮದ ಕಮಲಾಬಾಯಿ ಎನ್ನುವ ಮಹಿಳೆಯಿಂದ ಶಿವಲಿಂಗಪ್ಪ, 4 ಎಕರೆ, 4 ಗುಂಟೆ ಜಮೀನು ಖರೀದಿಸಿದ್ದ.…

Read More

ಗೊಬ್ಬರದ ವ್ಯಾಪಾರಿಯಾಗಿಯೂ ಕೆಲಸ”ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರದ ಸಸ್ಪೆನ್ಸ್ ! ಬೆಂಗಳೂರು: ಮಲೆನಾಡಿನ ಪ್ರತಿಭೆ, ನಟ ದಿಗಂತ್ ಇದೀಗ ಮೊದಲ ಬಾರಿಗೆ ಅಡಿಕೆ ಬೆಳೆಗಾರರಾಗಲಿದ್ದಾರೆ.ಅಚ್ಚರಿ ಆದರೂ ಸತ್ಯ. ಅಂದ ಹಾಗೆ ದಿಗಂತ್ ಯಾವುದಾದರೂ ಅಡಿಕೆ ತೋಟ ಖರೀದಿಸಿ ಅಡಿಕೆ ಬೆಳೆದಿದ್ದಾರಾ..ಖಂಡಿತ ಇಲ್ಲ..! ಕಿರುಚಿತ್ರಗಳ ನಿರ್ದೇಶಕ, ಪತ್ರಕರ್ತ ವಿನಾಯಕ ಕೊಡ್ಸರ ನಿರ್ದೇಶನದಲ್ಲಿ ಉಪ್ಪಿ ಎಂಟರ್ಟೈನ್ಮೆಂಟ್ ಮೂಲಕ ಸಿಲ್ಕ್ ಮಂಜು ನಿರ್ಮಾಣ ಮಾಡುತ್ತಿರುವ ” ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂಬ ಸಿನಿಮಾ ಸೆಟ್ಟೇರುತ್ತಿದೆ. ದಿಗಂತ್ ನಟನಾಗಿ, ಅವರ ರಿಯಲ್ ಪತ್ನಿ ಐಂದ್ರಿತಾ ಹಾಗೂ ಕನ್ನಡತಿ ಧಾರವಾಹಿಯ ನಟಿ ರಂಜನಿ ರಾಘವನ್ ನಾಯಕಿಯರಾಗಿ ನಟನೆ ಮಾಡುತ್ತಿದ್ದಾರೆ.ಮಲೆನಾಡಿನ ಸಾಗರ, ಸಿಗಂದೂರು, ತೀರ್ಥಹಳ್ಳಿ ಪ್ರದೇಶದಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಚಿತ್ರದ poster ನಟ ಉಪೇಂದ್ರ ಬಿಡುಗಡೆ ಮಾಡಿದ್ದು, ಭಾರಿ ಟ್ರೆಂಡ್ ಪಡೆದಿದೆ. ಇನ್ನು ದಿಗಂತ್ ಈ ಸಿನಿಮಾದಲ್ಲಿ ಮಲೆನಾಡಿನ ಅಡಿಕೆ ಬೆಳೆಗಾರ ಮತ್ತು ಗೊಬ್ಬರದ ವ್ಯಾಪಾರಿಯಾಗಿ ನಟನೆ ಮಾಡಲಿದ್ದಾರೆ. ಹಳೆ ಒ-80…

Read More

ಗುಪ್ತಾಂಗಕ್ಕೆ ಚಾಕು ಇರಿದ ಆಗಂತುಕರುಹುಬ್ಬಳ್ಳಿಯ ಎರಡು ಕಡೆ ಘಟನೆ: ಆತಂಕ ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸೋಮವಾರ ರಾತ್ರಿ ಮತ್ತೇ ಚಾಕು ಇರಿತ ಪ್ರಕರಣ ಸದ್ದು ಮಾಡಿದ್ದು ಶಾಂತಿಪ್ರೀಯ ಜನತೆಯ ಮನದಲ್ಲಿ ಆತಂಕ ಮಡಗುಟ್ಟುವಂತೆ ಮಾಡಿದೆ.ಎರಡು ಪ್ರತ್ಯೇಕ ಕಡೆಗಳಲ್ಲಿ ನಡೆದ ಎರಡು ಪ್ರಕರಣಗಳಲ್ಲಿ ಇಬ್ಬರು ಚಾಕುವಿನ ಇರಿತಕ್ಕೆ ಮಾರಣಾಂತಿಕ ಗಾಯಗೊಂಡಿದ್ದು ಸಾವು-ಬದುಕಿನ ಮಧ್ಯೆ ಜೂಜಾಟ ನಡೆಸಿದ್ದಾರೆ. ಗಾಯಾಳುಗಳಿಬ್ಬರನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಪ್ಪುನಗರ ನಿವಾಸಿ ಶೋಯಬ್ ಅಬ್ಬನ್ನವರ ಹಾಗೂ ಮಾಧವ ನಗರ ನಿವಾಸಿ ರಮೇಶ ಕಟ್ಟಿಮನಿ ಎಂಬಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಚಾಕು ಇರಿತ ಪ್ರಕರಣಕ್ಕೆ ನಿಖರವಾಗಿ ಕಾರಣವೇನು ಎಂಬುದು ಗೊತ್ತಾಗಿಲ್ಲ. ಆದರೆ, ಘಟನೆ ನಂತರ ಹಳೆ ಹುಬ್ಬಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯ ಟಿಪ್ಪುನಗರ ಹಾಗೂ ಅಶೋಕನಗರ ಪೆÇಲೀಸ್ ಠಾಣೆ ವ್ಯಾಪ್ತಿಯ ಮಾಧವ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ನಿರ್ಗಮಿತ ಪೆÇಲೀಸ್ ಆಯುಕ್ತ ಆರ್.ದಿಲೀಪ್ ಅವರ ಅಧಿಕಾರವಧಿಯಲ್ಲಿ ಅತಿ ಹೆಚ್ಚು ಚಾಕು ಇರಿತ ಪ್ರಕರಣಗಳು ನಡೆದು ಅವಳಿ ನಗರದಲ್ಲಿ ಪೆÇಲೀಸ್ ವ್ಯವಸ್ಥೆ…

Read More

ಭೀಮಾ ತೀರದ ಶೂಟೌಟ್ ಕೇಸ್: ರಾಜ್ಯದಲ್ಲೇ ಪ್ರಥಮ ವಿಜಯಪುರ: ಭೀಮಾತೀರದ ನಟೋರಿಯಸ್ ಕ್ರಿಮಿನಲ್ ಮೇಲೆ ನಡೆದಿರುವ ಗುಂಡಿನ ದಾಳಿ ತನಿಖೆಗೆ ರಾಜ್ಯ ಇದೇ ಪ್ರಥಮ ಬಾರಿಗೆ 1500 ಪೆÇಲೀಸರಿಗೆ ನಿಯೋಜಿಸಿದೆ.ಗುಂಡಿನ ದಾಳಿಯ ಕಾರ್ಯಾಚರಣೆ ಬೆನ್ನು ಹತ್ತಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪೆÇಲೀಸರು, ಆರೋಪಿಗಳ ಜಾಡು ಹಿಡಿಯಲು ಹೊರಟಿದ್ದು ಇದೇ ಮೊದಲು ಅದು ಭೀಮಾತೀರದ ರಕ್ತತರ್ಪಣಕ್ಕಾಗಿ.. ವಿಜಯಪುರ ಜಿಲ್ಲೆ ಹಾಗೂ ಕಲಬುರ್ಗಿ ಜಿಲ್ಲೆಯ ಈ ಭೀಮಾತೀರದ ದಶಕಗಳಿಂದಲೂ ರಕ್ತಸಿಕ್ತ ಕ್ಷಣಗಳನ್ನು ನೋಡುತ್ತಲೇ ಬಂದಿದೆ. ಇಲ್ಲಿ ಹತ್ಯೆ ಮುಖ್ಯ. ಹೊರತಾಗಿ ಯಾರದ್ದೂ ಎನ್ನುವುದು ಆ ಎರಡು ಕುಟುಂಬಗಳ ಮಾತ್ರ ನಿರ್ಧಾರ ಮಾಡುತ್ತವೆ. ಹಾಗಾಗಿಯೇ ನಿರ್ಧಾರ ಮಾಡಿದ್ದಂತೆ ನಡೆದದ್ದೇ ಮಹಾದೇವ ಬೈರಗೊಂಡನ ಮೇಲೆ ಗುಂಡಿನ ದಾಳಿ ಎಂಬ ಮಾತುಗಳು ಕೇಳಿ ಬರುತ್ತೀವೆ. ಸೋಮವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಮಂಗಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಪೆÇಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 5 ಬೈಕ್, ಒಂದು ಟಿಪ್ಪರ್ ಸೇರಿದಂತೆ ಪೆಟ್ರೋಲ್ ಬಾಂಬ್,…

