Author: Nammur Express Admin

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಮಹಾಲಕ್ಷ್ಮಿ ರಾಜಯೋಗದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಮೇಷ ರಾಶಿಯ ಜನರ ಖರ್ಚುಗಳು ಇಂದು ಹೆಚ್ಚಾಗುತ್ತವೆ, ಆದರೆ ಹಣ ಗಳಿಸುವ ಹೊಸ ಮೂಲಗಳು ಸಹ ಸೃಷ್ಟಿಯಾಗುತ್ತವೆ. ವೃತ್ತಿ ಜೀವನದಲ್ಲಿ ಉತ್ತಮ ಸಾಧನೆ ಮಾಡುವಿರಿ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ. ನೀವು ಇಂದು ಸ್ನೇಹಿತರೊಂದಿಗೆ ಪ್ರವಾಸವನ್ನು ಯೋಜಿಸಬಹುದು. ವೃತ್ತಿ ಜೀವನದಲ್ಲಿ ಸಮಯವನ್ನು ದುರ್ಬಳಕೆ ಮಾಡಿಕೊಳ್ಳಬೇಡಿ. ** ವೃಷಭ ರಾಶಿ : ಇಂದು ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಇಂದು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ. ಆದಾಯದ ಹೊಸ ಮೂಲಗಳಿಗಾಗಿ ನೋಡಿ. ಆಸ್ತಿ…

Read More

ಅಜ್ಜಿಯ ಬದುಕಿಗೊಂದು ಸೂರು ಕಲ್ಪಿಸಿದ ಧರ್ಮಸ್ಥಳ ಸಂಸ್ಥೆ! – ವಯೋವೃದ್ದೆ ಕಮಲಮ್ಮ ಅವರಿಗೆ ವಾತ್ಸಲ್ಯ ಮನೆಯ ಹಸ್ತಾಂತರ – 70 ವರ್ಷ ಗುಡಿಸಿನಲ್ಲಿಯೇ ಜೀವನ: ಮನೆ ಕನಸು ನನಸು  NAMMUR EXPRESS NEWS  ಹೊಸದುರ್ಗ: ಜೀವನಪೂರ್ತಿ ಪ್ರೀತಿ ವಾತ್ಸಲ್ಯ ತೋರುವವರಿಲ್ಲದ ಅಜ್ಜಿಯ ಬದುಕಿಗೊಂದು ಮನೆ ನಿರ್ಮಿಸಿ ನೆಮ್ಮದಿಯ ಜೀವನಕ್ಕೆ ದಾರಿ ಮಾಡಿಕೊಟ್ಟಿರುವ ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗಡೆಯವರು ರಾಜ್ಯದ ಇಂತಹ ನೂರಾರು ಕುಟುಂಬಗಳ ಬದುಕಿಗೆ ದಾರಿದೀಪವಾಗಿದ್ದಾರೆ ಎಂದು ಚಿತ್ರದುರ್ಗ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಬಿ.ಪಿ.ಓಂಕಾರಪ್ಪ ತಿಳಿಸಿದ್ದಾರೆ. ಹೊಸದುರ್ಗ ತಾಲೂಕಿನ ಕಸಬಾ ಹೋಬಳಿ ಜೋಡಿ ತುಂಬಿನಕೆರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಲು ರಾಮೇಶ್ವರ ವಲಯದಿಂದ ವಯೋವೃದ್ದೆ ಕಮಲಮ್ಮ ಇವರಿಗೆ ನೂತನವಾಗಿ ಕಟ್ಟಿಸಿ ಕೊಟ್ಟಿರುವ ವಾತ್ಸಲ್ಯ ಮನೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಚಂದ್ರಶೇಖರ್ ಅವರು ಪೂಜ್ಯ ವೀರೇಂದ್ರ ಹೆಗ್ಡೆಯವರ ಧರ್ಮಪತ್ನಿ ಹೇಮಾವತಿ ಅಮ್ಮನವರ ಆಶಯದಂತೆ ಇಂತಹ ನೊಂದ ಜೀವಿಯನ್ನ ಗುರುತಿಸಿ ಅರ್ಹ ವ್ಯಕ್ತಿಗೆ…

