ದೇಶದಾದ್ಯಂತ ಈದ್ ಮಿಲಾದ್ ಹಬ್ಬದ ಸಂಭ್ರಮ! * ಪ್ರವಾದಿ ಮುಹಮ್ಮದ್ ಜನ್ಮ ದಿನ ಆಚರಣೆ * ಎಲ್ಲೆಡೆ ದಾನ, ಧರ್ಮದ ಕಾರ್ಯಕ್ರಮ NAMMUR EXPRESS NEWS ಮುಸ್ಲಿಮರು ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಈದ್-ಎ-ಮಿಲಾದ್ ಎಂದು ಆಚರಿಸುತ್ತಿದ್ದಾರೆ. ಈ ದಿನವನ್ನು ನಬಿದ್, ಮೌಲಿದ್ ಅಥವಾ ಮೌಲಿದ್ ಆನ್-ನಬಿ ಎಂದೂ ಕರೆಯಲಾಗುತ್ತದೆ. ಅನೇಕ ದೇಶಗಳು ಈ ದಿನವನ್ನು ಸಾರ್ವಜನಿಕ ರಜಾದಿನವಾಗಿಯೂ ಆಚರಿಸುತ್ತವೆ. ಈದ್-ಎ-ಮಿಲಾದ್ ದಿನಾಂಕ ಚಂದ್ರನ ಸ್ಥಾನವನ್ನು ಅವಲಂಬಿಸಿರುತ್ತದೆ. ಸಂಜೆಯಿಂದ ಚಂದ್ರ ನೋಡುವುರದಿಂದ ಆಚರಣೆ ಆರಂಭವಾಗಿ ನಡೆಯುತ್ತದೆ. ಈದ ಮಿಲಾದ್ ಇತಿಹಾಸ ಮುಸ್ಲಿಂ ಸಮುದಾಯಕ್ಕೆ ಈ ದಿನವು ಅತ್ಯಂತ ಮಹತ್ವದ್ದಾಗಿದೆ. ಪ್ರವಾದಿ ಮುಹಮ್ಮದ್ ಇಸ್ಲಾಮಿಕ್ ಕ್ಯಾಲೆಂಡರ್‌ನ ಮೂರನೇ ತಿಂಗಳ 12 ನೇ ತಾರೀಖಿನಂದು ಜನಿಸಿದರು. ಇಸ್ಲಾಮಿಕ್ ನಂಬಿಕೆಯ ಪ್ರಕಾರ, ಪ್ರವಾದಿ ಕ್ರಿಸ್ತಶಕ 517 ರಲ್ಲಿ ಜನಿಸಿದರು. ಈದ-ಈ-ಮಿಲಾದ್ ನ ಮೊದಲ ಹಬ್ಬವನ್ನು ಈಜಿಪ್ಟ್‌ನಲ್ಲಿ ಆಚರಿಸಲಾಯಿತು ಎಂದು ಹೇಳಲಾಗಿದೆ. 11ನೇ ಶತಮಾನದ ಆಗಮನದಂದಿೆ, ಇನ್ನು ಪ್ರಪಂಚದಾದ್ಂತ ಆಚರಿಸಲು ಪ್ರಾರಂಭಿಸಿದರು. ಈದ್ ಮಿಲಾದ್ ಆಚರಣೆ…
Author: Nammur Express Admin
ಅಡಿಕೆ ಆಯ್ತು, ಈಗ ಕಾಳುಮೆಣಸು ದರ ಇಳಿಕೆ!? – ವಿದೇಶದಿಂದ ಆಮದು ಮಾಡಿಕೊಳ್ಳುವ ನಿರ್ಧಾರ – ಕಾಳುಮೆಣಸಿಗೆ ರಿಯಾಯಿತಿ ಘೋಷಿಸಿದ ಕೇಂದ್ರ ಸರಕಾರ – ರೈತರು, ವ್ಯಾಪಾರಿಗಳಿಗೆ ಆತಂಕ NAMMUR EXPRESS NEWS ಬೆಂಗಳೂರು: ಕಾಳುಮೆಣಸು ಬೆಲೆ ಏರಿಕೆ ಬಳಿಕ ತುಸು ಕುಸಿದು ಮತ್ತೆ ಏರಿಕೆಯಾಗಿದ್ದರೂ ವಿದೇಶದಿಂದ ಆಮದು ಮಾಡಿಕೊಳ್ಳುವ ಕಾಳುಮೆಣಸಿಗೆ ಹೆಚ್ಚು ರಿಯಾಯಿತಿ ನೀಡಲು ಕೇಂದ್ರ ಸರಕಾರ ಮುಂದಾಗಿರುವುದಕ್ಕೆ ರೈತರು, ವ್ಯಾಪಾರಿಗಳು ಆತಂಕಕ್ಕೊಳಗಾಗಿದ್ದಾರೆ. ವಿದೇಶಗಳಿಂದ ಕಾಳುಮೆಣಸು ಆಮದು ಮಾಡಿ, ಮೌಲ್ಯವರ್ಧಿತ ಉತ್ಪನ್ನವಾಗಿ ಮತ್ತೆ ವಿದೇಶಕ್ಕೆ ರಫ್ತು ಮಾಡಲು ಆರು ತಿಂಗಳವರೆಗೆ ಸರಕುಗಳನ್ನು ಇರಿಸಿಕೊಳ್ಳಲು ಕಂಪನಿಗಳಿಗೆ ಅನುಮತಿ ನೀಡಲು ವಾಣಿಜ್ಯ ಸಚಿವಾಲಯ ಆದೇಶಿಸಿದೆ. ಈ ಹೊಸ ಆದೇಶದಿಂದ ವಿದೇಶಿ ಕಾಳುಮೆಣಸು ಹೆಚ್ಚು ಮಾರುಕಟ್ಟೆಗೆ ಬರಲು ಹಾಗೂ ಆ ಮೂಲಕ ಬೆಲೆ ಕುಸಿತಕ್ಕೆ ದಾರಿ ಮಾಡಿಕೊಡಲಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ತಿಂಗಳಲ್ಲಿ ಬೇರೆಬೇರೆ ದೇಶಗಳಿಂದ 5,065 ಟನ್ ಕಾಳುಮೆಣಸು ಆಮದು ಮಾಡಿಕೊಳ್ಳಲಾಗಿದೆ. ಶ್ರೀಲಂಕಾದಿಂದ 4,405 ಟನ್ ಮದಾಗಿದೆ. ಮುಕ್ತ ವ್ಯಪಾರ…
ಮೂರೂವರೆ ವರ್ಷದ ಮಗುವಿನ ಮೇಲೆ ತೀವ್ರ ತರಹದ ಹಲ್ಲೆ!! * ಪ್ರಜ್ಞಾಹೀನ ಸ್ಥಿತಿಯಲ್ಲಿ ಮಗು! * ಹೆಬ್ರಿ ತಾಲೂಕಿನ ಚಕ್ಕರಮಕ್ಕಿ ಶೇಡಿಮನೆ ಎಂಬಲ್ಲಿ ಈ ಘಟನೆ NAMMUR EXPRESS NEWS ಉಡುಪಿ: ಮೂರೂವರೆ ವರ್ಷದ ಮಗುವಿನ ಮೇಲೆ ತೀವ್ರ ತರಹದ ಹಲ್ಲೆ ನಡೆದಿದ್ದು, ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 3 ವರ್ಷ 9 ತಿಂಗಳ ಮಗುವನ್ನು ಪೋಷಕರು ಉಡುಪಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕರೆತಂದಿದ್ದರು. ಮಗುವಿಗೆ ಹುಷಾರಿಲ್ಲ ಎಂದು ಚಿಕಿತ್ಸೆ ಕೊಡಿಸಲು ಕರೆ ತಂದಿದ್ದ ತಾಯಿ ಮಗುವಿನ ಮೈ ಮೇಲೆ ತೀವ್ರ ತರಹದ ಗಾಯ ಆಗಿರುವುದನ್ನು ಗಮನಿಸಿದ್ದಾರೆ. ಬಳಿಕ ಡಿಹೆಚ್‌ಓ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಕೆಎಂಸಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಆಸ್ಪತ್ರೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಭೇಟಿ ನೀಡಿದ್ದು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಮಗುವಿನ ಮೇಲಾದ ಗಾಯದ ಬಗ್ಗೆ ಪೋಷಕರು ಸ್ಪಷ್ಟ ಮಾಹಿತಿ ನೀಡಿಲ್ಲ. ಪ್ರಜ್ಞಾಹೀನ ಸ್ಥಿತಿಯಲ್ಲಿರುವುದರಿಂದ ಮಗುವಿನಿಂದಲೂ…
