ಮೋದಿ ಜನ್ಮದಿನ ಅರ್ಥಪೂರ್ಣವಾಗಿ ಆಚರಿಸಿದ ಕಾರ್ಯಕರ್ತರು! – ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಣೆ,ದೇವಸ್ಥಾನದಲ್ಲಿ ವಿಶೇಷ ಪೂಜೆ – ಕೊಪ್ಪ, ಶೃಂಗೇರಿ ಸೇರಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾರ್ಯಕ್ರಮ NAMMUR EXPRESS NEWS ಕೊಪ್ಪ/ಶೃಂಗೇರಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನದಂದು ಕೊಪ್ಪ ಬಿಜೆಪಿ ಮಂಡಲದಿಂದ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ವಿತರಿಸುವುದರ ಮೂಲಕ ಆಚರಿಸಿದರು.ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ದಿನೇಶ್ ಹೊಸೂರು,ಅರುಣ್ ಶಿವಪುರ,ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿ ಶೃತಿ ರೋಹಿತ್,ಗಾಯತ್ರಿ ವಸಂತ್,ಗಾಯತ್ರಿ ಶೆಟ್ಟಿ,ಇಸ್ಮಾಯಿಲ್,ಪದ್ಮಾವತಿ ರಮೇಶ್ ಹಾಗೂ ಇತರರು ಉಪಸ್ಥಿತರಿದ್ದರು. ಶಾರದ ದೇವಿ ಸನ್ನಿಧಿಯಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ ಶೃಂಗೇರಿ ತಾಲೂಕಿನಲ್ಲಿ ಕಾರ್ಯಕರ್ತರು ಶ್ರೀ ಶಾರದ ದೇವಿ ಸನ್ನಿಧಿಯಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿದರು, ಅನಂತ ವ್ರತದ ಪ್ರಯುಕ್ತ ಏರ್ಪಡಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ತಾಲೂಕಿನ ಜಿ್‌ಬಿ ಸುದಾಯದವರು ಮೋದಿ ಹೆಸರಿನಲ್ಲಿ ವಿಶೇಷ ಪೂಜೆ ಏರ್ಪಡಿಸಿದ್ದರು.
Author: Nammur Express Admin
ಸಹ್ಯಾದ್ರಿ, ಶರಾವತಿ, ಸಮೃದ್ಧಿ ವಾರ್ಷಿಕ ಸಭೆ ಸೂಪರ್ – ಸಾವಿರಾರು ಜನರು ಭಾಗಿ: ಸಂಸ್ಥೆ ಬೆಳವಣಿಗೆ ಪಯಣ ವಿವರಿಸಿದ ವಿಜಯ್ ದೇವ್ – ಸಹಕಾರ ಸಂಸ್ಥೆ ಕಟ್ಟುವುದು ಸುಲಭವಲ್ಲ: ಮಂಜುನಾಥ ಗೌಡ – ಮಲೆನಾಡ ಅಡಿಕೆ ಕಲಬೆರಕೆ ವಿರುದ್ಧ ದನಿ ಎತ್ತಿದ ಆರ್. ಎಂ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯ ಹೆಮ್ಮೆಯ ಸಹಕಾರ ಸಂಸ್ಥೆಗಳಾದ ಸಹ್ಯಾದ್ರಿ, ಶರಾವತಿ, ಸಮೃದ್ಧಿ ಸಂಸ್ಥೆಗಳ ವಾರ್ಷಿಕ ಮಹಾ ಸಭೆ ಮಂಗಳವಾರ ತೀರ್ಥಹಳ್ಳಿಯ ಶಾಂತವೇರಿಗೋಪಾಲಗೌಡ ರಂಗಮಂದಿರದಲ್ಲಿ ಸಾವಿರಾರು ಷೇರುದಾರರ ಸಮ್ಮುಖದಲ್ಲಿ ನಡೆಯಿತು. ರಾಜ್ಯದ ಸಹಕಾರ ಕ್ಷೇತ್ರದಲ್ಲಿ ದಾಖಲೆ ಎಂಬಂತೆ ಸಾವಿರಾರು ಜನರು ವಾರ್ಷಿಕ ಸದಸ್ಯರ ಸಭೆಯಲ್ಲಿ ಭಾಗಿಯಾದರು. ಸಹ್ಯಾದ್ರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ವಿಜಯ್ ದೇವ್ ಮಾತನಾಡಿ ಸಂಸ್ಥೆ ಬೆಳೆದು ಬಂದ ಹಾದಿ ವಿವರಿಸಿದರು. ಇಂದು 1300 ಕೋಟಿಗೂ ಹೆಚ್ಚು ವ್ಯವಹಾರ ಮಾಡುತ್ತಿರುವ ಸಹ್ಯಾದ್ರಿ ಸಂಸ್ಥೆಗೆ ಷೇರುದಾರರು, ರೈತರು ಬೆನ್ನೆಲುಬು ಎಂದರು. ನಮ್ಮ ಸಂಸ್ಥೆ ಹುಟ್ಟಲು ಕಾರಣ ಮಂಜುನಾಥ ಗೌಡ. ಮೊದಲ ಹಂತ ಹಣ 5…
