Author: Nammur Express Admin

ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ?! * ಅರ್ಜಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್‌ * ರಾಜ್ಯಪಾಲರ ಪ್ರಾಸಿಕ್ಯೂಶನ್‌ ಅನುಮತಿಗೆ ಪರ ಆದೇಶ NAMMUR EXPRESS NEWS ಬೆಂಗಳೂರು: ಮುಡಾ ಹಗರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಕ್ರಮ‌ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ. ರಾಜ್ಯಪಾಲರ ಕ್ರಮವನ್ನು ಎತ್ತಿಹಿಡಿದಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಈ ಬಗ್ಗೆ ರಾಜ್ಯಪಾಲರಿಗೆ ಖಾಸಗಿ ವ್ಯಕ್ತಿಗಳಿಂದ ದೂರು ಬಂದಿತ್ತು. ಈ ಬಗ್ಗೆ ಕ್ರಮ ಕೈಗೊಂಡ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಸ್‌ ದಾಖಲಿಸಿ ತನಿಖೆ ನಡೆಸಲು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ಆದೇಶ ಹೊರಡಿಸಿದ್ದರು. ರಾಜ್ಯಪಾಲರ ಈ ಕ್ರಮವನ್ನು ಪ್ರಶ್ನೆ ಮಾಡಿ ಸಿದ್ದರಾಮಯ್ಯ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಕಳೆದ ಒಂದು ತಿಂಗಳಿಂದ ವಾದ ವಿವಾದ ಆಲಿಸಿ ಹೈಕೋರ್ಟ್‌ನ ಎಂ ನಾಗಪ್ರಸನ್ನ ಅವರ ಏಕ ಸದಸ್ಯ…

Read More

ಬ್ರಹ್ಮಾವರದ ವಿದ್ಯಾಲಕ್ಷ್ಮೀ ಶಿಕ್ಷಣ ಸಂಸ್ಥೆಯಲ್ಲಿ “ಸ್ಪರ್ಶ 2024″ – ಫ್ರೆಷರ್ಸ್ ಡೇ ಆಚರಣೆಯಲ್ಲಿ ವಿದ್ಯಾರ್ಥಿಗಳ ಸಮಾಗಮ – ನಟಿ, ಗಾಯಕಿ, ರೂಪದರ್ಶಿ ಮಹಿಮಾ ಭಂಡಾರಿ ಅತಿಥಿ NAMMUR EXPRESS NEWS ಬ್ರಹ್ಮಾವರ: ನೂತನ ವಿದ್ಯಾರ್ಥಿಗಳನ್ನು ಗುರುತಿಸಿ ಸ್ವಾಗತಿಸುವ ” ಸ್ಪರ್ಶ 2024″ ಕಾರ್ಯಕ್ರಮವನ್ನು ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿ ಸಂಭ್ರಮದಿಂದ ಆಚರಿಸಲಾಯಿತು .ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಟಿ, ಗಾಯಕಿ, ರೂಪದರ್ಶಿಯಾಗಿರುವ ಮಹಿಮಾ ಭಂಡಾರಿ ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿದ್ಯಾರ್ಥಿ ಜೀವನ ಎಂಬುದು ಅನೇಕ ಅವಕಾಶಗಳನ್ನು ಹೊಂದಿರುವ ವೇದಿಕೆ ಇದನ್ನು ಸರಿಯಾಗಿ ಉಪಯೋಗಿಸಿದರೆ ಜೀವನದಲ್ಲಿ ಉತ್ತುಂಗಕ್ಕೇರಲು ಸಾಧ್ಯವಿದೆ‌ ಎಂದರು. ವಿದ್ಯಾ ಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಸಂಸ್ಥಾಪಕರಾದ ಸುಬ್ರಮಣ್ಯ ಅವರು ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಹಿತನುಡಿಗಳನ್ನಾಡಿ ಶುಭ ಹಾರೈಸಿದರು. ನಿರ್ದೇಶಿಕಿಯಾದ ಮಮತಾ, ಪ್ರಾಂಶುಪಾಲರಾದ ರವಿರಾಜ್ ಶೆಟ್ಟಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಉಪ ಪ್ರಾಂಶುಪಾಲರಾದ ಸುಜಾತ ಸಾಂಸ್ಕೃತಿಕ ಸಂಯೋಜಕಿಯಾಗಿರುವ ರಾಝಿಕ ,ಎಲ್ಲಾ ಉಪನ್ಯಾಸಕರು ಹಾಗೂ ಉಪನ್ಯಾಸಕೇತರರು ,…