Read More

ಹೈಕೋರ್ಟ್‍ನಲ್ಲಿ ಜಾಮೀನು ಅರ್ಜಿ ವಜಾ ಬೆಂಗಳೂರು: ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಅವರಿಗೆ ಜೈಲು ಫಿಕ್ಸ್ ಆಗಿದೆ. ಏಕೆಂದರೆ ಅವರು ಹಾಕಿದ್ದ ಜಾಮೀನು ಅರ್ಜಿ ವಜಾಗೊಂಡಿದೆ.ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ರಾಹುಲ್, ರವಿ ಶಂಕರ್, ಲೂಮ್ ಪೆಪ್ಪರ್ ಸೇರಿ ಆರು ಜನರು ಜಾಮೀನು ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿದ್ದರು. ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಈ ಮೂಲಕ ಡ್ರಗ್ಸ್ ದಂಧೆಕೋರರಿಗೆ ನಡುಕ ಶುರುವಾಗಿದೆ. ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ರಾಹುಲ್ , ರವಿಶಂಕರ್, ಲೂಮ್ ಪೆಪ್ಪರ್ ಸೇರಿ ಆರು ಜನರು ಜಾಮೀನು ಕೋರಿ ಹೈಕೋರ್ಟ್?ಗೆ ಅರ್ಜಿ ಸಲ್ಲಿದ್ದರು. ನ್ಯಾಯಮೂರ್ತಿ ಶ್ರೀನಿವಾಸ್? ಹರೀಶ್? ಕುಮಾರ್ ಅವರನ್ನು ಒಳಗೊಂಡಿರುವ ಏಕಸದಸ್ಯ ಪೀಠ, ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಈ ಹಿಂದೆ ಕೂಡ ಇವರ…

Read More

ಮತ್ತೆ ಸಾಲದ ಅವಧಿ ವಿಸ್ತರಣೆ: ಆದ್ರೆ ಷರತ್ತುಗಳು ಅನ್ವಯ ನವ ದೆಹಲಿ: ಕರೋನಾ ನಂತರದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುವ ಸಲುವಾಗಿ ಕೇಂದ್ರ ಸರ್ಕಾರ 3 ಲಕ್ಷ ಕೋಟಿ ರೂ. ಮೌಲ್ಯದ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ ಅನ್ನು ನವೆಂಬರ್ 30ರವರೆಗೆ ವಿಸ್ತರಣೆ ಮಾಡಿದೆ. ಪ್ರಸ್ತುತ ಹಬ್ಬದ ಸೀಸನ್ ಆಗಿರುವ ಹಿನ್ನೆಲೆ ಸಣ್ಣ ಹಾಗೂ ಮಧ್ಯಮ ಉದ್ಯಮದವರಿಗೆ ಅನುಕೂಲವಾಗಬಹುದೆಂಬ ಕಾರಣಕ್ಕೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್?ನ ಭಾಗವಾಗಿ ಎಂಎಸ್‍ಎಂಇಗಳು, ವ್ಯಾಪಾರೋದ್ಯಮ ಹಾಗೂ ವ್ಯಾಪಾರ ಉದ್ದೇಶಕ್ಕೆ ವೈಯಕ್ತಿಕ ಸಾಲ ಮತ್ತು ಮುದ್ರಾ ಸಾಲಗಾರರಿಗೆ ಹೆಚ್ಚಿನ ಅನುಕೂಲ ನೀಡುವುದಕ್ಕೋಸ್ಕರ 20.97 ಲಕ್ಷ ಕೋಟಿ ರೂಪಾಯಿ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ ಅನ್ನು ಘೋಷಣೆ ಮಾಡಿತ್ತು. ಫೆಬ್ರವರಿ 29ರ ವೇಳೆಯಲ್ಲಿ 50 ಕೋಟಿ ರೂಪಾಯಿವರೆಗೆ ಸಾಲ ಹೊಂದಿರುವವರು ಹಾಗೂ ವಾರ್ಷಿಕ 250 ಕೋಟಿ ವಹಿವಾಟು ನಡೆಸುವವರು ಈ ಯೋಜನೆ ಲಾಭ ಪಡೆಯಬಹುದು. ಈ ಯೋಜನೆಯಡಿಯಲ್ಲಿ ನಾಲ್ಕು ವರ್ಷಗಳವರೆಗೆ ಸಾಲ…