ಕರ್ನಾಟಕ ಜಾನಪದ ಪರಿಷತ್ತಿಗೆ ತುಂಬಿನಕೆರೆ ಬಸವರಾಜ್ ಸಾರಥಿ! – ಹೊಸದುರ್ಗ ತಾಲೂಕು ಅಧ್ಯಕ್ಷರಾಗಿ ಆಯ್ಕೆ: ಅಭಿನಂದನೆಗಳು – ಸಮಾಜ, ಧಾರ್ಮಿಕ, ಸಂಘಟನೆ ಸೇವಕನಿಗೆ ಒಲಿದ ಹುದ್ದೆ NAMMUR EXPRESS NEWS ಹೊಸದುರ್ಗ: ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾಗಿ ಪತ್ರಕರ್ತ ತುಂಬಿನಕರೆ ಬಸವರಾಜ್ ಆಯ್ಕೆಯಾಗಿದ್ದು, ಕರ್ನಾಟಕ ಜಾನಪದ ಪರಿಷತ್ತಿನ ಕೇಂದ್ರ ಸಮಿತಿಯ ಮಾರ್ಗದರ್ಶನದ ಮೇರೆಗೆ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ನಿರಂಜನ ದೇವರಮನೆ ತಿಳಿಸಿದ್ದಾರೆ. ಈಗಾಗಲೇ ಸಾಮಾಜಿಕ, ಧಾರ್ಮಿಕ, ಸಂಘಟನೆಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಜಿಲ್ಲೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಬಸವರಾಜ್ ಅವರಿಗೆ ಅವರ ಸ್ನೇಹಿತರು, ಅಭಿಮಾನಿಗಳು ಶುಭಾಶಯ ಸಲ್ಲಿಸುತ್ತಿದ್ದಾರೆ. ಆಯ್ಕೆ ಬಗ್ಗೆ ಪ್ರತಿಕ್ಿಯಿಸಿ ತುಂಬಿನಕೆರೆ ಬಸವರಾಜ್ ಮಾತನಾಡಿ, ಪುಣ್ಯಭೂಮಿ ಕರ್ನಾಟಕದ ಸಾಂಪ್ರದಾಯಿಕ ಜನಪದ ಕಲೆಗಳನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸೋಬಾನೆ ವೀರಗಾಸೆ, ಡೊಳ್ಳು ಕುಣಿತ, ಇದರಲ್ಲಿ ಪರಿಣಿತರಾದ ಎಷ್ಟೋ ವ್ಯಕ್ತಿಗಳು ಅವಕಾಶ ಸಿಗದೇ ನೇಪಥ್ಯಕ್ಕೆ ಸರಿದಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ಹುದುಗಿರುವ ಇಂತಹ ಪ್ರತಿಭೆಗಳನ್ನು ಗುರುತಿಸಿ,…
ಟಾಪ್ 3 ನ್ಯೂಸ್ ತೀರ್ಥಹಳ್ಳಿ ತೀರ್ಥಹಳ್ಳಿಯಲ್ಲಿ 2 ದಿನ ಹೈಸ್ಕೂಲ್ ಮಟ್ಟದ ಕ್ರೀಡಾಕೂಟ – ಸೆ. 19,20ರಂದು ಸಹ್ಯಾದ್ರಿ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಿಂದ ತಾಲ್ಲೂಕು ಮಟ್ಟದ ಬಾಲಕ/ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ – ದಸರಾ ಉತ್ಸವ ಸಮಿತಿ ಸಂಚಾಲಕರಾಗಿ ಸಂದೇಶ್ ಜವಳಿ ಪುನರಾಯ್ಕೆ! NAMMUR EXPRESS NEWS ತೀರ್ಥಹಳ್ಳಿ : ಸಹ್ಯಾದ್ರಿ ಸಂಯುಕ್ತ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ತೀರ್ಥಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಅಥ್ಲೆಟಿಕ್ಸ್ ಕ್ರೀಡಾಕೂಟ ನೆರವೇರಲಿದೆ. 17 ವರ್ಷ ವಯೋಮಿತಿಯೊಳಗಿನ ವಲಯ ಹಾಗೂ ತಾಲ್ಲೂಕು ಮಟ್ಟದ ಬಾಲಕ/ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ, ಸೆ 19 ಗುರುವಾರ ಮತ್ತು 20 ಶುಕ್ರವಾರ, ಬೆಳಿಗ್ಗೆ 09-30 ಕ್ಕೆ ಡಾ. ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲಾ ಕ್ರೀಡಾಂಗಣ ನೆರವೇರಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಚಿವ ಎಸ್. ಮಧು ಬಂಗಾರಪ್ಪ ನೆರವೇರಿಸಲಿದ್ದಾರೆ. ಕ್ರೀಡಾ ಧ್ವಜಾರೋಹಣವನ್ನ ಶ್ರೀ ಆರಗ ಜ್ಞಾನೇಂದ್ರ ಮಾಜಿ ಗೃಹ ಸಚಿವರು ಮಾಲಿದ್ದಾರೆ. ಈ ಕಾರ್ಯಕ್ರಮದ ಅ್ಕ್ತೆಯನ್ನು ಶ್ರೀ ಬಾಳೇಹಳ್ಳಿ ಪ್ರಭಾಕರ್ ಅವರು ನಡೆಸಿಕೊಡಲಿದ್ದಾರೆ.…
ಟೀಚರ್ಸ್ ಸೊಸೈಟಿ ಕಟ್ಟಡ ತೀರ್ಥಹಳ್ಳಿಗೆ ಹೈಟೆಕ್! – ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸಂಘದ ನೂತನ ಕಚೇರಿ ಶಿಕ್ಷಕರ ಸೌಹಾರ್ದ ಭವನ ಉದ್ಘಾಟನೆ – 10ನೇ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ – ನೂತನ ಕಟ್ಟದಲ್ಲಿ ಏನೇನಿದೆ?… ಸರ್ವರನ್ನು ಸ್ವಾಗತಿಸಿದ ಮಹಾಬಲೇಶ್ವರ ಹೆಗಡೆ NAMMUR EXPRESS NEWS ತೀರ್ಥಹಳ್ಳಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸಂಘ ಇದರ ನೂತನ ಕಟ್ಟಡದ ಉದ್ಘಾಟನೆ ಮತ್ತು 10ನೇ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಸೆ.22 ಭಾನುವಾರ ಬೆಳಿಗ್ಗೆ 10-00 ರಿಂದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸಂಘ ನಿ., ತೀರ್ಥಹಳ್ಳಿ ಇದರ ನೂತನ ಕಟ್ಟಡ “ಶಿಕ್ಷಕರ ಸೌಹಾರ್ದ ಭವನ “ದಲ್ಲಿ ನಡೆಯಲಿದೆ. ಅಂದೇ ನೂತನ ಶಿಕ್ಷಕರ ಸೌಹಾರ್ದ ಭವನ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮದ ದಿವ್ಯಸಾನಿಧ್ಯ : ಶ್ರೀ ಷ| ಬ್ರ| ಡಾ.…
ಆವಿಷ್ಕಾರ್ ಸೌಹಾರ್ದ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ – 8ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆ – ಅನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ 23 ಸೋಮವಾರದಂದು ಬೆಳಿಗ್ಗೆ 11:00 ಗಂಟೆಗೆ ಜರಗಲಿದೆ NAMMUR EXPRESS NEWS ಆವಿಷ್ಕಾರ್ ಸೌಹಾರ್ದ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ತೀರ್ಥಹಳ್ಳಿ ಇದರ 8ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆಯು 23-09-2024ರ ಸೋಮವಾರದಂದು ಬೆಳಿಗ್ಗೆ 11:00 ಗಂಟೆಗೆ ಸರಿಯಾಗಿ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿರುವ ಗೋಪಾಲಗೌಡ ರಂಗಮಂದಿರದಲ್ಲಿ ಸಹಕಾರಿಯ ಅಧ್ಯಕ್ಷರಾದ “ಶ್ರೀ ಅನಿಲ್ ಕುಮಾರ್” ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನೆರವೇರಲಿದೆ. ಸದಸ್ಯರು ಈ ಸಭೆಗೆ ಸಕಾಲದಲ್ಲಿ ಆಗಮಿಸಿ ತಮ್ಮ ಅಮೂಲ್ಯ ಸಲಹೆ ಸಹಕಾರಗಳನ್ನಿತ್ತು ಸಹಕರಿಸಲು ಈ ಮೂಲಕ ಆವಿಷ್ಕಾರ್ ಸೌಹಾರ್ದ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಪರವಾಗಿ ಕೋರುತ್ತೇವೆ.
