ನೇರಳಕಟ್ಟೆಯ ಹೆಮ್ಮೆಯ ಕಲಾವಿದರು ರವಿರಾಜ್ ಶೆಟ್ಟರು!!
* ನಮ್ಮ ಸಂಸ್ಕೃತಿ, ಪರಂಪರೆ, ಸಂಪ್ರದಾಯವನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದ!
* ಯಕ್ಷಗಾನ ಕ್ಷೇತ್ರ ಭಜನಾ ಕ್ಷೇತ್ರಗಳಲ್ಲಿ ಬೇರೆ ಬೇರೆ ಸಂಘಟನೆಗಳಿಂದ ಸನ್ಮಾನ!
NAMMUR EXPRESS NEWS
ಭೂಮಿ ಮೇಲಿನ ಪ್ರತಿಯೊಬ್ಬ ವ್ಯಕ್ತಿಗೂ ತಾನು ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಎನ್ನುವ ಮಹತ್ತರ ಕನಸು ಕೂಡ ಇರುತ್ತದೆ. ಆದರೆ, ಜವಾಬ್ದಾರಿಗಳು ಆ ಕನಸಿನ ಹಾದಿಗೆ ಅಡ್ಡಗೋಡೆಯಾಗಿ ನಿಂತು ಬಿಟ್ಟಿರುತ್ತದೆ. ಇಂತದ್ದೇ ಸಾಧನೆಯ ಕನಸು ಹೊತ್ತು ಹಳ್ಳಿಗಾಡಿನ ಪ್ರದೇಶದಲ್ಲಿ ಇದ್ದು ಸ್ವ- ಪ್ರಯತ್ನದಿಂದ ಮೇಲೆದ್ದು ಬಂದ ಯುವಕ ರವಿರಾಜ್. ಶೆಟ್ಟಿ ಅಸೋಡಿಯ ಜೀವನದ ಕಥೆಯಾಗಿದೆ.ನೇರಳಕಟ್ಟೆ ಗುಡ್ರಿಯ ಕೊರಗಯ್ಯ ಶೆಟ್ಟಿ ಹಾಗೂ ಮೂಕಾಂಬಿಕಾ ಶೆಟ್ಟಿ ದಂಪತಿಯ ಐದು ಜನ ಮಕ್ಕಳಲ್ಲಿ ರವಿರಾಜ್ ಶೆಟ್ಟಿಯವರು ಕೊನೆಯವರು. ಪದವಿವರೆಗೆ ವ್ಯಾಸಂಗ ಮಾಡಿದ್ದು, ಪ್ರಸ್ತುತ ಗುರುಕುಲ ವಿದ್ಯಾಸಂಸ್ಥೆ ವಕ್ವಾಡಿ ಕೋಟೇಶ್ವರದಲ್ಲಿ ಉದ್ಯೋಗಿಯಾಗಿದ್ದು. ಸಣ್ಣ ವಯಸ್ಸಿನಿಂದಲೂ ಭಜನೆ, ನಾಟಕ, ಯಕ್ಷಗಾನ ಅಂದರೆ ಸೆಳೆತ. ಅಪಹಾಸ್ಯದ ಮಾತುಗಳಿಂದ ಛಲ ಬಿಡದ ಶೆಟ್ಟರು ನೆಂಪು ಕಾಲೇಜು ದಿನಗಳಲ್ಲಿ ನೇರಳಕಟ್ಟೆಯ ರಾಘವೇಂದ್ರ ಉಡುಪ ಸರ್ ರವರ ಸಹಕಾರದಿಂದ
ಶ್ರೀ ಯಕ್ಷಭಾರತಿ ಸಾಂಸ್ಕೃತಿಕ ಕಲಾಕೇಂದ್ರ ವಂಡ್ಸೆ (ನೆಂಪು). ಈ ಟ್ರಸ್ಟ್ ನ ಮೂಲಕ ಬೈಲೂರು ಸುಬ್ರಮಣ್ಯ ಐತಾಳ್ ಗುರುಗಳಾಗಿ ಪಡೆದು ಪ್ರಥಮ ರಂಗ ಪ್ರವೇಶವನ್ನು ಮಾಡುತ್ತಾರೆ. ನಂತರ ದಿನಗಳಲ್ಲಿ ಹವ್ಯಾಸಿ ಯಕ್ಷ ಕಲಾ ಬಳಗ ನಾಯಕವಾಡಿ – ಗುಜ್ಜಾಡಿಯಲ್ಲಿ ಹೆಮ್ಮಾಡಿ ರಾಮಚಂದ್ರ ಭಟ್ ರಿಂದ ಯಕ್ಷಗಾನ ಹೆಜ್ಜೆ ಕಲಿತು ಪುರುಷ ಪಾತ್ರಗಳಾದ ಅಕ್ರೂರ, ಈಶ್ವರ, ಮಂತ್ರಿ, ನಾರದ, ರಾಜನ ವೇಷ ಹೀಗೆ ಸಾತ್ವಿಕ ಪಾತ್ರ ಪೋಷಣೆಯನ್ನು ಮಾಡುತ್ತ, ಹಾಸ್ಯದ ಪಾತ್ರಗಳಾದ ದಾರುಕ, ದೂತ ಪಾತ್ರಗಳನ್ನು ನಿರ್ವಹಿಸುತ್ತಾರೆ.
