ಮಕರ ಸಂಕ್ರಾಂತಿ ಪ್ರಯುಕ್ತ ಅಯ್ಯಪ್ಪ ಭಕ್ತರಿಂದ ಹಾಲು,ಹಣ್ಣು,ಬ್ರೆಡ್ ವಿತರಣೆ..
– ಅಖಿಲ ಭಾರತ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯಿಂದ ವಿತರಣೆ
– ತಾಲೂಕಿನ ಅಯ್ಯಪ್ಪ ಭಕ್ತರು ಭಾಗಿ
NAMMUR EXPRESS NEWS
ಶೃಂಗೇರಿ: ಮಕರ ಸಂಕ್ರಾಂತಿಯ ಶುಭದಿನದಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ,ಮಕರ ಜ್ಯೋತಿ ದರ್ಶನವಾಗೋ ಶುಭ ದಿನದಂದು ತಾಲೂಕಿನ ಅಖಿಲ ಭಾರತ ಅಯ್ಯಪ್ಪಸ್ವಾಮಿ ಸೇವಾ ಸಮಿತಿ,ಶೃಂಗೇರಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಅಯ್ಯಪ್ಪ ಭಕ್ತರು ಸೇರಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು,ಹಣ್ಣು,ಬ್ರೆಡ್ ಹಂಚುವುದರ ಮೂಲಕ ಮಕರ ಸಂಕ್ರಾಂತಿಯನ್ನು ಆಚರಿಸಿದರು. ಈ ಸಂದರ್ಭ ಸಮಿತಿಯ ಅಧ್ಯಕ್ಷರಾದ ಉಮೇಶ್ ಪೊದುವಾಳ್ ಸೇರಿ ಎಲ್ಲಾ ಪದಾಧಿಕಾರಿಗಳು,ಭಕ್ತರು ಉಪಸ್ಥಿತರಿದ್ದರು.