Author: Nammur Express Admin

ಮಳೆ, ಬಿಸಿಲು, ಚಳಿ: ಜನರ ಪರದಾಟ! – ಮಳೆಗಾಲ ಮುಕ್ತಾಯ ಹಂತದಲ್ಲಿದ್ದರೂ ಮಾನ್ಸೂನ್ ಮಳೆಯ ಅಬ್ಬರ ಹೆಚ್ಚಳ – ಆರೋಗ್ಯದ ಮೇಲೂ ಪರಿಣಾಮ: ಕೃಷಿ ಉಲ್ಟಾಪಲ್ಟಾ NAMMUR EXPRESS NEWS ತೀರ್ಥಹಳ್ಳಿ: ಮಲೆನಾಡು ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಮಳೆ ಎಡಬಿಡದೆ ಸುರಿಯುತ್ತಿದೆ, ಒಂದು ಕಡೆ ಮಳೆಯ ಎಫೆಕ್ಟ್ ಆದರೆ ಒಂದೊಮ್ಮೆ ಬಿಸಿಲು ಬಂದು ಮಾಯಾವಾಗುತ್ತದೆ. ರಾತ್ರಿಯ ಸಮಯದಲ್ಲಿ ಚಳಿ ಕೂಡ ಆರಂಭವಾಗಿದೆ. ಮಳೆಗಾಲ ಮುಕ್ತಾಯ ಹಂತದಲ್ಲಿದ್ದರೂ ಮಾನ್ಸೂನ್ ಮಳೆಯ ಅಬ್ಬರ ಹೆಚ್ಚಾಗುತ್ತಲೆ ಇದೆ. ಹೀಗಾಗಿ ವಾತಾವರಣದಲ್ಲಿ ಉಂಟಾಗುವ ಏರುಪೇರು ಜನರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಪ್ರತಿ ಮನೆಯಲ್ಲಿ ಜ್ವರ, ಶೀತ, ಕೆಮ್ಮು ಇಂತಹ ರೋಗಗಳಿಂದ ಜನರು ನರಳಾಡುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಜನರು ಕ್ಯೂ ನಿಂತಿದ್ದಾರೆ. ವಾತಾವರಣದ ಎಫೆಕ್ಟ್ ಆರೋಗ್ಯದ ಮೇಲೆ ಸಮಸ್ಯೆ ಬೀರುತ್ತಿದೆ. ಒಂದು ಕಡೆ ಆರೋಗ್ಯದ ಸಮಸ್ಯೆ ಆದರೆ ಇನ್ನೊಂದು ಕಡೆ ವಾತಾವರಣದಿಂದ ಜನರ ಬದುಕಿನ ಆಧಾರವಾದ ಕೃಷಿಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಮಳೆ,ಬಿಸಿಲು ಕಾರಣ ಅಡಿಕೆಗೆ…

Read More

ನಕಲಿ ವೀಸಾ ನೀಡಿ,ಭಾರತೀಯರನ್ನು ಅಮೆರಿಕಕ್ಕೆ ಕಳುಹಿಸುವ ಗ್ಯಾಂಗ್! * ಐದು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದ ಗ್ಯಾಂಗ್? * ಸುಮಾರು 2,000 ನಕಲಿ ವೀಸಾ ವಿತರಣೆ! NAMMUR EXPRESS NEWS ನವದೆಹಲಿ: ಅಮೆರಿಕಕ್ಕೆ ಉದ್ಯೋಗ ಅಥವಾ ಶಿಕ್ಷಣ ನಿಮಿತ್ತ ಅಮೆರಿಕಕ್ಕೆ ಹೋಗುವ ಕನಸು ಹಲವರದ್ದು. ಆದರೆ, ವೀಸಾದ್ದೇ ಸಮಸ್ಯೆ. ಸೀಮಿತ ವ್ಯಕ್ತಿಗಳಿಗೆ ಅದರಲ್ಲೂ ವರ್ಷಕ್ಕೆ ಇಂತಿಂಥ ದೇಶದಿಂದ ಇಷ್ಟೇ ಮಂದಿಗೆ ವೀಸಾ ನೀಡಬೇಕೆಂಬ ಕೋಟಾವನ್ನು ಅಲ್ಲಿನ ಸರ್ಕಾರ ನಿಗದಿಗೊಳಿಸಿರುವುದರಿಂದ ಹಲವರ ಅಮೆರಿಕ ಕನಸು ಕನಸಾಗಿಯೇ ಉಳಿಯುತ್ತದೆ. ಇದನ್ನೇ ಬಂಡವಾಳವಾಗಿಸಿಕೊಂಡ ದೆಹಲಿಯಲ್ಲಿನ ಒಂದು ಗ್ಯಾಂಗ್, ನಕಲಿ ವೀಸಾಗಳನ್ನು ನೀಡಿ, ಭಾರತೀಯರನ್ನು ಅಮೆರಿಕಕ್ಕೆ ಕಳುಹಿಸುತ್ತಿತ್ತು. ಇದೀಗ, ಆ ಗ್ಯಾಂಗ್ ಅನ್ನು ಹಿಡಿಯುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ದೆಹಲಿಯ ಮನೆಯೊಂದರಲ್ಲಿ ನಕಲಿ ವೀಸಾ ತಯಾರಿಸಲಾಗುತ್ತಿದ್ದು ಅಲ್ಲಿಂದ ಲ್ಯಾಪ್ ಟಾಪ್ ಗಳು, ಪ್ರಿಂಟರ್ ಗಳು, ಸ್ಕ್ಯಾನರ್ ಗಳು ಹಾಗೂ ಂಬಾಸಿಂ್ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಐದು…