ತನ್ನ ಮನೆಯಲ್ಲಿ ಪೂರ್ವಜರು ಮಾಡಿಕೊಂಡು ಬಂದಿರುವ ಸಂಪ್ರದಾಯಬದ್ಧ ವದಂತಹ ಕುಳಿತು ಭಜನೆ ತನ್ನ ಸಂಬಂಧಿಕರ ಅಣ್ಣನಾಗಿರುವ ಭಾಸ್ಕರ್ ಶೆಟ್ಟಿಯವರಿಂದ ಕಲಿತು- ದಿನಾಂಪ್ರತಿ ಇವಾಗಲು ಸಹ ಮನೆಯಲ್ಲಿ ಸಂಜೆಯ ಹೊತ್ತಿನಲ್ಲಿ ಭಜನೆ ಮಾಡುತ್ತಾರೆ. ತದ ನಂತರ ಬೆಳ್ಳಾಲ ಭಜನೆ ತಂಡದವರಿಂದ ಕುಣಿತ ಭಜನೆಯನ್ನು ಕಲಿತು. ಪ್ರಸ್ತುತವಾಗಿ ಕುಂದಾಪುರ ತಾಲ್ಲೂಕು ಭಜನಾ ಒಕ್ಕೂಟದ ಸಂಘಟನಾ ಕಾರ್ಯದರ್ಶಿಯಾಗಿ ಸಹ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲಕ್ರಮೇಣವಾಗಿ 11 ವರ್ಷಗಳಿಂದ ಶ್ರೀ ಸ್ವಾಮಿ ಭಜನಾ ಮಂಡಳಿ ಹಂದಕುಂದ ನೇರಳಕಟ್ಟೆ. ಈ ತಂಡದ ಒಬ್ಬ ಕಿರಿಯ ವಯಸ್ಸಿನಲ್ಲೇ ಸುಶ್ರಾವ್ಯ ಕಂಠದ ಏರು ಶ್ರುತಿಯ ಭಜಕನಾಗಿ, ಶ್ರೀ ರಾಮನ ಶ್ಲೋಕದ ಮೂಲಕ ಜನ ಮನ್ನಣೆಯನ್ನು ಗಳಿಸಿದ್ದಾರೆ. ಈ ತನ್ನ ಭಜನೆಯ ಪ್ರೋತ್ಸಾಹಕ್ಕೆ ತನ್ನ ಹಂದಕುಂದ ಭಜನೆತಂಡದ ಸರ್ವಭಜನೆ ಕಲಾವಿದರನ್ನು, ಬೆಳ್ಳಾಲ ಭಜನೆ ತಂಡ ,ದೇವಲ್ಕುಂದ ಭಜನೆ ತಂಡ , ಕುಳ್ಳಂಬಳ್ಳಿ ಭಜನೆ ತಂಡ , ಕೆರಾಡಿ, ಮೋರ್ಟ್ ಭಜನೆ ತಂಡ,ಜಾಡ್ಕಟ್ಟು ಭಜನೆ ತಂಡ ಹಾಗೂ ಕುಂದಾಪುರ ತಾಲೂಕು ಭಜನೆ ಒಕ್ಕೂಟದವರನ್ನು ಸಹ ಕಾರಣಿ ಕರ್ತರು ಎನ್ನುತ್ತಾರೆ.