ತೀರ್ಥಹಳ್ಳಿ ಬಸ್ ನಿಲ್ದಾಣದಲ್ಲಿ ಗಣೇಶೋತ್ಸವ ರಂಗು! – ಸಾವಿರಾರು ಜನರ ಮನ ಸೆಳೆದ ಲೋಕನಾಥ್ ಆರ್ಕೆಸ್ಟ್ರಾ – ಸಾವಿರಾರು ಜನರಿಗೆ ಅನ್ನ ಸಂತರ್ಪಣೆ: ಇಂದು ಡಾನ್ಸ್ – ಸೆ. 15ರಂದು ಅದ್ದೂರಿ ಗಣೇಶ ವಿಸರ್ಜನೆ: ಸರ್ವರಿಗೂ ಸ್ವಾಗತ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಬಸ್ ನಿಲ್ದಾಣದಲ್ಲಿ ಗಣೇಶೋತ್ಸವ ರಂಗು ಮನೆ ಮಾಡಿದೆ. ಶುಕ್ರವಾರ ಸಂಜೆ ಲೋಕನಾಥ್ ಆರ್ಕೆಸ್ಟ್ರಾ ಸಾವಿರಾರು ಜನರ ಮನ ಸೆಳೆಯಿತು. ಹಾಡು, ನೃತ್ಯಕ್ಕೆ ಸೇರಿದ್ದ ಜನರು ಹೆಜ್ಜೆ ಹಾಕಿದರು. ಶನಿವಾರ ಮಧ್ಯಾಹ್ನ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಸಂಜೆ ತೀರ್ಥಹಳ್ಳಿ ಕಲಾವಿದರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಸೆ.15ರಂದು ಮಧ್ಯಾಹ್ನದಿಂದ ಅದ್ದೂರಿ ಗಣೇಶ ವಿಸರ್ಜನೆ ನಡೆಯಲಿದೆ. ಸರ್ವರನ್ನು ಬಸ್ ಸ್ಟಾಂಡ್ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರದೀಪ್ ಸ್ವಾಗತಿಸಿದ್ದಾರೆ.
ಸೀಬಿನಕೆರೆ ಶಾಲೆಯಲ್ಲಿ ಮಕ್ಕಳ ಸಂಭ್ರಮ! – ಕೃಷ್ಣ ವೇಷ ಮತ್ತು ಛದ್ಮವೇಷ: ಮಕ್ಕಳ ಪ್ರತಿಭೆಗೆ ಸಾಕ್ಷಿ – ಗಮನ ಸೆಳೆದ 70ಕ್ಕೂ ಹೆಚ್ಚು ಮಕ್ಕಳ ವಿವಿಧ ವೇಷ NAMMUR EXPRESS NEWS ತೀರ್ಥಹಳ್ಳಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತೀರ್ಥಹಳ್ಳಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೀಬಿನಕೆರೆ (ಕನ್ನಡ ಮತ್ತು ಆಂಗ್ಲ ಮಾಧ್ಯಮ) ಶಾಲೆಯಲ್ಲಿ ಕೃಷ್ಣ ವೇಷ ಮತ್ತು ಛದ್ಮವೇಷ ಸ್ಪರ್ಧೆ ನೂರಾರು ಮಕ್ಕಳ ಪ್ರತಿಭೆಗೆ ಸಾಕ್ಷಿಯಾಯಿತು. ಎಸ್.