* ಕುಂದಾಪುರ:ಯುವಕನ ಮೃತದೇಹ ಕೋಟೇಶ್ವರ ಕೋಟಿಲಿಂಗೇಶ್ವರ ಕೆರೆಯಲ್ಲಿ ಪತ್ತೆ!! * ಕಾಸರಗೋಡು:ರಿಕ್ಷಾ ಚಾಲಕ ಕೊಲೆ ಪ್ರಕರಣ!! * ಮುಲ್ಕಿ: ಕಳವು ಪ್ರಕರಣ,ನಕಲಿ ಪಾಸ್‌ಪೋರ್ಟ್!! * ಸುಳ್ಯ: ನಿಯಂತ್ರಣ ತಪ್ಪಿ ಕಾರು ಪಲ್ಟಿ,ಚಾಲಕಿ ಬಚಾವ್! NAMMUR EXPRESS NEWS ಕುಂದಾಪುರ : ಎಂ.ಬಿ.ಬಿ.ಎಸ್ ಮುಗಿಸಿ ಎಂ.ಎಸ್ ಮಾಡಲು ಸಿದ್ಧತೆ ನಡೆಸುತ್ತಿದ್ದ ಯುವಕನ ಮೃತದೇಹ ಕೋಟೇಶ್ವರ ಕೋಟಿಲಿಂಗೇಶ್ವರ ಕೆರೆಯಲ್ಲಿ ಸೆ. 19ರಂದು ಮುಂಜಾನೆ ಪತ್ತೆಯಾಗಿದೆ. ಹಂಗಳೂರು ಪಂಚಾಯತ್ ಬಳಿಯ ನಿವಾಸಿ ನಾರಾಯಣ ಎಂಬುವರ ಮಗ ಗೌರೀಶ್ ಗಾಣಿಗ (28) ಎಂಬಾತನ ಮೃತದೇಹ ಪತ್ತೆಯಾಗಿದ್ದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕೋಟೇಶ್ವರ ಕೆರೆಯಲ್ಲಿ ಹುಡುಕಾಡಿದಾಗ ಗೌರೀಶ್ ಮೃತ ದೇಹ ಪತ್ತೆಯಾಗಿದೆ.ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ. ಕಾಸರಗೋಡು:ರಿಕ್ಷಾ ಚಾಲಕ ಕೊಲೆ ಪ್ರಕರಣ!! ಕಾಸರಗೋಡು: ರಿಕ್ಷಾ ಚಾಲಕ ಉಪ್ಪಳ ಹಿದಾಯತ್ ನಗರದ ಸಕೀರ್ ಮಂಜಿಲ್‌ನ ಜಮ್ಮಿ ಯಾನೆ ಮುಹಮ್ಮದ್ ಸಮೀರ್ (26) ಅವರನ್ನು…
Author: Nammur Express Admin
ಕರ್ನಾಟಕ ಪ್ರೈಮ್ ನ್ಯೂಸ್ ದಾವಣಗೆರೆ ಗಣೇಶ ವಿಸರ್ಜನೆ ವೇಳೆ ಕಿರಿಕ್! – ಕಿಡಿಗೇಡಿಗಳಿಂದ ಕಲ್ಲುತೂರಾಟ: ಇಬ್ಬರು ಪೊಲೀಸರಿಗೆ ಗಾಯ – ಪ್ರಚೋದನಾತ್ಮಕ ಭಾಷಣವೇ ಗಲಾಟೆಗೆ ಕಾರಣ! – ಚಿಕ್ಕಮಗಳೂರು: ಫ್ರೀ ಪ್ಯಾಲೆಸ್ತೀನ್ ಬರಹ ಮತ್ತು ಧ್ವಜವಿರುವ ಟೀ ಶರ್ಟ್ ಧರಿಸಿ ಪೋಸ್ಟರ್ – ಪ್ಯಾಲೆಸ್ತೀನ್ ಬಾವುಟ ವಿವಾದ ದಿನೇ ದಿನೇ ಹೆಚ್ಚಳ NAMMUR EXPRESS NEWS ದಾವಣಗೆರೆ: ದಾವಣಗೆರೆಯ ಬೇತೂರ ರಸ್ತೆಯ ಗಣೇಶ ವಿಸರ್ಜನೆ ವೇಳೆ ಕಲ್ಲುತೂರಾಟ ನಡೆದಿದ್ದು, ಘಟನೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಗುರುಬಸವರಾಜ್ ಹಾಗೂ ಕ್ರೈಂ ವಿಭಾಗದ ಪೊಲೀಸ್ ಕಾನ್ಸ್ ಸ್ಟೇಬಲ್ ರಘು ಎಂಬುವವರಿಗೆ ಸಣ್ಣಪುಟ್ಟ ಗಾಯವಾಗಿದೆ. ಇನ್ನು ಕಲ್ಲುತೂರಿದ ಆರೋಪಿಗಳಿಗೆ ಪೊಲೀಸರು ಶೋಧಕಾರ್ಯ ನಡೆಸಿದರು, ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅಂಗಡಿ ಮುಗ್ಗಟ್ಟುಗಳನ್ನ ಮುಚ್ಚಿಸಿದ ಪೊಲೀಸರು ಇನ್ನು ಕಲ್ಲು ತೂರಿದ ಕಿಡಿಗೇಡಿಗಳನ್ನ ಪೊಲೀಸರು ಓಡಿಸಿಕೊಂಡು ಹೋಗಿದ್ದು, ಸಿಸಿಟಿವಿ ದೃಶ್ಯ ಸಂಗ್ರಹಿಸಿ ಆರೋಪಿಗಳ ಪತ್ತೆಕಾರ್ಯ ನಡೆದಿದೆ. ಸಧ್ಯ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡಕು ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ಬಹಳ ಶುಭ ದಿನವಾಗಲಿದೆ. ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಲಿದೆ. ಆದರೆ ಅಜ್ಞಾತ ಭಯದಿಂದ ಮನಸ್ಸು ತೊಂದರೆಗೊಳಗಾಗುತ್ತದೆ. ಮಾನಸಿಕ ಗೊಂದಲ ಉಂಟಾಗಲಿದೆ. ಭಾವನೆಗಳಲ್ಲಿ ಏರುಪೇರು ಸಾಧ್ಯ. ಕೆಲಸದ ಸಂಬಂಧದಲ್ಲಿ ಪ್ರಯಾಣಿಸುವ ಅವಕಾಶವೂ ಇರುತ್ತದೆ. ಆಸ್ತಿ ಅಥವಾ ವಾಹನ ಖರೀದಿ ಸಾಧ್ಯ. ಇಂದು ನಿಮ್ಮ ಫಿಟ್ನೆಸ್ ಮೇಲೆ ಕೇಂದ್ರೀಕರಿಸಿ. ** ವೃಷಭ ರಾಶಿ : ನೀವು ಇಂದು ಬಹಳ ಜಾಗರೂಕರಾಗಿರಬೇಕು. ಆರ್ಥಿಕ ನಷ್ಟದ ಲಕ್ಷಣಗಳಿವೆ. ವೃತ್ತಿ ಜೀವನದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ. ಹೊಸ ಸವಾಲುಗಳನ್ನು ನಿಭಾಯಿಸಲು ನೀವು ಆತ್ಮವಿಶ್ವಾಸವನ್ನು ತೋರುತ್ತೀರಿ. ಕುಟುಂಬದ ಸದಸ್ಯರೊಂದಿಗೆ ಹಣಕ್ಕೆ ಸಂಬಂಧಿಸಿದಂತೆ…
ಎಲ್ಲೆಡೆ ಮಹಾಲಯ ಅಮಾವಾಸ್ಯೆ ಶುರು – ಪಿತೃ ಪಕ್ಷದಲ್ಲಿ ಪೂರ್ವಜರ ತೃಪ್ತಿಪಡಿಸುವ ಪೂರ್ವಕಾಲ – ಅ.2ವರೆಗೆ ಮಹಾಲಯ ಅಮಾವಾಸ್ಯೆ NAMMUR EXPRESS NEWS ಮನುಷ್ಯ ಈ ಭೂಮಿಗೆ ಬರಲು ಭಗವಂತ ಕಾರಣನಾದರೂ, ಲೌಕಿಕವಾಗಿ ಅವರವರ ಮಾತಾ ಪಿತೃಗಳು ಕಾರಣ. ಆದ್ದರಿಂದ ಅವರ ಋಣವನ್ನು ಜನ್ಮದಾರಭ್ಯ ಪೂಜಿಸಿದರೂ ತೀರಿಸುವುದು ಅಸಾಧ್ಯ. ದೇವರನ್ನು ನಿತ್ಯವೂ ಪೂಜಿಸುವಂತೆ ಅಗಲಿರುವ ತಂದೆ-ತಾಯಿಯರನ್ನು ನಿತ್ಯವೂ ಪೂಜಿಸುವುದು ಎಲ್ಲರಿಗೂ ಸಾಧ್ಯವಾಗದಿರಬಹುದೆಂಬ ಕಾರಣಕ್ಕೆ ನಮ್ಮ ಹಿರಿಯರು, ವರ್ಷ ಋತುವಿನ ಬಾದ್ರಪದ ಮಾಸದ ಪಾಡ್ಯದಿಂದ ಮಹಾಲಯ ಅಮಾವಾಸ್ಯೆವರೆಗೆ ಪಿತೃಗಳನ್ನು ಪೂಜಿಸಲು ಸಮಯ ನಿಗದಿ ಮಾಡಿದ್ದಾರೆ. ಈ 15 ದಿನಗಳ ಕಾಲವೂ ಪಿತೃಪೂಜೆಗೆ ಶ್ರೇಷ್ಠವಾಗಿದ್ದು, ಕೊನೇ ಪಕ್ಷ ಈ ಅವಧಿಯ ಒಂದು ದಿನವಾದರೂ ಪಿತೃಗಳಿಗೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿ ಭಗವಂತನ ಸಾನ್ನಿಧ್ಯದಲ್ಲಿ ಶಾಶ್ವತ ಸ್ಥಾನವನ್ನು ಒದಗಿಸುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಬೇಕೆಂಬ ನಿಯಮವಿದೆ. ಪಿತೃ ಪಕ್ಷದಲ್ಲಿ ಪೂರ್ವಜರ ಆತ್ಮ ಶಾಿಾಿ ಶ್ರಾದ್ಧ ಆಚರಣೆಗಳನ್ನು ಮಾಡಲಾಗುತ್ತದೆ. ಇದನ್ನು ಸರ್ವ ಪಿತೃ ಅಮಾವಾಸ್ಯೆ ಎಂದೂ ಕರೆಯುತ್ತಾರೆ.ಪಿತೃ ಪಕ್ಷವು…
ಅಡಿಕೆ ದರ ಎಷ್ಟಿದೆ? – ಬೆಟ್ಟೆ ಎಷ್ಟು? ರಾಶಿ ಎಷ್ಟು? – ಅಡಿಕೆಯಾ ದರ ಇಳಿಕೆಯಾಗುತ್ತಾ? NAMMUR EXPRESS NEWS ಸರಕು 52100-87550 ಬೆಟ್ಟೆ 47300-52800-54700 ರಾಶಿ 40096-47800-49009 ಗೊರಬಲು 20009-32600-33109
ರಾಜ್ಯಮಟ್ಟದಲ್ಲಿ ಟೀಚರ್ಸ್ ಸೊಸೈಟಿ ಸಾಧನೆ – ರಾಜ್ಯ ಪ್ರಾಥಮಿಕ ಶಿಕ್ಷಕರ ಸೌಹಾರ್ದ ಸಹಕಾರಿಯ ಹಿರಿಮೆ – ಸೆ. 22ಕ್ಕೆ ಶಿಕ್ಷಕರ ಸೌಹಾರ್ದ ಭವನ ಉದ್ಘಾಟನೆ: ಸ್ವಾಗತ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಪ್ರಾರಂಭವಾಗಿ ರಾಜ್ಯಮಟ್ಟದಲ್ಲಿ ಹೆಸರು ಮಾಡುತ್ತಿರುವ ರಾಜ್ಯ ಪ್ರಾಥಮಿಕ ಶಿಕ್ಷಕರ ಸೌಹಾರ್ದ ಸಹಕಾರಿಯ ನೂತನ ಕಚೇರಿ ಶಿಕ್ಷಕರ ಸೌಹಾರ್ದ ಭವನ ಉದ್ಘಾಟನೆ ಸೆ. 22ರಂದು ತೀರ್ಥಹಳ್ಳಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಎಲ್ಲಾ ಷೇರುದಾರರು, ಜನರನ್ನು ಶಿಕ್ಷಕರ ಸೌಹಾರ್ದ ಸಹಕಾರಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಸ್ವಾಗತಿಸಿದ್ದಾರೆ. ಸೆ.22ರಂದು ಶಿಕ್ಷಕರ ಸೌಹಾರ್ದ ಭವನದ ಉದ್ಘಾಟನೆ ಮಹಾಸಭೆ, ಪ್ರತಿಭಾ ಪುರಸ್ಕಾರ, ನಿವೃತ್ತ ಶಿಕ್ಷಕರಿಗೆ ಸನ್ಮಾನ ನಡೆಯಲಿದೆ. ತೀರ್ಥಹಳ್ಳಿ, ಆಗುಂಬೆ ಸರ್ಕಲ್ಲಿನ ಟಿ,ಎಸ್,ಟಿ, ಹೈಪರ್ ಮಾರ್ಟ್ ಾಂಣದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಅವರು ಮಾತನಾಡಿದರು. ಪ್ರಧಾನ ಶಾಖೆಯ ಕಟ್ಟಡಕ್ಕೆ ತೀರ್ಥಹಳ್ಳಿ ಪಟ್ಟಣದ ಹತ್ತಿರ ಕುವೆಂಪು ನಗರದಲ್ಲಿ 5 ವರ್ಷಗಳ ಹಿಂದೆ 7 ನಿವೇಶನವನ್ನು ಖರೀದಿಸಿ, ಏಕ ನಿವೇಶನವನ್ನಾಗಿ ಪರಿವರ್ತಿಸಿ ಈಗ ಸಹಕಾರಿಗೆ ಸ್ವಂತ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ.…
ಈಗ ಎಲ್ಲೆಡೆ ಫೇಮಸ್ ಕನ್ನಡ ಮಾತ್ರೆ ಚೀಟಿ ಡಾಕ್ಟರ್! – ಕನ್ನಡಲ್ಲೇ ಚೀಟಿ ಬರೆದು, ಜನಮನ್ನಣೆ ಗಳಿಸಿದ ವೈದ್ಯ ಡಾ.ಸಂಜಯ್ – ಕೀಲು ಮೂಳೆ ತಜ್ಞ ಡಾ.ಸಂಜಯ್ ಅವರಿಗೆ ವ್ಯಾಪಕ ಜನಮನ್ನಣೆ NAMMUR EXPRESS NEWS ಹೊಸದುರ್ಗ : ಚಿತ್ರದುರ್ಗ ಜಿಲ್ಲೆಯಲ್ಲಿಯೇ ಹೆಸರಾಂತ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗದ ವಿವರ, ಮಾತ್ರೆ ಸೇರಿದಂತೆ ಇನ್ನಿತರೆ ಅಂಶಗಳನ್ನು ಕನ್ನಡದಲ್ಲಿ ಬರೆದು, ಪ್ರತಿ ರೋಗಿಗಳಿಗೂ ರೋಗ ಹಾಗೂ ಮಾತ್ರೆಗಳ ಬಗ್ಗೆ ಮಾಹಿತಿ ತಿಳಿಯುವಂತೆ ಮಾಡಿದ ಸ್ವಚ್ಛ ಕನ್ನಡದ ಕೀಲು ಮೂಳೆ ತಜ್ಞ ಡಾ.ಸಂಜಯ್ ಅವರಿಗೆ ವ್ಯಾಪಕ ಜನಮನ್ನಣೆ ದೊರೆತಿದೆ. ಇವರು ಕನ್ನಡದಲ್ಲಿ ಬರೆದಿರುವ ಔಷಧ ಚೀಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈಗ ಇಡೀ ಕರುನಾಡಲ್ಲಿ ಅವರ ಕನ್ನಡ ಪ್ರೇಮ ಹೆಸರಾಗಿದೆ. ಗುರುವಾರದಿಂದಲೇ ಇವರು ಕನ್ನಡದಲ್ಲಿ ಔಷಧ ಚೀಟಿ ಬರೆಯಲು ಆರಂಭಿಸಿದ್ದಾರೆ. ಡಾ. ಸಂಜಯ್ ಪ್ರೇರಣೆಯಿಂದ ಮತ್ತೊಬ್ಬ ವೈದ್ಯ ಕಿವು ಮೂಗು, ಗಂಟಲು ತಜ್ಞ ಡಾ.ಶಿವಪ್ರಕಾಶ್ ಕೂಡ ಕನ್ನಡದಲ್ಲೇ ಔಷಧ ಚೀಟಿ ಬರೆಯುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ…
