Author: Nammur Express Admin

ಸಿದ್ದರಾಮಯ್ಯ ರಾಜೀನಾಮೆಗೆ ಚೌಟ ಪಟ್ಟು – ಸಿದ್ದರಾಮಯ್ಯನವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಅಗ್ರಹ – ಮೈಸೂರು ಚಲೋ ಪಾದಯಾತ್ರೆಗೆ ಸಂದಿರುವ ಗೆಲುವು NAMMUR EXPRESS NEWS ಮಂಗಳೂರು: ಮೈಸೂರು ಮುಡಾ ಭೂಹಗರಣದ ಬಗ್ಗೆ ರಾಜ್ಯಪಾಲರು ಪ್ರಾಷಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿರುವ ಹಿನ್ನಲೆ ಸಿಎಂ ಸಿದ್ದರಾಮಯ್ಯನವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಒತ್ತಾಯಿಸಿದ್ದಾರೆ.ಸಿದ್ದರಾಮಯ್ಯನವರ ಭೂಹಗರಣದಲ್ಲಿ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕ್ಯಾ. ಚೌಟ ಅವರು, ಹೈಕೋರ್ಟ್ ಪೀಠ ಸಿಎಂ ಸಿದ್ದರಾಮಯ್ಯನವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವುದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ನಿರಂತರ ಪ್ರತಿಭಟನೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆಸಿದ್ದ ಮೈಸೂರು ಚಲೋ ಪಾದಯಾತ್ರೆಗೆ ಸಂದಿರುವ ದೊಡ್ಡ ಗೆಲುವು ಎಂದು ಹೇಳಿದ್ದಾರೆ. ತಮ್ಮ ರಾಜಕೀಯ ಬದುಕು ಯಾವುದೇ ಕಪ್ಪು- ಚುಕ್ಕೆಗಳಿಲ್ಲದ…

Read More

ನಮ್ಮೂರ್ ಎಕ್ಸ್ ಪ್ರೆಸ್ ಹೆಬ್ರಿ ಅಪ್ಡೇಟ್ಸ್ ಅಮೃತ ಭಾರತಿ ಕಾಲೇಜಿನ ಕ್ರೀಡಾ ಸಾಧನೆ – ಅಮೃತ ಭಾರತಿ ಕಾಲೇಜಿನ ವಿದ್ಯಾರ್ಥಿನಿ ಪ್ರಾಪ್ತಿ ರಾಜ್ಯ ಮಟ್ಟಕ್ಕೆ ಆಯ್ಕೆ – ಹೆಬ್ರಿ ತಾಲೂಕು ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆ – ಕಬ್ಬಿನಾಲೆ: ಮಲೆಕುಡಿಯ ಸಂಘದ ಸಾಧಕರಿಗೆ ಸನ್ಮಾನ NAMMUR EXPRESS NEWS ಹೆಬ್ರಿ: ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ, ಸರಕಾರಿ ಪದವಿಪೂರ್ವ ಕಾಲೇಜು ಕುಂದಾಪುರದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪದವಿಪೂರ್ವ ವಿದ್ಯಾರ್ಥಿಗಳ ಕಬಡ್ಡಿ ಪಂದ್ಯಾಟದಲ್ಲಿ, ಬಾಲಕಿಯರ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪ್ರಾಪ್ತಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಈಕೆ ಎಳ್ಳಾರೆಯ ಪ್ರಭಾಕರ ಶೆಟ್ಟಿ ಮತ್ತು ಸುಜಾತ ಶೆಟ್ಟಿ ದಂಪತಿಯ ಪುತ್ರಿ . ಇವಳ ಸಾಧನೆಗೆ ಆಡಳಿತ ಮಂಡಳಿ ಪ್ರಾಂಶುಪಾಲರು ಉಪನ್ಯಾಸಕ ಹಾಗೂ ಉಪನ್ಯಾಸಕಿೇತರ ವೃಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಜಿಲ್ಲಾ ಮಟ್ಟಕ್ಕೆ ಆಯ್ಕೆ:…

