Author: Nammur Express Admin

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ಮೇಷ ರಾಶಿಯವರಿಗೆ ಅತ್ಯಂತ ಮಂಗಳಕರ ದಿನ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಜೀವನದಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಬಹುದು. ಕೆಲಸದ ದೃಷ್ಟಿಕೋನದಿಂದ, ಇಂದು ನಿಮಗೆ ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತದೆ. ಆದರೆ ಇಂದು ಹೆಚ್ಚು ಶ್ರಮ ಪಡಬೇಕಾಗುತ್ತದೆ. ಖರ್ಚು ಹೆಚ್ಚಾಗಬಹುದು. ಆತ್ಮವಿಶ್ವಾಸ ಕಡಿಮೆಯಾಗಲಿದೆ. ** ವೃಷಭ ರಾಶಿ : ವೃಷಭ ರಾಶಿಯವರಿಗೆ ಇಂದು ಸಾಮಾನ್ಯ ದಿನವಾಗಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಅವಕಾಶವಿರುತ್ತದೆ. ನೀವು ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುತ್ತೀರಿ. ಪ್ರೇಮ ಜೀವನ ಚೆನ್ನಾಗಿರುತ್ತದೆ. ನೀವು ಹಳೆಯ ಸ್ನೇಹಿತರನ್ನು ಭೇಟಿಯಾಗಬಹುದು. ಆರೋಗ್ಯದ ಬೆ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ.…

Read More

ಶ್ರೀ ವಿನಾಯಕ ಸೇವಾ ಸಮುದಾಯ ಸಮಿತಿ ಕೆರೆಮನೆ – ಬೇಗುವಳ್ಳಿ – 50ನೇ ವರ್ಷದ ಅದ್ದೂರಿ ಗಣೇಶೋತ್ಸವ – 11ನೇ ವರ್ಷದ ತೆಪ್ಪೋತ್ಸವ ಕಾರ್ಯಕ್ರಮ,ವಿವಿಧ ವೇಷ-ಭೂಷಣಗಳೊಂದಿಗೆ ರಾಜಬೀದಿ ಉತ್ಸವ ನೆರವೇರಿತು    NAMMUR EXPRESS NEWS  ಶ್ರೀ ವಿನಾಯಕ ಸೇವಾ ಸಮುದಾಯ ಸಮಿತಿ ಕೆರೆಮನೆ – ಬೇಗುವಳ್ಳಿ ಇವರ ನೇತೃತ್ವದಲ್ಲಿ 50ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ನೆರವೇರಿತು. 50 ನೇ ವರ್ಷ ಪೂರ್ಣಗೊಂಡಿರುವುದರಿಂದ 11 ವರ್ಷದ ತೆಪ್ಪೋತ್ಸವ ಕಾರ್ಯಕ್ರಮ ಕೂಡ ಜರಗಿತು. ಈ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮೂರು ದಿನಗಳ ಕಾಲ ಎರಡು ಸಾವಿರ ಜನರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಅನೇಕ ಕಾರ್ಯಕ್ರಮಗಳು ನೆರವೇರಿದವು ಅದರಲ್ಲಿ 12.09.2024ನೇ ತಾರೀಕು ಶ್ರೀ ನವರಸ ಕಲಾವೃಂದ ಹೆಗಡೆಮನೆ ಇವರಿಂದ ರಸಮಂಜರಿ ಕಾರ್ಯಕ್ರಮ, 13.09. 2024 ಸೀತುರು ಮನೆ ಯಕ್ಷಗಾನ, 14.09.2024 ಮನು ಹಂದಾಡ ಅವರ ನಾಟಕ ಕೂಡ ನೆರವೇರಿತು ಅದರ ಜೊತೆಯಲ್ಲಿ ಮನು ಹಂದಾಡಿ ಅವರಿಗೆ ಸನ್ಮಾನ ಕೂಡ ಮಾಡಲಾಯಿತು. 15-09-2024 ಭಾನುವಾರ ಮಧ್ಯಾಹ್ನ 2-00 ರಿಂದ…