Read More

ಟಾಪ್ ನ್ಯೂಸ್ ಕರ್ನಾಟಕ ಗಣೇಶನ ಬಿಡಲು ಹೋಗಿ ಮೂವರ ದುರ್ಮರಣ – ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿ ಘಟನೆ: ಅಪ್ಪ, ಮಗ ಸಾವು ಚಿತ್ರದುರ್ಗ: ಹೊಸದುರ್ಗದಲ್ಲಿ ಬಾವಿಗೆ ಬಿದ್ದು ಅಮ್ಮ, ಮಗು ಸಾವು ಬೆಂಗಳೂರು: ಯುವಕನ ಬಲಿ ಪಡೆದ ನಿಫಾ ವೈರಸ್: ತುರ್ತು ಸಭೆ ಬೆಂಗಳೂರು: ಬೀದಿನಾಯಿ ಕಾಟ: ಸಹಾಯಕ್ಕಾಗಿ ಹೆಲ್ಪ್ ಲೈನ್..! NAMMUR EXPPRESS NEWS ತುಮಕೂರು: ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾರಸಂದ್ರ ಗ್ರಾಮ ಸಮೀಪದ ರಂಗನಹಟ್ಟಿ ಕೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ತಂದೆ, ಮಗ ಸೇರಿ ಮೂವರು ಸಾವನ್ನಪ್ಪಿರುವಂತಹ ದುರ್ಘಟನೆ ಸಂಭವಿಸಿದೆ. ಮೃತರನ್ನು ತಂದೆ ಮಗ, 46 ವರ್ಷದ ರೇವಣ್ಣ, 26 ವರ್ಷದ ಶರತ್ ಹಾಗೂ ದಯಾನಂದ ಎಂದು ಗುರುತಿಸಲಾಗಿದೆ. ಗಣೇಶ ಮೂರ್ತಿ ವಿಸರ್ಜನೆಗೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ. ಏನಿದು ಘಟನೆ?: ಗ್ರಾಮದಲ್ಲಿ ಕೂರಿಸಲಾಗಿದ್ದ ಗಣಪತಿಯನ್ನು ಮೆರವಣಿಗೆಯಲ್ಲಿ ಕೆರೆಯ ಬಳಿ ತರಲಾಗಿತ್ತು. ವಿಸರ್ಜನೆಯ ವೇಳೆ ಶರತ್‌ ಮತ್ತು ದಯಾನಂದ್‌ ಮೂರ್ತಿಯನು ಕೆರೆಯಲ್ಲಿ ಮುಳುಗಿಸಲು ಮುಂದಾದರು.ಆದರೆ ಕೆರೆಯಲ್ಲಿ ಕೆಸರಿದ್ದ…