Read More

ತೀರ್ಥಹಳ್ಳಿಯಲ್ಲಿ ಹಣ ಟ್ರಾನ್ಸ್ಫರ್ ಮಾಡದೆ ” ಡಿಜಿಟಲ್ ಮೋಸ”! – ಸ್ಕ್ಯಾನ್ ಮಾಡಿ ಹಣ ಹಾಕಿದಂತೆ ನಾಟಕ: ಡಿಜಿಟಲ್ ವಂಚನೆ – ಪೊಲೀಸ್ ಇಲಾಖೆ ಡಿಜಿಟಲ್ ವಂಚಕರ ಹಿಡಿಯದಿದ್ರೆ ಹೀಗೆ ಆಗುತ್ತೆ! NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಆನ್ಲೈನ್ ಸ್ಕ್ಯಾನ್ ಮಾಡುವ ಮೂಲಕ ಹಣ ಕೊಡುವುದಾಗಿ ನಂಬಿಸಿ 5000 ರೂ. ಹಣವನ್ನು ತೆಗೆದುಕೊಂಡು ಹೋಗಿ, ಹಣವನ್ನ ಟ್ರಾನ್ಸ್ಫರ್ ಮಾಡಿದ ರೀತಿಯಲ್ಲಿ ನಾಟಕ ಮಾಡಿ ವಂಚಿಸಿದ ಘಟನೆ ನಡೆದಿದೆ. ಡಿಜಿಟಲ್ನಲ್ಲಿ ಮೋಸ ಮಾಡುತ್ತಿರುವ ಪ್ರಕರಣ ಮಂಗಳವಾರ ಬೆಳಕಿಗೆ ಬಂದಿದೆ. ತೀರ್ಥಹಳ್ಳಿ ಪಟ್ಟಣದ ಕರ್ನಾಟಕ ಬ್ಯಾಂಕ್ ಬಳಿ ಮೊಬೈಲ್ ಅಂಗಡಿಯಲ್ಲಿ ಒಂದಕ್ಕೆ ತೆರಳಿದ ತಿಪ್ಪೇಸ್ವಾಮಿ ಎಂದು ಹೆಸರು ಬರುವ ಅನಾಮಿಕ ವ್ಯಕ್ತಿ ಹಣ ಕ್ಯಾಶ್ ಬೇಕು ಗೂಗಲ್ ಪೆ ಮಾಡುತ್ತೇನೆ ಎಂದು ಹಣವನ್ನ ಪಡೆದು ಮೊಬೈಲ್ ಮೂಲಕ ಅಕೌಂಟ್ ಯುಪಿಐ ಸ್ಕ್ಯಾನ್ ಮಾಡಿದ್ದಾನೆ. ಹಣ ಟ್ರಾನ್ಸ್ಫರ್ ಆಗಿರುವ ಬಗ್ಗೆ ಮಾಹಿತಿಯನ್ನು ನೀಡಿದ್ದಾನೆ. ಟ್ರಾನ್ಸ್ಫರ್ ಅಂತ ಡಿಸ್ಪ್ಲೇ ಕೂಡ ಬಂದಿದೆ. ಇದೇ ಕಾರಣಕ್ಕೆ ಹಣವನ್ನು…

Read More

ಉದ್ಯಮಿ, ಸಮಾಜ ಸೇವಕ ಡಾ.ಗೋವಿಂದ ಬಾಬು ಪೂಜಾರಿ ಅವರಿಗೆ ಪ್ರಶಸ್ತಿ – ದೇವರಾಜ ಅರಸು ಹಿಂದುಳಿದ ವರ್ಗಗಳ ರತ್ನ ರಾಜ್ಯ ಪ್ರಶಸ್ತಿ – ಸಮಾಜ ಸೇವೆ, ಉದ್ಯೋಗ ಸೃಷ್ಟಿ ಕ್ಷೇತ್ರದಲ್ಲಿ ಸಾಧನೆಗೆ ಸಂದ ಫಲ NAMMUR EXPRESS NEWS ದಾವಣಗೆರೆ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಸಂಘ (ನೋಂ) ಕೊಡ ಮಾಡುವ “ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ರತ್ನ’ ರಾಜ್ಯ ಪ್ರಶಸ್ತಿಗೆ ಖ್ಯಾತ ಉದ್ಯಮಿ, ಸಮಾಜ ಸೇವಕ ಡಾ.ಗೋವಿಂದ ಬಾಬು ಪೂಜಾರಿ ಭಾಜನರಾಗಿದ್ದಾರೆ. ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಶೋಷಿತ ಸಮುದಾಯಗಳ ಕಣ್ಮಣಿ,ಡಿ.ದೇವರಾಜ ಅರಸು ಅವರ ಜಯಂತ್ಯೋತ್ಸವದ ಅಂಗವಾಗಿ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಉಡುಪಿ ಜಿಲ್ಲೆ ಬೈಂದೂರು ಮೂಲದ ಉದ್ಯಮಿ, ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಮೂಲಕ ಸಾವಿರಾರು ಜನರಿಗೆ ಸಹಾಯ ಮಾಡಿ, ಸಾವಿರಾರು ಮಂದಿಗೆ ಉದ್ಯೋಗ ನೀಡಿರುವ ಡಾ.ಗೋವಿಂದ ಬಾಬು ಪೂಜಾರಿ ಅವರಿಗೆ “ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ರತ್ನ” ರಾಜ್ಯ ಪ್ರಶಸ್ತಿಯನ್ನು…

