Categories
ಬೆಂಗಳೂರು

ನಟ ದಿಗಂತ್ ಈಗ ಅಡಿಕೆ ಬೆಳೆಗಾರ!

  • ಗೊಬ್ಬರದ ವ್ಯಾಪಾರಿಯಾಗಿಯೂ ಕೆಲಸ
  • “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರದ ಸಸ್ಪೆನ್ಸ್ !

ಬೆಂಗಳೂರು: ಮಲೆನಾಡಿನ ಪ್ರತಿಭೆ, ನಟ ದಿಗಂತ್ ಇದೀಗ ಮೊದಲ ಬಾರಿಗೆ ಅಡಿಕೆ ಬೆಳೆಗಾರರಾಗಲಿದ್ದಾರೆ.
ಅಚ್ಚರಿ ಆದರೂ ಸತ್ಯ. ಅಂದ ಹಾಗೆ ದಿಗಂತ್ ಯಾವುದಾದರೂ ಅಡಿಕೆ ತೋಟ ಖರೀದಿಸಿ ಅಡಿಕೆ ಬೆಳೆದಿದ್ದಾರಾ..ಖಂಡಿತ ಇಲ್ಲ..!


ಕಿರುಚಿತ್ರಗಳ ನಿರ್ದೇಶಕ, ಪತ್ರಕರ್ತ ವಿನಾಯಕ ಕೊಡ್ಸರ ನಿರ್ದೇಶನದಲ್ಲಿ ಉಪ್ಪಿ ಎಂಟರ್ಟೈನ್ಮೆಂಟ್ ಮೂಲಕ ಸಿಲ್ಕ್ ಮಂಜು ನಿರ್ಮಾಣ ಮಾಡುತ್ತಿರುವ ” ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂಬ ಸಿನಿಮಾ ಸೆಟ್ಟೇರುತ್ತಿದೆ.


ದಿಗಂತ್ ನಟನಾಗಿ, ಅವರ ರಿಯಲ್ ಪತ್ನಿ ಐಂದ್ರಿತಾ ಹಾಗೂ ಕನ್ನಡತಿ ಧಾರವಾಹಿಯ ನಟಿ ರಂಜನಿ ರಾಘವನ್ ನಾಯಕಿಯರಾಗಿ ನಟನೆ ಮಾಡುತ್ತಿದ್ದಾರೆ.
ಮಲೆನಾಡಿನ ಸಾಗರ, ಸಿಗಂದೂರು, ತೀರ್ಥಹಳ್ಳಿ ಪ್ರದೇಶದಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಚಿತ್ರದ poster ನಟ ಉಪೇಂದ್ರ ಬಿಡುಗಡೆ ಮಾಡಿದ್ದು, ಭಾರಿ ಟ್ರೆಂಡ್ ಪಡೆದಿದೆ. ಇನ್ನು ದಿಗಂತ್ ಈ ಸಿನಿಮಾದಲ್ಲಿ ಮಲೆನಾಡಿನ ಅಡಿಕೆ ಬೆಳೆಗಾರ ಮತ್ತು ಗೊಬ್ಬರದ ವ್ಯಾಪಾರಿಯಾಗಿ ನಟನೆ ಮಾಡಲಿದ್ದಾರೆ. ಹಳೆ ಒ-80 ಬೈಕಲ್ಲಿ ಮಲೆನಾಡು ರೌಂಡ್ಸ್ ಹೊಡೆಯಲಿದ್ದಾರೆ.


ಮೊದಲೇ ದಿಗಂತ್ ಅಡಿಕೆ ತವರೂರು ತೀರ್ಥಹಳ್ಳಿ ಹುಡುಗ. ಕಾಮಿಡಿ ಕಥಾ ವಸ್ತುವಿನ ಈ ಪಾತ್ರ ಹೇಗೆ ಮಾಡುತ್ತಾರೆ ಎಂಬ ಕುತೂಹಲ ಇದೀಗ ಮೂಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.