Read More

ನ.7ರವರೆಗೂ ರಾಜ್ಯದ ಹಲವೆಡೆ ಮಳೆಕೃಷಿಕರೇ ಎಚ್ಚರ ಎಚ್ಚರ ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಮಳೆಕಾಟ ಆರಂಭವಾಗುವ ಸೂಚನೆ ಇದ್ದು, ಜನತೆಗೆ ಮತ್ತೊಂದು ಸಂಕಟ ಆರಂಭವಾಗಲಿದೆ.ಮಂಗಳವಾರದಿಂದ ನ.7ರವರೆಗೂ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗಲಿದೆ. ಈಗಾಗಲೇ ಮಲೆನಾಡು, ಕರಾವಳಿಯಲ್ಲಿ ಮಳೆ ಆಗುತ್ತಿದ್ದು, ಅಡಿಕೆ, ಭತ್ತ, ಕಾಳು ಮೆಣಸು ಬೆಳೆಗಾರರಿಗೆ ಭಾರಿ ಹಾನಿಯಾಗಿದೆ. ಏಕೆ ಮಳೆ?: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಈಗಾಗಲೇ ತಮಿಳುನಾಡು, ಆಂಧ್ರ ಪ್ರದೇಶ, ಕೇರಳದಲ್ಲಿ ಮಳೆಯಾಗುತ್ತಿದೆ.ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ನವೆಂಬರ್ 5ರಿಂದ ನ.7ರವರೆಗೆ ಮಲೆನಾಡು, ಕರಾವಳಿಯ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಲಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಮೇಘಾಲಯ, ಕೇರಳ, ತಮಿಳುನಾಡು ರಾಜ್ಯಗಳಲ್ಲಿಯೂ ಮಳೆಯಾಗುತ್ತಿದೆ. ಇದರ ಪರಿಣಾಮದಿಂದ ಕರ್ನಾಟಕದಲ್ಲೂ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ನ.7ರವರೆಗೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಮಳೆ ಹೆಚ್ಚಾಗಲಿದೆ. ನ.5ರಿಂದ 7ರವರೆಗೆ ಕರಾವಳಿ ಜಿಲ್ಲೆಗಳ ಜೊತೆಗೆ ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಮಳೆಯಾಗಲಿದೆ. ನ.5ರ ಬಳಿಕ ರಾಜ್ಯದಲ್ಲಿ 2-3…

