ರಾಜ್ಯದಲ್ಲಿ ಮೋಡ ವಾತಾವರಣ: ಮಳೆ ಸಾಧ್ಯತೆ!
– 4 ದಿನ ಕೆಲವು ಕಡೆ ತುಂತುರು ಮಳೆ ನಿರೀಕ್ಷೆ
– ಹಗಲೇ ಚಳಿ ಚಳಿ: ಬಿಸಿಲು ಮಾಯ..!
NAMMUR EXPRESS NEWS
ಕರ್ನಾಟಕ ರಾಜ್ಯಾದ್ಯಂತ ಮೋಡದ ವಾತಾವರಣ ಮುನ್ಸೂಚನೆ ಇದೆ. ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು ಹಗಲೇ ಚಳಿ ಚಳಿ ಇದೆ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಬಂಗಾಳಕೊಲ್ಲಿಯ ಚಂಡಮಾರುತವು ಆಂದ್ರಾದ ನೆಲ್ಲೂರು ಕರಾವಳಿಯ ಮೂಲಕ ಪ್ರವೇಶಿಸುವ ಸಾಧ್ಯತೆ ಇದೆ. ರಾಜ್ಯದಾದ್ಯಂತ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಚಂಡಮಾರುತ ಸಂಪೂರ್ಣ ಶಿಥಿಲಗೊಂಡ ನಂತರ ಅಂದರೆ ಡಿಸೆಂಬರ್ ನಂತರ ಮಳೆಯ ಪರಿಸ್ಥಿತಿ ನೋಡಬೇಕಾಗಿದೆ. ಮಳೆ ವಾತಾವರಣ ರೈತರನ್ನು ಆತಂಕಕ್ಕೆ ಈಡು ಮಾಡಿದೆ.
ಹಗಲೇ ಚಳಿ ಚಳಿ: ಬಿಸಿಲು ಮಾಯ..!
ರಾಜ್ಯದ ಹಲವೆಡೆ ಹಗಲೇ ಚಳಿ ಶುರುವಾಗಿದೆ. ಥಂಡಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇನ್ನು ಬಿಸಿಲು ಮಾಯವಾಗಿದೆ. ಮಲೆನಾಡು ಕರಾವಳಿ ಮಧ್ಯ ಕರ್ನಾಟಕದಲ್ಲಿ ಇದೀಗ ಅಡಿಕೆ, ಭತ್ತದ ಕೊಯ್ಲು ಸಮಯ ಆದ್ದರಿಂದ ರೈತರಿಗೆ ತಲೆ ನೋವಾಗಿದೆ.