Read More

ಸರ್ಕಾರಿ ಶಾಲಾ ಮಕ್ಕಳಿಗೂ ಸ್ಕೂಲ್ ಬಸ್! * ಗ್ರಾಮೀಣ ಭಾಗಕ್ಕೆ ಸೂಕ್ತ ವ್ಯವಸ್ಥೆ ನೀಡಲು ಸಜ್ಜು * ಮಕ್ಕಳನ್ನು ಶಾಲೆಗೆ ಕರೆತರುವ ಸರ್ಕಾರದ ಪ್ರಯತ್ನ NAMMUR EXPRESS NEWS ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೂ ಸ್ಕೂಲ್ ಬಸ್ ನಲ್ಲಿ ಬರುವ ಯೋಗ ಸಿಗಲಿದೆ. ಇಂಥಹದ್ದೊಂದು ಯೋಜನೆ ಜಾರಿಗೆ ತರಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಸರ್ಕಾರಿ ಶಾಲೆಗಳಿಂದ ಮಕ್ಕಳು ದೂರವುಳಿಯುತ್ತಿದ್ದಾರೆ. ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ಸೂಕ್ತ ವ್ಯವಸ್ಥೆಯಿಲ್ಲದ ಕಾರಣ ಮಕ್ಕಳು ಶಾಲೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಮರಳಿ ಶಾಲೆಗೆ ಕರೆತರಲು ಶಿಕ್ಷಣ ಇಲಾಖೆ ಈಗ ಬಸ್ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಕರ್ನಾಟಕ ಪಬ್ಲಿಕ್ ಶಾಲೆಗೆ ಬರುವ ಮಕ್ಕಳಿಗೆ ಪಿಕ್ ಅಪ್ ಮತ್ತು ಡ್ರಾಪ್ ವ್ಯವಸ್ಥೆ ಮಾಡಲು ಬಸ್ ವ್ಯವಸ್ಥೆ ಮಾಡುವ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ. ವಿನೂತನ ಪ್ರಯೋಗವಾಗಿದ್ದು, ಮಕ್ಕಳಿಗೆ ಶಾಲೆಗೆ ಕರೆತರುವ ಪ್ರಯತ್ನವಾಗಿದೆ. 4 ರಿಂದ 5 ಕಿ.ಮೀ. ವ್ಯಾಪ್ತಿಯ ಮಕ್ಕಳಿಗೆ ಶಾಲೆಗೆ ಕರೆತರಲು ಈ ಬಸ್ ವ್ಯವಸ್ಥೆ ಮಾಡಲಾಗಿದೆ.…

Read More

ಸುರತ್ಕಲ್ ಮಸೀದಿಗೆ ಕಲ್ಲು ತೂರಾಟ: ಐವರು ಅರೆಸ್ಟ್! – ಮಂಗಳೂರು ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ – ಎರಡೂ ಕಡೆಯವರ ಮೇಲೆ ಪೊಲೀಸ್ ಕೇಸ್  – ಶರಣ್ ಪಂಪ್‌ವೆಲ್, ಪುನೀತ್ ಅತ್ತಾವರ ವಿರುದ್ಧ ಕೇಸ್  – ಚಿಕ್ಕಮಗಳೂರು: ಪ್ಯಾಲೆಸ್ಟೈನ್ ಬಾವುಟ ಹಿಡಿದು ಬೈಕಲ್ಲಿ ಸಂಚಾರ: 6 ಅಪ್ರಾಪ್ತರ ಬಂಧನ   NAMMUR EXPRESS NEWS ಸುರತ್ಕಲ್: ಕಾಟಿಪಳ್ಳ 3ನೇ ಬ್ಲಾಕ್ ಮಸೀದಿಗೆ ಅಪರಿಚಿತರು ಕಲ್ಲು ತೂರಾಟ ಪ್ರಕರಣ ಸಂಬಂಧ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರು ಸುರತ್ಕಲ್ ಆಶ್ರಯ ಕಾಲನಿ ನಿವಾಸಿ ಭರತ್, ಕಟ್ಲ ಆಶ್ರಯ ಕಾಲನಿ ನಿವಾಸಿ ಚೆನ್ನಪ್ಪ, ಹಳೆಯಂಗಡಿ ಖಂಡಿಗೆ ಪಾಡಿ ನಿವಾಸಿ ನಿತಿನ್, ಈಶ್ವರ ನಗರ ನಿವಾಸಿ ಮನು, ಮುಂಚೂರು ನಿವಾಸಿ ಸುಜಿತ್ ಎಂದು ತಿಳಿದು ಬಂದಿದೆ. ಆರೋಪಿಗಳು ಜನತಾ ಕಾಲನಿ ಸ್ಮಶಾನದ ಕಡೆಯಿಂದ ಎರಡು ಬೈಕ್ ಗಳಲ್ಲಿ ಬಂದು, ಮಸೀದಿಯ ಹಿಂಭಾಗದ ಕಿಟಕಿಗಳ ಮೇಲೆ ಕಲ್ಲು ತೂರಾಟ ಮಾಡಿದ್ದರು ಎಂದು ತಿಳಿದು ಬಂದಿದೆ. ಭಾರೀ ಪೊಲೀಸ್ ಬಂದೋಬಸ್ತ್ …

