- 70 ವಯಸ್ಸಾದವರಿಗೆ ರಾಜಕೀಯ ಸಂಘಟನೆ ಹೊಣೆ
- ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಟಿಕೇಟ್
- ಯುವಕರಿಗೆ ಶೇ.50ರಷ್ಟು ಸ್ಥಾನ ಫಿಕ್ಸ್
- ಇನ್ನಾದರೂ ಬದಲಾಗುತ್ತಾ ಓಭಿರಾಯನ ಕಾಲದ ಕಾಂಗ್ರೆಸ್ ತಂತ್ರ?!
NAMMUR EXPRESS NEWS
ಉದಯಪುರ(ರಾಜಸ್ಥಾನ): ದೇಶದಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ರಾಜಕಾರಣದಲ್ಲಿ ಬಿಗ್ ಟರ್ನ್ ಮಾಡಲು ತಂತ್ರಗಾರಿಕೆ ಶುರು ಮಾಡಿದೆ.
ಕಾಂಗ್ರೆಸ್ ಸೋಲಿನ ಜತೆಗೆ ಇಡೀ ದೇಶದಲ್ಲಿ ಅವಸಾನದ ಅಂಚಿಗೆ ಸಾಗಲು ಪ್ರಮುಖ ಕಾರಣ ಹಳೆ ಮುಖಗಳ ಹಳೆ ರಾಜಕೀಯ. ಅದೇ ಭಾಷಣ ಅದೇ ಮುಖ. ಈಗ ಮೊದಲ ಹಂತದಲ್ಲಿ ಪಕ್ಷ 70 + ವಯಸ್ಸಾದವರಿಗೆ ಅವಕಾಶ ನೀಡದಿರಲು ನಿರ್ಧಾರ ಮಾಡಿದೆ. ಅವರನ್ನು ಪಕ್ಷದ ಸಂಘಟನೆಗೆ ಬಳಸಿಕೊಳ್ಳಲಿದೆ. ಬಿಜೆಪಿಯಲ್ಲಿ ಈಗಾಗಲೇ ಈ ನಿಯಮವಿದೆ. ಹೀಗಾಗಿ ಯುವ ಜನತೆಗೆ ಹೆಚ್ಚು ಅವಕಾಶ ಸೃಷ್ಟಿ ಆಗಿದೆ. ಹೀಗಾಗಿ ಬಿಜೆಪಿ ಮಾಸ್ ಪಟ್ಟ ಅಲಂಕರಿಸಿದೆ.
ಯುವಕರಿಗೆ ಶೇ.50ರಷ್ಟು ಸ್ಥಾನ ಫಿಕ್ಸ್: ಹಳ್ಳಿಯಿಂದ ಹಿಡಿದು ದಿಲ್ಲಿವರೆಗೆ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರು ತುಂಬಿ ಹೋಗಿದ್ದಾರೆ. ಇದರಿಂದ ಪಕ್ಷ ಸಂಘಟನೆ ಮಕಾಡೆ ಮಲಗಿದೆ. ಇದರಿಂದ ಕಳೆದ 15 ವರ್ಷದಲ್ಲಿ ಪಕ್ಷ ಕೇಳಿ ಕಂಡರಿಯದ ಸೋಲು ಕಂಡಿದೆ. ಆದ್ದರಿಂದ ಹಳ್ಳಿಯಿಂದ ಹಿಡಿದು ದಿಲ್ಲಿವರೆಗೆ ಶೇ.50ರಷ್ಟು ಸ್ಥಾನವನ್ನು ಯುವ ಜನತೆಗೆ ನೀಡಲು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಒಂದು ಕುಟುಂಬಕ್ಕೆ ಒಂದೇ ಟಿಕೇಟ್: ಅಚ್ಚರಿಯ ನಡೆಯಲ್ಲಿ ಕಾಂಗ್ರೆಸ್ ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಟಿಕೇಟ್ ನೀಡುವ ಕುರಿತು ಚರ್ಚೆ ನಡೆಸಿದೆ. ಆದರೆ ಅದು ಇನ್ನು ಅಂತಿಮವಾಗಿಲ್ಲ.
ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ನಿರ್ಧಾರ ಮಾಡಿದ್ದು ಅಳೆದು ತೂಗಿ ಈಗ ತಂತ್ರ ಹೆಣೆಯುತ್ತಿದೆ.
ಇನ್ನಾದರೂ ಬದಲಾಗುತ್ತಾ ಓಭಿರಾಯನ ಕಾಲದ ಕಾಂಗ್ರೆಸ್ ತಂತ್ರ?!: ಕಾಂಗ್ರೆಸ್ ನಾಯಕರು ಮತ್ತು ಪಕ್ಷ ತನ್ನ ಹಳೆಯ ತಂತ್ರಗಳಿಗೆ ಜೋತು ಬಿದ್ದು ಸಂಘಟನೆಯ ಬೇರನ್ನೇ ಕಳೆದುಕೊಂಡಿದೆ. ಇದೀಗ ಬುಡದಿಂದ ವ್ಯವಸ್ಥೆ, ಸಂಘಟನೆ ಸರಿಯಾಗಬೇಕು. ಇನ್ನು ಅದೇ ಓಭಿರಾಯನ ಕಾಲದ ತಂತ್ರಗಾರಿಕೆ ಬದಲಾಗಬೇಕಿದೆ.
ಕರ್ನಾಟಕದ ಮೇಲೆ ಕಣ್ಣು!
ದೇಶದಲ್ಲೇ ಅತೀ ಹೆಚ್ಚು ಶಾಸಕರು, ಸಂಸದರು ಕರ್ನಾಟಕದಲ್ಲಿದ್ದಾರೆ. ಇನ್ನು ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಗಟ್ಟಿ ಇರುವುದು ಕರ್ನಾಟಕದಲ್ಲೇ. ಇನ್ನು ಖರ್ಗೆ, ಹರಿಪ್ರಸಾದ್, ಶ್ರೀನಿವಾಸ್ ಸೇರಿ ರಾಷ್ಟ್ರ ನಾಯಕರು ಇಲ್ಲಿಯೂ ಇದ್ದಾರೆ. ಇತ್ತ ಸಿದ್ದರಾಮಯ್ಯ, ಡಿಕೆಶಿಯಂತಹ ಮಾಸ್ ನಾಯಕರು ಕೂಡ ಕರ್ನಾಟಕದವರೇ. ಜೊತೆಗೆ 2023ರಲ್ಲಿ ವಿಧಾನ ಸಭೆ, 2024ರಲ್ಲಿ ಲೋಕ ಸಭೆ ಚುನಾವಣೆ ಇರುವುದರಿಂದ ಕರ್ನಾಟಕದಿಂದಲೇ ಹೊಸ ತಂತ್ರ ಪ್ರಯೋಗಕ್ಕೆ ಕಾಂಗ್ರೆಸ್ ಮುಂದಾಗಲಿದೆ ಎನ್ನಲಾಗಿದೆ.
ರಾಜ್ಯದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ?
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮುಂದಿನ ಪ್ರಧಾನಿ ಅಭ್ಯರ್ಥಿ ಎನ್ನಲಾದ ಪ್ರಿಯಾಂಕಾ ಗಾಂಧಿ ರಾಜ್ಯದಿಂದ ರಾಜ್ಯ ಸಭೆಗೆ ಆಯ್ಕೆಯಾಗುವ ಸಾಧ್ಯತೆ ಇದೆ. ಡಿಕೆ ಶಿವಕುಮಾರ್ ರಾಜ್ಯಕ್ಕೆ ಸ್ವಾಗತಿಸಿದ್ದಾರೆ. ಈ ಹಿಂದೆ ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಕೂಡ ರಾಜ್ಯದಿಂದ ಗೆದ್ದು ರಾಷ್ಟ್ರ ರಾಜಕೀಯದಲ್ಲಿ ಮಿಂಚಿದ್ದರು.