Read More

ಭ್ರಷ್ಟಾಚಾರ ತಡೆ ಬಗ್ಗೆ ಮಕ್ಕಳಿಗೆ ಸಂತೋಷ್ ಹೆಗಡೆ ಪಾಠ – ದುರಾಸೆಯೇ ಭ್ರಷ್ಟಾಚಾರದ ಮೂಲ, ತೃಪ್ತಿ ಇದ್ದರೆ ಭ್ರಷ್ಟಾಚಾರ ಆಗಲ್ಲ – ಭ್ರಷ್ಟಾಚಾರ ಎಲ್ಲಾ ಕ್ಷೇತ್ರದಲ್ಲೂ ಇದೆ, ಯುವ ಜನರಿಂದ ಮಾತ್ರ ಬದಲಾವಣೆ ಸಾಧ್ಯ – ನ್ಯಾ.ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆ ಮನದ ಮಾತು NAMMUR EXPRESS NEWS ಹಾಸನ: ಲೋಕಾಯುಕ್ತಕ್ಕೆ ಬರುವವರೆಗೆ ನಾನು ಕೂಪ ಮಂಡೂಕನಾಗಿದ್ದೆ. ಅಲ್ಲಿಗೆ ಬಂದ ಬಳಿಕ ಬಹಳಷ್ಟು ಅನ್ಯಾಯ ಕಂಡೆ. ಭ್ರಷ್ಟಾಚಾರ ಹೆಚ್ಚುತ್ತಿರುವುದಕ್ಕೆ ವ್ಯಕ್ತಿ. ತಪ್ಪಲ್ಲ, ಸಮಾಜದ ತಪ್ಪು ಎಂದು ನಿವೃತ್ತ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆ ಹೇಳಿದ್ದಾರೆ. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವದ ಹಾಸನದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಹೆಚ್.ಕೆ.ಎಸ್ ಪಿ ಯು ಕಾಲೇಜು, ಹಾಸನ ಇಲ್ಲಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಮಾತು ವಿಶೇಷ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ದೃಷ್ಟಿಯಿಂದ 1834ನೇ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ…

Read More

ಮೈಸೂರು ದಸರಾ ಆನೆಗಳ ಜತೆ ಸೆಲ್ಫೀ, ರೀಲ್ಸ್ ಮಾಡೋ ಹಾಗಿಲ್ಲ! – ಜನರ ಫೋಟೋ ಹುಚ್ಚಿನಿಂದ ವಿಚಲಿತವಾಗಿ ವರ್ತಿಸುತ್ತಿರುವ ಆನೆಗಳು – ರೀಲ್ಸ್ ಫೋಟೊ ವಿರುದ್ಧ ಸರಕಾರದ ಎಚ್ಚರಿಕೆ! NAMMUR EXPRESS NEWS ಬೆಂಗಳೂರು: ಮೈಸೂರು ದಸರಾ ಆನೆಗಳ ಮುಂದೆ ಪೋಟೋ, ರೀಲ್ಸ್ ಮಾಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಪರ ಮುಖ್ಯ ಕಾರ್ಯದರ್ಶಿ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಗೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದು ಸೂಚಿಸಿದ್ದಾರೆ. ಮೈಸೂರು ದಸರಾ ಮಹೋತ್ಸವದ ಪ್ರಧಾನ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಬಂದು ಪ್ರಸ್ತುತ ಅರಮನೆಯ ಆವರಣದಲ್ಲಿ ಬೀಡುಬಿಟ್ಟಿರುವ ಸಾಕಾನೆಗಳ ಬಳಿ ಫೋಟೋಶೂಟ್ ಮತ್ತು ರೀಲ್ಸ್ ಮಾಡಲು ಅಧಿಕಾರಿಗಳೇ ಅವಕಾಶ ನೀಡಿದ್ದು, ಇದರಿಂದ ಆನೆಗಳು ವಿಚಲಿತವಾಗಿ ವರ್ತಿಸುತ್ತಿವೆ. ಕಳೆದ ಕೆಲವು ದಿನಗಳ ಹಿಂದೆ ಕಾಂಜನ್‌ ಮತ್ತು ಧನಂಜಯ ಆನೆಗಳ ನಡುವೆ ಕಾದಾಟ ಆಗಲು ಇದೂ ಒಂದು ಕಾರಣವಾಗಿದೆ ಎಂದು…