ಡಿ.ಎಂ.ಸಿ., ಹಿರಿಯ ವಿದ್ಯಾರ್ಥಿಗಳು, ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ ಸ.ಹಿ.ಪ್ರಾ.ಶಾಲೆ ಸೀಬಿನಕೆರೆ ಹಾಗೂ ಪೋಷಕರು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಕೃಷ್ಣ ವೇಷ ಮತ್ತು ಛದ್ಮವೇಷ ಕಾರ್ಯಕ್ರಮವನ್ನು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹತುಲ್ಲಾ ಅಾದಿ, ಿಇಓ ಗಣೇಶ, ಪಟ್ಟಣ ಪಂಚಾಯತ್ ಸದಸ್ಯರಾದ ರತ್ನಾಕರ್ ಶೆಟ್ಟಿ, ತೀರ್ಪುಗಾರರಾದ ವಸಂತಿ, ಸಾವಿತ್ರಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಾಜೇಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮದಾಸ್ ಪ್ರಭು, ಸಾವಿತ್ರಿ ಮುಖ್ಯ ಉಪಾಧ್ಯಯರು ಸೇರಿ ಪೋಷಕರು, ಶಾಲಾ…
ಆಧಾರ್ ಅಪ್ಡೇಟ್ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ! * ಶುಲ್ಕವಿಲ್ಲದೆ ಆಧಾರ್ ಅಪ್ ಡೇಟ್ ಮಾಡುವ ಸೌಲಭ್ಯ! * 10 ವರ್ಷಗಳಿಗೊಮ್ಮೆ ಆಧಾರ್ ಸಂಖ್ಯೆ ನವೀಕರಿಸುವುದು ಕಡ್ಡಾಯ! NAMMUR EXPRESS NEWS ನವದೆಹಲಿ: ಉಚಿತವಾಗಿ ಆಧಾರ್ ನವೀಕರಣ ಮಾಡುವ ಅವಧಿಯನ್ನು ಕೇಂದ್ರ ಸರ್ಕಾರ ಡಿಸೆಂಬರ್ 14ರವರೆಗೆ ವಿಸ್ತರಿಸಿದೆ. ಪ್ರಸ್ತುತ ದೇಶಾದ್ಯಂತ 140 ಕೋಟಿ ಆಧಾರ್ ಕಾರ್ಡ್‌ಗಳಿವೆ. ಇವರಲ್ಲಿ 100 ಕೋಟಿ 50 ಲಕ್ಷ ಜನರು ಮಾತ್ರ ತಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಿದ್ದಾರೆ. ಈ ಮೊದಲು ಕೆಂದ್ರ ಸರ್ಕಾರ ಸೆಪ್ಟೆಂಬರ್ 14ರ ಗಡುವು ನಿಗದಿಪಡಿಸಿತ್ತು. ಆದರೆ ಇದೀಗ ಡಿಸೆಂಬರ್ 14ರೊಳಗೆ ಯಾವುದೇ ಶುಲ್ಕವಿಲ್ಲದೆ ಆಧಾರ್ ಅಪ್ ಡೇಟ್ ಮಾಡುವ ಸೌಲಭ್ಯ ಕಲ್ಪಿಸಿದೆ. ಭಾರತದಲ್ಲಿ ಯಾವುದೇ ವ್ಯಕ್ತಿ, ವಯಸ್ಸು ಅಥವಾ ಲಿಂಗವನ್ನು ಲೆಕ್ಕಿಸದೆ, ನವಜಾತ ಶಿಶುವಿನಿಂದ ಹಿಡಿದು ಪ್ರತಿಯೊಬ್ಬರಿಗೂ ಆಧಾರ್ ಸಂಖ್ಯೆ ಅತ್ಯಗತ್ಯವಾಗಿದೆ. ಈ ಮೂಲಕ ಆ ವ್ಯಕ್ತಿಯ ಬಗ್ಗೆ ಎಲ್ಲ ಮಾಹಿತಿ ಪಡೆಯಬಹುದು. ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಕವ ಒಂದು ಆಧಾರ್…
ಬಿಜೆಪಿ, ಜ್ಞಾನೇಂದ್ರ ಕೋಮು ಗಲಭೆಯ ಸೃಷ್ಟಿಕರ್ತರು! – ನಾಗ ಮಂಗಲ ಘಟನೆಯನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ – ಕಾಂಗ್ರೆಸ್ ಮಾಜಿ ಶಾಸಕರು ಕಿಮ್ಮನೆ ರತ್ನಾಕರ್ ಹೇಳಿಕೆ NAMMUR EXPRESS NEWS ತೀರ್ಥಹಳ್ಳಿ: ಬಿಜೆಪಿ, ಜ್ಞಾನೇಂದ್ರ ಕೋಮು ಗಲಭೆಯ ಸೃಷ್ಟಿಕರ್ತರು. ನಾಗ ಮಂಗಲ ಘಟನೆಯನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಕಛೇರಿ ಗಾಂಧಿ ಭವನದಲ್ಲಿ ಸೆ.14ರಂದು ಕಿಮ್ಮನೆ ರತ್ನಾಕರ್ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದರು. ನಾಗಮಂಗಲ ಘಟನೆ ಬಗ್ಗೆ ಬಿಜೆಪಿಯವರ ಹೇಳಿಕೆ ಬೆಂಕಿ ಆರಿಸಲು ಬಂದವರಲ್ಲ ಎಂದು ತಿಳಿಯುತ್ತದೆ,. ಇದು ಪೂರ್ವಸಿದ್ಧತೆ ಕಾರ್ಯಕ್ರಮ. ದೇಶದಲ್ಲಿ ಹಿಂಧೂಗಳನ್ನು ಎದುರು ಹಾಕಿಕೊಂಡು ರಾಜಕೀಯ ಮಾಡಲು ಸಾಧ್ಯವೇ? ಎಂದು ಳಿದು. ೀರ್ಥಹಳ್ಳಿಯಲ್ಲಿ ನಡೆದ ಕೋಮು ಗಲಭೆಗೆ ಮುಖ್ಯ ಕಾರಣ ಬಿಜೆಪಿ ಪಕ್ಷ ಮತ್ತು ಜ್ಞಾನೇಂದ್ರ ಕೋಮು ಗಲಭೆಯ ಸೃಷ್ಟಿಕರ್ತರು ಎಂದು ಹೇಳಿದರು. ದೇಶದ ಹಿತದೃಷ್ಟಿಯಿಂದ ಎಲ್ಲಾ ಜಾತಿಯವರನ್ನು ಸಮಾನವಾಗಿ ನೋಡಿಕೊಳ್ಳಬೇಕು.ಕಾಂಗ್ರೆಸ್ ಹಿಂಧೂ ವಿರೋಧಿ ಪಕ್ಷವಲ್ಲ ಎಂದರು.…