Read More

ಮಕ್ಕಳ ಕನಸಾಗೇ ಉಳಿದ ಸೈಕಲ್ ಸೌಲಭ್ಯ – ವಿದ್ಯಾರ್ಥಿನಿಯರ ಪಟ್ಟಿ ಸಿದ್ಧಗೊಂಡರು ಕೇಳೋರಿಲ್ಲ.!! * ಕನಸಾಗೇ ಉಳಿಯಲಿದ್ಯಾ ಮಕ್ಕಳು ಸೈಕಲ್ ಏರಿ ಶಾಲೆಗೆ ಹೋಗುವ ಕನಸು! * ಸೈಕಲ್ ಇಲ್ಲದೇ ದೂರದ ಶಾಲೆಗೆ ಸರಿಯಾದ ಸಮಯಕ್ಕೆ ಮಕ್ಕಳು ತಲುಪಲಾಗುತ್ತಿಲ್ಲ ಪೋಷಕರ ಅಳಲು NAMMUR EXPRESS NEWS ಚಿಕ್ಕಮಗಳೂರು: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮೂಲೆ ಗುಂಪಾಗುವ ಎಲ್ಲ ಲಕ್ಷಣಗಳು ಕಾಣುತ್ತಿದೆ. ಸೈಕಲ್ ಏರಿ ಶಾಲೆಗೆ ಹೋಗುವ ಮಕ್ಕಳ ಕನಸು ಕನಸಾಗಿಯೇ ಉಳಿಯಲಿದೆಯಾ ಎಂಬ ಆತಂಕ ಮನೆಮಾಡಿದೆ. ಹೆಣ್ಣು ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು, ಹಾಜರಾತಿ ಕಡಿಮೆಯಾಗಬಾರದು ಎಂಬ ಕಾರಣಕ್ಕಾಗಿ ಬಿಸಿಯೂಟದ ಜತೆ ಉಚಿತವಾಗಿ ಸೈಕಲ್ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿತ್ತು. ಕಾಲಕ್ರಮೇಣ ಈ ಸೈಕಲ್ ಯೋಜನೆಯನ್ನು 8ನೇ ತರಗತಿ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿತ್ತು. ಇದರಿಂದ ಶಾಲಾ ಹಾಜರಾತಿ ಜತೆಗೆ ಪ್ರವೇಶಾತಿಯ ಸಂಖ್ಯೆಯೂ ಹೆಚ್ಚಾಯಿತು. ಶಾಲೆ ಆರಂಭವಾಗಿ ತಿಂಗಳು ಕಳೆಯುವಷ್ಟರಲ್ಲಿ ಸರಕಾರಿ ಮತ್ತು ಅನುದಾನಿತ ಶಾಲೆಗಳ 8ನೇ ತರಗತಿ ವಿದ್ಯಾರ್ಥಿಗಳಿಗೆ…