Read More

ಉಡುಪಿ, ದಕ್ಷಿಣ ಕನ್ನಡದಲ್ಲಿ ಮಳೆ! – ಹಗಲು ರಾತ್ರಿ ಮಳೆ: ಜನರ ಪರದಾಟ – ಎಲ್ಲಾ ರಸ್ತೆಗಳಲ್ಲಿ ಹೊಂಡ ಗುಂಡಿ ಜನರಿಗೆ ಕಷ್ಟ NAMMUR EXPRESS NEWS ಮಂಗಳೂರು/ಉಡುಪಿ: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಸೋಮವಾರ ಉತ್ತಮ ಮಳೆಯಾಗಿದೆ. ಮಂಗಳವಾರ ಮುಂಜಾನೆ ವೇಳೆ ಅಲ್ಲಲ್ಲಿ ಮಳೆ ಸುರಿದಿದೆ. ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಮಧ್ಯಾಹ್ನ ಬಳಿಕ ಸಾಧಾರಣ ಮಳೆಯಾಗಿದೆ. ಪುತ್ತೂರು, ಬೆಳ್ಳಾರೆ ಭಾಗದಲ್ಲಿ ಬಿರುಸಿನ ಮಳೆಯಾಗಿದೆ. ಬಂಟ್ವಾಳದಲ್ಲಿ ರಾತ್ರಿ ಮಳೆ ಆರಂಭವಾಗಿದೆ. ಮಂಗಳೂರು ನಗರ, ಗ್ರಾಮಾಂತರ ಭಾಗದಲ್ಲಿ ಹಗಲು ವೇಳೆಯಲ್ಲಿ ಒಂದರೆಡು ಬಾರಿ ಮಳೆಯಾಗಿದ್ದು, ಸಂಜೆ, ರಾತ್ರಿ ವೇಳೆ ಮಳೆ ಪ್ರಮಾಣ ತುಸು ಹೆಚ್ಚಾಗಿದೆ. ಉಡುಪಿ, ಕಾರ್ಕಳ, ಹೆಬ್ರಿ ಭಾಗದಲ್ಲಿ ಬೆಳಗ್ಗೆ ಭಾರೀ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ರಾತ್ರಿ- ಮುಂಜಾನೆ ವೇಳೆ ಸುರಿಯುತ್ತಿದೆ. ಹಗಲು ವೇಳೆಯಲ್ಲೂ ಮಳೆಯಲ್ಲೂ ಸ್ವಲ್ಪ ಮಳೆಯಾಗಿರುವುದರಿಂದ ವಾತಾವರಣ ತುಸು ತಂಪಾಗಿದೆ. ಸದ್ಯ ಸೆ. 25ಕ್ಕೆ ಎಲ್ಲೊ ಅಲರ್ಟ್‌ ನೀಡಲಾಗಿದೆ. ಕರಾವಳಿ ರಸ್ತೆಗಳ ಕಥೆ ಕೇಳೋರು ಇಲ್ಲ!…

Read More

ಅಭಿವೃದ್ದಿಗೆ ಅನುದಾನ ತರಲಾಗದ ಶಾಸಕರ ವಿರುದ್ಧ ಆಕ್ರೋಶ..!! * ಚಿಕ್ಕಮಗಳೂರು ಶಾಸಕರ ವಿರುದ್ಧ ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ವಾಗ್ದಾಳಿ * ಯಾರದ್ದೋ ದುಡ್ಡಲ್ಲಿ ಎಲ್ಲಮನ ಜಾತ್ರೆ ಮಾಡಬೇಡಿ, ಬದಲಾಯಿಸದೇ ಮಂಜೂರಾದ ಕಾಮಗಾರಿಗಳನ್ನೇ ಕೈಗೊಳ್ಳಿ – ಸಂತೋಷ್ ಕೋಟ್ಯಾನ್ NAMMUR EXPRESS NEWS ಚಿಕ್ಕಮಗಳೂರು: ಕ್ಷೇತ್ರಕ್ಕೆ ಹೊಸ ಅನುದಾನ ತಂದು ಕಾಮಗಾರಿ ನಡೆಸಿ ಕ್ಷೇತ್ರದ ಅಭಿವೃದ್ಧಿ ನಡೆಸಲು ಸಾಧ್ಯವಿಲ್ಲದೇ ಕ್ಷೇತ್ರದ ಶಾಸಕರು ಈ ಹಿಂದೆ ಮಂಜೂರಾಗಿದ್ದ 17 ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಮೂಲಕ ಕ್ಷೇತ್ರಕ್ಕೆ ಅನ್ಯಾಯವೆಸಗಿದ್ದಾರೆ ಎಂದು ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಆರೋಪಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸಂತೋಷ್ ಗಾಳಿಕೆರೆಯ ಭೀಮಗಾಧ ತೀರ್ಥ ಸೌಂದರ್ಯೀಕರಣ,ಕವಿಕಲ್ ಗಂಡಿಯಲ್ಲಿ ಆಂಜನೇಯ ಸ್ವಾಮಿ ಪ್ರತಿಷ್ಠಾಪನೆ ಚಿಕ್ಕಮಗಳೂರಿನ ಗೃಹಮಂಡಳಿ ಬಡಾವಣೆ ಸಮೀಪದ ಹುಣಸೇಹಳ್ಳಿ ಕೆರೆಯ ಪಕ್ಕದ ಈಶ್ವರ ದೇವಸ್ಥಾನದ ಜೀರ್ಣೋದ್ಧಾರ ಸೇರಿದಂತೆ ಒಟ್ಟು 17 ವಿವಿಧ ಅಭಿವೃದ್ಧಿ ಕಾಮಗಾರಿಗೆ ಈ ಹಿಂದೆ ನಮ್ಮ ಶಾಸಕರು ಹಾಗೂ ಸಚಿವರಾಗಿದ್ದ ಡಾ.ಸಿ.ಟಿ ರವಿಯವರ ಶ್ರಮದಿಂದ ಸರ್ಕಾರ…

