ಚೈತ್ರಾ ಕುಂದಾಪುರ ಮತ್ತೊಂದು ವಂಚನೆ!
– ಸನಾತನ ಧರ್ಮದ ಬಟ್ಟೆ, ಬಟ್ಟಿಂಗ್ಸ್ ಮಾರಾಟ ಅಂಗಡಿ ಮಾಡಿ ಕೊಡುವುದಾಗಿ 5 ಲಕ್ಷ ವಂಚನೆ
– ಫಿಟ್ಸ್ ಬಂದ ಹಾಗೆ ನಾಟಕ: ಭಾರೀ ವಿಚಾರಣೆ
– ದಿನಕ್ಕೊಂದು ಟರ್ನ್ ಪಡೆಯುತ್ತಿರುವ ಕೇಸ್
NAMMUR EXPRESS NEWS
ಬೆಂಗಳೂರು: ಈಗಾಗಲೇ ಉದ್ಯಮಿಗೆ 5 ಕೋಟಿ ವಂಚನೆ ಪ್ರಕರಣದಲ್ಲಿ ಬಂಧಿಯಾಗಿರುವ ಆರೋಪಿ ಚೈತ್ರಾ ಕುಂದಾಪುರ ಮೇಲೆ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಜತೆಗೆ ಈಕೆಯ ವಿಚಾರಣೆಯಿಂದ ಮತ್ತಷ್ಟು ಪ್ರಕರಣ ಬಯಲಿಗೆ ಬರುವ ಸಾಧ್ಯತೆ ಇದೆ. ಸನಾತನ ಧರ್ಮದ ಬಟ್ಟೆ, ಬಟ್ಟಿಂಗ್ಸ್ ಮಾರಾಟ ಮಾಡಲು ಮಳಿಗೆಗೆ ಸಹಾಯ ಮಾಡುವುದಾಗಿ ವಂಚನೆ ಮಾಡಿರುವುದಾಗಿ ಕರಾವಳಿಯ ಕೋಟ ಪೊಲೀಸ್ ಠಾಣೆಯಲ್ಲಿ ಚೈತ್ರಾ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಸುದಿನಾ ಎಂಬವರು ಈ ಪ್ರಕರಣ ದಾಖಲಿಸಿದ್ದಾರೆ. ಚೈತ್ರಾ ಕುಂದಾಪುರ 5 ಲಕ್ಷ ಹಣವನ್ನು ಪಡೆದು ವಂಚಿಸಿರುವುದಾಗಿ ದೂರು ನೀಡಿದ್ದಾರೆ. 2018ರಲ್ಲಿ 5 ಲಕ್ಷ ಹಣ ಪಡೆದು ಚೈತ್ರಾ ವಂಚಿಸಿದ್ದು, ಅಕೌಂಟ್ ಮುಖಾಂತರ 3 ಲಕ್ಷ ಹಣವನ್ನು ಸುದಿನಾ ಕಳುಹಿಸಿದ್ದಾರೆ. ಬಳಿಕ 2 ಲಕ್ಷ ನಗದು ಹಣವನ್ನೂ ಚೈತ್ರಾಳಿಗೆ ನೀಡಿದ್ದಾರೆ. ಇದಾದ ಬಳಿಕ ಚೈತ್ರಾ ಕುಂದಾಪುರ ಇತ್ತ ಅಂಗಡಿಯೂ ಇಲ್ಲ, ಅತ್ತ ಹಣವೂ ಇಲ್ಲದಂತೆ ಮಾಡಿದ್ದು, ಹಣ ವಾಪಸ್ ಕೇಳಿದರೆ ಅತ್ಯಾಚಾರ ಪ್ರಕರಣ ದಾಖಲು ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. ಬೆದರಿಕೆಯಿಂದ ಚೈತ್ರಾ ವಿರುದ್ಧ ದೂರು ಕೊಡದೆ ದೂರ ಉಳಿದಿದ್ದಾಗಿ ಸುದಿನಾ ಹೇಳಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್: ಗೋವಿಂದ ಬಾಬು ವಿರುದ್ಧವೇ ಪತ್ರ!
ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ವಂಚಿಸಿ ಬಂಧನಕ್ಕೊಳಗಾದ ಚೈತ್ರಾ ಕುಂದಾಪುರಳನ್ನು ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ಸಾಂತ್ವನ ಕೇಂದ್ರಕ್ಕೆ ಹೋಗುವ ಸಂದರ್ಭ ಚೈತ್ರಾ ಕುಂದಾಪುರ ‘ಸಾಕ್ಷಾತ್ಕಾರದ ದಾರಿಯಲ್ಲಿ’ ಎಂಬ ಪುಸ್ತಕದೊಂದಿಗೆ ತೆರಳಿದ್ದಾಳೆ. ಇನ್ನು 5 ಕೋಟಿ ವಂಚನೆಗೊಳಗಾದ ಗೋವಿಂದ ಬಾಬು ಪೂಜಾರಿ ವಿರುದ್ಧವೇ ಚೈತ್ರಾ ಅಂಡ್ ಟೀಮ್ ಇಡಿಗೆ ಪತ್ರ ಬರೆದಿದೆ. ಇದು ಕೂಡ ಭಾರೀ ಕುತೂಹಲ ಮೂಡಿಸಿದೆ.