ಶೃಂಗೇರಿ ಸಾರ್ವಜನಿಕ ಗಣೇಶ ವಿಸರ್ಜನೆ – ಅದ್ದೂರಿ ಮೆರವಣಿಗೆಯೊಂದಿಗೆ ಗಣಪತಿ ವಿಸರ್ಜನೆ ಮಾಡಿದ ಸಾರ್ವಜನಿಕರು – ಎಲ್ಲರ ಗಮನ ಸೆಳೆದ ಶ್ರೀರಾಮ ಟ್ಯಾಬ್ಲೋ NAMMUR EXPRESS NEWS ಶೃಂಗೇರಿ: ಶೃಂಗೇರಿ ಪಟ್ಟಣದ ಗೌರಿಶಂಕರ ಸಭಾಂಗಣದಲ್ಲಿ ಕಳೆದ ಏಳು ದಿನಗಳ ಕಾಲ ನಡೆದ ಶ್ರೀಮಹಾಗಣಪತಿ ಸೇವಾ ಸಮಿತಿ ಶೃಂಗೇರಿ ಹಾಗೂ ಪಟ್ಟಣ ಪಂಚಾಯ್ತಿ ಶೃಂಗೇರಿಯ 66ನೇ ವರ್ಷದ ಸಾರ್ವಜನಿಕ ಗಣೇಶೋತ್ಸವಕ್ಕೆ ಅದ್ದೂರಿ ತೆರೆಬಿದ್ದಿದೆ. ಶೃಂಗೇರಿ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮಾಡುವ ಮೂಲಕ ಗಣಪತಿ ವಿಸರ್ಜಿಸಲಾಗಿದೆ. ವಿಸರ್ಜನಾ ಮೆರವಣಿಗೆಯಲ್ಲಿ ನೂರಾರು ಸಾರ್ವಜನಿಕರು ಭಾಗವಹಿಸಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಪೋಲೀಸ್ ಇಲಾಖೆಯಿಂದ ಬಿಗಿಬಂದೋಬಸ್ತ್ ಕಲ್ಪಿಸಲಾಗಿತ್ತು. ಮೆರವಣಿಗೆಯಲ್ಲಿ ಿಶೇಷವೇನಿತ್ತು..? ಗೌರಿಶಂಕರ್ ಸಂಭಾಂಗಣದಿಂದ ಹೊರಟ ಮೆರವಣಿಗೆ ಹರಿಹರ ಬೀದಿ ಮುಖಾಂತರ ಮುಖ್ಯ ಬಸ್ ನಿಲ್ದಾಣ ಮಾರ್ಗವಾಗಿ ಹೊಸ್ಕೆರೆಯವರೆಗೆ ತೆರಳಿ ನಂತರ ಅದೇ ಮಾರ್ಗವಾಗಿ ಕಟ್ಟೆಬಾಗಿಲಿಗೆ ಬಂದು ಭಾರತೀ ಬೀದಿ ಮುಖಾಂತರ ಪಟ್ಟದ ಸ್ವಾಗತ ಮಂಟಪ ವೆಲ್ಕಂ ಗೇಟ್‌ವರೆಗೂ ಸಾಗಿ ನಂತರ ಅದೇ ಮಾರ್ಗವಾಗಿ ಶ್ರೀಮಠದ ಎದುರು ಬಂದು…
ಮಲೆನಾಡಲ್ಲಿ ಸುಧಾಕರ್ ಶೆಟ್ಟಿ ಅವರಿಂದ ಉದ್ಯೋಗ ಪರ್ವ! – 250ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಅವಕಾಶ – ಅಮ್ಮ ಫೌಂಡೇಶನ್ ಮೂಲಕ ಕೊಪ್ಪದಲ್ಲಿ ನೂತನ ಗಾರ್ಮೆಂಟ್ಸ್ NAMMUR EXPRESS NEWS ಕೊಪ್ಪ: ಮಲೆನಾಡಿನ ಮಹಿಳೆಯರ ಸ್ವಾವಲಂಬನೆಗೆ ಅಮ್ಮ ಫೌಂಡೇಶನ್ ಸಂಸ್ಥಾಪಕರಾದ ಸುಧಾಕರ್ ಎಸ್ ಶೆಟ್ಟಿ ತುಮಖಾನೆ ಅವರ ಕನಸಿನ ಯೋಜನೆ ಆರಂಭ ಮಾಡಲು ಮುಂದಾಗಿದ್ದಾರೆ. ಮಲೆನಾಡಿನ ಮಹಿಳೆಯರ ಸ್ವಾವಲಂಬನೆಗೆ ಇನ್ನಷ್ಟು ಶಕ್ತಿ ನೀಡಲು ಕೊಪ್ಪ ನಗರದ, ಟಿ.ಎಮ್ ರಸ್ತೆಯಲ್ಲಿ .” ತುಮಖಾನೆ ಸಂಜೀವ ಶೆಟ್ಟಿ ಗಾರ್ಮೆಂಟ್ಸ್” ನೂತನವಾಗಿ ಆರಂಭಗೊಳ್ಳಲಿದೆ. ಗ್ರಾಮೀಣ ಭಾಗದಲ್ಲಿ ಉದ್ಯೋಗವಕಾಶ ನೀಡುವ ಈ ಯೋಜನೆಯಲ್ಲಿ ಮೊದಲ ಹಂತದಲ್ಲಿ 250 ಉದ್ಯೋಗಿಗಳಿಗೆ ಉದ್ಯೋಗವಕಾಶವಿದ್ದು ನುರಿತ ಅಧಿಕಾರಿಗಳು, ಆಸಕ್ತ ೈಲ್‌ಗಳು ಬೇಕಾಗಿದ್ದಾರೆ. ಯಾವುದೇ ಅನುಭವ ಇಲ್ಲದಿದ್ದಲ್ಲಿ ತರಬೇತಿ ನೀಡಿ ಕೆಲಸ ನೀಡಲಾಗುವುದು. ಆಸಕ್ತಿ ಇರುವ ಪ್ರತಿಯೊಬ್ಬ ಮಹಿಳೆಯರು ಕೊಪ್ಪದ ಬಾಳಗಡಿಯ ತಾಲೂಕು ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿರುವ ಆಫೀಸಿಗೆ ಖುದ್ದಾಗಿ ಭೇಟಿ ನೀಡಿ ನಿಮ್ಮ ಮಾಹಿತಿಯನ್ನು ತಿಳಿಸಿ. ಶೀಘ್ರದಲ್ಲಿ ಗಾರ್ಮೆಂಟ್ಸ್ ಶುರುವಾಗಲಿದೆ. ಶಿಕ್ಷಣ…
ಕರ್ನಾಟಕ ಟಾಪ್ ನ್ಯೂಸ್ ಜೆಡಿಎಸ್ ಪಕ್ಷದ ನಾಯಕಿ ರೇಪ್: ಪ್ರಜ್ವಲ್ ರೇವಣ್ಣ ವಿರುದ್ಧ ಮೂರನೇ ಚಾರ್ಜ್ ಶೀಟ್! * ದರ್ಶನ್ ಗ್ಯಾಂಗ್‌ಗೆ ಜೈಲೇ ಗತಿ * ಪ್ರಿಯಕರನಿಗಾಗಿ ತಾಯಿಯನ್ನೇ ಕೊಂದ ಮಗಳು! * ಮಾಜಿ ಸಚಿವ, ಶಾಸಕ ಮುನಿರತ್ನ ವಿರುದ್ಧ ಎಫ್ಐಆರ್ * ಚಾಕುವಿನಿಂದ ಇರಿದು ವಾಟರ್‌ಮ್ಯಾನ್ ಬರ್ಬರ ಹತ್ಯೆ NAMMUR EXPRESS NEWS ಬೆಂಗಳೂರು: ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್‌ಐಟಿ ಪೊಲೀಸರು ಮೂರನೇ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪಕ್ಷಕ್ಕೆ ಸೇರಿದ ಮಹಿಳೆಯೊಬ್ಬರಿಗೆ ಹಲವು ಬಾರಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. 1691 ಪುಟಗಳ ಆರೋಪಪಟ್ಟಿಯಲ್ಲಿ 120 ಸಾಕ್ಷಿಗಳ ಹೇಳಿಕೆಗಳೂ ಇವೆ. ಚಾರ್ಜ್ ಶೀಟ್‌ನಲ್ಲಿ, ಪ್ರಜ್ವಲ್ ಫೆಬ್ರವರಿ 2020ರಿಂದ ಡಿಸೆಂಬರ್ 2023ರವರೆಗೆ ಹಲವಾರು ಬಾರಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಲೈಂಗಿಕ ಕ್ರಿಯೆಗಳ ವಿಡಿಯೋ ಮಾಡಿ ಅದರಲ್ಲಿ ಮುಖ ಮರೆಸಿೊಂು ಬೆದರಿಕೆ ಹಾಕುತ್ತಿದ್ದ ಎಂದು ಹೇಳಲಾಗಿದೆ. ವೀಡಿಯೋಗಳ ಆಧಾರದ ಮೇಲೆ ಮಹಿಳೆಗೆ…