ಅಂತರ್ ಜಿಲ್ಲಾ ಕಳ್ಳರ ಬಂಧನ..
– ಬಾಳೆಹೊನ್ನೂರು ಪೋಲೀಸರ ಕಾರ್ಯಾಚರಣೆ
– ಬಾಳೆಹೊನ್ನೂರಿನಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣ
– ಬಂಧಿತರಿಂದ 4,10,985/- ರೂ. ಮೌಲ್ಯದ ವಸ್ತುಗಳು ವಶ
NAMMUR EXPRESS NEWS
ಬಾಳೆಹೊನ್ನೂರು: ಡಿ.18 ರಂದು ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದ್ದ ಅಂಗಡಿಗಳ ಸರಣಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಬಾಳೆಹೊನ್ನೂರು ಪೋಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಡಿ.18 ರ ರಾತ್ರಿ ಸಮಯದಲ್ಲಿ ನಡೆದಿದ್ದ ಕಳ್ಳತನದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೋಲೀಸರು ಆರೋಪಿಗಳಾದ ಕರುಣ ಆರ್ ಅರ್ಮನ್ ಮಾಲಿಕ್(25),ಹಸೈನ್ (22) ಎಂಬುವವರನ್ನು ಬಂಧಿಸಿದ್ದು ಇವರ ತನಿಖೆಯ ನಂತರ ಇವರು ಅಂತರ್ ಜಿಲ್ಲಾ ಕಳ್ಳರೆಂದು ತಿಳಿದಿದೆ. ಬಂಧಿತರಿದ
1] Vinsta ಕಂಪನಿಯ ಬಿಳಿ ಬಣ್ಣದ electric bater Heater ( ಅಂದಾಜು ಬೆಲೆ 5295 ರೂಗಳು)
2] Pigeon ಕಂಪನಿಯ ಸಿಮೆಂಟ್ ಬಣ್ಣದ Titan Iron Box ( ಅಂದಾಜು ಬೆಲೆ 1995 ರೂಗಳು)
3] Pigeon ಕಂಪನಿಯ Induction Cook Stove ( ಅಂದಾಜು ಬೆಲೆ 3195 ರೂಗಳು)
4] Samsong ಕಂಪನಿಯ ಹೋಂ ಥಿಯೇಟರ್ ( ಅಂದಾಜು ಬೆಲೆ 6500ರೂ ಗಳು)
5] LG ಕಂಪನಿಯ 32 ಇಂಚಿನ ಕಪ್ಪು ಬಣ್ಣದ ಟಿವಿ ( ಅಂದಾಜು ಬೆಲೆ 20000 ರೂಗಳು)
6] 500 ರೂ ಮುಖ ಬೆಲೆಯ 30 ನೋಟುಗಳು ಒಟ್ಟು 15000 ರೂಗಳು
7] Casio ಕಂಪನಿಯ ಕಪ್ಪು ಬಣ್ಣದ ಒಂದು ವಾಚ್ ( ಅಂದಾಜು ಬೆಲೆ 9000ರೂಗಳು).
8] ಕೆಎ-51 ಎಂ 3476 ನಂಬರಿನ ಮಾರುತಿ ಸುಜುಕಿ ಕಂಪನಿಯ ಸ್ಕ್ರಿಫ್ಟ್ ಕಾರು ( ಅಂದಾಜು ಬೆಲೆ 3,50,000 ರೂಗಳು)
ಒಟ್ಟು 4,10,985 /- ರೂ ಬೆಲೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣ ಭೇಧಿಸಿ ಆರೋಪಿಗಳನ್ನು ಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಚಿಕ್ಕಮಗಳೂರು ರವರು ಇವರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ.