- ಯಾವ ಜಿಲ್ಲೆಯ ಯಾರಿಗೆ ಪ್ರಶಸ್ತಿ?
NAMMUR EXPRESS NEWS
ಬೆಂಗಳೂರು: 2022-23ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಿಸಿದೆ.
ಪ್ರಾಥಮಿಕ ಶಾಲೆಯ 20 ಶಿಕ್ಷಕರು, ಪ್ರೌಢಶಾಲೆಯ 11 (ಒಬ್ಬರು ವಿಶೇಷ ಚೇತನ ಶಿಕ್ಷಕರು ಒಳಗೊಂಡಂತೆ) ಶಿಕ್ಷಕರಿಗೆ ಪ್ರಶಸ್ತಿ ಘೋಷಣೆ ಮಾಡಿ ಶನಿವಾರ ಸುತ್ತೋಲೆ ಹೊರಡಿಸಿದೆ. ಸೆಪ್ಟೆಂಬರ್ 5 ರಂದು ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
2022-23ನೇ ಸಾಲಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರಿಗೆ `ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ’ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ ಪ್ರದಾನ ಮಾಡಲಿದೆ.
ಜೊತೆಗೆ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕರಿಗೆ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯಿಂದ ತಲಾ 10 ಸಾವಿರ ರೂ.ಗಳ ನಗದು ಪುರಸ್ಕಾರ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೆಚ್.ಎಸ್.ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಾಥಮಿಕ ಶಾಲಾ ವಿಭಾಗ
- ಮಂಜುನಾಥ ಶಂಕರಪ್ಪ ಮುಂಗೂಣಿ
- ಧಾರವಾಡ ಅಮಿತಾನಂದ ಹೆಗ್ಡೆ – ದಕ್ಷಿಣ ಕನ್ನಡ
- ಹೆಚ್.ಎಲ್.ಚಂದ್ರಶೇಖರ – ಚಿಕ್ಕಬಳ್ಳಾಪುರ
- ಅಪ್ಪಸಾಹೇಬ ವಸಂತಪ್ಪ ಗಿರೆಣ್ಣವರ – ಚಿಕ್ಕೋಡಿ
- ಶಿವಾನಂಪ್ಪ ಬಿ. – ಶಿವಮೊಗ್ಗ
- ಹುಸೇನಸಾಬ್ – ಕಲಬುರಗಿ
- ಕೆ.ವಿ.ಸುದರ್ಶನ – ಬೆಂಗಳೂರು ಉತ್ತರ
- ಕೊಟ್ರಪ್ಪ ವಿರೂಪಾಕ್ಷಪ್ಪ ಮೇಲ್ಮುರಿ – ಹಾವೇರಿ
- ಸಂಜೀವ ದೇವಾಡಿಗ – ಉಡುಪಿ
- ಫಿರೆಂಗಪ್ಪ ಸಿದ್ದಪ್ಪ ಕಟ್ಟಿಮನಿ, ಬಾಗಲಕೋಟೆ ಚಂದ್ರಕಲಾ – ಯಾದಗಿರಿ
- ನಿರಂಜನ ಪಿ.ಜೆ – ವಿಜಯನಗರ
- ಸುಶೀಲಬಾಯಿ – ಬೆಳಗಾವಿ
- ವಿದ್ಯಾ ಕಂಪಾಪೂರ ಮಠ – ಕೊಪ್ಪಳ
- ಬಸವರಾಜ ಜಾಡರ – ರಾಯಚೂರು
- ಗಂಗಾಧರಪ್ಪ ಬಿ.ಆರ್. – ಚಿಕ್ಕಮಗಳೂರು
- ಚಂದ್ರಶೇಖರ ರೆಡ್ಡಿ – ಮಧುಗಿರಿ ಶೈಕ್ಷಣಿಕ ಜಿಲ್ಲೆ
- ಸುಧಾಕರ ಗಣಪತಿ – ಶಿರಸಿ
- ಈಶ್ವರಪ್ಪ ಅಂದಾನಪ್ಪ ರೇವಡಿ – ಗದಗ
- ಕವಿತಾ ಈ. – ಚಿತ್ರದುರ್ಗ
ಪ್ರೌಢಶಾಲಾ ವಿಭಾಗ - ಮಹೇಶ್.ಕೆ.ಎನ್-ಚಿತ್ರದುರ್ಗ
- ಇಬ್ರಾಹಿಂ- ಕೊಡಗು
- ರಘು-ಶಿವಮೊಗ್ಗ
- ಭೀಮಪ್ಪ- ರಾಯಚೂರು
- ರಾಧಾಕೃಷ್ಣ- ದಕ್ಷಿಣ ಕನ್ನಡ
- ನಾರಾಯಣ ಪರಮೇಶ್ವರ- ಶಿರಸಿ
- ಅರುಣಾ ಜೂಡಿ- ಕೊಪ್ಪಳ
- ಸುನೀಲ ಪರೀಟ-ಬೆಳಗಾವಿ
- ಬಾಲಸುಬ್ರಹ್ಮಣ್ಯ- ಮಂಡ್ಯ
- ಡಾ.ಚೇತನ್ ಬಣಕಾರ್- ವಿಜಯನಗರ
- ಕೀರ್ತಿ ಬಸಪ್ಪ- ಚಿಕ್ಕಬಳ್ಳಾಪುರ