ನಂ.1 ಸಹಕಾರ ಬ್ಯಾಂಕ್ ಪ್ರಶಸ್ತಿ ಪಡೆದ ಶಿವಮೊಗ್ಗ ಡಿಸಿಸಿ ಬ್ಯಾಂಕ್! – 2022-23ನೇ ಸಾಲಿನ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿಗೆ ಭಾಜನ – ಪ್ರಶಸ್ತಿ ಸ್ವೀಕಾರ ಮಾಡಿದ ಡಾ.ಆರ್.ಎಂ.ಮಂಜುನಾಥ ಗೌಡ, ಸುಧೀರ್ NAMMUR EXPRESS NEWS ಶಿವಮೊಗ್ಗ: ರಾಜ್ಯ ಅಪೆಕ್ಸ್ ಬ್ಯಾಂಕ್ ನೀಡುವ 2022-23ನೇ ಸಾಲಿನ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿಗೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಭಾಜನವಾಗಿದ್ದು ಸೆ. 13ರಂದು ಬೆಂಗಳೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಬ್ಯಾಂಕ್ ಅಧ್ಯಕ್ಷರಾದ ಡಾ. ಆರ್. ಎಂ. ಮಂಜುನಾಥ ಗೌಡ ಹಾಗೂ ನಿರ್ದೇಶಕರಾದ ಸುಧೀರ್ ಅವರು ಸ್ವೀಕರಿಸಿದರು. ಸಹಕಾರ ಕ್ಷೇತ್ರದಲ್ಲಿ ಉತ್ತಮ ಕಾರ್ಯನಿರ್ವಹಣೆಗಾಗಿ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ಶಿವಮೊಗ್ಗವನ್ನು ರಾಜ್ಯದಲ್ಲಿಯೇ ಪ್ರಥಮ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿ. ಬೆಂಗಳೂರು ಇದರ ವಾರ್ಷಿಕ ಮಹಾ ಸಭೆಯಲ್ಲಿ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ಸಮಾರಂಭದ ವೇದಿಕೆಯಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರೂ, ನಾಯಕರು ಆದ ಬೆಳ್ಳಿ ಪ್ರಕಾಶ್ ನಿರ್ದೇಶಕರುಗಳಾದ ಸಚಿವ ಶಿವಾನಂದ್ ಪಾಟೀಲ್…
Author: Nammur Express Admin
ಡಾ. ಸುಬ್ರಮಣಿಯನ್ ಸ್ವಾಮಿ ಶೃಂಗೇರಿ ಪ್ರವಾಸ – ಸೆ.14 ರಂದು ಶೃಂಗೇರಿಗೆ ತೆರಳಲಿದ್ದಾರೆ – 85ನೇ ವರ್ಷದ ಜನ್ಮದಿನಾಚರಣೆ ಹಾಗೂ ವಿಎಚ್ ಎಸ್ ಪ್ರತಿನಿಧಿಗಳ ಸಮಾವೇಶ ಶೃಂಗೇರಿಯಲ್ಲಿ ಆಯೋಜನೆ NAMMUR EXPRESS NEWS ಮಂಗಳೂರು: ವಿರಾಟ್ ಹಿಂದೂಸ್ತಾನ್ ಸಂಗಮ್ (VHS) ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಶೃಂಗೇರಿ ಭೇಟಿ ಹಿನ್ನೆಲೆಯಲ್ಲಿ ಸೆ.13ರಂದು ರಾತ್ರಿ ಮಂಗಳೂರಿಗೆ ಆಗಮಿಸಲಿದ್ದಾರೆ. ಸೆ.13ರಂದು ಸಂಜೆ ದಿಲ್ಲಿಯಿಂದ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ರಾತ್ರಿ ಮಂಗಳೂರಿನಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಸೆ.14ರಂದು