ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ – ಸಂಸದ ರಾಘವೇಂದ್ರ ಅವರಿಂದ ಸದಸ್ಯತ್ವ ನೊಂದಣಿ – ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಹಳ್ಳಿ ಹಳ್ಳಿಯಲ್ಲಿ ಚಾಲನೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಬಿಜೆಪಿ ವತಿಯಿಂದ ಬಸ್ ಸ್ಟಾಂಡ್ ಆವರಣದಲ್ಲಿ ಸದಸ್ಯತ್ವ ನೊಂದಾವಣಿಗೆ , ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ ಹಾಗೂ ತೀರ್ಥಹಳ್ಳಿ ಶಾಸಕರು ಆರಗ ಜ್ಞಾನೇಂದ್ರ ಚಾಲನೆ ನೀಡಿದರು. ಈಗಾಗಲೇ ಹಳ್ಳಿ ಹಳ್ಳಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ಇದೀಗ ತೀರ್ಥಹಳ್ಳಿಯಲ್ಲಿ ವೇಗ ಸಿಕ್ಕಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ರಾಘವೇಂದ್ರ ಅವರು, ಹತ್ತು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದೇಶದ ಅಭಿವೃದ್ಧಿಗಾಗಿ ಶ್ರಮವಹಿಸಿದ್ದಾರೆ.ಇದೀಗ 10 ವರ್ಷದ ನಂತರ ನಾವು ಕೂಡ ದೇಶಕ್ಕಾಗಿ ಶ್ರಮ ಪಡ ಬೇಕಾಗಿದೆ. ಪ್ರಪಂಚದಲ್ಲಿ ಹೆಚ್ಚಿನ ಸದಸ್ಯತ್ವವನ್ನು ಹೊಂದಿರುವ ಪಕ್ಷ, ಸದಾ ದೇಶದ ಚಿಂತನೆಯನ್ನು ಹೊಂದಿರುವ ಏಕೈಕಪಕ್ಷ ಎಂದು ಬಿಂಬಿಸಿಕೊಳ್ಳುತ್ತದೆ. ಪರಿಸರದ ಬಗ್ಗೆ ಕಾಳಜಿ ವಹಿಸಿ ಹಲವಾರು ಕಾರ್ಯಕ್ರಮದೊಂದಿಗೆ ಪಾಲ್ಗೊಳ್ಳುವ ಮೂಲಕ ಕರ್ತವ್ಯ ಮೆರೆಯುವುದು…
Author: Nammur Express Admin
ತೀರ್ಥಹಳ್ಳಿ ಟಾಪ್ ನ್ಯೂಸ್ ಬ್ಯಾಂಕಿನ ಕೋಟಿ ಕೋಟಿ ನುಂಗಿದ್ದ ಆರಗದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ! – ಆನ್ಸೆನ್ ವ್ಯವಹಾರದಲ್ಲಿ ಹಣ ಕಳೆದುಕೊಂಡಿದ್ದ: ಆತ್ಮಹತ್ಯೆಗೆ ಮುಂದಾಗಿದ್ದ – ತೂದೂರು ಕಾಡಿನಲ್ಲಿ ಸಿಕ್ಕ ಶವದ ಗುರುತು ಪತ್ತೆ! – ತೀರ್ಥಹಳ್ಳಿಯ ಮೇಳಿಗೆಯಲ್ಲಿ ಹೆಬ್ಬಾವು ಹಿಡಿದ ಯುವಕರು! – ತೀರ್ಥಹಳ್ಳಿಯಿಂದ ಅಕ್ರಮ ಗೋ ಸಾಗಣೆ? NAMMUR EXPRESS NEWS ತೀರ್ಥಹಳ್ಳಿ: ಹಣ ಮಾಡುವ ದುರಾಸೆಗೆ ಬಿದ್ದು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದ ಗ್ರಾಹಕರ ಕೋಟಿ ಕೋಟಿ ಹಣ ವಂಚನೆ ಮಾಡಿದ್ದ ಬ್ಯಾಂಕ್ ಉದ್ಯೋಗಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಹಿಂದೆ ಸಾಗರದಲ್ಲಿ ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಇದೀಗ ದುರಂತ ಅಂತ್ಯ ಕಂಡಿದ್ದಾನೆ. ತೀರ್ಥಹಳ್ಳಿ ತಾಲೂಕಿನ ಆರಗದ ಸುನಿಲ್ (35 ವರ್ಷ) ಯಡೂರಿನ ಕೆನರಾ ಬ್ಯಾಂಕ್ ನಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ 8 ಅಕೌಂಟ್ ಗಳಿಂದ ಠೇವಣಿ ಇಟ್ಟಿದ್ದ ಸುಮಾರು 1 ಕೋಟಿಗೂ ಅಧಿಕ ಹಣವನ್ನು ವಂಚಿಸಿದ್ದ. ಈ ಬಗ್ಗೆ 2023 ಡಿಸೆಂಬರ್ ನಲ್ಲಿ ನಗರ ಪೊಲೀಸ್…
ಉಚಿತ ಶ್ರವಣ ತಪಾಸಣೆ ಮತ್ತು ಬಹಳ ಕಡಿಮೆ ಬೆಲೆಯಲ್ಲಿ ಶ್ರವಣ ಯಂತ್ರಗಳ ವಿತರಣೆ – ಅಂತರಾಷ್ಟ್ರೀಯ ಸಂಸ್ಥೆಯಲ್ಲಿ ಅನುಭವ ಪಡೆದಿರುವ ವೈದ್ಯರಿಂದ ಈ ಶಿಬಿರ – ಅಂತರಾಷ್ಟ್ರೀಯ ಸಂಸ್ಥೆಗಳ ಶ್ರವಣ ಯಂತ್ರಗಳನ್ನ ನೀಡಲಿದ್ದಾರೆ – ಈ ಶಿಬಿರದಲ್ಲಿ ಸಂಸ್ಥೆಯವರು ತಮ್ಮ ದೇಣಿಗೆ ಮೊತ್ತದಿಂದ ಶೇಕಡ 40 ರಿಂದ 50 % ರಷ್ಟು ಯಂತ್ರದ ವೆಚ್ಚವನ್ನ ಬರಿಸಲಿದ್ದಾರೆ NAMMUR EXPRESS NEWS ಭಂಡಾರಿ ಸಮಾಜ ಸಂಘ (ರಿ.) ತೀರ್ಥಹಳ್ಳಿ ತಾಲೂಕು ಇವರ ಆಶ್ರಯದಲ್ಲಿ ಮುಖ್ಯಸ್ಥರಾದ ಲವಕುಮಾರ್ ವಿಘ್ನಹರ್ತ ಸಂಸ್ಥೆಯ ಸಹಯೋಗದೊಂದಿಗೆ ಉಚಿತ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆಭಂಡಾರಿ ಸಮಾಜ ಸಂಘ ಅನೇಕ ಸಾಮಾಜಿಕ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದು ಈಗ ಅವರು ವಿಘ್ನಹರ್ತ ಶ್ರವಣ ಚಿಕಿತ್ಸಾಲಯ ಸಹಯೋಗದೊಂದಿಗೆ ಶ್ರವಣದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಉಚಿತ ಶಿಬಿರವನ್ನು ಮಾಡುತ್ತಿದ್ದು ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ತಮ್ಮ ಭಂಡಾರಿ ಸಮಾಜ ಸಂಘ ಸಂಸ್ಥೆಯಿಂದ ಶ್ರವಣದ ಯಂತ್ರಕ್ಕೆ (Hearing Machine)…
ತೀರ್ಥಹಳ್ಳಿ ಅಶೋಕ್ ನಾಯಕ್ ಅವರಿಗೆ ಛಾಯಾ ಸಾಧಕ ಪ್ರಶಸ್ತಿ – ಬೆಂಗಳೂರಲ್ಲಿ ನಡೆದ ಡಿಜಿ ಇಮೇಜ್ 2024 ಕಾರ್ಯಕ್ರಮದಲ್ಲಿ ಪ್ರಶಸ್ತಿ – ಛಾಯಾಗ್ರಹಣದಲ್ಲಿ ಮಾಡಿರುವ ಸಾಧನೆ, ಸೇವೆ ಪರಿಗಣಿಸಿ ಸನ್ಮಾನ – ಮಲೆನಾಡಿನಲ್ಲಿ ಫೋಟೋಗ್ರಫಿ ಮೂಲಕ ಹೆಸರು ಅಶೋಕ್ ನಾಯಕ್ NAMMUR EXPRESS NEWS ಬೆಂಗಳೂರು/ ತೀರ್ಥಹಳ್ಳಿ: ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘ (ನೋ) ಇದರ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ಖ್ಯಾತ ಫೋಟೋಗ್ರಾಫರ್ ಸುರಭಿ ಸ್ಟುಡಿಯೋ ಮಾಲೀಕ ಅಶೋಕ್ ನಾಯಕ್ ಅವರಿಗೆ ಛಾಯಾ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಶೋಕ್ ವಿ ನಾಯಕ್ ಶಿವಮೊಗ್ಗ ಜಿಲ್ಲೆಯ ಛಾಯಾಗ್ರಹಣ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದಲೂ ವೃತ್ತಿಪರರಾಗಿ ಕಾರ್ಯನಿರ್ವಹಿಸುತ್ತಿದ್ದು, ಛಾಯಾಗ್ರಹಣದಲ್ಲಿ ಮಾಡಿರುವ ಸಾಧನೆ, ಸೇವೆಯನ್ನು ಪರಿಗಣಿಸಿ, ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದಿಂದ ಈ ಪ್ರಶಸ್ತಿ ನೀಡಲಾಗಿದೆ. ಡಿಜಿ ಇಮೇಜ್ 2024ರ ವಸ್ತು ಪ್ರದರ್ಶನದಲ್ಲಿ ಶ್ರೀಯುತರಿಗೆ “ಛಾಯಾಸಾದಕ” ಪ್ರಶಸ್ತಿಯನ್ನು ನೀಡಿ ನಾಡಿನ ಸಮಸ್ತ ಛಾಯಾಗ್ರಾಹಕರ ಪರವಾಗಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಅಶೋಕ್ ಅವರು ಹಲವು ದಶಕಗಳಿಂದ ತೀರ್ಥಹಳ್ಳಿ ಸೇರಿ…
