- ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ನಡೆದಿದ್ದ ಘಟನೆ
- ಶಿವಮೊಗ್ಗದಲ್ಲಿ ಬಾಲಕಿ ಆತ್ಮಹತ್ಯೆ: ಕಾರಣ ನಿಗೂಢ
- ಗ್ಯಾಂಗ್ ರೇಪ್ ಆರೋಪಿಗಳ ಸ್ಥಳ ಮಹಜರು
NAMMUR EXPRESS
ಚಿಕ್ಕಮಗಳೂರು: ರಾಜ್ಯದಲ್ಲಿ ಭಾರೀ ಸುದ್ದಿಯಾಗಿದ್ದ ದಲಿತ ಸಮುದಾಯದ ಯುವಕನಿಗೆ ಮೂತ್ರ ಕುಡಿಸಿದ ಆರೋಪ ಪ್ರಕರಣದಲ್ಲಿ ಪಿಎಸ್ಐ ಅರ್ಜುನ್ಗೆ ಚಿಕ್ಕಮಗಳೂರಿನ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಜತೆಗೆ ಈ ಪ್ರಕರಣ ಪೊಲೀಸರ ಕರ್ತವ್ಯದ ಹೊಣೆಯನ್ನು ಎತ್ತಿ ಹೇಳಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡುವಿನಲ್ಲಿ ದಲಿತ ಸಮುದಾಯದ ಯುವಕನಿಗೆ ಮೂತ್ರ ಕುಡಿಸಿದ ಆರೋಪಕ್ಕೆ ಸಂಬಂಧಿಸಿ ಪಿಎಸ್ಐ ಅರ್ಜುನ್ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಸಿಐಡಿ ಪೊಲೀಸರು ಪಿಎಸ್ಐ ಅರ್ಜುನ್ ಅವರನ್ನು ವಶಪಡಿಸಿಕೊಂಡಿದ್ದರು.
ಮಹಿಳೆಗೆ ಕರೆ ಮಾಡಿದ ವಿಚಾರವೊಂದಕ್ಕೆ ಸಂಬಂಧಿಸಿ ಪಿಎಸ್ಐ ಅರ್ಜುನ್ ನನ್ನ ಪೊಲೀಸ್ ಠಾಣೆಗೆ ದೈಹಿಕ ಹಲ್ಲೆ ನಡೆಸಿದ್ದರು. ಕುಡಿಯಲು ನೀರು ಕೇಳಿದಾಗ ವ್ಯಕ್ತಿಯೊಬ್ಬನಿಂದ ನನ್ನ ಬಾಯಿಗೆ ಮೂತ್ರ ಹೊಯ್ಯಿಸಿದ್ದರು. ಮತ್ತು ನೆಲಕ್ಕೆ ಬಿದ್ದಿದ್ದ ಮೂತ್ರವನ್ನು ನೆಕ್ಕಿಸಿದ್ದರು ಎಂದು ದಲಿತ ಸಮುದಾಯದ ಯುವಕ ಆರೋಪಿಸಿದ್ದರು. ಈಕುರಿತು ಪ್ರಕರಣದ ದಾಖಲಾಗುತ್ತಿದ್ದಂತೆ ಪಿಎಸ್ಐ ಅರ್ಜಿನ್ ತಲೆಮರೆಸಿಕೊಂಡಿದ್ದರು, ಆನಂತರ ಸಿಐಡಿಗೆ ತನಿಖೆಯ ಹೊಣೆ ವಹಿಸಲಾಗಿತ್ತು. ಸಿಐಡಿ ತಂಡ ಪಿಎಸ್ಐ ಅರ್ಜುನ್ರನ್ನು ಬಂಧಿಸಿದೆ.
ಸ್ಥಳ ಮಹಜರು!: ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಆರೋಪಿಗಳನ್ನು ತಮಿಳುನಾಡಿಗೆ ಕರೆದೊಯ್ದು ಪೊಲೀಸರು ಮಹಜರು ಕಾರ್ಯ ನಡೆಸಲಾಗಿದ್ದು, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಮೈಸೂರು ಹೊರವಲಯದ ಲಲಿತಾದ್ರಿಯಲ್ಲಿ ವಿದ್ಯಾರ್ಥಿನಿಯೋರ್ವಳ ಮೇಲೆ ಏಳು ಮಂದಿ ಆರೋಪಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಈಗಾಗಲೇ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಈ ಪೈಕಿ ಮೂವರು ಆರೋಪಿಗಳನ್ನು ತಮಿಳುನಾಡಿನ ತಿರುಪೂರ್ಗೆ ಕರೆದೊಯ್ದು ಆರೋಪಿಗಳ ಮನೆಯಲ್ಲಿನ ಬಟ್ಟೆ ಹಾಗೂ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಈಗಾಗಲೇ ಹಲವು ಪ್ರಕರಣಗಳಲ್ಲಿ ತೊಡಕೊಂಡಿದ್ದಾರೆ. ಸಂತ್ರಸ್ತೆ ಹಾಗೂ ಸ್ನೇಹಿತನನ್ನು ಬೆದರಿಸಲು ಬಳಸಿದ ಮಾರಕಾಸ್ತ್ರಗಳನ್ನು ಪೊಲೀಸರು ಆರೋಪಿಗಳಿಂದ ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆಯಲ್ಲಿ ಆರೋಪಿಗಳ ಮನೆಯವರು ತಮ್ಮ ಮಕ್ಕಳನ್ನು ಎನ್ಕೌಂಟರ್ ಮಾಡದಂತೆ ಪೊಲೀಸರಿಗೆ ಮನವಿಯನ್ನು ಮಾಡಿಕೊಂಡಿದ್ದಾರೆ.
ಆದರೆ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಏಳನೆ ಆರೋಪಿ ಸೆಲ್ವ ಇನ್ನೂ ಕೂಡ ಪೊಲೀಸರ ಬಲೆಗೆ ಬಿದ್ದಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರ ತಂಡ ತಮಿಳುನಾಡಿನಲ್ಲಿ ಶೋಧ ಕಾರ್ಯವನ್ನು ನಡೆಸುತ್ತಿದೆ.
ವಿದ್ಯಾರ್ಥಿನಿ ಅತ್ಮಹತ್ಯೆ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಏಳನೆ ತರಗತಿ ವಿದ್ಯಾರ್ಥಿನಿಯೊಬ್ಬಳು ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಿವಮೊಗ್ಗ ತಾಲೂಕು ಹಾರನಹಳ್ಳಿಯ ಸಹನಾ(13)ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹನಾ ಏಳನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕುಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.