ಬೆಳಗ್ಗೆ 8 ಗಂಟೆಗೆ ರಸ್ತೆ ಮಾರ್ಗವಾಗಿ ಶೃಂಗೇರಿಗೆ ತೆರಳಲಿದ್ದಾರೆ. ಸೆ.14 ಮತ್ತು 15ರಂದು ಡಾ. ಸುಬ್ರಮಣಿಯನ್ ಸ್ವಾಮಿ ಅವರ 85ನೇ ವರ್ಷದ ಜನ್ಮದಿನಾಚರಣೆ ಹಾಗೂ ವಿಎಚ್ ಎಸ್ ಪ್ರತಿನಿಧಿಗಳ ಸಮಾವೇಶ ಶೃಂಗೇರಿಯ ಅಭಿನವ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಸೆ.14ರಂದು ಸಂಜೆ 5 ರಿಂದ 7 ರವರೆಗೆ ಎರಡು ಅಧಿವೇಶನ ಮತ್ತು ಸೆ.15ರಂದು ಬೆಳಗ್ಗೆ 9 ರಿಂದ 11 ರ…
ಟಾಪ್ ನ್ಯೂಸ್ ಕರ್ನಾಟಕ ಹಿಟ್ ಅಂಡ್ ರನ್: ಮೂವರು ವಿದ್ಯಾರ್ಥಿಗಳು ಬಲಿ! – ಕಾರವಾರ:ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ನೀರುಪಾಲು! – ದಾವಣಗೆರೆ: ರೈತ ಕರೆಂಟ್ ಶಾಕ್‌ನಿಂದ ಸಾವು! – ಬಾಗಲಕೋಟೆ: ಹೊಂಡದಲ್ಲಿ ಮುಳುಗಿ ಯುವಕ ಜೀವ ಬಿಟ್ಟ – ಬೆಂಗಳೂರು: ಆನ್‌ಲೈನ್ ಜೂಜಾಟ,ಸಾಲಕ್ಕಾಗಿ ಮನೆಯಲ್ಲೇ ಕದ್ದ! NAMMUR EXPRESS NEWS ಕಾರವಾರ: ಪ್ರವಾಸಕ್ಕೆ ಬಂದು ಸಮುದ್ರಪಾಲಾಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾನೆ. ಎರಡು ದಿನಗಳ ಬಳಿಕ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣದ ಮುಖ್ಯ ಕಡಲತೀರಕ್ಕೆ ಶವ ತೇಲಿ ಬಂದಿದೆ. ಕೋಲಾರದ ಶ್ರೀನಿವಾಸಪುರ ಮೂಲದ ವಿನಯ.ಎಸ್.ವಿ(22) ಮೃತ ವಿದ್ಯಾರ್ಥಿ. ಬೆಂಗಳೂರಿನಿಂದ ಹಿಲ್‌ಸೈಡ್ ಫಾರ್ಮಸಿ ಕಾಲೇಜಿನ 48 ವಿದ್ಯಾರ್ಥಿಗಳ ತಂಡ ಪ್ರವಾಸಕ್ಕೆಂದು ಬಂದಿತ್ತು. ಬಾವಿಕೊಡ್ಲ ಕಡಲತೀರದಲ್ಲಿ ಈಜುತ್ತಿದ್ದ ವೇಳೆ ಅಲೆಗಳಿಗೆ ಸಿಕ್ಕಿ ಅಸ್ವಸ್ಥಗೊಂಡಿದ್ದ ಐವು ವಿದ್ಯಾರ್ಥಿಗಳ್ನ ರಕ್ಷಿಸಲಾಗಿತ್ತು. ಈ ವೇಳೆ ನೀರಲ್ಲಿ ವಿನಯ್ ಕೊಚ್ಚಿಹೋಗಿದ್ದ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹ ಗೋಕರ್ಣ ಪ್ರಾಥಮಿಕ ಕೇಂದ್ರದ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಗೋಕರ್ಣ…