ಪೊಲೀಸ್ ಇಲಾಖೆ ವಿರುದ್ಧ ತಿರುಗಿಬಿದ್ದ ಕಾರ್ಕಳ ಮಹಿಳಾ ಬಿಜೆಪಿ! – ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಬಗ್ಗೆ ಅವಾಚ್ಯ ಅಶ್ಲೀಲ ಮಾನಹಾನಿಕರ ಪೋಸ್ಟರ್ – ದೂರು ಕೊಟ್ಟರೂ ಕ್ರಮ ಇಲ್ಲ: ಐಜಿಗೆ ಮನವಿ ಪತ್ರ NAMMUR EXPRESS NEWS ಕಾರ್ಕಳ: ಮಹಿಳೆಯರ ಬಗ್ಗೆ ಅವಾಚ್ಯ ಅಶ್ಲೀಲ ಮಾನಹಾನಿಕರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ಗಳು, ಬರಹಗಳನ್ನು ಹಂಚುವವರ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಹಾಗೂ ಮಹಿಳೆಯರಿಗೆ ಸೂಕ್ತ ರಕ್ಷಣೆ ಕೋರಿ ಮನವಿ ಇದೀಗ ಕಾರ್ಕಳ ಮಹಿಳಾ ಬಿಜೆಪಿ ಪ್ರಮುಖರು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ. ಉಡುಪಿ ಜಿಲ್ಲೆ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಬಗ್ಗೆ ಅದರಲ್ಲೂ ರಾಜಕೀಯವಾಗಿ, ಸಾಮಾಜಿಕವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಮಹಿಳೆಯರನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣಗಳಾದ ಫೇಸಬುಕ್, ವಾಟ್ಸಾಪ್ ಗಳಲ್ಲಿ ಕೆಲವೊಂದು ವ್ಯಕ್ತಿಗಳು ಅವಾಚ್ಯ-ಅಶ್ಲೀಲ ಹಾಗೂ ಮಾನಹಾನಿಕರ ಪದಗಳನ್ನು ಬಳಸಿ ಪೋಸ್ಟರ್‌ಗಳ್ನು ಿಸುತ್ತಿದ್ದಾರೆ. ಈ ಬಗ್ಗೆ ತಮ್ಮ ಇಲಾಖೆಗೆ…
ಅಡಿಕೆ ದರ ಎಷ್ಟಿದೆ? – ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆಯ ದರ ಏರಿಕೆಯೋ ಅಥವಾ ಇಳಿಕೆಯೋ?!! NAMMUR EXPRESS NEWS ಬೆಟ್ಟೆ = 43,900 – 54,309 ಗೊರಬಲು = 16,000 – 35,899 ರಾಶಿ = 25,509 – 48,949 ಸರಕು = 44,109 – 81,396