ಗೋವಿಂದ ಬಾಬು ಪೂಜಾರಿ ವಿರುದ್ದ ಗಗನ್ ದೂರು
ಗೋವಿಂದ ಬಾಬು ಪೂಜಾರಿ ವಿರುದ್ಧ ಪೊಲೀಸರಿಗೆ ಬಿಜೆಪಿ ಯುವ ಮುಖಂಡ, ಬೈಂದೂರು ಬಿಜೆಪಿ ಟಿಕೆಟ್ ಕೇಸ್’ನ ಬಂಧಿತ ಆರೋಪಿ ಗಗನ್ ಕಡೂರು ಕಡೂರು ಪೊಲೀಸ್ ಠಾಣೆಗೆ ಪತ್ರ ರವಾನಿಸುವ ಮೂಲಕ ದೂರು ನೀಡಿದ್ದಾರೆ.ಕೆಲ ವರ್ಷಗಳಿಂದ ನನಗೆ ಪೂಜಾರಿ ಅವರ ಪರಿಚಯವಾಗಿದೆ. ನಾನು ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದೆ. ಆಗ ಗೋವಿಂದ ಬಾಬು ಪೂಜಾರಿಯಿಂದ ಮದುವೆ ಸಹಾಯಕ್ಕಾಗಿ ಐವತ್ತು ಸಾವಿರ ಹಣವನ್ನು ಸಾಲ ಪಡೆದಿದ್ದೆ. ಸಕಾಲಕ್ಕೆ ಅವರಿಗೆ ಮರು ಪಾವತಿ ಮಾಡಲು ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿ ನನಗೆ ಹಾಗೂ ನನ್ನ ಪತ್ನಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ನನ್ನ ಬಳಿ ಆಡಿಯೋ ರೆಕಾರ್ಡ್ ಇದೆ. ನಮಗೆ ರಕ್ಷಣೆ ನೀಡಿ. ಗೋವಿಂದ ಪೂಜಾರಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಚೈತ್ರಾ ಕುಂದಾಪುರಗೆ ಪಿಟ್ಸ್ ಬಂದಿಲ್ಲ: ವೈದ್ಯರು!
ವೈದ್ಯ.ಡಾ.ದಿವ್ಯ ಪ್ರಕಾಶ್ ಚೈತ್ರಾಳ ಆರೋಗ್ಯ ತಪಾಸಣೆ ಮಾಡಿದ್ದು, ಎಲ್ಲಾ ತಪಾಸಣೆಯಲ್ಲೂ ನಾರ್ಮಲ್ ಇದೆ, ಇಸಿಜಿ ಕೂಡ ಸಾಮಾನ್ಯವಾಗಿದೆ.ನರವೈದ್ಯ ತಜ್ಞರು ಮನೋ ವೈದ್ಯರು ತಪಾಸಣೆ ಮಾಡಿದ್ದು,ಎಲ್ಲೂ ಆರೋಗ್ಯ ಸಮಸ್ಯೆ ಕಂಡುಬಂದಿಲ್ಲ ಎಂದಿದ್ದಾರೆ. ಚೈತ್ರಾಳ ಬಾಯಲ್ಲಿ ನೊರೆ ಬಂದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಫಂಕ್ಷನಲ್ ಆಗಿ ಆಗಿರೋದು. ಅವರೇ ಅದನ್ನ ಮಾಡಿಕೊಂಡಿರೋದು. ಪಿಟ್ಸ್ ಏನೂ ಬಂದಿಲ್ಲ. ಬೆಳಗ್ಗೆ ಸಿಸಿಬಿ ಅಧಿಕಾರಿಗಳು ವಿಚಾರಿಸಿದ್ದಾರೆ.ಇದೇ ವೇಳೆ ಪಿಟ್ಸ್ ಇತ್ತ ಎಂಬ ವಿಚಾರಕ್ಕೆ ಉತ್ತರಿಸಿದ ವೈದ್ಯರು, ಪಿಟ್ಸ್ ಪತ್ತೆ ಮಾಡೋದಕ್ಕೆ ಎಂಆರ್ಐ ಸ್ಕ್ಯಾನಿಂಗ್ ಮಾಡಿದ್ದೀವಿ. ಇಇಜಿ ಸ್ಕ್ಯಾನಿಂಗ್ ಕೂಡ ಮಾಡಿದ್ದೇವೆ ಎಲ್ಲಾ ನಾರ್ಮಲ್ ಇದೆ. ಸದ್ಯಕ್ಕೆ ಪಿಟ್ಸ್ ಕಂಡು ಬಂದಿಲ್ಲ. ನ್ಯೂರಾಲಾಜಿಸ್ಟ್ ಕೆಲವು ಮಾತ್ರೆ ಕೊಟ್ಟಿದ್ದಾರೆ ಎಂದು ವಿವರಿಸಿದ್ದಾರೆ.