ಕೊಂಕಣಿ ಚಲನ ಚಿತ್ರ ‘ಪಯಣ್’ ಸದ್ದು! – ಸೆ.20ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜು – ಮುಂಬಯಿ ಹಾಗೂ ಗಲ್ಫ್ ದೇಶಗಳಲ್ಲಿ ಬಿಡುಗಡೆ NAMMUR EXPRESS NEWS ಮಂಗಳೂರು: ಸಂಗೀತ್ ಘರ್ ಮಂಗಳೂರು ಬ್ಯಾನರ್‌ನಡಿ ತಯಾರಾದ ಕೊಂಕಣಿ ಚಲನ ಚಿತ್ರ ‘ಪಯಣ್’ (ಪ್ರಯಾಣ) ಈಗ ಸೆ.20ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಮಂಗಳೂರು, ಸುರತ್ಕಲ್, ಪಡುಬಿದ್ರಿ, ಉಡುಪಿ, ಕುಂದಾಪುರ ಹಾಗೂ ಪುತ್ತೂರಿನಲ್ಲಿ ಏಕಕಾಲದಲ್ಲಿ ಪಯಣ್ ಬಿಡುಗಡೆಯಾಗಲಿದ್ದು, ಮುಂಬಯಿ ಹಾಗೂ ಗಲ್ಫ್ ದೇಶಗಳಲ್ಲಿ ಬಿಡುಗಡೆಯಾಗುವ ದಿನಾಂಕಗಳೂ ನಿಗದಿಯಾಗಿವೆ. ಈಗಾಗಲೇ ಮಂಗಳೂರು ಮತ್ತು ಪುತ್ತೂರಿನಲ್ಲಿ ಪ್ರೀಮಿಯರ್ ಶೋಗಳು ಹೌಸ್‌ಫುಲ್ ಪ್ರದರ್ಶನ ಕಂಡಿವೆ ಮತ್ತು ವೀಕ್ಷಕರಿಂದ ಕೊಂಕಣಿ ಚಲನಚಿತ್ರ ದ ಇತಿಹಾಸದಲ್ಲಿ ‘ಪಯಣ್’ ಒಂದು ಮೈಲಿಗಲ್ು ಎಂದು ಳಲಗುತ್ತಿದೆ. ನೀಟಾ ಜೋನ್ ಪೆರಿಸ್ ಈ ಚಿತ್ರದ ನಿರ್ಮಾಪಕರು ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕ ಜೊಯೆಲ್ ಪಿರೇ ರಾ ಬರೆದಿದ್ದು, ಮೆಲ್ವಿನ್ ಪೆರಿಸ್ ಸಾಹಿತ್ಯ ಹಾಗೂ ರೋಶನ್ ಡಿ’ಸೋಜಾ ಆಂಜೆಲೊರ್ ಸಂಗೀತ ನಿರ್ದೇಶನ ನೀಡಿದ್ದಾರೆ. ಪುತ್ತೂರಿನ ಯುವ ಪ್ರತಿಭೆ ಬ್ರಾಯನ್…
Author: Nammur Express Admin
ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ದಾಖಲೆ! – ಒಂದೇ ದಿನದಲ್ಲಿ 17 ಬೀದಿ ನಾಯಿಗಳ ಶಸ್ತ್ರ ಚಿಕಿತ್ಸೆ ಮಾಡಿದ ರಾಮಕೃಷ್ಣಪುರದ ಡಾ.ಅರವಿಂದ್ – ಶ್ವಾನ ಸೇವೆ ಮೂಲಕ ರಾಜ್ಯಕ್ಕೆ ಮಾದರಿ ಆಯ್ತು ಸಮರ್ಪಣಾ ತಂಡ NAMMUR EXPRESS NEWS ತೀರ್ಥಹಳ್ಳಿ: ಸಮರ್ಪಣಾ ತಂಡ ರಾಮಕೃಷ್ಣಪುರದ ಆಶ್ರಯದಲ್ಲಿ ಹಾಗೂ ಪಶು ಚಿಕಿತ್ಸಾಲಯದ ಸಹಯೋಗದೊಂದಿಗೆ ನಡೆದ ಎರಡನೇ ವರ್ಷದ ಬೀದಿ ಹಾಗೂ ದೇಸಿ ತಳಿಯ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆಯಲ್ಲಿ ಸುಮಾರು 17 ಬೀದಿ ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಬೀದಿ ನಾಯಿಗಳಿಂದ ಮಕ್ಕಳಿಗೆ ಹಾಗೂ ಸವಾರರಿಗೆ ಅಪಾಯವಾಗುವುದನ್ನು ಮನಗಂಡ ಸಮರ್ಪಣಾ ತಂಡ ತನ್ನೂರಿನ ವ್ಯಾಪ್ತಿಯಲ್ಲಿ ಈ ಕಾರ್ಯ ಕೈಗೊಂಡು ಇಡೀ ಊರಿನ ಮೆಚ್ಚುಗೆಗೆ ಪಾತ್ರವಾಯಿತು. ವಿಶೇಷವಾಗಿ ಡಾ. ಅರವಿಂದ್ ಕೂಡಾ ಇದೇ ತಂಡದ ಸದಸ್ಯರಾಗಿ ಸತತ ಎರಡನೇ ವರ್ಷದಲ್ಲೂ ಒಬ್ಬರೇ ಡಾಕ್ಟರ್ ದಾಖಲೆ ಸಂಖ್ಯೆಯ ಆಪರೇಷನ್ ಮಾಡಿ ನೋಡುಗರ ಹುಬ್ಬೇರುವಂತೆ ಮಾಡಿದರು. ಒಂದು ದಿನಕ್ಕೆ 17 ಆಪರೇಷನ್ ಮಾಡುವುದು…
ಕರಾವಳಿ ಟಾಪ್ ನ್ಯೂಸ್ * ಮಂಗಳೂರು: ಮಾದಕ ವಸ್ತು ಮಾರಾಟ,ಮೂವರು ವಶ! * ಕಬ್ಬಿಣದ ಗೇಟ್ ಬಿದ್ದು ಮಗು ಧಾರುಣ ಸಾವು * ಕೆ ಎಸ್ ಆರ್ ಟಿ ಸಿ ಬಸ್ ನಿರ್ಲಕ್ಷ್ಯತನ: ಗಾಯ NAMMUR EXPRESS NEWS ಮಂಗಳೂರು: ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಕಾವೂರು ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಕಾಸರಗೋಡಿನ ಮೇಘನಾಥ ಟಿ. (19), ಕೇರಳ ಕಯ್ಯೂರಿನ ಶ್ರೀಶಾಂತ್(18) ಮತ್ತು ಸಯೂಜ್ ಎಂ(20) ಎಂದು ಗುರುತಿಸಲಾಗಿದೆ. ಇವರಿಂದ ಮಾದಕ ವಸ್ತು ವಶಪಡಿಸಲಾಗಿದೆ. ಪೊಲೀಸರು ಮಾಲಾಡಿ ಕೋರ್ಟ್ ರಸ್ತೆ ಕಡೆಯಿಂದ ಗೋಲ್ಡ್‌ಫಿಂಚ್ ಮೈದಾನದ ಕಡೆಗೆ ಹೋಗುತ್ತಿದ್ದಾಗ ಅನುಮಾನಾಸ್ಪದವಾಗಿ ನಿಂತಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಿಸಿದರು. ಈ ವೇಳೆ ಆರೋಪಿಗಳು ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. * ಕಬ್ಬಿಣದ ಗೇಟ್ ಮೇಲೆ ಬಿದ್ದು,ಅಂಬೆಗಾಲಿಡುವ ಮಗು ಸಾವು ಕಾಸರಗೋಡು: ಆಟವಾಡುತ್ತಿದ್ದ ವೇಳೆ ಕಬ್ಬಿಣದ ಗೇಟ್ ದೇಹದ ಮೇಲೆ ಬಿದ್ದು ಅಂಬೆಗಾಲಿಡುವ…
ಮತ್ತೆ ಅಡಿಕೆ ಬೆಲೆ ಕುಸಿತ?! – 17000 ಟನ್ ಅಡಿಕೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ – ಮತ್ತೆ ಶುರುವಾಗಿದೆ ಭೂತಾನ್ ಅಡಿಕೆ ಭೂತ! NAMMUR EXPRESS NEWS ನವದೆಹಲಿ: ಭೂತಾನ್ ನಿಂದ ಕನಿಷ್ಠ ಬೆಲೆ ನಿಯಮಗಳಿಲ್ಲದೆ 17000 ಟನ್ ಅಡಿಕೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕೇಂದ್ರ ವಾಣಿಜ್ಯ ಸಚಿವಾಲಯ ವ್ಯಾಪ್ತಿಯ ವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಒಡಿಶಾದ ಹತಿಸರ್ ಮತ್ತು ಅಸ್ಸಾಂನ ದರ್‌ಂಗಾದ ಕಸ್ಟಮ್ಸ್ ಕೇಂದ್ರದ ಮೂಲಕ ಈ ಅಡಿಕೆ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಲಾಗುತ್ತದೆ. 2022 ರ ಸೆಪ್ಟೆಂಬರ್ ನಲ್ಲಿ ಪ್ರತಿ ವರ್ಷ ಭೂತಾನ್ ನಿಂದ ಕನಿಷ್ಠ ಆಮದು ಬೆಲೆ ಇಲ್ಲದೆ 17000 ಟನ್ ಅಡಿಕೆ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಲಾಯಿತು. ಕೇಂದ್ರ ಸರ್ಕಾರ 2017ರಲ್ಲಿ ಪ್ರತಿ ಕೆಜಿ ಅಡಿಕೆಗೆ 251 ರೂ. ಕನಿಷ್ಠ ಆಮದು ಬೆಲೆ ನಿಗದಿಪಡಿಸಿದ್ದು, ಕಳೆದ ವರ್ಷ ಈ ದರವನ್ನು ಕೆಜಿಗೆ 351…
ತೋಟ ನಿರ್ವಹಣೆ ಮತ್ತು ಅಭಿವೃದ್ಧಿ ಸೇವೆಗಳು – ಕೃಷಿ ತೋಟಗಳನ್ನು ನಿರ್ವಹಣೆ ಮಾಡುವುದು ಇಂದಿನ ದಿನಗಳಲ್ಲಿ ದೊಡ್ಡ ಸವಾಲು – ಕೃಷಿ ತೋಟಗಳ ನಿರ್ವಹಣೆಗೆ ಇಲ್ಲಿದೆ ಉತ್ತಮ ಅವಕಾಶ NAMMUR EXPRESS NEWS ಕೃಷಿ ಎಂದರೆ ಎಲ್ಲರಿಗೂ ಕೂಡ ಇಷ್ಟ ಆದರೆ ಎಲ್ಲರೂ ಕೂಡ ಅವಲಂಬನೆ ಮಾಡಿಲ್ಲ ಅದರಲ್ಲೂ ಕೆಲವೇ ಕೆಲವೊಂದಿಷ್ಟು ರೈತರು ಮಾತ್ರ ಇದರ ನಿರ್ವಹಣೆ ಮಾಡುತ್ತಿದ್ದಾರೆ ನಿಮಗೆ ನಿರ್ವಹಣೆ ಮಾಡುವುದು ಅಥವಾ ಅದರ ಜವಾಬ್ದಾರಿಯು ತುಂಬಾ ಕಷ್ಟ ಆಗುತ್ತಾ ಇದ್ದರೆ ನಿಮಗೆ ಉಪಯುಕ್ತವಾದ ಮಾಹಿತಿ ಇಲ್ಲಿದೆ. ವೈಜ್ಞಾನಿಕ ಕೃಷಿಯನ್ನು ಮಾಡುವ ಮಾದರಿಯಲ್ಲಿಯೇ ಕೃಷಿಯ ಮೂಲಕ ಚಮತ್ಕಾರವನ್ನು ಮಾಡಿದ್ದಾರೆ. ಮಲೆನಾಡಿನ ಹಳ್ಳಿಗಳಲ್ಲಿ ಈಗ ತೋಟಗಳಿಗೆ ವಾರಸುದಾರರಿದ್ದಾರೆ ಆದರೆ ಇದರ ಜವಾಬ್ದಾರಿಯನ್ನು ತೆಗೆದುಕೊಂಡು ಕೆಲಸ ಮಾಡುವವರು ತುಂಬಾ ಕಡಿಮೆಯಾಗಿದ್ದಾರೆ. ಮನೆಯಲ್ಲಿ ಇರುವ ವಯಸ್ಸಾದವರಿಗೆ ಎಲ್ಲವೂ ಕೂಡ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಬಂದಿದೆ. ರೈತರ ಮಕ್ಕಳು ಉತ್ತಮ ಉದ್ಯೋಗಕ್ಕಾಗಿಯೋ , ಉದ್ಯಮಕ್ಕಾಗಿಯೋ ಬೇರೆ ಬೇರೆ ನಗರ ಹಾಗು ದೇಶಗಳಿಗೆ ಹೋಗುವದು ಸರ್ವೇಸಾಮಾನ್ಯವಾಗಿದೆ ಆದರೆ…
