ಜ್ಞಾನ ಭಾರತೀ ವಿದ್ಯಾಕೇಂದ್ರದಲ್ಲಿ ಕಲಾ ದರ್ಶನ ಕಾರ್ಯಕ್ರಮ..!!
* ವಿದ್ಯಾರ್ಥಿಗಳಲ್ಲಿನ ಕ್ರೀಯಾಶೀಲತೆಗೆ ಸಂಸ್ಥೆಯಿಂದ ಪೂರಕ ವೇದಿಕೆ
* ಹಾಡು,ಚಿತ್ರಕಲೆ,ಮಾದರಿ ತಯಾರಿಸಿ ಸೈ ಎನಿಸಿಕೊಂಡ ವಿದ್ಯಾರ್ಥಿಗಳು
NAMMUR EXPRESS NEWS
ಶೃಂಗೇರಿ: ತಾಲೂಕಿನ ಮಾನುಗಾರಿನಲ್ಲಿರುವ ಜ್ಞಾನ ಭಾರತೀ ವಿದ್ಯಾಕೇಂದ್ರದಲ್ಲಿ ವಿದ್ಯಾರ್ಥಿಗಳಲ್ಲಿನ ಕ್ರಿಯಾಶೀಲತೆಗೆ ಪೂರಕ ವೇದಿಕೆ ಕಲ್ಪಿಸುವ ಸಲುವಾಗಿ ಕಲಾ ದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅತಿ ಉತ್ಸಾಹದಿಂದ ಭಾಗವಹಿಸಿದ ವಿದ್ಯಾರ್ಥಿಗಳು ಚಿತ್ರಕಲೆ,ಕ್ರಾಫ್ಟ್,ಹಾಡು,ವಿವಿಧ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದರು. ಇದಕ್ಕಾಗಿ ಕಳೆದ 15 ದಿನಗಳಿಂದ ಸಂಸ್ಥೆಯ ಶಿಕ್ಷಕ ವರ್ಗ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ,ವಿವಿಧ ತಂಡಗಳಾಗಿ ಮಾಡಿ,ಸ್ವತಃ ವಿದ್ಯಾರ್ಥಿಗಳೇ ಮಾದರಿ, ಚಿತ್ರಕಲೆ,ಸೆಲ್ಫೀ ಸ್ಟಾಂಡ್,ಗೃಹ ಅಲಂಕಾರಿಕ ವಸ್ತುಗಳು,ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಪ್ರದರ್ಶಿಸಿದ್ದಾರೆ. ಶಿಕ್ಷಕರು ಸಹ ತಾವು ಸಂಗ್ರಹಿಸಿದ ಹಳೆ ನಾಣ್ಯಗಳು,ಕ್ಯಾಮರಾ,ರೇಡಿಯೋ,ಗಡಿಯಾರ, ಹಳೆ ಆಟಿಕೆಗಳು, ಹಳೆ ಗೃಹೋಪಯೋಗಿ ವಸ್ತುಗಳು,ವಿಶೇಷ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಉಡುಪು ಧರಿಸಿ ಸಂಭ್ರಮಿಸಿದರು
.