- 6-8 ತರಗತಿ ಸೆ.6ರಿಂದ ಓಪನ್: ಮಕ್ಕಳಲ್ಲಿ ಖುಷಿ
- ಕರೋನಾ ನಿಯಮ ಪಾಲನೆ ಕಡ್ಡಾಯ
- ವಾರದಲ್ಲಿ ಎರಡು ದಿನ ರಜೆ: ಏನು ನಿಯಮ?
NAMMUR EXPRESS
ಬೆಂಗಳೂರು: ರಾಜ್ಯದಲ್ಲಿ 8ರಿಂದ 12, ಡಿಗ್ರಿ ಶಾಲಾ, ಕಾಲೇಜು ಶುರುವಾಗಿದೆ. ಈ ನಡುವೆ ಸೋಮವಾರದಿಂದ 6ರಿಂದ 8ನೇ ತರಗತಿ ಶಾಲೆ ಆರಂಭವಾಗುತ್ತಿದ್ದು, ಶಾಲಾ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಎಲ್ಲಾ ಶಾಲೆಗಳಲ್ಲಿ ಸ್ವಚ್ಛತೆ ಮಾಡಲಾಗಿದೆ. ಕರೋನಾ ನಿಯಮ ಕಟ್ಟು ನಿಟ್ಟಿನಲ್ಲಿ ಪಾಲನೆ ಮಾಡಲು ಶಿಕ್ಷಕರು, ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಸಿಎಂ ನೇತೃತ್ವದಲ್ಲಿ ಶಾಲೆ ಆರಂಭಿಸುವ ಕುರಿತು ಸಭೆ ನಡೆಸಿ ಸಭೆಯಲ್ಲಿ ಶಾಲೆ ಆರಂಭಿಸುವ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ವಾರದಲ್ಲಿ 5 ದಿನ ಮಾತ್ರ ತರಗತಿಗಳು ನಡೆಯಲಿದ್ದು, ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಇದ್ದರೇ ಮಾತ್ರ ಶಾಲೆ ಆರಂಭ ಮಾಡಲಾಗುತ್ತದೆ. ಸೆ.6ರಿಂದ ರಾಜಾದ್ಯಂತ ಶಾಲೆಯ ಘಂಟೆ ಬಾರಿಸಲಿದ್ದು, 6-8ನೆ ತರಗತಿಗಳಿಗೆ ಭೌತಿಕ ತರಗತಿಗಳು ಆರಂಭವಾಗಲಿವೆ. ಮೊದಲ ಹಂತದಲ್ಲಿ 9-12 ನೆ ತರಗತಿಗಳನ್ನ ಪ್ರಾರಂಭ ಮಾಡಿದ್ದ ಸರ್ಕಾರ ಇಗ ಬರೋಬ್ಬರಿ 18 ತಿಂಗಳುಗಳ ಬಳಿಕ ಮಾಧ್ಯಮಿಕ ತರಗತಿಗಳ ಭೌತಿಕ ತರಗತಿ ಆರಂಭ ಮಾಡಲು ಸಿದ್ಧತೆ ನಡೆಸಿದೆ.
ನಿಯಮಗಳೇನು?: ಮಕ್ಕಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮಾಸ್ಕ್ ಧರಿಸಿ ಸುರಕ್ಷತಾ ಕ್ರಮಗಳನ್ನು ಪಾಲಿಸಿ, ಕೋವಿಡ್ ಸೋಂಕು ದೃಢ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ತಾಲೂಕು/ ವಲಯದಲ್ಲಿ ಮಾತ್ರ ಭೌತಿಕ ತರಗತಿಗಳನ್ನು ಆರಂಭಿಸಬೇಕು ಎಂದಿರುವ ಸರ್ಕಾರ, ಶಾಲಾ ಆವರಣದಲ್ಲಿ ಸ್ಯಾನಿಟೈಜೇಶನ್ ಸೇರಿದಂತೆ ಶಾಲೆ ಓಪನ್ ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.
ಶನಿವಾರ ಶಾಲೆ ಸ್ವಚ್ಛ ಮಾಡಬೇಕು. ಹೀಗಾಗಿ ಅಂದು ಕೂಡ ರಜೆ. ಭಾನುವಾರ ಮಾಮೂಲಿ ರಜೆ ಇರಲಿದೆ.
ವಿದ್ಯಾರ್ಥಿಗಳಿಗೆ ಆನ್ಲೈನ್ ಹಾಗೂ ಆಫ್ ಲೈನ್ ಎರಡು ಮಾದರಿಯಲ್ಲಿ ಹಾಜರಾತಿ ಹಾಕಲಾಗುತ್ತದೆ. ಎರಡರಲ್ಲಿ ಒಂದಕ್ಕೆ ಮಕ್ಕಳು ಹಾಜರಾಗಬೇಕಿದೆ.
ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು. ಮಲೆನಾಡಿನ ಖ್ಯಾತ ಮಾಧ್ಯಮದಲ್ಲಿ ಜಾಹೀರಾತಿಗಾಗಿ ಕರೆ ಮಾಡಿ 9480181535.