ಬಿಗ್ ಬಾಸ್ ಮನೆಗೆ ಗಿಚ್ಚಿ ಗಿಲಿ ಗಿಲಿ ವಿನ್ನರ್ ಹುಲಿ ಕಾರ್ತಿಕ್?!
– ತೀರ್ಥಹಳ್ಳಿ ಮೂಲದ ಕಲಾವಿದನ ರಿಯಲ್ ಲೈಫ್ ಸ್ಟೋರಿಯೇ ರೋಚಕ
– ತಾಯಿ, ಹುಟ್ಟೂರಿಗೆ ಪ್ರಶಸ್ತಿ ಅರ್ಪಣೆ: ಎಲ್ಲರಿಗೂ ಥ್ಯಾಂಕ್ಸ್
NAMMUR EXPRESS NEWS
ಬೆಂಗಳೂರು/ತೀರ್ಥಹಳ್ಳಿ: ಕಲರ್ಸ್ ಕನ್ನಡದಲ್ಲಿ ಯಶಸ್ವಿಯಾಗಿರುವ ಕಾರ್ಯಕ್ರಮ ಗಿಚ್ಚಿಗಿಲಿಗಿಲಿ ಸೀಸನ್ 3ರ ವಿನ್ನರ್ ಆಗಿ ಹುಲಿ ಕಾರ್ತಿಕ್ 10 ಲಕ್ಷ ರೂಗಳ ಚಿನ್ನ ಬೆಲ್ಟ್ ಗೆದ್ದಿದ್ದಾರೆ. ತುಕಾಲಿ ಮಾನಸ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇವರು 3 ಲಕ್ಷ ರೂ ಬಹುಮಾನ ಗೆದ್ದಿದ್ದಾರೆ. ಈ ಇಬ್ಬರು ಕಲಾವಿದರು ಬಿಗ್ ಬಾಸ್ ಮನೆ ಸೇರಲಿದ್ದಾರಾ ಎಂಬ ಕುತೂಹಲ ಈಗ ಮೂಡಿದೆ.
ಬಿಗ್ಬಾಸ್ ಕನ್ನಡ ಸೀಸನ್ 10ರ ನಂತರ ಗಿಚ್ಚಿಗಿಲಿ ಗಿಲಿ ಆರಂಭವಾಗಿ ಬರೋಬ್ಬರಿ 8 ತಿಂಗಳ ಕಾಲ ಕಲರ್ಸ್ ಕನ್ನಡದಲ್ಲಿ ಈ ಶೋ ಸುದೀರ್ಘವಾಗಿ ಮೂಡಿಬಂದಿತ್ತು. ಮಲೆನಾಡಿನ ಹೆಮ್ಮೆಯ ಕಲಾವಿದ ಹುಲಿ ಕಾರ್ತಿಕ್ ಪ್ರಶಸ್ತಿ ಗೆಲ್ಲಲು 8 ವರ್ಷ ಕಾದಿದ್ದಾರೆ. ಕಲರ್ಸ್ ಸೂಪರ್ ನಲ್ಲಿ ಮೂಡಿ ಬರುತ್ತಿದ್ದ ಮಜಾ ಭಾರತದಲ್ಲಿ ಮೊದಲ ಬರಿಗೆ ಕಾಿಸಿಕಂಡ ಕಾರ್ತಿಕ್ ಹಾಗೇ ಮುಂದುವರೆದು 8 ವರ್ಷದ ಬಳಿಕ ಕಲರ್ಸ್ ನ ಕಾಮಿಡಿ ನಟನಾಗಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈ ಮೂಲಕ ಅವರು ಕಾಮಿಡಿ ಕಲಾವಿದರಾಗಿ ಅತೀ ಹೆಚ್ಚು ಅಭಿಮಾನಿಗಳನ್ನು ಕೂಡ ಹೊಂದಿದ್ದಾರೆ
ತೀರ್ಥಹಳ್ಳಿ ಮೂಲದ ಖ್ಯಾತ ಕಲಾವಿದ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಕಾರ್ತಿಕ್, ಅದ್ಭುತ ಕಾಮಿಡಿ ಟೈಮಿಂಗ್ ಹೊಂದಿರುವ ಕಲಾವಿದ ಹುಲಿ ಕಾರ್ತಿಕ್. ಅವರ ಪೆದ್ದರಾಜನ ಸ್ಕಿಟ್ ಯಾರೂ ಮರೆಯುವಂತಿಲ್ಲ. ಇನ್ನು ರಾಜ್ಯದ ಖ್ಯಾತ ಕಲಾವಿದರಾದರೂ ಅವರು ಹಿಂದಿನ ಜರ್ನಿ ಮರೆತಿಲ್ಲ.
ಬಡತನದಲ್ಲಿ ಬೆಳೆದ ಕಾರ್ತಿಕ್ ಗಾರೆ ಕೆಲಸ, ಪಂಚರ್ ಶಾಪ್, ವೆಲ್ಡಿಂಗ್ ಶಾಪ್, ಐಸ್ಕ್ರೀಮ್ ಪಾರ್ಲರ್ ನಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಲೇ ಕಾಲೇಜು ಜೀವನ ಕಳೆದವರು.
ಕಾಮಿಡಿಗೂ ಸೈ… ಸಿನಿಮಾಕ್ಕೂ ಸೈ
ತೀರ್ಥಹಳ್ಳಿ ತುಂಗಾ ಕಾಲೇಜಲ್ಲಿ ಅಧ್ಯಯನ ಬಳಿಕ ಬಣ್ಣದ ಬದುಕಿನತ್ತ ಆಕರ್ಪಿತರಾಗಿ ನಾಟಕಗಳಲ್ಲಿ ಬಣ್ಣ ಹಚ್ಚಿ, ಮಜಾ ಭಾರತ ಮತ್ತು ಗಿಚ್ಚಿಗಿಲಿಗಿಲಿಯಲ್ಲಿ ಜನಪ್ರಿಯತೆ ಗಳಿಸಿದರು. ನಂತರ ‘ಟಗರು ಪಲ್ಯ’, ‘ತ್ರಿವಿಕ್ರಮ’ ಮುಂತಾದ ಹಲವು ಸಿನಿಮಾಗಳಲ್ಲಿ ಹುಲಿ ಕಾರ್ತಿಕ್ ನಟಿಸಿದ್ದಾರೆ. ಈಗ ಬಹು ಬೇಡಿಕೆಯ ಕಾಮಿಡಿ ನಟರೂ ಹೌದು.
ಬಿಗ್ ಬಾಸ್ 11ಕ್ಕೆ ಎಂಟ್ರಿ?!
ಸಿನಿಮಾ, ಕಿರುತೆರೆ, ರಿಯಾಲಿಟಿ ಶೋ ಎಲ್ಲಾ ಮನೋರಂಜನೆ ವಿಭಾಗದಲ್ಲೂ ತಮ್ಮದೇ ಛಾಪು ಮೂಡಿಸಿರುವ ಕಲಾವಿದ ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮ ಸೆ.29ರ ಭಾುವಾರ ಆರಂಭಾಗಲಿದ್ದು ಎಲ್ಲಿಗೆ ಎಂಟ್ರಿ ಕೊಡುತ್ತಾರಾ ಕಾದು ನೋಡಬೇಕಿದೆ.
ಹೀಗಿರುವಾಗಲೇ, ‘ಗಿಚ್ಚಿ ಗಿಲಿಗಿಲಿ 3’ ಶೋ ಅಂತ್ಯವಾಗಿದೆ. ಈಗಾಗಲೇ ‘ಗಿಚ್ಚಿ ಗಿಲಿಗಿಲಿ 3’ ಗ್ರಾಂಡ್ ಫಿನಾಲೆ ಮುಗಿದ ಬೆನ್ನಲ್ಲೇ ಪ್ರತೀ ಬಾರಿಯಂತೆ ಈ ಬಾರಿ ಈ ಕಾರ್ಯಕ್ರಮದಿಂದ ಹುಲಿ ಕಾರ್ತಿಕ್ ಬಿಗ್ಬಾಸ್ ಮನೆಗೆ ಹೋಗುತ್ತಾರೆ ಎನ್ನಲಾಗಿದೆ.. ಯಾಕೆಂದರೆ ಈ ಹಿಂದಿನ ಎಲ್ಲಾ ಸೀಸನ್ ಗಳಲ್ಲಿ ಇದೇ ರೀತಿ ನಡೆದಿದೆ. ಹುಲಿ ಕಾರ್ತಿಕ್, ಚಂದ್ರಪ್ರಭ ಮತ್ತು ತುಕಾಲಿ ಮಾನಸ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ. ಯಾರು ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಎಲ್ಲರಿಗೂ ಧನ್ಯವಾದಗಳು
ನಮ್ಮೂರ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ಕಾರ್ತಿಕ್, ನನಗೆ ವಾಯ್ಸ್ ಬರುತ್ತಿಲ್ಲ. ನನ್ನ ತಾಯಿಗೆ ಥ್ಯಾಂಕ್ಸ್ ಹೇಳುತ್ತೇನೆ. ಆಕೆ ನನಗೆ ಕೊಟ್ಟ ಫ್ರೀಡಂ ಇದಕ್ಕೆಲ್ಲ ಕಾರಣ. ಇನ್ನು ಕರುನಾಡು, ಮಲೆನಾಡು, ತೀರ್ಥಹಳ್ಳಿ ಜನ ಇಲ್ಲಿವರೆಗೆ ಬೆಳೆಸಿದ್ದಾರೆ ಎಲ್ಲರಿಗೂ ಅಭಿನಂದನೆಗಳು. ಶೀಘ್ರದಲ್ಲಿ ಹುಟ್ಟೂರಲ್ಲಿ ಬಂದು ಈ ಪ್ರಶಸ್ತಿ ಅರ್ಪಣೆ ಮಾಡುತ್ತೇನೆ ಎಂದಿದ್ದಾರೆ ಕಾರ್ತಿಕ್.