ಬ್ಯಾಂಕ್ ಉದ್ಯೋಗ ಹುಡುಕುತ್ತಿದ್ದೀರಾ?
-ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿದೆ ಸುವರ್ಣಾವಕಾಶ
– 1,025 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
-ಫೆಬ್ರವರಿ 25ರೊಳಗೆ ಅರ್ಜಿ ಸಲ್ಲಿಸಿ
NAMMUR EXPRESS NEWS
ಬೆಂಗಳೂರು: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಮಗೆ ಸುವರ್ಣಾವಕಾಶ ಒದಗಿಸುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ದೇಶದಾದ್ಯಂತ ತನ್ನ ವಿವಿಧ ಬ್ರ್ಯಾಂಚ್ಗಳಲ್ಲಿ ಖಾಲಿ ಇರುವ ವಿವಿಧ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ . ಕ್ರೆಡಿಟ್ / ಮ್ಯಾನೇಜರ್ ಫಾರೆಕ್ಸ್, ಮ್ಯಾನೇಜರ್ ಸೈಬರ್ ಸೆಕ್ಯೂರಿಟಿ ಸೇರಿ ಬರೋಬ್ಬರಿ 1,025 ಹುದ್ದೆಗಳಿವೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಫೆಬ್ರವರಿ 25.
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಕ್ರೆಡಿಟ್ ಆಫೀಸರ್ – 1,000, ಮ್ಯಾನೇಜರ್-ಫಾರೆಕ್ಸ್ – 15, ಮ್ಯಾನೇಜರ್ – ಸೈಬರ್ ಸೆಕ್ಯುರಿಟಿ – 5, ಸೀನಿಯರ್ ಮ್ಯಾನೇಜರ್ ಸೈಬರ್ ಸೆಕ್ಯುರಿಟಿ- 5 ಹುದ್ದೆಗಳಿವೆ. ಹುದ್ದೆಗಳಿಗೆ ಸಂಬಂಧಿತ ವಿಷಯಗಳಲ್ಲಿ ಪದವಿ / ಸ್ನಾತಕೋತ್ತರ ಪದವಿ / ಸಿಎ / ಸಿಎಂಎ / ಐಡಿಡಬ್ಲ್ಯುಎ ತೇರ್ಗಡೆಯಾದವರು ಅರ್ಜಿ ಸಲ್ಲಿಸಲು ಅರ್ಹರು.
ವಯೋಮಿತಿ
ಮ್ಯಾನೇಜರ್ ಫಾರೆಕ್ಸ್- ಕನಿಷ್ಠ: 25 ವರ್ಷ, ಗರಿಷ್ಠ: 35 ವರ್ಷ
ಮ್ಯಾನೇಜರ್ ಸೈಬರ್ ಸೆಕ್ಯುರಿಟಿ- ಕನಿಷ್ಠ: 25 ವರ್ಷ, ಗರಿಷ್ಠ: 35
ಸೀನಿಯರ್ ಮ್ಯಾನೇಜರ್ ಸೈಬರ್ ಸೆಕ್ಯುರಿಟಿ- ಕನಿಷ್ಠ: 27 ವರ್ಷ, ಗರಿಷ್ಠ: 38
ಆಫೀಸರ್ ಕ್ರೆಡಿಟ್- ಕನಿಷ್ಠ: 21 ವರ್ಷ, ಗರಿಷ್ಠ: 28 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇದೆ.
ಅರ್ಜಿ ಶುಲ್ಕ
ಸಾಮಾನ್ಯ ವಿಭಾಗ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳು 1,180 ರೂ. ಮತ್ತು ಎಸ್ಸಿ / ಎಸ್ಟಿ / ಪಿಡಬ್ಲ್ಯುಡಿ ಅಭ್ಯರ್ಥಿಗಳು 59 ರೂ. ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು.
ಆಯ್ಕೆ ವಿಧಾನ
ವಿವಿಧ ಹಂತಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆರಂಭದಲ್ಲಿ ಆನ್ಲೈನ್ ಮೂಲಕ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. 200 ಅಂಕಗಳನ್ನು ಒಳಗೊಂಡ ಈ ಪರೀಕ್ಷೆಗೆ 2 ಗಂಟೆಗಳ ಸಮಯಾವಕಾಶ ಇರುತ್ತದೆ. ಇದರಲ್ಲಿ ಆಯ್ಕೆಯಾದವರನ್ನು ಸಂದರ್ಶನ ನಡೆಸಲಾಗುತ್ತದೆ. ಇದಕ್ಕೆ 50 ಅಂಕಗಳನ್ನು ನಿಗದಿ ಪಡಿಸಲಾಗಿದೆ. ಬಳಿಕ ಅಭ್ಯರ್ಥಿಗಳ ಡಾಕ್ಯುಮೆಂಟ್ ಪರಿಶೀಲಿಸಿ ಆಯ್ಕೆ ಮಾಡಲಾಗುತ್ತದೆ.