Read More

ಕಾರಿನ ಮೇಲೆ ಟಿಪ್ಪರ್ ಹರಿಸಿ ಫೈರಿಂಗ್ಇಬ್ಬರ ಸಾವು: ನಮ್ಮೂರ್ ಎಕ್ಸ್‍ಪ್ರೆಸ್ ವಿಶೇಷ ವರದಿ ವಿಜಯಪುರ: ಭೀಮಾ ತೀರದ ನಟೋರಿಯಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹದೇವ ಬೈರಗೊಂಡ ಉರ್ಫ್ ಮಹದೇವ ಸಾವುಕಾರನ ಕಾರು ಚಾಲಕ ಉಪಚಾರ ಫಲಿಸದೇ ಮಂಗಳವಾರ ಸಾವನ್ನಪ್ಪಿದ್ದಾನೆ. ಟಿಪ್ಪರ್ ಮೂಲಕ ಅಪಘಾತಪಡಿಸಿ ಸಾವುಕಾರನ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದ ದುಷ್ಕರ್ಮಿಗಳ, ಸಂಚಿನಲ್ಲಿ ಆತನ ಕಾರ್ ಚಾಲಕ ಲಕ್ಷ್ಮಣ ದಿಂಡೋರ್ (27) ಮಾರಣಾಂತಿಕ ಗಾಯಗೊಂಡಿದ್ದ. ಗುಂಡು ತಗುಲು ಗಂಭೀರ ಗಾಯಗೊಂಡಿದ್ದ ಲಕ್ಷ್ಮಣ ಉಪಚಾರ ಫಲಿಸದೇ ಮಂಗಳವಾರ ಕೊನೆಯುಸಿರೆಳೆದಿದ್ದಾನೆ. ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಬೈರಗೊಂಡ ಸಾವುಕಾರನ ಮ್ಯಾನೇಜರ್ ಬಾಬುರಾಯ ಕಂಚನಾಳಕರ ಸ್ಥಳದಲ್ಲೇ ಸಾವನ್ನಪ್ಪಿದ್ದ. ಮಹದೇವ ಬೈರಗೊಂಡ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಆತ ಪ್ರಾಣಾಪಾಯದಿಂದ ಪಾರಾಗುವ ಸಾಧ್ಯತೆ ಇದೆ ಎಂದು ಆತನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. ಟಿಪ್ಪರ್ ಡಿಕ್ಕಿ ಹೊಡೆಸಿ ಫೈರಿಂಗ್!: ಮಹಾದೇವ ಸಾಹುಕಾರ ಬೈರಗೊಂಡ ತನ್ನ ಸಹಚರರೊಂದಿಗೆ…

Read More

ಕಸ್ತೂರಿ ರಂಗನ್ ವರದಿ ವಿರುದ್ಧ ಪಾದಯಾತ್ರೆಮಂಜುನಾಥ ಗೌಡರ ಎರಡನೇ ಇನ್ನಿಂಗ್ಸ್ ಶುರು!? ತೀರ್ಥಹಳ್ಳಿ: ಕಸ್ತೂರಿ ರಂಗನ್ ವರದಿಯನ್ನು ಅಸಮರ್ಪಕವಾಗಿ ಜಾರಿ ಮಾಡುವ ಮೂಲಕ ಮಲೆನಾಡಿನ ಜನರ ಬದುಕಿನ ಮೇಲೆ ಬರೆ ಎಳೆಯಲು ಹೊರಟಿರುವ ಸರ್ಕಾರಗಳ ವಿರುದ್ಧ ಇದೀಗ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಪಾದಯಾತ್ರೆ ಹೋರಾಟಕ್ಕೆ ಮುಂದಾಗಿದೆ. ಸಹಕಾರಿ ನಾಯಕ ಡಾ.ಆರ್.ಎಂ.ಮಂಜುನಾಥ ಗೌಡರ ನಾಯಕತ್ವದಲ್ಲಿ ನ.7ರ ಬೆಳಗ್ಗೆ 8ರಿಂದ ಪಾದಯಾತ್ರೆ ಬಿದರಗೋಡು ಶ್ರೀರಾಮ ಮಂದಿರದಿಂದ ಶುರುವಾಗಲಿದೆ. ನ.8 ಮತ್ತು 9ರಂದು ಪಾದಯಾತ್ರೆ ನಡೆದು ನ.9ರ ಬೆಳಿಗ್ಗೆ ತೀರ್ಥಹಳ್ಳಿ ತಾಲೂಕು ಕಚೇರಿ ಮುಂಭಾಗ ಬಹಿರಂಗ ಸಭೆ ನಡೆಯಲಿದೆ. ಪಾದಯಾತ್ರೆ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಂಜುನಾಥ ಗೌಡ, 2018ರಲ್ಲಿ ವಿಧಾನಸಭಾ ಚುನಾವಣೆ ಸಂದರ್ಭ ಶಾಂತವೇರಿ ಗೋಪಾಲ ಗೌಡರ ಊರಿಂದ ಪಾದಯಾತ್ರೆ ಮಾಡಿದ್ದೇವೆ. ಕಸ್ತೂರಿ ರಂಗನ್ ವರದಿ ವಿರುದ್ದ ಕೇರಳ ಮಾದರಿ ನಿಯಮ ಜಾರಿ ಹೋರಾಟ, ಎಸಿಎಫ್ ಕಚೇರಿ ಎದುರು ಹೋರಾಟ ಮಾಡಿದ್ದೇವೆ. ಎಲ್ಲೆಡೆ ಹೋರಾಟ ನಡೆಯುತ್ತಿದ್ದರೂ ಸರ್ಕಾರಗಳು ಈ ಬಗ್ಗೆ…

Read More

ಮಲೆನಾಡಿನಲ್ಲಿ ಹವಾಮಾನದ ಆತಂಕಅಡಿಕೆ ಕೊಯ್ಲು ಶುರು: ಕೃಷಿಕರಿಗೆ ಸಂಕಟ! ಮಲೆನಾಡು: ಕಳೆದ ಕೆಲವು ವಾರಗಳಿಂದ ಮಲೆನಾಡಿನಲ್ಲಿ ಹವಾಮಾನ ವೈಪರಿತ್ಯ ಜನರನ್ನು ಕಂಗಾಲಾಗಿಸಿದೆ. ಒಂದು ಕಡೆ ಪದೇ ಪದೇ ಮಳೆ. ಇತ್ತ ಚಳಿ, ಮಧ್ಯಾಹ್ನ ಬಿಸಿಲು ಮತ್ತು ಉರಿ ಶಕೆ ಮಲೆನಾಡು ಭಾಗದ ಕೃಷಿಕರಿಗೆ ಆತಂಕ ತಂದಿದೆ. ಶನಿವಾರ, ಭಾನುವಾರ ಕೂಡ ಮಲೆನಾಡಿನ ಬಹುತೇಕ ಕಡೆ ಮಳೆಯಾಗಿದೆ. ಈಗಾಗಲೇ ಅಡಿಕೆ ಮತ್ತು ಕೆಲವೆಡೆ ಭತ್ತದ ಕೊಯ್ಲು ಶುರುವಾಗಿದೆ. ಒಂದು ಕಡೆ ಕರೋನಾ ಕಾರಣದಿಂದ ಕೆಲವು ಕೆಲಸಗಳು ನಿಂತಿವೆ. ಇದೀಗ ಮಳೆ ಕಾರಣ ಅಡಿಕೆ ಕೊಯ್ಲು ತಡವಾಗಿ ಅಡಿಕೆ ತೋಟಗಳಲ್ಲಿ ಅಡಿಕೆ ಗೋಟಾಗಿ ಉದುರುತ್ತಿದೆ. ಇನ್ನೊಂದು ಕಡೆ ಅಡಿಕೆ ಮತ್ತು ಕಾಳು ಮೆಣಸಿಗೆ ರೋಗ ಬಾಧೆ ರೈತರಿಗೆ ದೊಡ್ಡ ತಲೆನೋವಾಗಿದೆ. ಕಳೆದ ಕಲೆವು ವಾರಗಳಿಂದ ಮಳೆ, ಮೋಡ ರೈತರನ್ನು ಗೊಂದಲದಲ್ಲಿಟ್ಟಿದೆ. ಹೀಗಾಗಿ ಆನೇಕ ರೈತರು ಅಡಿಕೆ ಕೊನೆ ತೆಗೆದಿಲ್ಲ. ಇನ್ನು ಹಲವರು ತೆಗದರೂ ಒಣಗಿಸಲು ಸಾಧ್ಯವಾಗುತ್ತಿಲ್ಲ. ಮಳೆಯ ಕಾರಣ ರೈತನಿಗೆ ಎಲ್ಲಾ ರೀತಿಯಲ್ಲೂ ಸಂಕಟ…

Read More