ಹೊರನಾಡಲ್ಲೂ ವಸ್ತ್ರ ಸಂಹಿತೆ ಜಾರಿಯಾಯ್ತು! – ದೇವರ ದರ್ಶನ ಪಡೆಯಲು ಸಾಂಪ್ರದಾಯಿಕ ಉಡುಪು ಕಡ್ಡಾಯ – ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಹೆಂಗಸರು ಮಾತ್ರವಲ್ಲದೇ ಗಂಡಸರಿಗೂ ಹೊಸ ನಿಯಮ NAMMUR EXPRESS NEWS ಹೊರನಾಡು: ಹಿಂದೂ ದೇವಾಲಯಕ್ಕೆ ಭೇಟಿ ನೀಡಿದಾಗ, ಸಾಧಾರಣವಾದ, ಸಂಪ್ರದಾಯಯಿಕ ಬಟ್ಟೆಗಳನ್ನು ಧರಿಸುವುದು ಉತ್ತಮವಾಗಿರುತ್ತದೆ. ಹೀಗಾಗಿ ಈಗಾಗಲೇ ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ಬಂದಿದೆ. ಶೃಂಗೇರಿ ಬಳಿಕ ಈಗ ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ದೇವಾಲಯ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಕೂಡ ವಸ್ತ್ರ ಸಂಹಿತೆ ಜಾರಿಗೆ ಬಂದಿದೆ. ಯಾವ ಯಾವ ಬಟ್ಟೆ ಹಾಕಬೇಕು? ಗಂಡಸರು-ಗಂಡು ಮಕ್ಕಳು ಶಲ್ಯ, ಪ್ಯಾಂಟ್, ಪಂಚೆ ಹಾಗೂ ಹೆಂಗಸರು, ಹೆಣ್ಣು-ಮಕ್ಕಳು ಸೀರೆ ಹಾಗೂ ಚೂಡಿದಾರ್ ಗಳಂತಹ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿಕೊಂಡು ಬರುವವರಿಗೆ ಮಾತ್ರ ದೇವಸ್ಥಾನದ ಒಳಗೆ ಹೋಗಿ ಶ್ರೀದೇವರ ದರ್ಶನ ಮಾಡಲು ಅವಕಾಶವಿರುತ್ತದೆ ಎಂದು ಹಾಗೂ ಇವುಗಳನ್ನು ಅನುಸರಿಸಬೇಕಾಗಿ ಆದಿಶಕ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರ ದೇವಸ್ಥಾನ ಶ್ರೀ ್ಷೇ್ರ ಹೊರನಾಡು ದೇವಾಲಯದಲ್ಲಿ ವಿಜ್ಞಾಪನೆ ಮಾಡಿದ್ದಾರೆ. ಭಕ್ತಾದಿಗಳು ತಪ್ಪದೇ…
ಚಿಕ್ಕಮಗಳೂರು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ – ಮೆರವಣಿಗೆಯಲ್ಲಿ ಭಾಗಿಯಾದ ಸಾವಿರಾರು ಜನ – 11 ದಿನಗಳ ಸಂಭ್ರಮದ ಗಣೇಶೋತ್ಸವಕ್ಕೆ ಅದ್ದೂರಿ ತೆರೆ NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ಬೋಳಾರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ 11ನೇ ವರ್ಷದ ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಆ ಮೂಲಕ 11 ದಿನಗಳ ಸಂಭ್ರಮದ ಗಣೇಶೋತ್ಸವಕ್ಕೆ ತೆರೆ ಬಿದ್ದಿದೆ. ಬುಧವಾರ ಮದ್ಯಾಹ್ನ ಚಾಲನೆಗೊಂಡ ಮೆರಣವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಡಿಜೆ,ನಾಸಿಕ್ ನಂತಹ ವಿವಿಧ ಕಲಾ ತಂಡಗಳೊಂದಿಗೆ ಸಾಗಿ ಗಣಪತಿ ವಿಸರ್ಜನೆ ಮಾಡಲಾಯಿತು. ಸಾರ್ವಜನಿಕರು ಸಂಭ್ರಮದಿಂದ ಪಾಲ್ಗೊಂಡು ಡಿಜೆ ಜೊತೆ ಹಜಜೆ ಹಕದರು. ಮಹಿಳೆಯರಿಗೆ ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಲಾಗಿತ್ತು. ವಿಸರ್ಜನಾ ಮೆರವಣಿಗೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಭಾಗಿಯಾಗಿದ್ದರು. ಚಿಕ್ಕಮಗಳೂರು ನಗರ ಪೂರ್ತಿ ಕೇಸರಿಮಯವಾಗಿ ಸಿಂಗಾರ ಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೋಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಕರ್ನಾಟಕ ಟಾಪ್ ನ್ಯೂಸ್ ಸಿನಿಮಾ ಹೆಸರಲ್ಲಿ ಹನಿ ಟ್ರ್ಯಾಪ್: ನಟಿ ಆ್ಯಂಡ್ ಗ್ಯಾಂಗ್ ವಿರುದ್ಧ ಕೇಸ್! * ಹೃದಯಾಘಾತ:ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನಿಧನ! * ಸೆಕ್ಸ್ ಕೇಸ್: ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಅರೆಸ್ಟ್! * ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು * ನಟ ದರ್ಶನ್‌ಗೆ ಟಿವಿ ಭಾಗ್ಯ: ಅಮ್ಮನ ನೋಡಿ ಕಣ್ಣೀರು! * ಡ್ರಗ್ಸ್ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವ ಹೆಜ್ಜೆ! NAMMUR EXPRESS NEWS ಬೆಂಗಳೂರು: ಸಿನಿಮಾ ಆಸೆ ತೋರಿಸಿ ಹನಿಟ್ರ್ಯಾಪ್ ಮೂಲಕ ಖೆಡ್ಡಾಗೆ ಕೆಡವಿ 40 ಲಕ್ಷ ರೂ. ದೋಚಿದ ಯುವತಿ ಆ್ಯಂಡ್ ಗ್ಯಾಂಗ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಿನಿಮಾ ಮಾಡುವುದಾಗಿ ನಂಬಿಸಿದ್ದ ಯುವತಿಯ ಮಾತು ನಂಬಿ ಆ ಬ್ಯುಸಿನೆಸ್‌ಮೆನ್ ಕೂಡ ಆಕೆಯ ಸಂಗ ಮಾಡಿಕೊಡಿದ್ದನು. ಇದಾದ ಕೆಲ ದಿನಗಳ ನಂತರ ಡೈರೆಕ್ಟ್ ಆಗಿ ಹಣದ ಬೇಿಕೆ ಟ್ಟಿದ್ದಳು. ಹಣ ಾಪಸ್ ಕೇಳಿದಾಗ ತನ್ನ ರೂಮಿಗೆ ಕರೆಸಿಕೊಂಡು, ಬಲವಂತವಾಗಿ ಲೈಂಗಿಕ…