ಕರಾವಳಿಯಲ್ಲಿ ಏನೇನ್ ಆಯ್ತು..! ಟಾಪ್ ನ್ಯೂಸ್ * ಉಡುಪಿ: ಮದ್ಯ ಸೇವಿಸಿ ಬಸ್ ಚಾಲನೆ: ಕೇಸು ದಾಖಲು * ಮುಲ್ಕಿ: ಕೊರಗ ಸಮುದಾಯದಿಂದ ಅಹೋರಾತ್ರಿ ಪ್ರತಿಭಟನೆ!! * ಕುಂದಾಪುರ:ಸಾರ್ವಜನಿಕ ಶಾಂತಿಭಂಗ, ವ್ಯಕ್ತಿ ಅರೆಸ್ಟ್! * ಕುಂದಾಪುರ: ಬಾರ್‌ನಲ್ಲಿ ಏಕಾಏಕಿ ಹಲ್ಲೆ, ಪ್ರಕರಣ ದಾಖಲು! * ಮರಳು ಅಕ್ರಮ ಸಾಗಾಟ: ಟಿಪ್ಪರ್ ವಶ NAMMUR EXPRESS NEWS ಮುಲ್ಕಿ: ನಮಗೆ ಬದುಕಲು ಯೋಗ್ಯವಾದ ಭೂಮಿಯ ಹಕ್ಕುಪತ್ರ ಕೊಡಿ ಎಂದು ಸಹಕಾರವನ್ನು ಆಗ್ರಹಿಸಿ ಕರ್ನಾಟಕ- ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಹಾಗೂ ಕಿನ್ನಿಗೋಳಿ ಕೊರಗ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ಮುಲ್ಕಿ ತಾಲೂಕು ಕಚೇರಿಯ ಎದುರು ಕೊರಗ ಸಮುದಾಯದ ಮುಖಂಡರು ಅಹೋರಾತ್ರಿ ಪ್ರತಿಭಟನೆ ಎರಡನೇ ದಿನಕ್ಕೆ ಮುಂದುವರಿದಿದೆ. ತಮಗೆ ಕೃಷಿ ಭೂಮಿ ಕೊಡಿಸುವಂತೆ ಆಗ್ರಹಿಸಿ 30ಕ್ಕೂ ಕೊರಗ ಕುಟುಂಬಗಳು 20 ವರ್ಷಗಳಿಂದ ಸರ್ಕಾರಕ್ಕೆ ಆಗ್ರಹಿಸುತ್ತಾ ಬಂದಿದ್ದೇವೆ. ಕೊಲ್ಲೂರು ಪದವಿನಲ್ಲಿ ಯಾವುದಕ್ಕೂ ಪ್ರಯೋಜನವಿಲ್ಲದ ಜಾಗ ನೀಡಲಾಗಿದೆ ಎಳತ್ತೂರು ಗ್ರಾಮದಲ್ಲಿ ಏಳು ಎಕರೆ ಜಾಗ ಗುರುತಿಸಿದ್ದು, ಈ…
ಪುಟ್ ಬೊರ್ಡ್‌ಗಳಲ್ಲಿ ನಿಂತು ಪ್ರಯಾಣ ಮಾಡಿದ್ರೆ ಬೀಳುತ್ತೆ ಪೆಟ್ಟು! – ಮಂಗಳೂರಲ್ಲಿ ಸಿಟಿ ಬಸ್‌ಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರು – ನಿಯಮ ಬಾಹಿರ ಪಯಣ ಹುಷಾರ್ ಹುಷಾರ್ NAMMUR EXPRESS NEWS ಮಂಗಳೂರು: ಮಂಗಳೂರು ನಗರದ ಸಿಟಿ ಬಸ್‌ಗಳಲ್ಲಿ ಫುಟ್ ಬೋರ್ಡಿನಲ್ಲಿ ನಿಂತು ಪ್ರಯಾಣಿಸುವವರೆ ಹುಷಾರ್. ಸಂಚಾರಿ ಇಲಾಖೆಯ ಪೊಲೀಸರರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಾರ್ಕಳ ಸೇರಿ ಕರಾವಳಿಯಲ್ಲಿ ಇಂಥ ಘಟನೆಗಳಿಂದ ಅನೇಕರು ಜೀವ ಕಳೆದುಕೊಂಡಿದ್ದಾರೆ. ಮಂಗಳೂರು ನಗರದಲ್ಲಿ ಪ್ರಯಾಣಿಕರನ್ನು ಪುಟ್ ಬೊರ್ಡ್ ಗಳಲ್ಲಿ ನಿಲ್ಲಿಸಿಕೊಂಡು