Read More

ಗಾಯನ ಲೋಕದಲ್ಲಿ ಬೆಳೆಯುತ್ತಿರುವ ಪ್ರತಿಭೆ ವರ್ಷಿಣಿ ಪಿ ಭಟ್ – ವಾಯ್ಸ್ ಆಫ್ ಕರ್ನಾಟಕ ಸಿಂಗಿಂಗ್ ರನ್ನರ್, ಹತ್ತು ಹಲವು ಪ್ರಶಸ್ತಿ – ತಮ್ಮ ಕಂಠದ ಮೂಲಕವೇ ಜನರ ಮನ ಗೆದ್ದ ಗಾಯಕಿ! NAMMUR EXPRESS NEWS ತೀರ್ಥಹಳ್ಳಿ: ಮಲೆನಾಡಿನ ಹೆಮ್ಮೆಯ ಯುವ ಗಾಯಕಿ, ತೀರ್ಥಹಳ್ಳಿ ತಾಲ್ಲೂಕು ಪಟ್ಲಮನೆಯ ವರ್ಷಿಣಿ ಪಿ ಭಟ್ ಈಗ ಎರಡು ಸ್ಪರ್ಧೆಗಳಲ್ಲಿ ಗೆಲ್ಲುವ ಮೂಲಕ ಗಾಯನ ಲೋಕದಲ್ಲಿ ಮಲೆನಾಡ ಕೀರ್ತಿ ಪತಾಕೆ ಹಾರಿಸುತ್ತಿದ್ದಾರೆ. ವರ್ಷಿಣಿ ಪಿ ಭಟ್ ಪ್ರಕಾಶ್ ಭಟ್ ಹಾಗೂ ಲಲಿತಾ ದಂಪತಿಯ ಪುತ್ರಿ. ಈಗಾಗಲೇ ಅನೇಕ ಪ್ರಶಸ್ತಿಗಳ ಜತೆ ಮಲೆನಾಡಿನ ಬೆಸ್ಟ್ ಹಾಡುಗಾರರಲ್ಲಿ ಒಬ್ಬರಾದ ವರ್ಷಿಣಿ ಸೆಪ್ಟೆಂಬರ್ 21ರಂದು ಶಿವಮೊಗ್ಗದಲ್ಲಿ ನಡೆದ ವಿಜಯ ವಾಯ್ಸ್ ಕನ್ನಡ ನ್ಯೂಸ್ ಮೀಡಿಯಾ ನೆಟ್ವರ್ಕ್ ಅರ್ಪಿಸುವ ವಿಜಯ ವಾಯ್ಸ್ ಆಫ್ ಕರ್ನಾಟಕ ಸಿಂಗಿಂಗ್ ಕಾಂಪಿಟೇಶನ್ ನಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಗೆದ್ದಿದ್ದಾರೆ ಹಾಗೂ ಆಗಸ್ಟ್ 30ರಂದು ಭದ್ರಾವತಿಯಲ್ಲಿ ನಡೆದ ಶಿವಮೊಗ್ಗ ಜಿಲ್ಲಾ ಮಟ್ಟದ ಕನ್ನಡ ಚಲನಚಿತ್ರ ಗೀತೆಗಳು…

Read More

ಕಾರ್ಕಳದ ಪ್ರತಿಷ್ಠಿತ ಜವುಳಿ ಮಳಿಗೆ ಲಕ್ಷ್ಮೀ ಸಿಲ್ಕ್ ಅಲ್ಲಿ ನೂರಾರು ಉದ್ಯೋಗ – ಅನುಭವವುಳ್ಳ ಸಿಬ್ಬಂದಿಗೆ ಆಧ್ಯತೆ,ಸ್ಥಳೀಯರಿಗೆ ಪ್ರಥಮ ಆದ್ಯತೆ – ಆಕರ್ಷಕ ವೇತನ ಮತ್ತು ESI, PF ಮತ್ತು ವಸತಿ ಸೌಲಭ್ಯ NAMMUR EXPRESS NEWS ಕಾರ್ಕಳ: ಕಾರ್ಕಳದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕಾರ್ಕಳದ ಅತಿದೊಡ್ಡ ಜವುಳಿ ಮಳಿಗೆ ಲಕ್ಷ್ಮೀ ಸಿಲ್ಕ್ ಗೆ ಅನುಭವವುಳ್ಳ 50 ಸೇಲ್ಸ್ ಗರ್ಲ್ಸ್,ಸೇಲ್ಸ್,20 ಬಾಯ್ಸ್,2ವಾಚ್ ಮೆನ್ ಗಳು ಕೆಲಸಕ್ಕೆ ತಕ್ಷಣ ಬೇಕಾಗಿದ್ದಾರೆ. ಉದ್ಯೋಗಸ್ಥರಿಗೆ ಆಕರ್ಷಕ ವೇತನ ಮತ್ತು ESI, PF ಮತ್ತು ವಸತಿ ಸೌಲಭ್ಯವನ್ನು ನೀಡಲಾಗುವುದು. ಸ್ಥಳೀಯರಿಗೆ ಪ್ರಥಮ ಆದ್ಯತೆ ಕೊಡಲಾಗುವುದು. ಸೇಲ್ಸ್ ಗರ್ಲ್ಸ್ 50 ಸೇಲ್ಸ್ ಬಾಯ್ಸ್ 20 ವಾಚ್ ಮೆನ್ 2 ಆಕರ್ಷಕ ವೇತನ ಮತ್ತು ESI & PF ಮತ್ತು ವಸತಿ ಸೌಲಭ್ಯವಿದೆ. ಸ್ಥಳೀಯರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ತಕ್ಷಣ ಸಂಪರ್ಕಿಸಿ : 8105639566 7019192687

Read More

ಸಮಗ್ರ ಚಾಂಪಿಯನ್ ಶಿಪ್ ಮುಡಿಗೇರಿಸಿಕೊಂಡ ವಾಗ್ದೇವಿ ಶಾಲೆ – ಕಸಬಾ ಹೋಬಳಿಯ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಸಾಧನೆ – ಶಾಲಾ ಆಡಳಿತ ಮಂಡಳಿಯಿಂದ ಅಭಿನಂದನೆಗಳು NAMMUR EXPRESS NEWS ತೀರ್ಥಹಳ್ಳಿ: ವಾಗ್ದೇವಿ ಆಂಗ್ಲಮಾಧ್ಯಮ ಹಿರಿಯಪ್ರಾಥಮಿಕ ಶಾಲೆ ಇತ್ತೀಚಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಟ್ಟಮಕ್ಕಿ ಇವರ ಸಂಯುಕ್ತಾಶ್ರಯದಲ್ಲಿ ಡಾ.ಯು.ಆರ್. ಅನಂತಮೂರ್ತಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆದ 14 ವರ್ಷ ವಯೊಮಿತಿಯೊಳಗಿನ ಕಸಬಾ ಹೋಬಳಿಯ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ವಾಗ್ದೇವಿ ಆಂಗ್ಲಮಾಧ್ಯಮ ಹಿರಿಯಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಓವರ್ ಆಲ್ ಚಾಂಪಿಯನ್ ಶಿಪ್ ಹಾಗು ಬಾಲಕರ ಚಾಂಪಿಯನ್ ಶಿಪ್ ಗಳನ್ನು ಮುಡಿಗೇರಿಸಿಕೊಂಡು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಗೆದ್ದ ವಿದ್ಯಾರ್ಥಿಗಳ ವಿವರ  ಗುಂಪು ಆಟಗಳು – ಬಾಲಕರ ವಿಭಾಗ – 1.4×100 ರಿಲೇ ಪ್ರಥಮ. 2. ವಾಲಿಬಾಲ್ ಪ್ರಥಮ 3. ಥ್ರೋಬಾಲ್ ಪ್ರಥಮ. 4. ಕಬಡ್ಡಿ ಪ್ರಥಮ ಬಾಲಕಿಯರ ವಿಭಾಗ – 1.4×100 ರಿಲೇ ದ್ವಿತೀಯ. 2. ವಾಲಿಬಾಲ್ ದ್ವಿತೀಯ 3. ಥ್ರೋಬಾಲ್ ದ್ವಿತೀಯ.…

Read More

ಸರ್ವ ಕಾಲೇಜ್ ವಿದ್ಯಾರ್ಥಿ ಶಕ್ತಿ ಉಡುಪಿ 2024-25 – ವಿದ್ಯಾರ್ಥಿ ಚುನಾವಣೆಯಲ್ಲಿ ತೀರ್ಥಹಳ್ಳಿ ಮೇಗರವಳ್ಳಿಯ ನಿವಾಸಿ ನವದೀಪ್ ಎಂ ಪಿ ಹೆಗ್ಡೆ ಸ್ಪರ್ಧೆ – ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಗೆಳೆಯ ಬಳಗವು ಆಶಯ NAMMUR EXPRESS NEWS ಸರ್ವ ಕಾಲೇಜ್ ವಿದ್ಯಾರ್ಥಿ ಶಕ್ತಿ ಉಡುಪಿ ಈ ಕಾಲೇಜ್ ನಲ್ಲಿ ವಿದ್ಯಾರ್ಥಿಗಳ ಚುನಾವಣೆಯಲ್ಲಿ ತೀರ್ಥಹಳ್ಳಿಯ ಮೇಗರವಳ್ಳಿ ನಿವಾಸಿ ನವದೀಪ್ ಎಂಪಿ ಹೆಗ್ಡೆ ಭಾಗವಹಿಸಲಿದ್ದಾರೆ. ನವದೀಪ್ ಎಂಪಿ ಹೆಗ್ಡೆ ಪ್ರಭಾಕರ್ ಹೆಗ್ಡೆ ನಿವೃತ್ತ ಪ್ರಿನ್ಸಿಪಾಲರು ಇವರ ಪುತ್ರ ಎಂಜಿಎಂ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಉಡುಪಿ ಜಿಲ್ಲೆಯ ಸರ್ವ ಕಾಲೇಜ್ ವಿದ್ಯಾರ್ಥಿ ಶಕ್ತಿಯ ವಿದ್ಯಾರ್ಥಿ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದಾರೆ. ಇದು ಹೆಮ್ಮೆಯ ವಿಷಯ ಆಗಿದೆ. ಅವರು ಚುನಾವಣೆಯಲ್ಲಿ ಗೆಲ್ಲಲಿ ಎಂದು ಅವರ ಗೆಳೆಯ ಬಳಗವು ಬಯಸುತ್ತಾರೆ. 26 ಅಕ್ಟೋಬರ್ 2024 ಬೆಳ್ಳಿಗೆ 10.00 ಗೆ ಶ್ರೀ ತುಳುಜಾ ಭವಾನಿ ಮರಾಠಿ ಸಮುದಾಯದ ಭವನ ಕುಂಜಿಬಿಟ್ಟು ಉಡುಪಿ ಇಲ್ಲಿ ಈ ಚುನಾವಣೆ ನೆರವೇರಲಿದೆ. ಈ ಚುನಾವಣೆಯಲ್ಲಿ ನವದೀಪ್ ಅವರು ಗೆಲುವು…

Read More

ಕರಾವಳಿ ಟಾಪ್ ನ್ಯೂಸ್ ಹೆಬ್ರಿ ಕಬ್ಬಿನಾಲೆ ಕೊಲೆ ಪ್ರಕರಣ: ಕಾರ್ಕಳ ಕೋರ್ಟಲ್ಲಿ ನಕ್ಸಲರ ವಿಚಾರಣೆ! – ಕೋರ್ಟಿಗೆ ನಕ್ಸಲ್ ಕನ್ಯಾಕುಮಾರಿ, ರಮೇಶ್ ಹಾಜರುಪಡಿಸಿದ ಪೊಲೀಸರು * ಕುಂದಾಪುರ: ಮುಖಕ್ಕೆ ರೈಲು ಹೊಡೆದು ವ್ಯಕ್ತಿ ಮೃತ್ಯು! * ಉಡುಪಿ: ದೊಣ್ಣೆಗಳಿಂದ ಹೊಡೆದಾಡಿದ ಕಾರ್ಮಿಕರು! * ಕಾಸರಗೋಡು: ಅಮೀಬಾ ಜ್ವರಕ್ಕೆ ಹಲವರು ಬಲಿ * ಉಪ್ಪಿನಂಗಡಿ: ಬಸ್ -ಟ್ಯಾಂಕರ್ ಡಿಕ್ಕಿ: ಪ್ರಾಣಾಪಾಯದಿಂದ ಪಾರು NAMMUR EXPRESS NEWS ಕಾರ್ಕಳ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಕ್ಸಲ್ ಸದಸ್ಯರಾದ ಕನ್ಯಾಕುಮಾರಿ ಮತ್ತು ರಮೇಶ್ (ಶಿವ ಕುಮಾರ್) ಅವರನ್ನು ಸೋಮವಾರ ಕಾರ್ಕಳ ನ್ಯಾಯಾಲಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಹಾಜರುಪಡಿಸಲಾಯಿತು. ನಕ್ಸಲ್ ಸದಸ್ಯರಾದ ಕನ್ಯಾಕುಮಾರಿ ಮತ್ತು ರಮೇಶ್ ನನ್ನು ಬೆಂಗಳೂರು ಪೊಲೀಸರು ಬಿಗಿ ಭದ್ರತೆಯೊಂದಿಗೆ ಮಂಗಳೂರಿಗೆ ಕರೆತಂದು ಸೋಮವಾರ ಕಾರ್ಕಳ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. 2011ರ ನ. 19ರಂದು ಹೆಬ್ರಿ ತಾಲೂಕು ಕಬ್ಬಿನಾಲೆಯಲ್ಲಿ ನಡೆದ ಸದಾಶಿವ ಗೌಡ ಅವರ ಅಪಹರಣ…