Read More

ಚಿಕ್ಕಮಗಳೂರಿನಲ್ಲಿ ಪ್ಯಾಲೇಸ್ತೇಸ್ ಧ್ವಜ ಹಿಡಿದು ಓಡಾಟ! – ಬೈಕ್‌ನಲ್ಲಿ ಓಡಾಡಿದ ಅನ್ಯ ಕೋಮಿನ ಯುವಕರು – ಯುವಕರನ್ನು ಬಂಧಿಸುವಂತೆ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ – ಕೊಪ್ಪಳ, ದಾವಣಗೆರೆಯಲ್ಲೂ ಗದ್ದಲ – ಮಂಗಳೂರಲ್ಲಿ ಮಸೀದಿಗೆ ಕಲ್ಲು: ಭಾರೀ ಬಂದೋಬಸ್ತ್ NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಮುಸ್ಲಿಂ ಯುವಕರು ಪ್ಯಾಲೆಸ್ತೀನ್ ಧ್ವಜ ಹಿಡಿದು ದ್ವಿಚಕ್ರ ವಾಹನದ ಮೇಲೆ ಓಡಾಡಿರುವ ವೀಡಿಯೋ ವೈರಲ್ ಆಗಿದೆ. ಪ್ಯಾಲೇಸ್ತೀನ್ ಧ್ವಜ ಹಿಡಿದು ಓಡಾಡಿದ ಮುಸ್ಲಿಂ ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಿಕ್ಕಮಗಳೂರು ನಗರ ಪೋಲೀಸ್ ಠಾಣೆಯ ಮುಂದೆ ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ದೂರು ದಾಖಲಿಸಿದ್ದಾರೆ. ಚಿಕ್ಕಮಗಳೂರು ನಗರದೆಲ್ಲಡೆ ಈದ್ ಮಿಲಾದ್ ಮೆರವಣಿಗೆಗೆ ಸಿದ್ದತೆ ನಡೆಯುತ್ತಿರುವ ವೇಳೆ ನಗರದ ಪ್ರಮುಖ ಬೀದಿಗಳಲ್ಲಿ ಪ್ಯಾಲೇಸ್ತೇನ್ ಧ್ವಜ ಹಿಡಿದು ಓಡಾಡಿದ ವಿಡಿಯೋ ವೈರಲ್ ಆಗಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಠಿಸಿದೆ. ಚಿಕ್ಕಮಗಳೂರು ನಗರದಲ್ಲಿ ಹೀಗೆ ಓಡಾಡಿದ ಮುಸ್ಲಿಂ ಯುವಕರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ…

Read More

ಮಲೆನಾಡಲ್ಲಿ ಮಿಕ್ಸಿಂಗ್ ಅಡಿಕೆ ಅಬ್ಬರ: ಬೆಲೆ ಖೋತಾ?! – ಶಿರಸಿ ಮಾರುಕಟ್ಟೆಯಲ್ಲಿ ಬರ್ಮಾ ಅಡಕೆ ಘಾಟು – ಹೊರ ದೇಶದಿಂದ ಬರುತ್ತೆ: ಇಲ್ಲಿ ಅಡಿಕೆ ಬೆಲೆ ಹೋಗುತ್ತೆ! – ಎಪಿಎಂಸಿ, ಕಸ್ಟಮ್ಸ್, ಕೃಷಿ ಅಧಿಕಾರಿಗಳೇ ಡೀಲ್ ಮಾಸ್ಟರ್? NAMMUR EXPRESS NEWS ಶಿರಸಿ/ ಶಿವಮೊಗ್ಗ: ಮಲೆನಾಡಿನ ಪಾರಂಪರಿಕ ಮಾರುಕಟ್ಟೆಯಲ್ಲಿ ದೇಶಾವರ ಅಡಕೆ ಬೆಲೆಗೆ ಆಪತ್ತು ಎದುರಾಗಿದೆ. ಕಳಪೆ ಅಡಕೆ ದಂಧೆ ಸಕ್ರಿಯವಾಗಿರುವುದು ಇದೀಗ ಉತ್ಕೃಷ್ಟ ದರ್ಜೆಯ ದೇಶಾವರ ಅಡಕೆಯ ಜತೆಗೆ ಕಳಪೆ ಅಡಕೆ ಸೇರಿಸಿ ಮಾರಾಟ ಮಾಡುವ ದಂಧೆ ವ್ಯಾಪಿಸುತ್ತಿದ್ದು, ಅಡಿಕೆ ಮಾನ ಮರ್ಯಾದೆ ತೆಗೆಯುತ್ತಿದೆ. ದೇಶಾವರ ಅಡಕೆ ಬೆಳೆಯುವ ಪ್ರದೇಶದ ಮೂಲ ಕೇಂದ್ರವಾಗಿರುವ ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಹೊಸನಗರ, ಶಿರಸಿ ಭಾಗದಲ್ಲೇ ಕಳಪೆ ದರ್ಜೆ ಅಡಕೆ ವಹಿವಾಟಿನ ದಂಧೆ ಸಕ್ರಿಯವಾಗಿದೆ. ಉತ್ತರ ಭಾರತದ ಪ್ರಮುಖ ರಾಜ್ಯಗಳ ಜತೆ ನೇರ ವಹಿವಾಟು ಹೊಂದಿರುವ ದಂಧೆಕೋರರು ಭೂತಾನ್, ಶ್ರೀಲಂಕಾ, ಮ್ಯಾನ್ಮಾರ್ ದೇಶಗಳು ಸೇರಿದಂತೆ, ಭಾರತದ ಮಾಲಯ, ಆಸ್ಲಾಂ ರಾಜ್ಯದ ಅಡಕೆಯನ್ನು ತೀರ್ಥಹಳ್ಳಿಗೆ ಆಮದು…

