ಪಂಚೆ ಉಟ್ಟ ರೈತನಿಂದಲೇ ಮಾಲ್ ಉದ್ಘಾಟನೆ!
– ಫಕೀರಪ್ಪರಿಂದ ರಾಮ್ ರಾಜ್ ಮಳಿಗೆ ಉದ್ಘಾಟನೆ
– ಪಂಚೆಯುಟ್ಟು ಬರುವವರು ನಮ್ಮ ಸಂಸ್ಕೃತಿಯ ಪ್ರತೀಕ ಎಂದ ರಾಮ್ ರಾಜ್
NAMMUR EXPRESS NEWS
ಬೆಂಗಳೂರು: ಎಲ್ಲರ ಕಾಲು ಎಳೆಯುತ್ತೆ ಕಾಲ ಅಂತ ಹೇಳ್ತಾರೆ! ಪಂಚೆಯುಟ್ಟ ಕಾರಣಕ್ಕೆ ಮಾಲ್ವೊಂದಕ್ಕೆ ಪ್ರವೇಶ ನಿರಾಕರಿಸಲ್ಪಟ್ಟು ಅವಮಾನಿತರಾಗಿದ್ದ ಹಾವೇರಿ ರಾಣೇಬೆನ್ನೂರಿನ ರೈತ ಫಕೀರಪ್ಪ ಅವರು ಅದೇ ಕಾಲ ಚಕ್ರದ ಮಹಿಮೆಯಿಂದ ಯಲಹಂಕದಲ್ಲಿ ರಾಮ್ರಾಜ್ ಕಾಟನ್ ನೂತನ ಮಳಿಗೆಯನ್ನು ಸೆ. 27ರಂದುಉದ್ಘಾಟಿಸಲಿದ್ದಾರೆ.
ಸಂವಾದದಲ್ಲಿ ಮಾತನಾಡಿದ ರಾಮ್ರಾಜ್ ಕಾಟನ್ ಸಂಸ್ಥಾಪಕ, ಚೇರ್ ಮನ್ ಕೆ.ಆರ್. ನಾಗರಾಜನ್, ‘ಪಂಚೆಯುಟ್ಟು ಬರುವವರು ನಮ್ಮ ಸಂಸ್ಕೃತಿಯ ಪ್ರತೀಕ. ಪಂಚೆ ಉಟ್ಟವರನ್ನು ಕೀಳಾಗಿ ಕಾಣುವುದು ಭಾರತೀಯ ಸಂಸ್ಕೃತಿಯನ್ನು ಅವಮಾನಿಸಿದಂತೆ. ಫಕೀರಪ್ಪ ಅವರನ್ನು ಗೌರವಿಸುವ ಸಲುವಾಗಿ ನಾವು ಅವರಿಂದ ರಾಮ್ ರಾಜ್ ಮಳಿಗೆಯನ್ನು ಉದ್ಘಾಟಿಸುತ್ತಿದ್ದೇವೆ ಎಂದರು.
ಪ್ರಾರಂಭದಲ್ಲಿ ಧೋತಿ, ಪಂಚೆಗಳನ್ನು ಪ್ರಾರಂಭಿಸಿದಾಗ ಹಲವರು ಮೂದಲಿಸುತ್ತಿದ್ದರು. ಆದರೆ ಇಂದು ರಾಮ್ರಾಜ್ ಬ್ಯಾಂಡ್ ಬಗ್ಗೆ ಅವರೇ ಆಶ್ಚರ್ಯ ಪಡುತ್ತಾರೆ. ಪಂಚೆ ಅವಮಾನಿಸುವುದು ವಸಾಹತುಶಾಹಿ ಮನೋಭಾವ. ಆದರೆ, ನಮ್ಮ ಬಟ್ಟೆಗೆ ಧೋತಿಗೆ ಗೌರವ ಇದೆ. ಆದರೆ, ನಮ್ಮಲ್ಲಿ ಹಲವರ ಮನಸ್ಥಿತಿ ಕೆಟ್ಟು, ಕೀಳಾಗಿ ನೋಡುತ್ತಿರುವುದು ಬೇಸರದ ಸಂಗತಿ ಮತ್ತು ಅದು ಖಂಡನೀಯ ಎಂದರು.