Read More

ನಮ್ಮೂರ್ ಎಕ್ಸ್ ಪ್ರೆಸ್ ಹಾಸನ ಜಿಲ್ಲಾ ಅಪ್ಡೇಟ್ಸ್ ಎನ್.ಡಿ.ಎ ಪರೀಕ್ಷೆಯಲ್ಲಿ ಹಾಸನ ವಿದ್ಯಾರ್ಥಿಯ ಸಾಧನೆ ಕೇಂದ್ರ ಲೋಕಸೇವಾ ಆಯೋಗವು ನಡೆಸುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹುದ್ದೆಗೆ ನಡೆದ ಲಿಖಿತ ಪರೀಕ್ಷೆಯಲ್ಲಿ ವಿದ್ಯಾಸೌಧ ಪದವಿಪೂರ್ವ ಕಾಲೇಜಿನ ಅನಂತ ವರುಣ್ ಎಂಬ ವಿದ್ಯಾರ್ಥಿಯು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್ ಡಿ ಎ)ಯು ನಡೆಸುವ ಸಂದರ್ಶನಕ್ಕೆ ಹಾಸನ ಜಿಲ್ಲೆಯಿಂದ ಆಯ್ಕೆಗೊಂಡು ಉನ್ನತ ಸಾಧನೆಗೈದಿದ್ದಾನೆ ಸಾಧನೆಗೈದ ವಿದ್ಯಾರ್ಥಿಯನ್ನು ವಿದ್ಯಾಸೌಧ ಸಂಸ್ಥೆಯ ಮುಖ್ಯಸ್ಥರು,ಆಡಳಿತ ಮಂಡಳಿ , ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ ಖಾಸಗಿ ಕಾಲೇಜು ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ ಹಾಸನ: ನಗರದ ಖಾಸಗಿ ಪಿಯು ಕಾಲೇಜಿನಲ್ಲಿ ಎರಡು ದಿನಗಳ ಹಿಂದೆ ಮುಸ್ಲಿಂ ಧರ್ಮಗುರುವೊಬ್ಬರು ಕುರಾನ್ ಪಠಣ ವೇಳೆ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಖಂಡಿಸಿ ಎಬಿವಿಪಿ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಕಾಲೇಜಿನ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಜ್ಞಾನ ದೇಗುಲ ಒಂದು ಧರ್ಮಕ್ಕೆ ಅಥವಾ ಒಂದು…

