ಹೊಸ ವರ್ಷದ ಜೋಶ್ ಶುರು!
– ರಾಜ್ಯದೆಲ್ಲೆಡೆ ಹೊಸ ವರ್ಷ ಆಚರಿಸಲು ಸಜ್ಜು
– ಹೊಸ ಹೊಸ ವಸ್ತು ಖರೀದಿಗೆ ಸಿದ್ಧತೆ
– ಡಿ.31ಕ್ಕೆ ಹೆಚ್ಚಿನ ನಿರ್ಬಂಧ ಬೇಡ: ಮನವಿ
NAMMUR EXPRESS NEWS
ಬೆಂಗಳೂರು: ಇನ್ನೇನು 2023ರ ಕೊನೆಯ ತಿಂಗಳಾದ ಡಿಸೆಂಬರ್ ಮುಗಿದು 2024 ಪ್ರಾರಂಭವಾಗಲು ದಿನಗಣನೆ ಆರಂಭವಾಗಿದ್ದು, ಜನರು ಅದ್ದೂರಿಯಾಗಿ ಹೊಸ ವರ್ಷ ಆಚರಿಸಲು ಸಜ್ಜುಗೊಂಡಿದ್ದಾರೆ. ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಹಲವಾರು ಹೋಟೆಲ್, ರೆಸಾರ್ಟ್, ಹೋಂ ಸ್ಟೇ ಮತ್ತು ಬಾರ್,ಪಬ್ಗಳ ಮಾಲೀಕರು ಲಾಭದ ನಿರೀಕ್ಷೆಯಲ್ಲಿದ್ದು, ಡಿಸೆಂಬರ್ 31 ರಂದು ಜನರನ್ನು ಸೆಳೆಯಲು ಸಿದ್ಧತೆ ನಡೆಸುತ್ತಿದ್ದಾರೆ.
ಇನ್ನು ಬಟ್ಟೆ, ಚಿನ್ನ, ವಾಹನ ಶೋ ರೂಂಗಳು ಗ್ರಾಹಕರಿಗೆ ಹೊಸ ವರ್ಷದ ಆಫರ್ ಬಿಡುಗಡೆ ಮಾಡುತ್ತಿವೆ. ಅಲ್ಲದೆ, ಹೊಸ ವರ್ಷದ ಮುನ್ನಾದಿನದಂದು ಹೆಚ್ಚಿನ ನಿರ್ಬಂಧಗಳನ್ನು ವಿಧಿಸದಂತೆ ಅಧಿಕಾರಿಗಳಿಗೆ ವರ್ತಕರು ಮನವಿ ಮಾಡಿಕೊಂಡಿದ್ದಾರೆ. ಹಲವೆಡೆ ಈವೆಂಟ್ಗಳನ್ನು ಆಯೋಜಿಸಲು ಡಿಜೆ, ಲೈಟಿಂಗ್ಸ್ ಹಾಕಿ ನಟರು ಮತ್ತು ಗಾಯಕರನ್ನು ಆಹ್ವಾನಿಸಲು ರೆಸಾರ್ಟ್ ಮತ್ತು ಪಬ್ ಮಾಲೀಕರು ನಿರ್ಧರಿಸಿದ್ದಾರೆ. ಮತ್ತು ಈ ವರ್ಷ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆಗಳಿವೆ.
ಮಧ್ಯದ ಬೆಲೆಯಲ್ಲಿ ಏರಿಕೆ!?
ಇನ್ನು ಹೊಸ ವರ್ಷವಾಗಿರುವುದರಿಂದ ಡಿ.31 ಹಾಗೂ ಜ.1ರಂದು ಎಲ್ಲೆಡೆ ಪಾರ್ಟಿ ಮಾಡುವುದರಿಂದ ಮದ್ಯಕ್ಕೆ ಡಿಮ್ಯಾಂಡ್ ಹೆಚ್ಚಾಗಲಿದ್ದು ಮದ್ಯದ ಬೆಲೆಯು ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ.
ಕರೋನಾ ಕರಿ ನೆರಳು!
ನೆರೆಯ ಕೇರಳದಲ್ಲಿ ಕರೋನಾ ಸಂಖ್ಯೆ ಹೆಚ್ಚಿರುವುದರಿಂದ ರಾಜ್ಯದ ಗಡಿ ಭಾಗದಲ್ಲಿ ಎಚ್ಚರಿಕೆ ವಹಿಸಲಾಗಿದೆ. ಹೀಗಾಗಿ ಕರೋನಾ ಕರಿ ನೆರಳು ಇದೀಗ ಹೊಸ ವರ್ಷದ ಆಚರಣೆ ಮೇಲೂ ಬೀಳುವ ಸಾಧ್ಯತೆ ಇದೆ.
ವ್ಯಾಪಾರ ಹೆಚ್ಚಾಗುವ ನಿರೀಕ್ಷೆ
ವ್ಯಾಪಾರಿಗಳು, ಉದ್ಯಮಗಳಲ್ಲಿ ಹೊಸ ವರ್ಷ ಉತ್ತಮ ವ್ಯಾಪಾರವಾಗುವ ನಿರೀಕ್ಷೆ ಇದೆ. ಇನ್ನು ಬಟ್ಟೆ, ಚಿನ್ನ, ಫ್ಯಾಷನ್, ವಾಹನ ಶೋ ರೂಂಗಳು ಗ್ರಾಹಕರಿಗೆ ಹೊಸ ವರ್ಷದ ಆಫರ್ ಬಿಡುಗಡೆ ಮಾಡುತ್ತಿವೆ.. ಹೊಸ ವರ್ಷದ ಗಿಫ್ಟ್ ಐಟೆಮ್ಸ ಹೆಚ್ಚಿನ ಡಿಮ್ಯಾಂಡ್ ಬರಲಿದೆ.