ಇವೆಲ್ಲದರ ನಡುವೆಯೂ ಶೆಟ್ಟರು 2018 ರಲ್ಲಿ ಯಕ್ಷಗಾನ ಪ್ರಸಂಗದ ಕಥೆಯನ್ನು ರಚಿಸಿ, ಸೌಕೂರು ಮೇಳದಲ್ಲಿ ಕೋಡಿ ವಿಶ್ವನಾಥ ಗಾಣಿಗರ ಸoಯೋಜನೆಯಲ್ಲಿ ಶಾಂತವಾಸುದೇವ ಪೂಜಾರಿ ಆನಗಳ್ಳಿ ಸಹಕಾರದಿಂದ “ಮಾತಾoತರಂಗ” ಪ್ರಸಂಗದ ಮೂಲಕ 100 ರ ಮೇಲೆ ಪ್ರಯೋಗ ಕಂಡು ರಾಜ್ಯವ್ಯಾಪಿ ಪ್ರದರ್ಶನ ಕಂಡು ಯಕ್ಷಾಭಿಮಾನಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನಂತರ “ಜನ್ಮದಾತೆ” ಪ್ರಸಂಗವನ್ನು ಕೂಡ ಸೌಕೂರು ಮೇಳಕ್ಕೆ ನೀಡಿರುತ್ತಾರೆ. ಮುಂದಿನ ದಿನಗಳಲ್ಲಿ ಇವರ ಕಥಾ ಹಂದರದ “ತುಳಸಿ-ವೇದ ವಿಲಾಸ”, “ಸತ್ಯ ಚಂದ್ರಮ” ಎಂಬ ಪ್ರಸಂಗವು ಕೂಡ ಪ್ರದರ್ಶನ ಕಾಣಲಿದೆ. ವೇದಿಕೆಯ ಕಾರ್ಯಕ್ರಮಗಳಾದ ನಿರೂಪಣೆ, ಸನ್ಮಾನ ಪತ್ರಗಳ ವಾಚನೆ, 89.5 FM ರೇಡಿಯೋ ಕುಂದಾಪುರ ಕಾರ್ಯಕ್ರಮಗಳಲ್ಲೂ ಭಾಗವಹಿಸುವ ಕಲಾವಿದರಾಗಿದ್ದಾರೆ.ಕ್ರೀಡಾ ಕ್ಷೇತ್ರದಲ್ಲೂ ಕೂಡ ಇರುವ ಇವರು. ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಅನೇಕ ಯಕ್ಷಗಾನ ಕಲಾವಿದರುಗಳನ್ನು ಹಾಗೇ ಬೇರೆ ಬೇರೆ ಕಲೆಯಲ್ಲಿ ಇರುವ ಕಲಾವಿದರುಗಳನ್ನು ಗುರುತಿಸಿ, ಪ್ರಚಾರಕ್ಕೆ ತರುವ ಮೂಲಕ ಕಲೆಯನ್ನು,ಕಲಾವಿದರನ್ನು ಉನ್ನತವಾದ ಮಟ್ಟಕ್ಕೆ ತರುವಲ್ಲಿ ಶ್ರಮಿಸುತ್ತಿರುವ ವ್ಯಕ್ತಿಯಾಗಿದ್ದಾರೆ. ಸಕಲ ಕಲೆಯನ್ನು ಪರಂಗತ ಮಾಡಿಕೊಂಡು “ಕಲಾ ಚಿಂತಕ” ರಾಗಿ ಗುರುತಿಸಿಕೊಂಡಿದ್ದಾರೆ.
ತನ್ನ ಕೈಯಲ್ಲಿ ಆದಷ್ಟು ಯಕ್ಷಗಾನ ಕಾರ್ಯಕ್ರಮಗಳಿಗೆ ಹಾಗೂ ಅನಾಥಾಶ್ರಮಗಳಿಗೆ ಧನ ಸಹಾಯವನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ತಮ್ಮ ಪ್ರೋತ್ಸಾಹಕ್ಕೆ ಶೆಟ್ಟರು ಮುಖ್ಯವಾಗಿ ಮನೆಯವರು, ಊರಿನವರ ಸಹಕಾರವನ್ನು ನೆನೆಯುತ್ತಿರುತ್ತಾರೆ. ಹಾಗೆಯೇ ನಮ್ಮ ಸಂಸ್ಕೃತಿ, ಪರಂಪರೆ, ಸಂಪ್ರದಾಯವನ್ನು ಎತ್ತಿ ಹಿಡಿಯುವ ಇವರಿಗೆ ಈಗಾಗಲೇ ಯಕ್ಷಗಾನ ಕ್ಷೇತ್ರ ಭಜನಾ ಕ್ಷೇತ್ರಗಳಲ್ಲಿ ಬೇರೆ ಬೇರೆ ಸಂಘಟನೆಗಳಿಂದ ಸನ್ಮಾನ ಆಗಿದ್ದು, ಮುಂದಿನ ದಿನಗಳಲ್ಲಿ ಕಲಾ ಕ್ಷೇತ್ರದಲ್ಲಿ ಇನ್ನಷ್ಟು ಹೊಸ ತನವನ್ನು ಮಾಡುವoತಾಲಿ, ಇನ್ನಷ್ಟು ಪ್ರಶಸ್ತಿ, ಪುರಸ್ಕಾರಗಳು ದೊರೆಯಲಿ ಎಂದು ಈ ಮೂಲಕ ಶುಭ ಹಾರೈಸುತ್ತಿದ್ದೇವೆ.