Read More

ಮಂಗಳೂರಿನ ಸುರತ್ಕಲ್ ಉದ್ವಿಘ್ನ! – ಕಾಟಿಪಳ್ಳದಲ್ಲಿ ಮಸೀದಿ ಮೇಲೆ ಕಲ್ಲು ತೂರಾಟ: ಭಾರೀ ಅಲರ್ಟ್ – ಶಾಂತಿ ಭಂಗ ಯತ್ನ: ಸಾಮಾಜಿಕ ಜಾಲ ತಾಣದ ಮೇಲೆ ಕಣ್ಣು NAMMUR EXPRESS NEWS ಮಂಗಳೂರು: ಕೋಮು ಸೂಕ್ಷ್ಮ ಪ್ರದೇಶವಾಗಿರುವ ಮಂಗಳೂರಿನ ಹೊರವಲಯದ ಸುರತ್ಕಲ್ ಬಳಿಯ ಕಾಟಿಪಳ್ಳದಲ್ಲಿ ಭಾನುವಾರ ರಾತ್ರಿ ಮಸೀದಿ ಮೇಲೆ ಕಲ್ಲು ತೂರಾಟ ನಡೆದಿದೆ. ಕಾಟಿಪಳ್ಳ 3ನೇ ಬ್ಲಾಕ್‌ನ ಬದ್ರಿಯಾ ಮಸೀದಿ ಮೇಲೆ ಕಲ್ಲೆಸೆತ ನಡೆದಿದೆ. ಕಲ್ಲು ತೂರಾಟದಿಂದ ಮಸೀದಿಯ ಗಾಜು ಪುಡಿ ಪುಡಿಯಾಗಿದೆ. ಈಗ ಸ್ಥಳದಲ್ಲಿ ಭಾರೀ ಅಲರ್ಟ್ ಮಾಡಲಾಗಿದೆ. ಭಾನುವಾರ ರಾತ್ರಿ 10.30ರ ಸುಮಾರಿಗೆ 2 ಬೈಕ್‌ಗಳಲ್ಲಿ ಬಂದಿದ್ದ ನಾಲ್ವರು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಟಿಪಳ್ಳದ ಮಸೀದಿಗೆ ಸದ್ಯ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಪ್ರಚೋದನಕಾರಿ ಹೇಳಿಕೆ: ಹಿಂದೂ ಮುಖಂಡರ ವಿರುದ್ದ ಪ್ರಕರಣ ಪ್ರಚೋದನಕಾರಿ ಹೇಳಿಕೆ ನೀಡಿದ ವಿಚಾರವಾಗಿ ವಿಎಚ್‌ಪಿ ಹಾಗೂ ಬಜರಂಗದಳ ಮುಖಂಡರಾದ ಶರಣ್ ಪಂಪ್‌ವೆಲ್‌ ಮ್ತ ಪುನೀತ್…