Read More

ತೀರ್ಥಹಳ್ಳಿ ಬಸ್ ನಿಲ್ದಾಣ ಗಣೇಶ ವಿಸರ್ಜನೆಗೆ ಜನವೋ ಜನ! – ಇಡೀ ಪಟ್ಟಣದಲ್ಲಿ ಮೆರವಣಿಗೆ: ನೃತ್ಯ, ವಿವಿಧ ವೇಷಭೂಷಣ – 9 ದಿನಗಳ ಕಾಲ ಅದ್ದೂರಿ ಕಾರ್ಯಕ್ರಮ: ಜನರ ಡಾನ್ಸ್ ಡಾನ್ಸ್ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಬಸ್ ನಿಲ್ದಾಣದಲ್ಲಿ ಗಣೇಶೋತ್ಸವ 9 ದಿನಗಳ ಕಾಲ ಅತ್ಯಂತ ಸಡಗರ ಸಂಭ್ರಮದಿಂದ ನೆರವೇರಿತು. ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆವರೆಗೆ ಯಾವುದೇ ಗಲಾಟೆ, ಗದ್ದಲ ಇಲ್ಲದೆ ಶಾಂತಿಯುತವಾಗಿ ಆಚರಣೆ ಮಾಡಲಾಯಿತು. ಶುಕ್ರವಾರ ಸಂಜೆ ಲೋಕನಾಥ್ ಆರ್ಕೆಸ್ಟ್ರಾ ಸಾವಿರಾರು ಜನರ ಮನ ಸೆಳೆಯಿತು. ಹಾಡು, ನೃತ್ಯಕ್ಕೆ ಸೇರಿದ್ದ ಜನರು ಹೆಜ್ಜೆ ಹಾಕಿದರು. ಶನಿವಾರ ಮಧ್ಯಾಹ್ನ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಸಂಜೆ ತೀರ್ಥಹಳ್ಳಿ ಕಲಾವಿದರಿಂದ ನೃತ್ಯ ಕಾರ್ಯಕ್ರಮ ನಡಯಿತು. ರತಿ ದನ ವಿಶೇಷ ಪೂಜೆ ಅಲಂಕಾರ ಮಾಡಲಾಯಿತು. ಇಡೀ ಬಸ್ ನಿಲ್ದಾಣ ವಿದ್ಯುತ್ ದೀಪದ ಅಲಂಕಾರದಿಂದ ಮಿಂದೆದ್ದಿತು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರದೀಪ್ ಮತ್ತು ಎಲ್ಲಾ ಏಜೆಂಟರು, ಬಸ್ ನಿಲ್ದಾಣ ಸುತ್ತಮುತ್ತಲಿನ ಎಲ್ಲಾ ಸ್ನೇಹಿತರು,…