ಅಪಾಯಕಾರಿಯಾಗಿ ಸಂಚರಿಸುತ್ತಿದ್ದ ಬಸ್ ಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರಿ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಜೊತೆಗೆ ಬಸ್ ಚಾಲಕ ಮತ್ತು ನಿರ್ವಾಹಕರಲ್ಲಿ ಸಂಚಾರ ನಿಯಮಗಳ ಪಾಲನೆ ಮತ್ತು ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಕಾರ್ಯ ಕೂಡ ನಡೆಸಲಾಗುತ್ತಿದೆ. ಕಳೆದ ವಾರ ಉಳ್ಳಾಲ ವ್ಯಾಪ್ತಿಯಲ್ಲಿ ಖಾಸಾಗಿ ಬಸ್ ನ ಫುಡ್ ಬೋರ್ಡಿನಲ್ಲಿ ನೇತಾಡಿಕೊಂಡು ಸಂಚರಿಸುತ್ತಿದ್ದ ಶಾಲಾ ವಿದ್ಯಾರ್ಥಿಯೋರ್ವ ರಸ್ತೆಗೆ ಎಸೆಯಲ್ಪಟ್ಟಿದ್ದ. ಈ ವಿಡಿಯೋ…
ಶಿಕ್ಷಕರ ಸೌಹಾರ್ದ ಭವನ ಉದ್ಘಾಟನೆಗೆ ಸಿದ್ಧ – ತೀರ್ಥಹಳ್ಳಿಯಲ್ಲೇ ಅತೀ ದೊಡ್ಡ ಕಟ್ಟಡ: ಸರ್ವರಿಗೂ ಸ್ವಾಗತ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಪ್ರಾರಂಭವಾಗಿ ರಾಜ್ಯಮಟ್ಟದಲ್ಲಿ ಹೆಸರು ಮಾಡುತ್ತಿರುವ ರಾಜ್ಯ ಪ್ರಾಥಮಿಕ ಶಿಕ್ಷಕರ ಸೌಹಾರ್ದ ಸಹಕಾರಿಯ ನೂತನ ಕಚೇರಿ ಶಿಕ್ಷಕರ ಸೌಹಾರ್ದ ಭವನ ಉದ್ಘಾಟನೆ ಸೆ. 22ರಂದು ತೀರ್ಥಹಳ್ಳಿಯಲ್ಲಿ ನಡೆಯಲಿದೆ. ಈಗಾಗಲೇ ಕಟ್ಟಡ ಅಲಂಕಾರ ಕಾರ್ಯ ಶುರುವಾಗಿದೆ. ಶುಕ್ರವಾರ ಮತ್ತು ಶನಿವಾರ ವಿವಿಧ ಹೋಮ ಪೂಜೆಗಳು ನಡೆದವು.ಈ ಕಾರ್ಯಕ್ರಮಕ್ಕೆ ಎಲ್ಲಾ ಷೇರುದಾರರು, ಜನರನ್ನು ಶಿಕ್ಷಕರ ಸೌಹಾರ್ದ ಸಹಕಾರಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಹಾಗೂ ಎಲ್ಲಾ ನಿರ್ದೇಶಕರು, ಸಿಬ್ಬಂದಿ ಸ್ವಾಗತಿಸಿದ್ದಾರೆ. ಸೆ.22ರಂದು ಶಿಕ್ಷಕರ ಸೌಹಾರ್ದ ಭವನದ ಉದ್ಘಾಟನೆ ಮಹಾಸಭೆ, ಪ್ರತಿಭಾ ಪುರಸ್ಕಾರ, ನಿವೃತ್ತ ಶಿಕ್ಷಕರಿಗೆ ಸನ್ಮಾನ ನಡೆಯಲಿದೆ. “ಶಿಕ್ಷಕರ ಸೌಹಾರ್ದಭವನ” ಕಟ್ಟಡವು ರಾಜ್ಯದಲ್ಲಿಯೇ ಪ್ರಾಥಮಿಕ ಶಾಲಾ ಶಿಕ್ಷಕರ ಮೊದಲ ಹೆಮ್ಮೆಯ ಕಟ್ಟಡವೆಂದು ಹೇಳಬಹುದಾಗಿದೆ. 2008ರಲ್ಲಿ ಸಂಸ್ಥೆ 490 ಸದಸ್ಯರನ್ನು ಒಳಗೊಂಡು ತೀರ್ಥಹಳ್ಳಿ ತಾಲೂಕಿಗೆ ಮಾತ್ರ ಸೀಮಿತವಾಗಿತ್ತು. 2015ರಲ್ಲಿ ಸೌಹಾರ್ದವಾಗಿ ಐದು ಜಿಲ್ಲೆಗೆ ವಿಸ್ತರಣೆಯಾಗಿದ್ದು,…