Read More

ಶಾಸಕ ಮುನಿರತ್ನ ವಿರುದ್ಧ ಒಕ್ಕಲಿಗರ ಕಿಚ್ಚು! – ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡ ಆಕ್ರೋಶ – ಶಿವಮೊಗ್ಗ ಒಕ್ಕಲಿಗರ ಸಂಘದಿಂದ ಖಂಡನೆ: ಏನಿದು ಪ್ರಕರಣ? NAMMUR EXPRESS NEWS ಶಿವಮೊಗ್ಗ: ಮಾಜಿ ಸಚಿವ, ಶಾಸಕ ಮುನಿರತ್ನ ಕಳಂಕ ಕೆಲಸ ಖಂಡಿಸಿ ಡಿ ಸಿ ಸಿ ಬ್ಯಾಂಕ್ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡರ ಪತ್ರಿಕಾಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಡನ್ನು ಕಟ್ಟುವಲ್ಲಿ, ಸಾಹಿತ್ಯಕ, ಸಾಂಸ್ಕೃತಿಕ ಗೌರವ ತಂದುಕೊಟ್ಟ ಒಕ್ಕಲಿಗರ ವಿರುದ್ಧ ಮಾಜಿ ಸಚಿವ, ಶಾಸಕ ಮುನಿರತ್ನ ಕಳಂಕ ತರುವ ಮಾತನಾಡಿದ್ದಾರೆ. ದಲಿತರ ಬಗ್ಗೆಯೂ ಹೇರಳವಾಗಿ, ಕೆಟ್ಟದಾಗಿ ಮಾತಾಡಿದ್ದಾರೆ. ಈ ಹಿಂದೆಯೂ ಹೀಗೆಲ್ಲ ಮಾತಾಡಿ ಬುದ್ದಿ ಹೇಳಿಸಿಕೊಂಡಿದ್ದರು. ಉರಿಗೌಡ, ನಂಜೇಗೌಡರ ಕುರಿತು ಸಿನೆಮಾ ತೆಗೆಯುವ ಮಾತಾಡಿ ಮುನಿರತ್ನ ಒಕ್ಕಲಿಗ ಸಮಾಜದ ವಿರುದ್ಧ ಕಿಡಿಕಾರಿದ್ದರು. ಕುವೆಂಪು, ಕೆಂಪೇಗೌಡರ ಒಕ್ಕಲಿಗ ಸಮಾಜ ಎಲ್ಲರಿಗೂ ಪ್ರೀತಿಯಿಂದ ನೋಡುವವರು. ಮುನಿರತ್ನ ಕಡೆಯಿಂದ ಸ್ವಾಭಿಮಾನಕ್ಕೆ ಪೆಟ್ಟುಕೊಡುವ ಕೆಲಸವಾಗಿದೆ ಎಂದು ಆರೋಪಿಸಿದರು. ಹೆಣ್ಣನ್ನು…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನೀವು ಕೆಲವು ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಉದ್ಯೋಗದಲ್ಲಿ ಬಡ್ತಿಯೊಂದಿಗೆ ಸಂಪೂರ್ಣ ಜವಾಬ್ದಾರಿಯನ್ನು ನೀವು ಪಡೆಯುತ್ತೀರಿ. ವ್ಯಾಪಾರ ಪರಿಸ್ಥಿತಿ ಸುಧಾರಿಸಲಿದೆ. ರಾಜಕೀಯದಲ್ಲಿ ಸ್ಥಾನಮಾನ ಮತ್ತು ಸ್ಥಾನಮಾನ ಹೆಚ್ಚುತ್ತದೆ. ಕುಟುಂಬದೊಂದಿಗೆ ಪ್ರವಾಸವನ್ನು ಆನಂದಿಸುವಿರಿ. ** ವೃಷಭ ರಾಶಿ : ಇಂದು ನಿಮ್ಮ ಶತ್ರುಗಳ ವಿರುದ್ಧ ಜಯ ದೊರೆಯಲಿದೆ. ವ್ಯಾಪಾರದಲ್ಲಿ ಪ್ರಗತಿಯೊಂದಿಗೆ ಉದ್ಯೋಗ ವಿಸ್ತರಣೆಯಾಗಲಿದೆ. ಉದ್ಯೋಗದಲ್ಲಿ ಬಡ್ತಿಯೊಂದಿಗೆ ನೀವು ಬಯಸಿದ ಸ್ಥಾನವನ್ನು ಪಡೆಯುತ್ತೀರಿ. ಸಾಲ ಪಡೆಯುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ನಿಮ್ಮ ಸಂಬಂಧಿಕರಿಂದ ಕೆಲವು ಶುಭ ಕಾರ್ಯಕ್ರಮಗಳಿಗೆ ನೀವು ಆಹ್ವಾನವನ್ನು ಸ್ವೀಕರಿಸುತ್ತೀರಿ.…

Read More

ಮೋದಿಯವರ ಜನ್ಮ ದಿನದ ಪ್ರಯುಕ್ತ ಸೇವಾ ಪಾಕ್ಷಿಕ ಅಭಿಯಾನ – 15 ದಿನಗಳ ಕಾಲ ವಿವಿಧ ಸೇವಾ ಚಟುವಟಿಕೆ – ಶೃಂಗೇರಿ, ಕೊಪ್ಪದಲ್ಲಿ ಯುವ ಮೋರ್ಚಾದಿಂದ ರಕ್ತದಾನ ಶಿಬಿರ NAMMUR EXPRESS NEWS ಶೃಂಗೇರಿ: ಪ್ರಧಾನಿ ನರೇಂದ್ರ ಮೋದಿಯವರ 74 ನೇ ಜನ್ಮದಿನದ ಅಂಗವಾಗಿ ದೇಶದಾದ್ಯಂತ ಹಮ್ಮಿಕೊಂಡಿರುವ ಹದಿನೈದು ದಿನಗಳ ಕಾಲ ನಡೆಯಲಿರುವ ಸೇವಾ ಪಾಕ್ಷಿಕ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಶೃಂಗೇರಿ ಹಾಗೂ ಕೊಪ್ಪ ತಾಲೂಕಿನಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಶೃಂಗೇರಿಯ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ತಾಲೂಕಿನ ಬಿಜೆಪಿ ಕಾರ್ಯಕರ್ತರು,ಪ್ರಮುಖರು ಪಾಲ್ಗೊಂಡಿದ್ದರು.ಕಾರ್ಯಕ್ರಮ ಉದ್ಘಾಟಿಸಿದ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಲಕ್ಷ್ಮೀನಾರಯಣರವರು ರಕ್ತದಾನ ಮಹತ್ವ ಹಾಗೂ ಅದರಿಂದಾಗುವ ಲಾಭಗಳ ಬಗ್ಗೆ ಮಾಹಿತಿ ನೀಡಿದರು. ಬಿಜೆಪಿ ಎಸ್‌.ಸಿ ಮೋರ್ಚಾದ ರಾಜ್ಯವಕ್ತಾರರಾದ ಡಾ.ಬಿ ಶಿವಶಂಕರ್ ಪಾಲ್ಗೊಂಡು 58ನೇ ಬಾರಿ ರಕ್ತದಾನ ಮಾಡಿದರು, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸುನಿಲ್ ಸಂಪೆಕೊಳಲು,ಜಿಲ್ಲಾ ಯುವ ಮೋರ್ಚಾ…

Read More