Read More

ಪಂಚೆ ಉಟ್ಟ ರೈತನಿಂದಲೇ ಮಾಲ್ ಉದ್ಘಾಟನೆ! – ಫಕೀರಪ್ಪರಿಂದ ರಾಮ್‌ ರಾಜ್‌ ಮಳಿಗೆ ಉದ್ಘಾಟನೆ – ಪಂಚೆಯುಟ್ಟು ಬರುವವರು ನಮ್ಮ ಸಂಸ್ಕೃತಿಯ ಪ್ರತೀಕ ಎಂದ ರಾಮ್ ರಾಜ್ NAMMUR EXPRESS NEWS ಬೆಂಗಳೂರು: ಎಲ್ಲರ ಕಾಲು ಎಳೆಯುತ್ತೆ ಕಾಲ ಅಂತ ಹೇಳ್ತಾರೆ! ಪಂಚೆಯುಟ್ಟ ಕಾರಣಕ್ಕೆ ಮಾಲ್‌ವೊಂದಕ್ಕೆ ಪ್ರವೇಶ ನಿರಾಕರಿಸಲ್ಪಟ್ಟು ಅವಮಾನಿತರಾಗಿದ್ದ ಹಾವೇರಿ ರಾಣೇಬೆನ್ನೂರಿನ ರೈತ ಫಕೀರಪ್ಪ ಅವರು ಅದೇ ಕಾಲ ಚಕ್ರದ ಮಹಿಮೆಯಿಂದ ಯಲಹಂಕದಲ್ಲಿ ರಾಮ್‌ರಾಜ್ ಕಾಟನ್ ನೂತನ ಮಳಿಗೆಯನ್ನು ಸೆ. 27ರಂದುಉದ್ಘಾಟಿಸಲಿದ್ದಾರೆ. ಸಂವಾದದಲ್ಲಿ ಮಾತನಾಡಿದ ರಾಮ್‌ರಾಜ್ ಕಾಟನ್ ಸಂಸ್ಥಾಪಕ, ಚೇರ್ ಮನ್ ಕೆ.ಆರ್. ನಾಗರಾಜನ್, ‘ಪಂಚೆಯುಟ್ಟು ಬರುವವರು ನಮ್ಮ ಸಂಸ್ಕೃತಿಯ ಪ್ರತೀಕ. ಪಂಚೆ ಉಟ್ಟವರನ್ನು ಕೀಳಾಗಿ ಕಾಣುವುದು ಭಾರತೀಯ ಸಂಸ್ಕೃತಿಯನ್ನು ಅವಮಾನಿಸಿದಂತೆ. ಫಕೀರಪ್ಪ ಅವರನ್ನು ಗೌರವಿಸುವ ಸಲುವಾಗಿ ನಾವು ಅವರಿಂದ ರಾಮ್‌ ರಾಜ್‌ ಮಳಿಗೆಯನ್ನು ಉದ್ಘಾಟಿಸುತ್ತಿದ್ದೇವೆ ಎಂದರು. ಪ್ರಾರಂಭದಲ್ಲಿ ಧೋತಿ, ಪಂಚೆಗಳನ್ನು ಪ್ರಾರಂಭಿಸಿದಾಗ ಹಲವರು ಮೂದಲಿಸುತ್ತಿದ್ದರು. ಆದರೆ ಇಂದು ರಾಮ್‌ರಾಜ್ ಬ್ಯಾಂಡ್ ಬಗ್ಗೆ ಅವರೇ ಆಶ್ಚರ್ಯ ಪಡುತ್ತಾರೆ. ಪಂಚೆ ಅವಮಾನಿಸುವುದು…