ತೀರ್ಥಹಳ್ಳಿಯ ಆಯುರ್ವೇದ ಚಿಕಿತ್ಸೆ ಬೆಂಗಳೂರಿನಲ್ಲಿ ಲಭ್ಯ – ಬೆಂಗಳೂರಿಗೆ ವಿಸ್ತರಣೆ ಆದ ಸೇವೆ: ನವೆಂಬರ್ 17ರಂದು ಲಭ್ಯ – ಸಂಧಿವಾತ, ಆಮವಾತ, ಬೆನ್ನು, ಕುತ್ತಿಗೆ ನರದ ಸಮಸ್ಯೆಗೆ ಪರಿಹಾರ ತೀರ್ಥಹಳ್ಳಿಯ ಪ್ರತಿಷ್ಠಿತ ಆಯುರ್ವೇದ ಆಸ್ಪತ್ರೆಯ ಮುಖ್ಯಸ್ಥ ಡಾ. ಸುಮೇಧ ಕಟ್ಟೆ ಅವರು ಬೆಂಗಳೂರಿನಲ್ಲಿ ನವೆಂಬರ್ 17ರಂದು ಲಭ್ಯವಿರುತ್ತಾರೆ. ಸಂಧಿವಾತ, ಆಮವಾತ, ಬೆನ್ನು ಮತ್ತು ಕುತ್ತಿಗೆ ನೋವು ಮತ್ತು ನರದ ಸಮಸ್ಯೆಗಳಿಗೆ ಉತ್ತಮ ಚಿಕಿತ್ಸೆ ನೀಡಿ ಶಿವಮೊಗ್ಗ ಜಿಲ್ಲೆಯಾದ್ಯಂತ ಹೆಸರುವಾಸಿ ಆಗಿರುವ ಪ್ರಶಾಂತಿ ಆಯುರ್ವೇದ ಚಿಕಿತ್ಸಾಲಯದ ಮುಖ್ಯಸ್ಥ ಡಾ. ಸುಮೇಧ ಕಟ್ಟೆ ಅವರು ಬೆಂಗಳೂರಿಗೂ ಸೇವೆಯನ್ನು ವಿಸ್ತರಣೆ ಮಾಡಿದ್ದಾರೆ. ನವೆಂಬರ್ 17 ಭಾನುವಾರದಂದು ಮುಖ್ಯವಾಗಿ ಸಂಧಿವಾತ, ಆಮವಾತ, ಬೆನ್ನು ಮತ್ತು ಕುತ್ತಿಗೆ ನರದ ಸಮಸ್ಯೆಗೆ ಸಲಹೆ ಮತ್ತು ಔಷಧಿಗಳನ್ನು ನೀಡಲಾಗುವುದು. ಚಿಕಿತ್ಸಾಲಯದ ವಿಳಾಸ ಮತ್ತು ಸಂದರ್ಶನ ವೇಳ ನಿಗಿಪಿಸಿ ಕೊಳ್ಳಲ ಕರೆಮಾಡಿ 9481325360
ಕರಾವಳಿ ಟಾಪ್ ನ್ಯೂಸ್ * ಉಡುಪಿ: ಚಿರತೆಯ ಹಾವಳಿಗೆ ಸಾಕು ನಾಯಿ ಬಲಿ! * ಮಂಗಳೂರು: ಮಂಗನ ಕಾಯಿಲೆ ಭೀತಿ! * ಪುತ್ತೂರು:ವೃದ್ಧನ ಕೊಳೆತ ಮೃತದೇಹ ಪತ್ತೆ * ಸುಳ್ಯ:ಎರಡು ಕಾರು ಪರಸ್ಪರ ಡಿಕ್ಕಿ: ತಂದೆ ಮಗಳು ಬಚಾವ್! NAMMUR EXPRESS NEWS ಉಡುಪಿ: ಉಡುಪಿಯ ಪೆರ್ಡೂರು ಸಮೀಪ ಚಿರತೆಯ ದಾಳಿಯಿಂದ ಜನತೆ ಆತಂಕಗೊಂಡಿದ್ದು, ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜನವಸತಿ ಪ್ರದೇಶಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ಚಿರತೆಗಳು ಸಾಕುಪ್ರಾಣಿಗಳನ್ನು ಬೇಟೆಯಾಡುತ್ತಿದ್ದು, ಇತ್ತೀಚಿಗೆ ಪೆರ್ಡೂರು ಗೋರೇಲ್‌ನಲ್ಲಿ ಹರಿನಾರಾಯಣ ಭಂಡಿಯವರ ಮನೆಯ ಸಾಕು ನಾಯಿ ಚಿರತೆಯ ಹಾವಳಿಗೆ ಬಲಿಯಾಗಿದ್ದು ಸ್ಥಳೀಯರಲ್ಲಿ ಭಯ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ತಕ್ಷಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಜನರು ತಮ್ಮ ಮನೆಯ ಪರಿಸರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. * ಮಳೂರಿನ್ಿ ಮಂಗನ ಕಾಯಿಲೆ ಭೀತಿ ಮಂಗಳೂರು: ಕೇರಳದಲ್ಲಿ ನಿಫಾ ಬೆನ್ನಲ್ಲೇ ಮಂಗನ ಕಾಯಿಲೆ ಭೀತಿ ಉಂಟಾಗಿದ್ದು, ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ…
ಮೊಸರು ಕುಡಿಕೆ ಕಾರ್ಯಕ್ರಮದ ಬ್ಯಾನರ್ ಹರಿದರೇ ಕಿಡಿಗೇಡಿಗಳು! – ವಿಶ್ವಹಿಂದೂ ಪರಿಷದ್, ಬಜರಂಗದಳ ಆಯೊಜಿಸಿ ಹಾಕಿದ್ದ ಬ್ಯಾನರ್ – ಕಿಡಿಗೇಡಿಗಳನ್ನು ಬಂಧಿಸುವಂತೆ ಸಂಘಟನೆಗಳ ಪಟ್ಟು NAMMUR EXPRESSS NEWS ಕೊಪ್ಪ: ಕೊಪ್ಪ ಪಟ್ಟಣದ ದೇವೇಗೌಡ ವೃತ್ತದಲ್ಲಿ ಹಾಕಿದ್ದ ಮೊಸರು ಕುಡಿಕೆ ಕಾರ್ಯಕ್ರಮದ ಬ್ಯಾನರ್‌ನ್ನು ಕಿಡಿಗೇಡಿಗಳು ಹರಿಯುವ ಮೂಲಕ ವಿಕೃತಿ ಮೆರೆದಿದ್ದಾರೆ. ಕಿಡಿಗೇಡಿಗಳ ಈ ಕೃತ್ಯಕ್ಕೆ ವಿಶ್ವಹಿಂದೂ ಪರಿಷದ್,ಬಜರಂಗದಳ ಆಕ್ರೋಶಗೊಂಡಿದ್ದು ಪೋಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಸಮಾಜದ ಶಾಂತಿ ಕದಡಲು ಯತ್ನಿಸುತ್ತಿರುವ ಕಿಡಿಗೇಡಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೊಪ್ಪ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸೆ.22 ನೇ ತಾರೀಖಿನಂದು ಕೊಪ್ಪದ ಲಾಲ್ ಬಹದ್ದೂರ್ ಶಾಸ್ತ್ರೀ ಕ್ರೀಡಾಂಗಣದಲ್ಲಿ ವಿಶ್ವ ಹಿಂದೂ ಪರಿಷದ್,ಬಜರಂಗದಳವು ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ 4 ನೇ ವರ್ಷದ ಮೊಸರು ಕುಡಿಕೆ ಸ್ಪರ್ಧೆ ಆಯೋಜಿಸಿ ಜಾಹೀರಾತು ಬ್ಯಾನರ್ ಅಳವಡಿಸಿತ್ತು. ಉದ್ದಪೂರ್ವಕವಾಗಿ ಹರಿದರೇ?: ್ಯಾನರ್ ಉದ್ದೇಶಪೂರ್ವಕವಾಗಿ ಹರಿಯಲಾಗಿದೆಯೇ ಅಥವಾ ಆಕಸ್ಮಿಕವೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಈರುಳ್ಳಿ, ಬೆಳ್ಳುಳ್ಳಿ ದುಬಾರಿ! – ಗಗನಕ್ಕೇರಿದ ಈರುಳ್ಳಿ-ಬೆಳ್ಳುಳ್ಳಿ ಬೆಲೆ – ದಸರಾ ಹಬ್ಬಕ್ಕೆ ಮತ್ತಷ್ಟು ಏರಿಕೆ NAMMUR EXPRESS NEWS ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ದಿನದಿಂದ ದಿನಕ್ಕೆ ಬಡವರು ಹಾಗೂ ಮಧ್ಯಮವರ್ಗದವರ ಜನರ ಜೀವನಕ್ಕೆ ದುಬಾರಿಯಾಗುತ್ತಿದ್ದು, ಈ ನಡುವೆ ಈರುಳ್ಳಿ ಬೆಲೆ ಏರಿಕೆಯಾಗುತ್ತಲೇ ಹೋಗುತ್ತಿದ್ದು, ಗ್ರಾಹಕರ ಕಣ್ಣಲ್ಲಿ ಕೊಳ್ಳುವಾಗಲೇ ನೀರು ತರಿಸುತ್ತಿದೆ. ಈರುಳ್ಳಿಯನ್ನು ವ್ಯಾಪಕವಾಗಿ ಬೆಳೆಯುವ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಅತಿಯಾದ ಮಳೆಯಾದ ಕಾರಣ ಬೆಳೆಯೆಲ್ಲಾ ನಾಶವಾಗಿದ್ದು, ಮತ್ತೊಂದೆಡೆ ತೇವಾಂಶಕ್ಕೆ ಸಂಗ್ರಹಿಸಿಟ್ಟಿದ್ದ ಈರುಳ್ಳಿ ಇಟ್ಟಲ್ಲೇ ಕೊಳೆತು ಹೋಗುತ್ತಿದೆ. ಹಾಗಾಗಿ ಉತ್ಪಾದನೆ ಕುಂಠಿತವಾಗಿದ್ದು, ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಬೆಲೆ ಏರುತ್ತಲೇ ಇದೆ. ಕಳೆದ ಕೆಲವು ತಿಂಗಳ ಹಿಂದೆ 100 ರೂ.ಗೆ ನಾಲ್ಕು ಕೆಜಿ ಗುಣಮಟ್ಟದ ಈರುಳ್ಳಿ ಚಿಲ್ಲರೆಯಾಗಿ ಮಾರಾಟವಾಗುತ್ತಿತ್ತು. ಈಗ ಕೆಜಿಗೆ 60 ರಿಂದ 70 ರೂ.ಗೆ ಮಾರಾಟವಾಗುತ್ತಿದೆ. ಉತ್ತರ ಕರ್ನಾಟಕದ ಬಳ್ಳಾರಿ, ಾೂರು, ಬೆಳಾವಿ, ಹುಬ್ಬಳ್ಳಿ, ಧಾರವಾಡ ಭಾಗಗಳಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆ ಬೆಳೆಯಲಾಗುತ್ತದೆ.…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಗುರು ರಾಯರ ವಿಶೇಷ ಅನುಗ್ರಹದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಮೇಷ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಸ್ವೀಕರಿಸಬಹುದು. ಆರ್ಥಿಕ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ಮನಸ್ಸಿಗೆ ಸಂತೋಷವಾಗಿದ್ದರೂ, ಕೆಲವು ವಿಷಯಗಳ ಬಗ್ಗೆ ಮನಸ್ಸು ಚಿಂತಿಸಬಹುದು. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ನೀವು ಸ್ನೇಹಿತರಿಂದ ವ್ಯವಹಾರ ಪ್ರಸ್ತಾಪವನ್ನು ಪಡೆಯಬಹುದು. ** ವೃಷಭ ರಾಶಿ : ನಿಮ್ಮ ದಿನವು ಏರಿಳಿತಗಳಿಂದ ಕೂಡಿರಬಹುದು. ಆದರೆ, ಸಂಜೆಯ ಹೊತ್ತಿಗೆ ಸಂದರ್ಭಗಳು ನಿಮಗೆ ಅನುಕೂಲಕರವಾಗುತ್ತವೆ. ಮನಸ್ಸು ಗೊಂದಲದಲ್ಲಿ ಉಳಿಯುತ್ತದೆ. ಅನಗತ್ಯ ಕೋಪ ಮತ್ತು ಚರ್ಚೆಯನ್ನು ತಪ್ಪಿಸಿ. ್ಯಗದಲ್ಲಿ ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ. ನಿಮಗೆ ಸರ್ಕಾರದಿಂದ ಬೆಂಬಲವೂ ಸಿಗುತ್ತದೆ.…