- 3 ದಿನದ ಬದಲು 5 ದಿನದವರೆಗೆ ಆಚರಣೆ
- ನಿಯಮಗಳೇನು..?, ಏನ್ ಮಾಡಬಾರದು..?
NAMMUR EXPRESS
ಬೆಂಗಳೂರು: ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಬಗ್ಗೆ ಕೊನೆಗೂ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಮೊದಲು 3 ದಿನ ಮಾತ್ರ ಅವಕಾಶ ನೀಡಿ ಆದೇಶ ಹೊರಡಿಸಿದ್ದು, ಕೆಲವೇ ಗಂಟೆಗಳಲ್ಲಿ ಪರಿಸ್ಕೃತ ಆದೇಶ ಮಾಡಿ 5 ದಿನಗಳ ಕಾಲ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲಾಗಿದೆ.
ಮೆರವಣಿಗೆ, ಆರ್ಕೆಸ್ಟ್ರಾ, ಡಿಜೆ ಮಾಡುವ ಹಾಗಿಲ್ಲ. ಹಾಗಾದ್ರೆ ಮಾರ್ಗಸೂಚಿ ಏನಿದೆ ನೀವೇ ನೋಡಿ..!
- ಗಣೇಶ ಮೂರ್ತಿ 4 ಅಡಿಗಿಂತ ಹೆಚ್ಚು ಇರಬಾರದು.
- ಗಣೇಶ ಮೂರ್ತಿ 5 ದಿನದೊಳಗೆ ವಿಸರ್ಜನೆ
- ನಗರಗಳಲ್ಲಿ ವಾರ್ಡ್ ಒಂದು ಮಾತ್ರ ಗಣೇಶ ಮೂರ್ತಿ
- ಗ್ರಾಮಕ್ಕೊಂದು ಸ್ಥಳೀಯ ಆಡಳಿತದ ಅನುಮತಿಯ ಮೇರೆಗೆ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು.
- ಕೋವಿಡ್ ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಇದ್ದಲ್ಲಿ ಮಾತ್ರ ಅವಕಾಶ ನೀಡಲಾಗುವುದು.
- ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಿರುವ ಕಡೆಗಳಲ್ಲಿ ಗಣೇಶೋತ್ಸವ ನಡೆಸಲು ಅವಕಾಶ ಇಲ್ಲ.
- ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಕೋವಿಡ್ ಲಸಿಕಾ ಕ್ಯಾಂಪ್ ನಡೆಸಲಾಗುವುದು.
- 50 ಅಡಿಗಿಂತ ಹೆಚ್ಚು ಪೆಂಡಾಲ್ ಹಾಕುವಂತಿಲ್ಲ
- ಗಣೇಶೋತ್ಸವ ಸಮಯದಲ್ಲಿ ಮನರಂಜನೆ, ಡಿಜೆ ಗಳಿಗೆ ಅವಕಾಶವಿಲ್ಲ. ಯಾವುದೇ ಮೆರವಣಿಗೆಗೂ ಅವಕಾಶವಿಲ್ಲ.
- ಶಾಲಾ ಕಾಲೇಜುಗಳಲ್ಲಿ ಗಣೇಶ ಕೂರಿಸುವಂತಿಲ್ಲ.
- ಏಕಕಾಲಕ್ಕೆ 20 ಜನರಿಗಿಂತ ಹೆಚ್ಚಿನ ಜನರು ಸೇರುವಂತಿಲ್ಲ.
ಕರೋನಾ ನಿಯಮ ಕಡ್ಡಾಯ ಪಾಲನೆ ಆಗಬೇಕು. ಸ್ಥಳೀಯ ಆಡಳಿತ ಈ ಬಗ್ಗೆ ನಿಗಾ ಇಡಬೇಕು ಎಂದು ಸರ್ಕಾರ ಅದೇಶಿಸಿದೆ.
ಗಣಪತಿ ಉತ್ಸವ ಮತ್ತು ಅದನ್ನು ನಂಬಿಕೊಂಡ ಲಕ್ಷಾಂತರ ಜನರ ಬದುಕಿಗಾಗಿ ಸರ್ಕಾರ ಈ ನಿರ್ಧಾರ ಮಾಡಿದೆ ಎನ್ನಲಾಗಿದೆ. ಆದರೆ ಅದನ್ನೇ ಬಂಡವಾಳ ಮಾಡಿಕೊಂಡು ನಿಯಮ ಮೀರಿದರೆ ಕೇಸ್ ಗ್ಯಾರಂಟಿ.
ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು. ಮಲೆನಾಡಿನ ಖ್ಯಾತ ಮಾಧ್ಯಮದಲ್ಲಿ ಜಾಹೀರಾತಿಗಾಗಿ ಕರೆ ಮಾಡಿ 9480181535.