- ಸರ್ಕಾರಕ್ಕೆ ಉದ್ಯಮಿಗಳ ಮೊರೆ: ಇಂದು ಮಹತ್ವದ ಮೀಟಿಂಗ್
- ಉದ್ಯಮ ಕ್ಷೇತ್ರಕ್ಕೆ ಬೇಕು ಆರ್ಥಿಕತೆಯ ಟಾನಿಕ್
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಕೊರೋನಾ ಹಾಗೂ ಓಮಿಕ್ರೋನ್ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇನ್ನೊಂದೆಡೆ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಜಾರಿಯಾಗಿರುವ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಪ್ಯೂ ತೆರವಿಗೂ ಒತ್ತಡ ಹೆಚ್ಚುತ್ತಲೇ ಇದೆ. ಮದ್ಯ ಮಾರಾಟಗಾರರು, ಖಾಸಗಿ ಶಿಕ್ಷಣ ಸಂಸ್ಥೆಯ ಒಕ್ಕೂಟದವರು, ಸ್ವಿಮ್ಮಿಂಗ್ ಫೂಲ್ ಮಾಲೀಕರು, ಜಿಮ್ ಮಾಲೀಕರು ಸೇರಿದಂತೆ ಎಲ್ಲರೂ ನಿಯಮ ಸಡಿಲಿಕೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಾರೆ.
10ನೇ ತರಗತಿಗೆ ಪರೀಕ್ಷೆಗಳಿಗೆ ಇನ್ನು 2 ತಿಂಗಳು ಬಾಕಿ ಇದೆ.ಈ ಮಕ್ಕಳಿಗೆ ಈವರೆಗೆ ಕೇವಲ 4 ತಿಂಗಳಷ್ಟೇ ಪಾಠ ನಡೆದಿದೆ ಎಂಬ ಕಾರಣಗಳನ್ನಿಟ್ಟುಕೊಂಡು ಸರ್ಕಾರಕ್ಕೆ ಪತ್ರ ಬರೆದಿರುವ ರುಪ್ಸ ಆಫ್ ಲೈನ್ ಶಿಕ್ಷಣಕ್ಕೆ ಅವಕಾಶ ಮಾಡಿಕೊಡುವಂತೆ ಸಿಎಂ ಬೊಮ್ಮಾಯಿಯವರಿಗೆ ಮನವಿ ಮಾಡಿದೆ.
ಬಡ ಕೂಲಿ ಕಾರ್ಮಿಕರ ಹಾಗೂ ಗ್ರಾಮೀಣ ಭಾಗದ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಕಷ್ಟಸಾಧ್ಯ ಈ ಸಂದರ್ಭದಲ್ಲಿ ಶಿಕ್ಷಣದಿಂದ ವಂಚಿತರಾಗುವುದು ದೊಡ್ಡ ಸಮಸ್ಯೆ ಎಂದಿದ್ದಾರೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಗುಬ್ಬಿ ಜೈರಾಜ್ ಮನವಿ ಮಾಡಿದ್ದು, ವೀಕೆಂಡ್ ಕರ್ಪ್ಯೂ ಕಾರಣ ಚಿತ್ರರಂಗಕ್ಕೆ ತುಂಬಾ ತೊಂದರೆ ಆಗ್ತಿದೆ. ಶನಿವಾರ, ಭಾನುವಾರ ಥಿಯೇಟರ್ ಗಳಲ್ಲಿ ಉತ್ತಮ ಕಲೆಕ್ಷನ್ ಆಗುತ್ತೆ. ಈಗ ಕರ್ಪ್ಯೂ ಕಾರಣ ನಿರ್ಮಾಪಕರಿಗೆ ತುಂಬಾ ನಷ್ಟ ಆಗ್ತಿದೆ ಮುಖ್ಯಮಂತ್ರಿಗಳು ನಮ್ಮಮನವಿಯನ್ನು ಪರಿಗಣಿಸುವ ಭರವಸೆ ಇದೆ ಎಂದಿದ್ದಾರೆ.
ಶಿಕ್ಷಣ ಸಂಸ್ಥೆ ಮಾತ್ರವಲ್ಲದೇ ಹೊಟೇಲ್ ಮಾಲೀಕರು, ಮದ್ಯ ಮಾರಾಟಗಾರರು, ಸ್ವಿಮ್ಮಿಂಗ್ ಪೂಲ್ ಮಾಲೀಕರು, ಜಿಮ್ ಮಾಲೀಕರು ಸೇರಿದಂತೆ ಹಲವರು ನಿಯಮಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ನಡೆಯುವ ಸಭೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲಿದೆ.