- ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ವಸ್ತ್ರಸಂಹಿತೆ ಜಾರಿ
- ಪಿಯು ಪ್ರವೇಶಕ್ಕೆ ಮಾರ್ಗಸೂಚಿ ಬಿಡುಗಡೆ
NAMMUR EXPRESS NEWS
ಬೆಂಗಳೂರು : ಪದವಿ ಪೂರ್ವ ಶಿಕ್ಷಣ ಇಲಾಖೆಯು 2022-23 ನೇ ಸಾಲಿನ ಪಿಯುಸಿ ದಾಖಲಾತಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿನ ಅನ್ವಯ ಸಮವಸ್ತ್ರಗಳನ್ನು ಧರಿಸುವಂತೆ ಸೂಚಿಸಿದೆ.
ಎಸ್ ಎಸ್ ಎಲ್ ಸಿ 2022 ರ ವಾರ್ಷಿಕ ಪರೀಕ್ಷೆಯ ಪಲಿತಾಂಶ ಮೇ 19 ರಂದು ಪ್ರಕಟವಾಗಲಿದ್ದು,20 ಕ್ಕೆ ಪ್ರಥಮ ಪಿಯು ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಲಿದೆ.
ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ನಿಗದಿಪಡಿಸಿರುವ ಸಮವಸ್ತ್ರ ದರಿಸಬೇಕು ಒಂದುವೇಳೆ ನಿಗದಿಪಡಿಸಿಲ್ಲವಾದರೆ, ಸಮಾನತೆ ಮತ್ತು ಐಕ್ಯತೆಯನ್ನು ಕಾಪಾಡಿಕೊಂಡು ಹಾಗೂ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಉಡುಪುಗಳನ್ನು ಧರಿಸಬೇಕು ಎಂದು ಶೈಕ್ಷಣಿಕ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಪ್ರತಿವರ್ಷದ ಮಾರ್ಗಸೂಚಿಯಲ್ಲಿ ಈ ಅಂಶ ಇರುತ್ತಿರಲಿಲ್ಲ, ಈ ಬಾರಿ ಹಿಜಾ ವಿವಾದ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಈ ಅಂಶವನ್ನು ಸೇರಿಸಿದೆ, ಮೊದಲ ಅವಧಿ ಜೂನ್ 9 ರಿಂದ ಸೆಪ್ಟೆಂಬರ್ 30ರವರೆಗೆ ಹಾಗೂ ಎರಡನೇ ಅವಧಿ ಆ.13 ರಿಂದ 2023 ಮಾ.31 ರ ವರೆಗೆ ನಿಗದಿಪಡಿಸಿದೆ.
ದ್ವಿತೀಯ ಪಿಯು ದಾಖಲಾತಿ ಪ್ರಕ್ರಿಯೆ ಜೂ.1 ರಿಂದಲೇ ಆರಂಭವಾಗಲಿದೆ ಪ್ರಥಮ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿಕೊಂಡ ವೇಳಾಪಟ್ಟಿಯಂತೆ ತರಗತಿಗಳು ಜೂ 9 ಕ್ಕೆ ಆರಂಭವಾಗಲಿದೆ, ಆ 1 ರಿಂದ 12 ರ ವರೆಗೆ ಮಧ್ಯಂತರ ರಜೆ ಇರಲಿದೆ,2023 ಮಾ.31 ಕೆಲಸದ ಕೊನೆಯ ದಿನವಾಗಿದೆ. ಎ.1 ಕ್ಕೆ ಬೇಸಿಗೆ ರಜೆ ಆರಂಭವಾಗಲಿದೆ.
ಪ್ರಥಮ ಪಿಯುಗೆ ದಂಡ ಶುಲ್ಕವಿಲ್ಲದೆ ದಾಖಲಾತಿ ಕೊನೆಯ ದಿನಾಂಕ ಜೂ 15 ಆಗಿದೆ ದ್ವಿತೀಯ ಪಿಯು ಅರ್ಜಿ ಸಲ್ಲಿಕೆಗೆ ಜೂ 1 ರಿಂದ 15 ರವರೆಗೆ ಅವಕಾಶ ಕಲ್ಪಿಸಿದೆ, ವಿವಿಧ ಮಂಡಳಿಗಳ ವಿದ್ಯಾರ್ಥಿಗಳ ಪ್ರವೇಶಕ್ಕೆ ತಾತ್ಕಾಲಿಕ ಅರ್ಹತಾಪತ್ರ ಕಡ್ಡಾಯವಾಗಿದ್ದು, ಒಂದು ವೇಳೆ ಈ ದಾಖಲೆ ನೀಡದಿದ್ದರೆ ದಾಖಲೆಯನ್ನು ರದ್ದುಪಡಿಸಲಾಗುವುದು ಅಲ್ಲದೆ ಮುಂದೆ ಆಗುವ ಪರಿಣಾಮಗಳಿಗೆ ಪ್ರಾಂಶುಪಾಲರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದೆ.
ಪ್ರತಿ ಸಂಯೋಜನೆಗೆ ಗರಿಷ್ಠ ವಿದ್ಯಾರ್ಥಿಗಳ ಸಂಖ್ಯೆ 80 ಎಂದು ನಿಗದಿಪಡಿಸಲಾಗಿದೆ, ಹೆಚ್ಚಿನ ಪ್ರವೇಶ ಕಲ್ಪಿಸಿದರೆ ಅನುಮೋದನೆ ನೀಡಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.