ನಾಗಮಂಗಲ ಗಲಭೆ: ನಿಷೇಧಾಜ್ಞೆ! – ಪ್ರಮುಖ ಆರೋಪಿಗಳಿಗೆ ನ್ಯಾಯಾಂಗ ಬಂಧನ – ಎರಡು ಕಡೆಯ 150ಕ್ಕೂ ಹೆಚ್ಚು ಮಂದಿ ಅರೆಸ್ಟ್: – ಇನ್ಸ್ಪೆಕ್ಟರ್ ಅಮಾನತು ಮಾಡಿ ಐಜಿಪಿ ಆದೇಶ – ಗಲಭೆ ನಡೆದ ಗ್ರಾಮದಲ್ಲಿ ನೀರವ ಮೌನ NAMMUR EXPRESS NEWS ನಾಗಮಂಗಲ: ಮಂಡ್ಯ ಜಿಲ್ಲೆ ನಾಗಮಂಗಲ ಗಲಭೆಗೆ ಸಂಬಂಧಿಸಿದಂತೆ ಗಣಪತಿ ಮಂಟಪ ಇದ್ದ ಬದ್ರಿಕೊಪ್ಪಿನಲ್ಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬದ್ರಿಕೊಪ್ಪಲು ಹೆಬ್ಬಾಗಿಲಿನಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಬಂಧನದ ಭೀತಿಯಿಂದ ಇಲ್ಲಿನ ಯುವಕರು ಗ್ರಾಮವನ್ನೇ ತೊರೆದು ಹೋಗುತ್ತಿದ್ದಾರೆ. ಹೀಗಾಗಿ, ಬದ್ರಿಕೊಪ್ಪಲು ಗ್ರಾಮ ಬಿಕೋ ಎನ್ನುತ್ತಿದೆ. ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ದರ್ಗಾ ಬಳಿ ನಡೆದ ಗಲಭೆಯಲ್ಲಿ 20ಕ್ಕೂ ಅಧಿಕ ಅಂಗಡಿಗಳನ್ನು ಧ್ವಂಸ ಮಾಡಲಾಗಿತ್ತು. ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಹಿಂದೂಗಳ ಗುಂಪು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಗಣಪತಿ ವಿಸರ್ಜನೆಗೆ ತೆರಳುತ್ತಿದ್ದಂತೆ ಮುಸ್ಲಿಮರ ಗುಂಪು ಲ್ಲಾಹು ಅ್‌ರ್ ಘೋಷಣೆ ಕೂಗಿ ಗಲಾಟೆಯೆಬ್ಬಿಸಿದ್ದರು. ಬಳಿಕ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದರು. ಇದೀಗ ಇಡೀ…
ಸಿರಿಧಾನ್ಯ ಬೆಳೆಗಳ ಕುರಿತು ರೈತರೊಂದಿಗೆ ಸಂವಾದ – ಚಿತ್ರದುರ್ಗ ಜಿಲ್ಲೆಯನ್ನು ನೀರಾವರಿಯನ್ನಾಗಿ ಮಾಡಲು ಪಟ್ಟು – ಬಿಪಿಎಲ್ ಕಾರ್ಡ್ ರದ್ದುಗೊಳಿಸಬಾರದು: ಅಗ್ರಹ NAMMUR EXPRESS NEWS ಹೊಸದುರ್ಗ: ರೈತ ಜಾತಿ ಪಕ್ಷವನ್ನು ನೋಡಿ ಅನ್ನ ನೀಡುವುದಿಲ್ಲ ಅವನ ಸಹಾಯಕ್ಕೆ ನಾವೆಲ್ಲರೂ ನಿಲ್ಲಬೇಕು ಎಂದು ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಜಿ ತಿಳಿಸಿದ್ದಾರೆ. ಹೊಸದುರ್ಗ ಪಟ್ಟಣದ ತಾಲೂಕು ರೈತ ಸಂಘದ ಕಚೇರಿಯಲ್ಲಿ ಸಿರಿಧಾನ್ಯ ಬೆಳೆಗಳ ಕುರಿತು ರೈತರೊಂದಿಗೆ ಸಂವಾದ ನಡೆಸಿ ಮಾತನಾಡಿದರು. ಸಂಪೂರ್ಣ ಬಯಲು ಸೀಮೆಯಾಗಿರುವ ಚಿತ್ರದುರ್ಗ ಜಿಲ್ಲೆಯನ್ನು ನೀರಾವರಿಯನ್ನಾಗಿ ಮಾಡಿ ಎಂದು ಅಗ್ರಹಿಸಿದರು. ಕೃಷಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ 1 ಲಕ್ಷ ಕೋಟಿ ಹಣವನ್ನು ರೈತರಿಗಾಗಿ ಕೇಂದ್ರ ಸರ್ಕಾರ ಮೀಸಲಿರಿಸಿದೆ. ಇಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕೇಂದ್ರ ಸರ್ಕಾರ ಸಾಕಷ್ಟು ಹಣ ಕಾಯ್ದೆರಿಸಿದೆ. ಐದು ವರ್ಷದಲ್ಲಿ ಮೂರು ಲಕ್ಷ ಕೋಟಿ ಹಣವನ್ನು ಗ್ಯಾರೆಂಟಿಗೆ ಕೊಡುವ ಬದಲ ರೈತರ ೀರಾವರಿ ಯೋಜನೆಗಳಿಗೆ ಕೊ್ಟಿದ್ದರೆ, ನಿಮ್ಮ ಯಾವುದೇ ಗ್ಯಾರೆಂಟಿಗಳನ್ನು…