ಎನ್. ಪಿ.ಪ್ರಿಂಟಿಂಗ್ ಸೊಲ್ಯೂಷನ್ಸ್ ವಾರ್ಷಿಕ ಸಂಭ್ರಮ! * ಒಂದು ವರ್ಷ ಯಶಸ್ವಿ ಗುಣಮಟ್ಟದ ಸೇವೆ * ಗ್ರಾಹಕರು, ಸಿಬ್ಬಂದಿಗಳ ಉತ್ತಮ ಸಹಕಾರಕ್ಕೆ ಧನ್ಯವಾದ NAMMUR EXPRRSS NEWS ಕಾರ್ಕಳ : ಜೋಡುರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್.ಪಿ. ಪ್ರಿಂಟಿಂಗ್ ಸೊಲ್ಯೂಷನ್ಸ್ ಸಂಸ್ಥೆ ಸೆ. 17ರಂದು ವಾರ್ಷಿಕ ಸಂಭ್ರಮ ಆಚರಿಸಿದೆ. ಗ್ರಾಹಕರ ಹಿತಾಸಕ್ತಿಯಿಂದ ಮುದ್ರಣಕ್ಕೆ ಸಂಬಂಧ ಪಟ್ಟ ಎಲ್ಲಾ ರೀತಿಯ ಬ್ಯಾನರ್ ಫ್ಲೆಕ್ಸ್, ವಿನ್ಯಾಲ್, ಮೆಮೆಂಟೋ, ಫೋಟೋ ಫ್ರೇಮ್ಸ್, ಅಕ್ರೈಲಿಕ್ ಗಿಫ್ಟ್ ಐಟಂ, ಗ್ರಾಹಕರ ಅಪೇಕ್ಷೆಯಂತೆ ಪಿಲ್ಲೋ, ಮಗ್, ಕೀ ಚೈನ್, ಟೋಪಿ,ಜೆರ್ಸಿ, ಪೂಜಾ ಬ್ಯಾಗ್ ಪ್ರಿಂಟಿಂಗ್, ಡಿಜಿಟಲ್ ಮೆನು ಕಾರ್ಡ್ ಇನ್ವಿಟೇಶನ್, ವಿಸಿಟಿಂಗ್ ಕಾರ್ಡ್, ಕವರ್ ಪ್ರಿಂಟಿಂಗ್, ಸ್ಟಿಕ್ಕರ್ಸ್ ಪ್ರಿಂಟಿಂಗ್, ಸ್ಟಿಕರ್ ಶೇಪ್ ಕಟ್ಟಿಂಗ್, ಬ್ರೋಚರ್ಸ್,ಮೆಡಲ್ಸ್, ರಬ್ಬರ್ ಸ್ಟ್ಯಾಂಪ್ಸ್, ಫೋಟೋ ಲಾರ್ಜ್ ಪ್ರಿಂಟಿಂಗ್ ಒಂದೇ ಸೂರಿನಡಿಯಲ್ಲಿ ಎಲ್ಲಾ ಸೌಲಭ್ಯವನ್ನು ಪೂರೈಸುವ ನಿಟ್ಟಿ್ಲಿ ್ರಾಂಭಿಸಲಾಗಿದೆ. ಈಗಾಗಲೇ ಗ್ರಾಹಕರ ಉತ್ತಮವಾದ ಸ್ಪಂದನೆ ನಮಗೆ ಸ್ಪೂರ್ತಿ ದಾಯಕವಾಗಿದ್ದು ಮುಂದಿನ ನಮ್ಮ ಸಂಸ್ಥೆ ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಇದೇ ರೀತಿ…
ದೇಶದಾದ್ಯಂತ ಏಕಕಾಲದಲ್ಲಿ ಲೋಕಸಭೆ, ವಿಧಾನ ಸಭೆ ಚುನಾವಣೆ! * ಒಂದು ರಾಷ್ಟ್ರ, ಒಂದು ಚುನಾವಣೆ! * ಕೇಂದ್ರ ಸಚಿವ ಸಂಪುಟದಿಂದ ಒಪ್ಪಿಗೆ! NAMMUR EXPRESS NEWS ದೆಹಲಿ :ಪ್ರಧಾನಿ ಮೋದಿ ಕನಸು ನನಸಾಗುವ ಕಾಲ ಸನ್ನಿಹಿತವಾಗಿದ್ದು, ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ ಸೆ18 ರಂದು ಒಂದು ರಾಷ್ಟ್ರ ಒಂದು ಚುನಾವಣೆಯ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯ ವರದಿಯನ್ನು ಕೇಂದ್ರ ಸಚಿವ ಸಂಪುಟದ ಮುಂದೆ ಮಂಡಿಸಿದ ನಂತರ ಈ ಮಹತ್ವದ ಬೆಳವಣಿಗೆ ನಡೆದಿದೆ. ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಈ ಮಸೂದೆ ಅಂಗೀಕಾರವಾದರೆ ಮುಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೂ ಚುನಾವಣೆ ನಡೆಯಲಿದೆ.