ಮಲೆನಾಡಲ್ಲಿ ವ್ಯಾಘ್ರ ನಡಿಗೆ..!!
– ನಾಡಿಗೆ ಬಂದ ಹುಲಿಗೆ ಹಸು ಬಲಿ ಶಂಕೆ
– ಸ್ಥಳೀಯರಲ್ಲಿ ಹೆಚ್ಚಿದ ಆತಂಕ
NAMMUR EXPRESS NEWS
ಶೃಂಗೇರಿ: ಕೆಲವು ದಿನಗಳ ಹಿಂದೆ ತಾಲೂಕಿನ ಉಳುವೆ ಬೈಲ್ ಎಂಬಲ್ಲಿ ಪ್ರವಾಸಿಗರ ಕಣ್ಣಿಗೆ ಕಾಣಿಸಿದ್ದ ಹುಲಿ ನಿನ್ನೆ ತಾಲೂಕಿನ ನಲ್ಲೂರು ಸಮೀಪದ ಗ್ರಾಮದಲ್ಲಿ ಹಸುವಿನ ಮೇಲೆ ದಾಳಿ ಮಾಡಿ ಕೊಂದಿದೆ ಎಂದು ತಿಳಿದಿದೆ. ಹಸುವಿನ ಕುತ್ತಿಗೆ ಭಾಗ ಹಾಗು ದೇಹದ ಮೇಲಿನ ಹಲ್ಲಿನ ಗುರುತುಗಳು ಬಿದ್ದಿದ್ದು ಇದು ಹುಲಿಯಿಂದ ಆದ ದಾಳಿ ಎಂದು ಶಂಕಿಸಲಾಗಿದೆ.ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಅರಣ್ಯ ಇಲಾಖೆ ಈ ಬಗ್ಗೆ ಗಮನಹರಿಸಿ ಹುಲಿಯನ್ನು ಸೆರೆ ಹಿಡಿಯುವ ಬಗ್ಗೆ ಕಾರ್ಯಪ್ರವೃತರಾಗಬೇಕಿದೆ ಹಾಗೂ ಮುಂದೆ ಆಗಲಿರುವ ಅನಾಹುತವನ್ನು ತಪ್ಪಿಸಿ ಜನರ ಜೀವ ಉಳಿಸಬೇಕಿದೆ.