Read More

ಒಂದು ರಾಷ್ಟ್ರ, ಒಂದು ಚುನಾವಣೆ ಜಾರಿಗೆ ಪ್ಲಾನ್? – ಒಟ್ಟಿಗೆ ಚುನಾವಣೆ: ಯೋಜನೆ ಜಾರಿಗೆ ಸಿದ್ಧತೆ – ಮೋದಿ ಸರ್ಕಾರ 100 ದಿನ ಪೂರೈಸಿದ ಸಂಭ್ರಮ NAMMUR EXPRESS NEWS ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ‘ಒಂದು ರಾಷ್ಟ್ರ, ಒಂದು ಚುನಾವಣೆ’ಯನ್ನು ಜಾರಿಗೆ ತರಲಿದೆ. ಈ ಸುಧಾರಣೆಗೆ ಎಲ್ಲ ಪಕ್ಷಗಳ ಬೆಂಬಲ ಸಿಗಲಿದೆ ಎಂಬ ವಿಶ್ವಾಸ ಸರ್ಕಾರಕ್ಕಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ-3ನೇ ಅವಧಿಯ ಸರ್ಕಾರ 100 ದಿನಗಳನ್ನು ಪೂರ್ಣಗೊಳಿಸಿದೆ. ಆಡಳಿತಾರೂಢ ಮೈತ್ರಿಕೂಟದ ಒಗ್ಗಟ್ಟು ಇನ್ನು ಉಳಿದ ಅಧಿಕಾರಾವಧಿಯವರೆಗೆ ಮೋದಿ ಮುಂದುವರಿಯುತ್ತಾರೆ.ಈ ಅಧಿಕಾರಾವಧಿಯಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ. ಆಗಸ್ಟ್ 15 ರ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯ ಮೇಲೆ ನಿಂತು ಮಾತನಾಡಿದ ಪ್ರಧಾನಿ, ‘ಒಂದು ರಾಷ್ಟ್ರ, ಒಂದು ಚುನಾವಣೆ’ಯನ್ನು ಪ್ರತಿಪಾದಿಸಿದರು. ಹಲವಾರು ಚುನಾವಣೆಗಳು ನಡೆಯುತ್ತಿದ್ದರೆ ದೇಶದ ಪ್ರಗತಿಯಲ್ಲಿ ಉಂಟಾಗುತ್ತವೆ. ‘ಒಂದು ರಾಷ್ಟ್ರ, ಒಂದು ಚುನಾವಣೆ’ಗಾಗಿ ರಾಷ್ಟ್ರವು ಮುಂದೆ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಮೇಷ ರಾಶಿಯವರಿಗೆ ಇಂದು ಸಾಮಾನ್ಯ ದಿನವಾಗಿರುತ್ತದೆ. ಸಂಬಂಧದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೂ, ನೀವಿಬ್ಬರೂ ಒಟ್ಟಿಗೆ ಸಮಯ ಕಳೆಯಲು ಇಷ್ಟಪಡುತ್ತೀರಿ. ವೃತ್ತಿಪರರು ಸವಾಲುಗಳನ್ನು ಧನಾತ್ಮಕವಾಗಿ ನಿಭಾಯಿಸುತ್ತಾರೆ. ಹಣವೂ ಧನಾತ್ಮಕವಾಗಿರುತ್ತದೆ. ಪ್ರೀತಿಯ ವ್ಯವಹಾರಗಳಲ್ಲಿ ತಾಳ್ಮೆಯಿಂದಿರಿ ಮತ್ತು ಇದು ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿಮಗೆ ಸಹಾಯ ಮಾಡುತ್ತದೆ. ** ವೃಷಭ ರಾಶಿ : ಇಂದು ಅಧಿಕ ಖರ್ಚುಗಳಿಂದ ಮನಸ್ಸು ಚಿಂತೆಗೀಡಾಗುತ್ತದೆ. ಸ್ತ್ರೀಯರು ತಮ್ಮ ಸಂಬಂಧಿಕರಿಂದ ತೊಂದರೆಗಳನ್ನು ಎದುರಿಸಬಹುದು. ನಿಮ್ಮ ಕುಟುಂಬದ ಸದಸ್ಯರ ಆರೋಗ್ಯದ ಕಡೆ ಗಮನ ಕೊಡಿ. ನಿಮ್ಮ ಸಂಗಾತಿಯೊಂದಿೆ ನೀವ ಪ್ರಣಯ ಭೋಜನವನ್ನು ಯೋಜಿಸಬಹುದು. ಇದು ಪ್ರೀತಿಯ ಸಂಬಂಧಗಳಲ್ಲಿ ಮಾಧುರ್ಯವನ್ನು ತರುತ್ತದೆ. ಕೆಲಸದ ಜವಾಬ್ದಾರಿಗಳನ್ನು…

Read More

ಮಲೆನಾಡು ಸೊಸೈಟಿ ನೂತನ ಕಟ್ಟಡ ಉದ್ಘಾಟನೆಗೆ ಸಜ್ಜು! – ಸೆ. 21ರಂದು ಮಲೆನಾಡು ಭವನ” ನೂತನ ಕಟ್ಟಡ ಉದ್ಘಾಟನಾ ಸಮಾರಂಭ – ರಾಜಧಾನಿ ಮಲೆನಾಡಿಗರ ಹೆಮ್ಮೆಯ ಸಹಕಾರ ಸಂಸ್ಥೆ NAMMUR EXPRESS NEWS  ಬೆಂಗಳೂರು: ಮಲೆನಾಡ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ನಲ್ಲಿ ಮಲೆನಾಡು ಭವನ” ನೂತನ ಕಟ್ಟಡ ಉದ್ಘಾಟನಾ ಸಮಾರಂಭ 21-09-2024ನೇ ಶನಿವಾರ, ಬೆಳಿಗ್ಗೆ 9-30 ಗಂಟೆಗೆ ಸರ್.ಎಂ. ವಿಶ್ವೇಶ್ವರಯ್ಯ ಲೇಔಟ್. 8ನೇ ಬ್ಲಾಕ್, ಕುವೆಂಪು ರಸ್ತೆ, ದ.ರಾ. ಬೇಂದ್ರ ಅಡ್ಡರಸ್ತೆ, ಅನ್ನಪೂರ್ಣೇಶ್ವರಿನಗರ, ಬೆಂಗಳೂರು ಇಲ್ಲಿ ನೆರವೇರಲಿದೆ. ಉದ್ಘಾಟನೆಯನ್ನು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು, ಪೀಠಾಧ್ಯಕ್ಷರು, ಶ್ರೀ ಆದಿಚುಂಚನಗರ ಮಹಾಸಸ್ಥಾನ ಮಠ ವರು ಈ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಆರಗ ಜ್ಞಾನೇಂದ್ರ ಮಾಜಿ ಗೃಹ ಸಚಿವರು ಹಾಗೂ ಶಾಸಕರು, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ, ಶ್ರೀ ಎಸ್.ಟಿ. ಸೋಮಶೇಖರ್, ಶ್ರೀ ಟಿ.ಡಿ. ರಾಜೇಗೌಡ ಶ್ರೀ ಪಿ. ಮಹೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ.…

Read More

ಕರಾವಳಿ ನ್ಯೂಸ್  * ಕಾರ್ಕಳ:ಜೈಲಿನಲ್ಲಿದ್ದ ಮಗನ ಮಾತನಾಡಿಸಿ ಬಂದ ತಾಯಿ ಆತ್ಮಹತ್ಯೆ! * ಕರ್ತವ್ಯಲೋಪ: 80 ಪೊಲೀಸ್‌ ಸಿಬ್ಬಂದಿ ಅಮಾನತು; ಎಸ್‌ಪಿ ಕಟ್ಟುನಿಟ್ಟಿನ ಕ್ರಮ * ಕುಂದಾಪುರ: ಮೀನುಗಾರಿಕೆ ವೇಳೆ ಆಯತಪ್ಪಿ ಸಮುದ್ರಕ್ಕೆ ಬಿದ್ದು ವ್ಯಕ್ತಿ ಮೃತ್ಯು NAMMUR EXPRESS NEWS ಕಾರ್ಕಳ: ಪ್ರಕರಣವೊಂದರಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಗನನ್ನು ಮಾತಾಡಿಸಿಕೊಂಡು ಬಂದ ತಾಯಿ ಅದೇ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನಪ್ಪಿದ ಘಟನೆ ನಲ್ಲೂರು ಎಂಬಲ್ಲಿ ನಡೆದಿದೆ. ನಲ್ಲೂರು ಗ್ರಾಮದ ಪ್ರೇಮಾ ಮೃತರು. ಪುತ್ರ ಸುಮಂತ್‌ ಎಂಬಾತನನ್ನು ಕಾರ್ಕಳ ನಗರ ಪೊಲೀಸರು ಒಂದೂವರೆ ತಿಂಗಳ ಹಿಂದೆ ವಾರಂಟ್‌ನಲ್ಲಿ ಬಂಧಿಸಿದ್ದರು. ಹಿರಿಯಡ್ಕ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಗನನ್ನು ತಾಯಿ ಪ್ರೇಮಾ ಸೆ.11ರಂದು ಜೈಲಿಗೆ ತೆರಳಿ ಮಾತಾಡಿಸಿಕೊಂಡು ಬಂದಿದ್ದರು. ಬಳಿಕ ಚಿಂತೆಯಲ್ಲಿದ್ದ ಅವರು ರಾತ್ರಿ ಊಟ ಮಾಡಿ ಮಲಗಿದ್ದರು. ಮರುದಿನ ಬೆಳಗ್ಗೆ ಅವರು ಕಾಣದಿದ್ದಾಗ ಮನೆಯವರು ಹುಡುಕಾ ವೇಳೆ ಮನೆ ಪಕ್ಕದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ…

Read More