Read More

ತೀರ್ಥಹಳ್ಳಿ ಟಾಪ್ ನ್ಯೂಸ್ ಡಿಜೆಗೆ ಡ್ಯಾನ್ಸ್ ಮಾಡುತ್ತಲೇ ಕುಸಿದ ಬಿದ್ದ ವ್ಯಕ್ತಿ ಸಾವು! – ತೀರ್ಥಹಳ್ಳಿ ತಾಲೂಕಿನ ಬೇಗುವಳ್ಳಿಯಲ್ಲಿ ಘಟನೆ ಡಿಜೆ ಲೈಟಿಗೆ ಅನೇಕರ ಮೊಬೈಲ್ ಡಮಾರ್! – ತೀರ್ಥಹಳ್ಳಿ ಬಸ್ ಸ್ಟಾಂಡ್ ಗಣಪತಿ ವಿಸರ್ಜನೆ ವೇಳೆ ಘಟನೆ ತೀರ್ಥಹಳ್ಳಿಯಲ್ಲಿ ಉಳಿದಿದ್ದು ಇನ್ನು 2 ಗಣಪತಿ ಮಾತ್ರ! – ಛತ್ರಕೇರಿ, ಕೋಳಿಕಾಲು ಗುಡ್ಡ ಗಣಪತಿ ಉತ್ಸವ NAMMUR EXPRESS NEWS ತೀರ್ಥಹಳ್ಳಿ ಪಟ್ಟಣದ ಪ್ರತಿಷ್ಠಿತ ಗಣಪತಿಗಳಲ್ಲಿ ಒಂದಾದ ಮುಖ್ಯ ಬಸ್ ನಿಲ್ದಾಣದ ಅದ್ದೂರಿ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ ಭಾನುವಾರ ರಾತ್ರಿವರೆಗೆ ಅತ್ಯಂತ ವಿಜೃಂಭಣೆಯಿಂದ ನಡೆದಿದೆ. ಅಚ್ಚರಿ ಎಂದರೆ ದಗಣೇಶ ವಿಸರ್ಜನೆ ವೇಳೆ ಡಿಜೆಯ ಹೈ ಪವರ್ ಲೈಟಿಗೆ ಹಲವಾರು ಮೊಬೈಲ್ ಗಳು ಹಾನಿಯಾಗಿದೆ ಎಂಬ ಬಗ್ಗೆ ಚರ್ಚೆ ಆಗುತ್ತಿದೆ. ಫೋಟೋ ಹಾಗೂ ವಿಡಿಯೋ ತೆಗೆಯುತ್ತಿದ್ದ ವೇಳೆ ಮೊಬೈಲ್ ಡಿಸ್ಪ್ಲೇ ಏಕಾಏಕಿ ಹೋಗಿದೆ. ಲೇಸ‌ರ್ ಕಿರಣಗಳಿಂದ ಹಲವಾರು ಮೊಬೈಲ್ ಕ್ಯಾಮೆರಾ ಲೆನ್ಸ್ ಗಳನ್ನು ಹಾನಿಗೊಳಿಸಿದೆ. ಕೆವರಿಗೆ ಇದು ತತ್ತಕ್ಷಣ ಗಮನಕ್ಕೆ ಬರದೇ ತುಂಬಾ…

Read More

ಕಿಮ್ಮನೆಗೆ ತಿರುಗೇಟು ಕೊಟ್ಟ ತೀರ್ಥಹಳ್ಳಿ ಬಿಜೆಪಿ! – ಕಿಮ್ಮನೆಗೆ ಅವರ ಪಕ್ಷದಲ್ಲಿ ಅಭದ್ರತೆ ಕಾಣಿಸಿದೆ: ಬಿಜೆಪಿ ಅಧ್ಯಕ್ಷ ನವೀನ್ ಹೆದ್ದೂರು ಟಾಂಗ್ – ಜ್ಞಾನೇಂದ್ರ ಅವರ ಬಗ್ಗೆ ಕೀಳಾಗಿ ಮಾತನಾಡೋದು ಸರಿಯೇ? NAMMUR EXPRESS NEWS ತೀರ್ಥಹಳ್ಳಿ : 45 ರಿಂದ 50 ವರ್ಷಗಳ ಕಾಲ ಈ ಕ್ಷೇತ್ರಕ್ಕಾಗಿ ಆರಗ ಜ್ಞಾನೇಂದ್ರ ಬದುಕಿದ್ದಾರೆ. ತಮ್ಮ ಮನೆಗಾಗಿ ಬದುಕಿಲ್ಲ. ಕ್ಷೇತ್ರದ ಯೋಜನೆ ಬಗ್ಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಪ್ರಗತಿಗೆ ಕೆಲಸ ಮಾಡಿದ ಆರಗ ಜ್ಞಾನೇಂದ್ರರವರ ಬಗ್ಗೆ ತುಂಬಾ ಹಗುರವಾಗಿ ಮಾತನಾಡುತ್ತಾರೆ. ಆರಗ ಜ್ಞಾನೇಂದ್ರರವರು ಈ ಕ್ಷೇತ್ರದ ಪ್ರತಿ ಮನೆಯ ಮನವನ್ನು ತಲುಪಿದ್ದಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷರಾದ ನವೀನ್ ಹೆದ್ದೂರು ತಿಳಿಸಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಮಯೂರ ಹೋಟಲ ಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಿಮ್ಮನೆ ಅವರಿಗೆ ಅವರ ಪಕ್ಷದಲ್ಲಿ ಅಭದ್ರತೆ ಕಾಣಿಸಿದೆ ಎಂದು ಕಿಮ್ಮನೆ ರತ್ನಾಕರ್ ಗೆ ಟಾಂಗ್ ನೀಡಿದ್ದಾರೆ. ಕಿಮ್ಮನೆ ರತ್ನಾಕ‌ರ್ ಗೆದ್ದಿದ್ದು ಅನುಕಂಪದಿಂದ ಕಿಮ್ಮನೆ ರತ್ನಾಕರ್ ಎರಡು ಬಾರಿ…