ದಸರಾ ಮಹೋತ್ಸವಕ್ಕೆ ಮೈಸೂರು ಸಜ್ಜು! – ಅರಮನೆ ಅಲಂಕಾರಕ್ಕೆ 1 ಲಕ್ಷ ಬಲ್ಬ್ – ಅರಮನೆ ಆವರಣದಲ್ಲಿ ದಸರಾ ಆನೆಗಳ ಗಲಾಟೆ – ಶೃಂಗೇರಿ, ಹೊರನಾಡು, ಉಡುಪಿ, ಮಂಗಳೂರು ಸೇರಿ ರಾಜ್ಯದೆಲ್ಲ ಕಡೆ ದಸರಾ ಸಂಭ್ರಮ NAMMUR EXPRESS NEWS ಮೈಸೂರು: ಅ.3ರಿಂದ 12ರವರೆಗೆ ನಡೆಯಲಿರುವ ದಸರಾ ಮಹೋತ್ಸವಕ್ಕೆ ಮೈಸೂರು ಸಜ್ಜುಗೊಂಡಿದೆ. ಮೈಸೂರು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಹೆಸರಾಂತ ಹಿರಿಯ ಸಾಹಿತಿ ಪ್ರೊ. ಹಂ.ಪ.ನಾಗರಾಜಯ್ಯ ಅವರು ಉದ್ಘಾಟಿಸಲಿದ್ದಾರೆ. – ಅರಮನೆಯ ಅಂದ ಮತ್ತಷ್ಟು ಹೆಚ್ಚಿಸಲಿವೆ ವಿದ್ಯುತ್ ದೀಪ ಅರಮನೆಗೆ ಅಳವಡಿಸಿರುವ 20 ಸಾವಿರ ಬಲ್ಬ್ ಬದಲಾಯಿಸುತ್ತಿದ್ದಾರೆ. ಒಂದು ಲಕ್ಷ ವಿದ್ಯುತ್ ದೀಪಗಳಿಂದ ಅಲಂಕಾರಿಸಲಾಗಿದೆ. ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಇಲ್ಲಿಗೆ ಅಳವಡಿಸಿರುವ ದೀಪಗಳನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತೆ. ಅದೇ ರೀತಿ ಈ ಬಾರಿಯುವ ವಿದ್ಯುತ್ ದೀಪಗಳನ್ನು ಸರಿಪಡಿಸುವ ಕಾರ್ಯವನ್ನ ಮಾಡಲಾಗುತ್ತಿದೆ. ಈ ವರ್ಷ ಸುಮಾರು 15-20 ಸಾವಿರದಷ್ಟು ವಿದ್ಯುತ್ ದೀಪಗಳು ಕೆಟ್ಟು ಹೋಗಿದೆ. ಇಡೀ ಅರಮನೆಯ ಪ್ರಾಂಗಣದಲ್ಲಿ…
ಅ.3 ರಿಂದ 20 ತನಕ ಮಕ್ಕಳಿಗೆ ದಸರಾ ರಜೆ – ಸರ್ಕಾರಿ-ಖಾಸಗಿ ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಣೆ – ಕರಾವಳಿ ಸೇರಿ ರಾಜ್ಯದ ಎಲ್ಲಾ ಶಾಲೆಗಳಿಗೆ ಒಂದೇ ಮಾರ್ಗದರ್ಶಿ NAMMUR EXPRESS NEWS ಬೆಂಗಳೂರು:2024-25ನೇ ಶೈಕ್ಷಣಿಕ ಸಾಲಿನ ಕರ್ನಾಟಕದ ಸರ್ಕಾರಿ-ಖಾಸಗಿ ಶಾಲಾ ಮಕ್ಕಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ದಸರಾ ರಜೆ ಘೋಷಿಸಿದೆ. ಇಡೀ ಕರ್ನಾಟಕದ ಶಾಲೆಗಳಿಗೆ ಒಂದೇ ಮಾರ್ಗದರ್ಶಿ ರೂಪಿಸಿದೆ. ನಾಡ ಹಬ್ಬ ದಸರಾ ಹಬ್ಬಕ್ಕೆ ಮೈಸೂರಿನಲ್ಲಿ ಅದ್ಧೂರಿ ಸಿದ್ದತೆಗಳು ನಡೆದಿವೆ. ಇನ್ನೊಂದೆಡೆ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲಾ ಮಕ್ಕಳಿಗೆ ಅಕ್ಟೋಬರ್ 3 ರಿಂದ 20 ತನಕ ದಸರಾ ರಜೆ ಘೋಷಿಸಿದ್ದು, ಇಡೀ ಕರ್ನಾಟಕದ ಶಾಲೆಗಳಿಗೆ ಒಂದೇ ಮಾರ್ಗದರ್ಶಿ ರೂಪಿಸಿದೆ. ಈ ಹಿಂದೆ ಕರಾವಳಿ ಭಾಗದಲ್ಲಿ ದಸರಾ ರಜೆಯಲ್ಲಿ ಕೊಂಚ ಮಾರ್ಪಾಡು ಆಗುತ್ತಿದ್ದ, ಈ ಬಾರಿ ಯಾವುದೇ ಮಾರ್ಪಾಡು ಆಗಿಲ್ಲ. ಇಡೀ ಕರ್ನಾಟಕದ ಎಲ್ಲಾ ಶಾಲೆಗಳಿಗೆ ಒಂದೇ ಮಾರ್ಗದರ್ಶಿ ರೂಪಿಸಲಾಗಿದೆ. ಅಕ್ಟೋಬರ್ 21ರಿಂದ 2ನೇ ಅವಧಿಯು ಪ್ರಾರಂಭವಾಗಲಿದ್ದು, 2025ರ…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಶನಿದೇವನ ಕೃಪೆಯಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ನಿಮ್ಮ ಈ ದಿನ ಆರ್ಥಿಕವಾಗಿ ಉತ್ತಮವಾಗಿರುತ್ತದೆ. ಮೊದಲಿಗಿಂತ ಆರೋಗ್ಯ ಸುಧಾರಿಸುತ್ತದೆ. ಉದ್ಯೋಗದಲ್ಲಿ ಹಿರಿಯರ ಸಹಾಯದಿಂದ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಬಹುದು. ಕುಟುಂಬದೊಂದಿಗೆ ಆಹ್ಲಾದಕರ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಇಂದು ನೀವು ನಿಮ್ಮ ಸಂಗಾತಿಯಿಂದ ಅಚ್ಚರಿಯ ಉಡುಗೊರೆಯನ್ನು ಪಡೆಯಬಹುದು. ಇಂದು ವ್ಯಾಪಾರಸ್ಥರಿಗೆ ಅನುಕೂಲಕರ ದಿನವಾಗಿದೆ. ನಿಮ್ಮ ಸ್ನೇಹಿತರ ಆರೋಗ್ಯದ ಬಗ್ಗೆ ನೀವು ಚಿಂತೆ ಮಾಡಬೇಕಾಗಬಹುದು. ** ವೃಷಭ ರಾಶಿ : ಇಂದು ನಿಮ್ಮನ್ನು ಯಶಸ್ಸು ಹುಡುಕಿ ಬರಲಿದೆ. ಆದರೆ ಏಕಕಾಲದಲ್ಲಿ ಹಲವು ಕೆಲಸಗಳನ್ನು ಮಾಡುವುದರಿಂದ ನಿಮ್ಮ ಆತಂಕ ಹೆಚ್ಚಾಗಬಹುದು. ಇಂದು ವ್ಯಾಪಾರಸ್ಥರಿಗೆ ಸ್ವಲ್ಪ ಕಠಿಣ…