Read More

ಶಿವಮೊಗ್ಗ ಜಿಲ್ಲಾ ಟಾಪ್ ನ್ಯೂಸ್ ಶಿರಾಳಕೊಪ್ಪದಲ್ಲಿ ಚಾಲಾಕಿ ಲೇಡಿ ಅರೆಸ್ಟ್! ಮಲೆನಾಡಿಗೆ ಕಾಡಾನೆಗಳು ಎಂಟ್ರಿ!: ಬೆಳೆ ನಾಶ! – ಶಿಕಾರಿಪುರ: ಭೀಕರ ಅಪಘಾತ, ತೀರ್ಥಹಳ್ಳಿ ಮೂಲದ ವ್ಯಕ್ತಿ ಸಾವು – ಹೊಸನಗರ : ಕಸಾಪ ಹಿರಿಯ ಸದಸ್ಯ ಎಚ್ ಆರ್ ಪ್ರಕಾಶ್ ಇನ್ನಿಲ್ಲ – ಶಿರಾಳಕೊಪ್ಪ: 200 ಎಟಿಎಂ ಕಾರ್ಡು ಪಡೆದು ಗ್ರಾಹಕರಿಗೆ ವಂಚನೆ! NAMMUR EXPREES NEWS ಶಿವಮೊಗ್ಗ : ಮಲೆನಾಡು ಭಾಗವಾದ ಶಿವಮೊಗ್ಗದಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ರೈತರ ಬೆಳೆ ನಾಶವಾಗಿದೆ. ಎರಡು ಕಾಡಾನೆಗಳ ದಾಳಿಯಿಂದ ರೈತರ ಬೆಳೆ ಸಂಪೂರ್ಣ ನಾಶವಾಗಿರುವ ಘಟನೆ ತಾಲೂಕಿನ ಪುರದಾಳು ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗ ಕೇಂದ್ರದಿಂದ 9 ಕಿಮೀ ದೂರ ಇರುವ ಪುರದಾಳು ಗ್ರಾಮದ ರಾಜೇಶ್ ಹಾಗೂ ಬೀರಪ್ಪ ಎಂಬುವರ ತೋಟ ಹಾಗೂ ಹೊಲಕ್ಕೆ ಕಾಡಾನೆಗಳು ದಾಳಿ ಮಾಡಿದ್ದು ಅಡಿಕೆ ಹಾಗೂ ತೆಂಗಿನ ಮರಗಳನ್ನು ಬುಡಮೇಲು ಮಾಡಿವೆ. ಜೋಳ ಹಾಗೂ ಕಬ್ಬನ್ನು ಸಹ ಕಾಡಾನೆಗಳು ನಾಶ ಮಾಡಿದ್ದಾವೆ. ಆನೆಗಳ ಬಗ್ಗೆ ಮಾಹಿತಿ ನೀಡಿದ್ರೂ ಸಹ…

Read More