ರಾಜ್ಯದಲ್ಲಿ ಕರೋನಾ ಹೈ ಅಲರ್ಟ್..!
– ಆರೋಗ್ಯ ಇಲಾಖೆಯಿಂದ ಮಹತ್ವದ ಸೂಚನೆ
– 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ
– ವಿವಿಧ ರಾಜ್ಯದ ಗಡಿ ಮೇಲೆ ನಿಯಂತ್ರಣ
NAMMUR EXPRESS NEWS
ಬೆಂಗಳೂರು: ಆರೋಗ್ಯ ಇಲಾಖೆಯು 60 ವರ್ಷ ಮೇಲ್ಪಟ್ಟವರು ಹಾಗೂ ಹೃದಯ ಸಮಸ್ಯೆ ಇರುವವರೆಗೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ತಿಳಿಸಿದೆ. ಅಲ್ಲದೆ ಕೇರಳದಿಂದ ರಾಜ್ಯಕ್ಕೆ ಬರುವವರ ಮೇಲೆ ವಿಶೇಷ ನಿಗಾ ಇಡಲು ನಿರ್ಧಾರ ಮಾಡಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಜನ ಓಡಾಡದೆ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಸಹಜ ಸ್ಥಿತಿಯಲ್ಲಿ ಇದೆ ಯಾವುದೇ ರೀತಿಯಾದ ನಿರ್ಬಂಧವಿಲ್ಲ. ಹೆಚ್ಚು ಪಾಸಿಟಿವ್ ಪ್ರಕರಣಗಳು ಬಂದರೆ ಮಾತ್ರ ನಿರ್ಬಂಧದ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ. ಸದ್ಯಕ್ಕೆ ರಾಜ್ಯದಲ್ಲಿ ನಿರ್ಬಂಧದ ಪರಿಸ್ಥಿತಿ ಇಲ್ಲ. ಯಾವುದೇ ರೀತಿಯಾಗಿ ಆತಂಕ ಪಡುವುದು ಬೇಡ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಅಗತ್ಯವಿರುವ ಬೆಡ್ ಪಿಪಿಇ ಕಿಟ್ ಆಕ್ಸಿಜನ್ ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕೇರಳ ಗಡಿ ಜಿಲ್ಲೆಯಲ್ಲಿ ಹೆಚ್ಚು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಕೇಂದ್ರ ಸರ್ಕಾರ ಹಾಗೂ ತಜ್ಞರ ಜೊತೆ ಕೂಡ ಚರ್ಚೆ ಮಾಡಿದ್ದೇವೆ. ಹೆಚ್ಚು ಟೆಸ್ಟಿಂಗ್ ಮಾಡುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.ಕೊರೊನಾ ರೂಪಾಂತರ ತಳಿ ಬಗ್ಗೆ ಯಾರೂ ಕೂಡ ಭಯಪಡಬೇಕಿಲ್ಲ. 60 ವರ್ಷ ಮೇಲ್ಪಟ್ಟ ವೃದ್ಧರು ಎಲ್ಲರೂ ತಪಾಸಣೆ ಮಾಡಿಕೊಳ್ಳಬೇಕು. ಕೊರೊನಾ ಲಕ್ಷಣ ಇದ್ದರೆ ಕಡ್ಡಾಯವಾಗಿ ಮಾಸ್ಕ ಧರಿಸಿ ಎಂದು ಸೂಚಿಸಿದರು. ಜ್ವರ, ಶೀತ, ಕೆಮ್ಮು ಇರುವವರು ಟೆಸ್ಟ್ ಮಾಡಿಸಿಕೊಳ್ಳಬೇಕು. ಹೆಚ್ಚು ಪಾಸಿಟಿವ್ ಬಂದರೆ ಅಷ್ಟೇ ನಿಷೇಧ ಯಾರು ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.
ರಾಜ್ಯ ಸರ್ಕಾರ ಸಿದ್ಧತೆ
ಅಮೆರಿಕ, ಬ್ರಿಟನ್, ಚೀನಾ, ಫ್ರಾನ್ಸ್ ದೇಶಗಳಲ್ಲಿ ಕಂಡುಬಂದಿದ್ದ ಕರೋನಾದ ಹೊಸ ಸಬ್ ವೇರಿಯಂಟ್ ಜೆಎನ್-1 ಇದೀಗ ಭಾರತದಲ್ಲೂ ಪತ್ತೆಯಾಗಿದ್ದು, ದೇಶದೆಲ್ಲೆಡೆ ಆತಂಕ ಮನೆ ಮಾಡಿದೆ. ಕೇರಳದಲ್ಲಿ ಕೇಸ್ ಹೆಚ್ಚಳದ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು,ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಸಂಬಂಧ ಮಂಗಳವಾರ ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಿರೋ ಆರೋಗ್ಯ ಸಚಿವರು ಮುಂದಿನ 3 ತಿಂಗಳಿಗೆ ಅವಶ್ಯಕತೆ ಇರುವಷ್ಟು ಟೆಸ್ಟಿಂಗ್ ಕಿಟ್ಟನ್ನ ಕರ್ನಾಟಕ ಮೆಡಿಕಲ್ ಕಾರ್ಪೋರೆಶನ್ನಿಂದ ಖರೀದಿ ಮಾಡಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಇನ್ನೂ ಮಂಗಳವಾರ ಡಾ.ರವಿ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ, ತಜ್ಞರಿಂದ ಸಲಹೆಗಳನ್ನು ಪಡೆಯಲು ಮುಂದಾಗಿದ್ದಾರೆ. ಕೋವಿಡ್ ಮಾರ್ಗಸೂಚಿ ಹೊರಡಿಸುವ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸಲಹೆ ಪಡೆಯಲು ಸರ್ಕಾರ ಮುಂದಾಗಿದೆ.