70 ವರ್ಷ ಮೇಲ್ಪಟ್ಟವರಿಗೆ 5 ಲಕ್ಷದವರೆಗೆ ಉಚಿತ ವೈದ್ಯಕೀಯ ಸೇವೆ! * ಕೇಂದ್ರ ಸರ್ಕಾರ ಮಹತ್ವದ ಘೋಷಣೆ! * ಅರ್ಜಿ ಸಲ್ಲಿಕೆ ಹೇಗೆ? NAMMUR EXPRESS NEWS ಬೆಂಗಳೂರು: ಆಯುಷ್ಮಾನ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದ್ದು, 70 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರೀಕರಿಗೂ ಉಚಿತ ಚಿಕಿತ್ಸೆ ನೀಡಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. 70 ವರ್ಷ ಮೇಲ್ಪಟ್ಟ ಎಲ್ಲರಿಗೂ ವಾರ್ಷಿಕ ಆದಾಯ ಲೆಕ್ಕಿಸದೆ ವರ್ಷಕ್ಕೆ ರೂ.5 ಲಕ್ಷದವರೆಗೆ ಉಚಿತ ವೈದ್ಯಕೀಯ ಸೇವೆ ಒದಗಿಸಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಹೊಸ ನಿರ್ಧಾರದ ಅನ್ವಯ ಈಗ 70 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಇದುವರೆಗೆ ಈ ಯೋಜನೆಯ ವ್ಯಾಪ್ತಿಯಿಂದ ಹೊರಗಿರುವವರೂ ಸಹ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನಗಳನ್ನು ಪಡೆಯಲು, ಆಯುಷ್ಮಾನ್ ಕಾರ್ಡ್ ಕಡ್ಡಾಯಗೊಳಿಸಿದೆ. ಇಲ್ಲಿಯವರೆಗೆ ಈ ಯೋಜನೆ ಅಡಿಯಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ವರ್ಷಕ್ಕೆ 5 ಲಕ್ಷದವರೆಗೆ ಉಚಿತ ವೈದ್ಯಕೀಯ…
ಆಳ್ವಾಸ್ ನೂತನ ಕಾನೂನು ಮಹಾವಿದ್ಯಾಲಯ ಆರಂಭ – 5 ವರ್ಷ, 3 ವರ್ಷದ ಎಲ್.ಎಲ್.ಬಿ ಪದವಿ – ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಅನುಮೋದನೆ: ಡಾ ಮೋಹನ್ ಆಳ್ವಾ NAMMUR EXPRESS NEWS ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ತನ್ನಲ್ಲಿರುವ 19 ವಿವಿಧ ಶಿಕ್ಷಣ ಸಂಸ್ಥೆಗಳ ಜೊತೆಗೆ ನೂತನ ಕಾನೂನು ಮಹಾವಿದ್ಯಾಲಯವನ್ನು ಆರಂಭಿಸುತ್ತಿದೆ. ಕಾನೂನು ಶಿಕ್ಷಣ ಎಲ್ಲಾ ಸ್ತರಗಳ ಹಾಗೂ ವಿವಿಧ ಜ್ಞಾನ ಶಾಖೆಗಳಿಗೆ ಪೂರಕವಾದ ವೃತ್ತಿ ಆಧಾರಿತ ಕೋರ್ಸ ಆಗಿದೆ. ಮೂಡುಬಿದಿರೆಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮನ್ನಣೆ ಇರುವ ಶೈಕ್ಷಣಿಕ ಕಾಠ್ಯಕ್ರಮವನ್ನು ಪರಿಚಯಿಸಿ, ಮಧ್ಯಮ ಮತ್ತು ಕೆಳವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಹೊಸ ಸಾಧ್ಯತೆಗಳನ್ನು ಪರಿಚಯಿಸಿದ ಕೀರ್ತಿ ಆಳ್ವಾಸ್‌ಗೆ ಸಲ್ಲುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ತಿಳಿಸಿದರು. ಮೂಡುಬಿದಿರೆಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಹೊಸ ಕಾನೂನು ಮಹಾವಿದ್ಯಾಲಯವು ಕರ್ನಾಟಕ ರಾಜ್ಯ ಕಾನೂನು ವವವಿದಯಾಲಯಕ್ಕೆ (ಕೆಎಸ್‌ಎಲ್‌ಯು) ಸಂಯೋಜನೆಗೊಂಡಿದ್ದು, ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಅನುಮೋದನೆ ಪಡೆದಿದೆ…
ವಾಹನ ಮಾಲೀಕರಿಗೆ ಗುಡ್ನ್ಯೂಸ್ – ಶೀಘ್ರದಲ್ಲೇ ಇಳಿಕೆಯಾಗಲಿದೆ ಇಂಧನ ದರ – ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿತ NAMMUR EXPRESS NEWS ಕೇಂದ್ರ ಸರ್ಕಾರ ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದೆ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಲಿದೆಯಂತೆ. ಇನ್ನು ಕೆಲವೇ ದಿನಗಳಲ್ಲಿ ಕೇಂದ್ರವು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಸಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆಯನ್ನು ಅವಲಂಬಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಕಳೆದ ಕೆಲವು ದಿನಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಕೆಲವು ವಾರಗಳ ಹಿಂದೆ, ಒಂದು ಬ್ಯಾರಲ್ ತೈಲದ ಬೆಲೆ 80 ಡಾಲರ್‌ಗಿಂತ ಹೆಚ್ಚಿತ್ತು, ಪ್ರಸ್ತುತ ಕಚ್ಚಾ ತೈಲದ ಬೆಲೆ 70-72 ಡಾಲರ್‌ಗಳಿಗೆ ಇಳಿಕೆಯಾಗಿದೆ. ಇದೇ ಪರಿಸ್ಥಿತಿ ಇನ್ನೂ ಕೆಲ ದಿನ ಮುಂದುವರಿದರೆ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಪೆಟ್ರೋಲಿಯಂ ಇಲಾಖೆಯ ಕಾರ್ಯದರ್ಶಿ ಪಂಕಜ್ ಜೈನ್ ಈ…
3 ವರ್ಷ ಆದ್ರೂ ಇನ್ನು ಬಸ್ ನಿಲ್ದಾಣ ಉದ್ಘಾಟನೆಗೊಂಡಿಲ್ಲ! – ಕಡಬಗೆರೆಯಲ್ಲಿ ನಿರ್ಮಾಣಗೊಂಡಿರುವ ಬಸ್ ನಿಲ್ದಾಣ, ಶೌಚಾಲಯ – ಜನರ ಪರದಾಟ, ಬಸ್ ನಿಲ್ದಾಣ ಹೋರಾಟ ಸಮಿತಿಯ ಆಕ್ರೋಶ ವಿಶೇಷ ವರದಿ: ಸಚಿನ್ ಶೃಂಗೇರಿ NAMMUR EXPRESS NEWS ಖಾಂಡ್ಯ/ಕಡಬಗೆರೆ: ಖಾಂಡ್ಯ ಹೋಬಳಿಯ ಕಡಬಗೆರೆಯಲ್ಲಿ ಸುಮಾರು ಮೂರು ವರ್ಷಗಳ ಅನೇಕ ಹೋರಾಟದ ಫಲವಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ದೊರೆತಿಲ್ಲ. ಬಸ್ ನಿಲ್ದಾಣ ಕಾಮಗಾರಿ ಶುರುವಾಗಿ 8 ತಿಂಗಳು ಕಳೆದರೂ ಇನ್ನೂ ಶೌಚಾಲಯ ನಿರ್ಮಾಣ ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರು,ಪ್ರಯಾಣಿಕರು ತೀರಾ ತೊಂದರೆ ಅನುಭವಿಸುವಂತಾಗಿದ್ದು ಸ್ಥಳೀಯರು ಅನುಭವಿಸುತ್ತಿರುವ ಸಮಸ್ಯೆಗೊತ್ತಿದ್ದು ಕಾಮಗಾರಿ ಪೂರ್ಣಗೊಳಿಸದೇ ಕಟ್ಟಡ ಬಳಕೆಗೆ ಅನುವು ಮಾಡಿಕೊಡದೇ ಕಾಲಹರಣ ಮಾಡುತ್ತಿರುವ ಅಧಿಕಾರಿಗಳು,ಶಾಸಕರ ನಿರ್ಲಕ್ಷ್ಯದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಳಂಬ ನೀತಿಯಿಂದ ಬೇಸರಗೊಂಡ ಜನರು ಮತ್ತು ಬಸ್ ನಿಲ್ದಾಣ ಹೋರಾಟ ಸಮಿತಿಯು ಇನ್ನು 10 ದಿನಳ ಡುವು ನೀಿದ್ದು ಅಷ್ಟರೊಳಗೆ ಸಾರ್ವಜನಿಕರ ಸೇವೆಗೆ ಬಸ್ ನಿಲ್ದಾಣ,ಶೌಚಾಲಯ ದೊಕರದೇ ಇದ್ದಲ್ಲಿ ಸಂಬಂಧಪಟ್ಟ…
ಟಾಪ್ ನ್ಯೂಸ್ ಮಲ್ನಾಡ್ ಕೆ. ಎಸ್. ಆರ್. ಟಿ. ಸಿ ಅಧಿಕಾರಿಗೆ ಚಾಕು ಇರಿತ! – ಚಿಕ್ಕಮಗಳೂರಲ್ಲಿ ನಡೆದ ಘಟನೆ: ಕೆಲಸಕ್ಕೆ ಚಕ್ಕರ್ ಕೇಳಿದಕ್ಕೆ ಇರಿತ * ಶಿವಮೊಗ್ಗ: ಬಾರಿನಲ್ಲಿ ಕೈ ಟಚ್,ಪ್ರಕರಣ ದಾಖಲು! * ಶಿವಮೊಗ್ಗ: ಶುಂಠಿ ಹೊಲದ ಶೆಡ್‌ನಲ್ಲಿ ನಾಡ ಬಂದೂಕು ತಯಾರಿಕೆ NAMMUR EXPRESS NEWS ಚಿಕ್ಕಮಗಳೂರು: ಬುದ್ದಿ ಮಾತು ಹೇಳಿದ ಕೆ. ಎಸ್. ಆರ್. ಟಿ. ಸಿ ಅಧಿಕಾರಿಗೆ ಅಸಿಸ್ಟೆಂಟ್ ಓರ್ವ ಚಾಕು ಇರಿದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಜಗದೀಶ್ ಕುಮಾರ್ ಚಾಕು ಇರಿತಕ್ಕೆ ಒಳಗಾದ ಅಧಿಕಾರಿ. ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಜಗದೀಶ್ ಕುಮಾರ್ ವಾಹನ ಹತ್ತುವ ವೇಳೆ ಜೂನಿಯರ್ ಅಸಿಸ್ಟೆಂಟ್ ರಿತೇಶ್ ಏಕಾಏಕಿ ಅವರನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದಿದ್ದಾನೆ. ತಪ್ಪಿಸಿಕೊಳ್ಳಲು ಯತ್ನಿಸಿದ್ದ ಅಧಿಕಾರಿಯ ಕೈಗೆ ಗಾಯವಾಗಿದೆ.ಹಾಜರಾತಿಗೆ ಸಂಬಂಧಿಸಿದಂತೆ ರಿತೇಶ್ ಹಾಗೂ ಆತನ ಕುಟುಂಬದವರನ್ನು ಕರೆದು ಬುದ್ದಿ ಮಾತು ಹೇಳಿದ್ದರಂತೆ. ಅಲ್ಲದೇ ಕುಟುಂಬದವರ ಮನವಿ ಮೇರೆಗೆ ಚಿಕ್ಕಮಗಳೂರಿನಿಂದ ಬೇಲೂರಿಗೆ ವರ್ಗಾವೆ ಲಾಗಿತ್ತು. ಇದರಿಂದ ರಿತೇಶ್…