Read More

ನಾನವನಲ್ಲ… ನಾನವನಲ್ಲ… ನಾನು ತಪ್ಪು ಮಾಡಿಲ್ಲ! * ಪ್ರಾಸಿಕ್ಯೂಷನ್ ಗ್ರೀನ್ ಸಿಗ್ನಲ್ ಬರೀ ತನಿಖೆ ಅಷ್ಟೇ: ಸಿಎಂ * ಕೋರ್ಟ್ ತೀರ್ಪು ಕುರಿತು ಸಿಎಂ ಸಿದ್ದರಾಮಯ್ಯ ಪತ್ರಿಕಾ ಪ್ರಕಟಣೆ * ಸಿದ್ದರಾಮಯ್ಯ ರಾಜಿನಾಮೆಗೆ ಬಿಜೆಪಿ-ಜೆಡಿಎಸ್‌ ಪಟ್ಟು * ಸಿಎಂ ವಿರುದ್ಧ ಬಿಜೆಪಿ ಷಡ್ಯಂತ್ರ: ಡಿಕೆಶಿ ಸಿಡಿಮಿಡಿ NAMMUR EXPRESS NEWS ಬೆಂಗಳೂರು: ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್ ಅನುಮತಿಯನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದು, ಸಿಎಂ ಸಿದ್ದರಾಮಯ್ಯ ದೊಡ್ಡ ಹಿನ್ನಡೆಯಾಗಿದೆ ಎಂದರೆ ತಪ್ಪಾಗಲಾರದು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ನಿರ್ಧಾರಕ್ಕೆ ಕೌಂಟರ್ ಕೊಡಲು ಸಿಎಂ ಸುಪ್ರೀಂ ಸಜ್ಜಾಗಿದ್ದು, ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸುತ್ತಿದ್ದಾರೆ. ತಮ್ಮ ವಿರುದ್ಧ ಹೈಕೋರ್ಟ್‌ ನೀಡಿರುವ ತೀರ್ಪಿನ ಕುರಿತು ಮಾತನಾಡಿರುವ ಸಿಎಂ, ಸಿಕ್ಯೂಷನ್‌ಗೆ ಅನುಮತಿ ಕೊಟ್ಟಿಲ್ಲ. ಅದನ್ನು ತಿರಸ್ಕಾರ ಮಾಡಿದ್ದಾರೆ. 17ಎ ಪಿಸಿ ಆಕ್ಟ್ ಪ್ರಕಾರ ತನಿಖೆಗೆ ಕೊಟ್ಟಿದ್ದಾರೆ. ಇದು ಅಭಿಯೋಜನೆಯಲ್ಲ ಎಂದು ಹೇಳಿದ್ದಾರೆ. ನಾನು ಹಾಕಿದ್ದ ರಿಟ್ ಅರ್ಜಿ ಮೇಲೆ ನ್ಯಾಯಾಧೀಶರು ಆದೇಶವನ್ನು ನೀಡಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ…

Read More

ಸಿದ್ದರಾಮಯ್ಯ ರಾಜೀನಾಮೆಗೆ ಚೌಟ ಪಟ್ಟು – ಸಿದ್ದರಾಮಯ್ಯನವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಅಗ್ರಹ – ಮೈಸೂರು ಚಲೋ ಪಾದಯಾತ್ರೆಗೆ ಸಂದಿರುವ ಗೆಲುವು NAMMUR EXPRESS NEWS ಮಂಗಳೂರು: ಮೈಸೂರು ಮುಡಾ ಭೂಹಗರಣದ ಬಗ್ಗೆ ರಾಜ್ಯಪಾಲರು ಪ್ರಾಷಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿರುವ ಹಿನ್ನಲೆ ಸಿಎಂ ಸಿದ್ದರಾಮಯ್ಯನವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಒತ್ತಾಯಿಸಿದ್ದಾರೆ.ಸಿದ್ದರಾಮಯ್ಯನವರ ಭೂಹಗರಣದಲ್ಲಿ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕ್ಯಾ. ಚೌಟ ಅವರು, ಹೈಕೋರ್ಟ್ ಪೀಠ ಸಿಎಂ ಸಿದ್ದರಾಮಯ್ಯನವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವುದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ನಿರಂತರ ಪ್ರತಿಭಟನೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆಸಿದ್ದ ಮೈಸೂರು ಚಲೋ ಪಾದಯಾತ್ರೆಗೆ ಸಂದಿರುವ ದೊಡ್ಡ ಗೆಲುವು ಎಂದು ಹೇಳಿದ್ದಾರೆ. ತಮ್ಮ ರಾಜಕೀಯ ಬದುಕು ಯಾವುದೇ ಕಪ್ಪು- ಚುಕ್ಕೆಗಳಿಲ್ಲದ…