Read More

ಬಿ.ಸಿ.ರೋಡ್ ಬಿಸಿಬಿಸಿ! – ಬಿ.ಸಿ.ರೋಡ್ ಚಲೋಗೆ ಸಾವಿರಾರು ಜನ – ಶರಣ್ ಪಂಪ್ ವೆಲ್ ಸೇರಿ ಅನೇಕರ ಸವಾಲು ಸ್ವೀಕಾರ – ಭಾರೀ ಪೊಲೀಸ್ ಬಂದೋಬಸ್ತ್ – ಬಂಟ್ವಾಳ ವ್ಯಾಪ್ತಿಯಲ್ಲಿ ಮದ್ಯದಂಗಡಿ ಬಂದ್! NAMMUR EXPRESS NEWS ಬಂಟ್ವಾಳ : ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಸವಾಲನ್ನು ಭಜರಂಗದಳ-ವಿ.ಎಚ್‌.ಪಿ ಸ್ವೀಕರಿಸಿ ಬಿ.ಸಿ.ರೋಡ್ ಚಲೋ ಕರೆ ನೀಡಿತು. ಇದರ ಬೆನ್ನಲ್ಲೇ ಸೋಮವಾರ ಬೆಳಿಗ್ಗೆ ಬಿಸಿರೋಡಿನ ರಕ್ತೇಶ್ವರಿ ದೇವಸ್ಥಾನ ದ ಮುಂಭಾಗಕ್ಕೆ ಅಸಂಖ್ಯಾತ ಕಾರ್ಯಕರ್ತರು ನೆರೆದು ಘೋಷಣೆಗಳನ್ನು ಕೂಗಿದರು. ಜನಸ್ತೋಮದ ನಡುವೆ ವಿಶ್ವ ಹಿಂದೂ ಪರಿಷತ್‌ ಪ್ರಾಂತ ಸಹಕಾರ್ಯವಾಹ ಶರಣ್ ಪಂಪ್‌ ವೆಲ್ ಭೇಟಿ ನೀಡಿ, ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಪ್ ನ ಸವಾಲಿಗೆ ಉತ್ತರಕೊಡಲು ಬಂದಿದ್ದೇನೆ ಎಂದು ಬಹಿರಂಗ ಘೋಷಣೆ ಮಾಡಿದರು. ಆರಂಭದಲ್ಲಿ ಜಮಾಯಿಸಿದ ಕಾರ್ಯಕರ್ತರು ಘೋಷಣೆ ಕೂಗೂತ್ತಾ ಪೋಲೀಸರ ತಡೆಯನ್ನು ಲೆಕ್ಕಿಸದೆ ಮುಂದೆ ಸಾಗಿದರು. ಈ ವೇಳೆ ಪೋಲೀಸರು ಹ ಕಾರ್ಯಕರ್ತರ ನಡುವೆ ನೂಕಾಟ ತಳ್ಳಾಟ ನಡೆಯಿತು. ಪರಿಸ್ಥಿತಿ…

Read More

ಬಿಗ್ ಬಾಸ್ ಮನೆಗೆ ಗಿಚ್ಚಿ ಗಿಲಿ ಗಿಲಿ ವಿನ್ನರ್ ಹುಲಿ ಕಾರ್ತಿಕ್?! – ತೀರ್ಥಹಳ್ಳಿ ಮೂಲದ ಕಲಾವಿದನ ರಿಯಲ್ ಲೈಫ್ ಸ್ಟೋರಿಯೇ ರೋಚಕ – ತಾಯಿ, ಹುಟ್ಟೂರಿಗೆ ಪ್ರಶಸ್ತಿ ಅರ್ಪಣೆ: ಎಲ್ಲರಿಗೂ ಥ್ಯಾಂಕ್ಸ್ NAMMUR EXPRESS NEWS ಬೆಂಗಳೂರು/ತೀರ್ಥಹಳ್ಳಿ: ಕಲರ್ಸ್ ಕನ್ನಡದಲ್ಲಿ ಯಶಸ್ವಿಯಾಗಿರುವ ಕಾರ್ಯಕ್ರಮ ಗಿಚ್ಚಿಗಿಲಿಗಿಲಿ ಸೀಸನ್ 3ರ ವಿನ್ನರ್ ಆಗಿ ಹುಲಿ ಕಾರ್ತಿಕ್ 10 ಲಕ್ಷ ರೂಗಳ ಚಿನ್ನ ಬೆಲ್ಟ್ ಗೆದ್ದಿದ್ದಾರೆ. ತುಕಾಲಿ ಮಾನಸ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇವರು 3 ಲಕ್ಷ ರೂ ಬಹುಮಾನ ಗೆದ್ದಿದ್ದಾರೆ. ಈ ಇಬ್ಬರು ಕಲಾವಿದರು ಬಿಗ್ ಬಾಸ್ ಮನೆ ಸೇರಲಿದ್ದಾರಾ ಎಂಬ ಕುತೂಹಲ ಈಗ ಮೂಡಿದೆ. ಬಿಗ್‌ಬಾಸ್‌ ಕನ್ನಡ ಸೀಸನ್ 10ರ ನಂತರ ಗಿಚ್ಚಿಗಿಲಿ ಗಿಲಿ ಆರಂಭವಾಗಿ ಬರೋಬ್ಬರಿ 8 ತಿಂಗಳ ಕಾಲ ಕಲರ್ಸ್ ಕನ್ನಡದಲ್ಲಿ ಈ ಶೋ ಸುದೀರ್ಘವಾಗಿ ಮೂಡಿಬಂದಿತ್ತು. ಮಲೆನಾಡಿನ ಹೆಮ್ಮೆಯ ಕಲಾವಿದ ಹುಲಿ ಕಾರ್ತಿಕ್ ಪ್ರಶಸ್ತಿ ಗೆಲ್ಲಲು 8 ವರ್ಷ ಕಾದಿದ್ದಾರೆ. ಕಲರ್ಸ್ ಸೂಪರ್ ನಲ್ಲಿ ಮೂಡಿ…

Read More

ಕರಾವಳಿ ಟಾಪ್ ನ್ಯೂಸ್ ದುಬೈ ಬಿಸಿಲಿನ ತಾಪಕ್ಕೆ ಕುಂದಾಪುರದ ಯುವಕ ಸಾವು – ಉಡುಪಿ, ಕುಂದಾಪುರದಲ್ಲಿ ಏನೇನ್ ಆಗಿದೆ..? NAMMUR EXPRESS NEWS ಉಡುಪಿ: ಮೆಸ್ಕಾಂ ಪಡುಬಿದ್ರಿ ಶಾಖೆಯಲ್ಲಿ ಲೈನ್‌ಮೆನ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದ ಉದ್ಯಾವರ ಗ್ರಾಮದ ಕಿಶೋರ್ ಕುಮಾರ್(49) ಎಂಬವರು ರಾತ್ರಿ ಮಲಗಿದಲ್ಲಿಯೇ ಮೃತಪಟ್ಟ ಬಗ್ಗೆ ವರದಿಯಾಗಿದೆ. ಕಳೆದ 20 ವರ್ಷಗಳಿಂದ ಲೈನ್‌ಮೆನ್ ಆಗಿದ್ದ ಇವರು, ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಸೆ.14ರಂದು ರಾತ್ರಿ ಮಲಗಿದ್ದ ಅವರು, ಬೆಳಗ್ಗೆ ಎಬ್ಬಿಸುವಾಗ ಏಳದೇ ಅಲ್ಲೇ ಮೃತಪಟ್ಟಿರುವುದು ತಿಳಿದುಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಬೈ ಬಿಸಿಲಿನ ತಾಪಕ್ಕೆ ಕುಂದಾಪುರದ ಯುವಕ ಸಾವು ಕುಂದಾಪುರ: ಯು.ಎ.ಇ.ಯಲ್ಲಿ ಬಿಸಿಲಿನ ಝಳ ತಾಳಲಾರದೆ ಕುಂದಾಪುರದ ವಿಟ್ಠಲವಾಡಿ ಯುವಕ ಶಾನ್ ಡಿ’ಸೋಜಾ (19) ಮೃತಪಟ್ಟ ಘಟನೆ ಸೆ.15 ರಂದು ನಡೆದಿದೆ. ದುಬಾಯಿಂದ ಸುಮಾರು 115 ಕಿ.ಮೀ. ದೂರದಲ್ಲಿರುವ ರಾ್ ಅಲ್ ೈಾದಲ್ಲಿ ಬಿಸಿಲಿನ ತಾಪಕ್ಕೆ ಗುರಿಯಾಗಿ ಆರ್‌ಎಕೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆಗೆ…

Read More