Read More

ನಮ್ಮೂರ್ ಎಕ್ಸ್ ಪ್ರೆಸ್ ಹೆಬ್ರಿ ಅಪ್ಡೇಟ್ಸ್ ಅಮೃತ ಭಾರತಿ ಕಾಲೇಜಿನ ಕ್ರೀಡಾ ಸಾಧನೆ – ಅಮೃತ ಭಾರತಿ ಕಾಲೇಜಿನ ವಿದ್ಯಾರ್ಥಿನಿ ಪ್ರಾಪ್ತಿ ರಾಜ್ಯ ಮಟ್ಟಕ್ಕೆ ಆಯ್ಕೆ – ಹೆಬ್ರಿ ತಾಲೂಕು ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆ – ಕಬ್ಬಿನಾಲೆ: ಮಲೆಕುಡಿಯ ಸಂಘದ ಸಾಧಕರಿಗೆ ಸನ್ಮಾನ NAMMUR EXPRESS NEWS ಹೆಬ್ರಿ: ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ, ಸರಕಾರಿ ಪದವಿಪೂರ್ವ ಕಾಲೇಜು ಕುಂದಾಪುರದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪದವಿಪೂರ್ವ ವಿದ್ಯಾರ್ಥಿಗಳ ಕಬಡ್ಡಿ ಪಂದ್ಯಾಟದಲ್ಲಿ, ಬಾಲಕಿಯರ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪ್ರಾಪ್ತಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಈಕೆ ಎಳ್ಳಾರೆಯ ಪ್ರಭಾಕರ ಶೆಟ್ಟಿ ಮತ್ತು ಸುಜಾತ ಶೆಟ್ಟಿ ದಂಪತಿಯ ಪುತ್ರಿ . ಇವಳ ಸಾಧನೆಗೆ ಆಡಳಿತ ಮಂಡಳಿ ಪ್ರಾಂಶುಪಾಲರು ಉಪನ್ಯಾಸಕ ಹಾಗೂ ಉಪನ್ಯಾಸಕಿೇತರ ವೃಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಜಿಲ್ಲಾ ಮಟ್ಟಕ್ಕೆ ಆಯ್ಕೆ:…

Read More

ಮಕ್ಕಳ ಕನಸಾಗೇ ಉಳಿದ ಸೈಕಲ್ ಸೌಲಭ್ಯ – ವಿದ್ಯಾರ್ಥಿನಿಯರ ಪಟ್ಟಿ ಸಿದ್ಧಗೊಂಡರು ಕೇಳೋರಿಲ್ಲ.!! * ಕನಸಾಗೇ ಉಳಿಯಲಿದ್ಯಾ ಮಕ್ಕಳು ಸೈಕಲ್ ಏರಿ ಶಾಲೆಗೆ ಹೋಗುವ ಕನಸು! * ಸೈಕಲ್ ಇಲ್ಲದೇ ದೂರದ ಶಾಲೆಗೆ ಸರಿಯಾದ ಸಮಯಕ್ಕೆ ಮಕ್ಕಳು ತಲುಪಲಾಗುತ್ತಿಲ್ಲ ಪೋಷಕರ ಅಳಲು NAMMUR EXPRESS NEWS ಚಿಕ್ಕಮಗಳೂರು: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮೂಲೆ ಗುಂಪಾಗುವ ಎಲ್ಲ ಲಕ್ಷಣಗಳು ಕಾಣುತ್ತಿದೆ. ಸೈಕಲ್ ಏರಿ ಶಾಲೆಗೆ ಹೋಗುವ ಮಕ್ಕಳ ಕನಸು ಕನಸಾಗಿಯೇ ಉಳಿಯಲಿದೆಯಾ ಎಂಬ ಆತಂಕ ಮನೆಮಾಡಿದೆ. ಹೆಣ್ಣು ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು, ಹಾಜರಾತಿ ಕಡಿಮೆಯಾಗಬಾರದು ಎಂಬ ಕಾರಣಕ್ಕಾಗಿ ಬಿಸಿಯೂಟದ ಜತೆ ಉಚಿತವಾಗಿ ಸೈಕಲ್ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿತ್ತು. ಕಾಲಕ್ರಮೇಣ ಈ ಸೈಕಲ್ ಯೋಜನೆಯನ್ನು 8ನೇ ತರಗತಿ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿತ್ತು. ಇದರಿಂದ ಶಾಲಾ ಹಾಜರಾತಿ ಜತೆಗೆ ಪ್ರವೇಶಾತಿಯ ಸಂಖ್ಯೆಯೂ ಹೆಚ್ಚಾಯಿತು. ಶಾಲೆ ಆರಂಭವಾಗಿ ತಿಂಗಳು ಕಳೆಯುವಷ್ಟರಲ್ಲಿ ಸರಕಾರಿ ಮತ್ತು ಅನುದಾನಿತ ಶಾಲೆಗಳ 8ನೇ ತರಗತಿ ವಿದ್ಯಾರ್ಥಿಗಳಿಗೆ…

Read More