Categories
ಮಲ್ನಾಡ್

ಮಲ್ನಾಡ್ ಟಾಪ್ ನ್ಯೂಸ್

ಮಲ್ನಾಡ್ ಟಾಪ್ ನ್ಯೂಸ್
– ಮಲೆನಾಡಿನ ಇಬ್ಬರಿಗೆ ಮಂಗನ ಕಾಯಲೆ!
– ತೀರ್ಥಹಳ್ಳಿಯ ಜನಪರ ಡಾಕ್ಟರ್ ಡಾ.ದಿನಮಣಿ ಇನ್ನಿಲ್ಲ!
– ಅಂತಿಮ ದರ್ಶನಕ್ಕೆ ತಮ್ಮ ಸೊಪ್ಪುಗುಡ್ಡೆಯ ನಿವಾಸದಲ್ಲಿ ವ್ಯವಸ್ಥೆ

NAMMUR EXPRESS NEWS
ತೀರ್ಥಹಳ್ಳಿ: ನವ ತೀರ್ಥಹಳ್ಳಿಯ ನಿರ್ಮಾರ್ತೃಗಳಲ್ಲಿ ಒಬ್ಬರಾಗಿ ಸಾರ್ವಜನಿಕ ಬದುಕಿನಲ್ಲಿ ಪರಿಶುದ್ದತೆಯನ್ನು ಎತ್ತಿ ಹಿಡಿದಿದ್ದ ದಿವಂಗತ ಡಾ.ಬಿ.ಎನ್ ರಂಗಪ್ಪನವರ ಪುತ್ರ ಡಾ.ದಿನಮಣಿ ಮಂಗಳವಾರ ಬೆಳಿಗ್ಗೆ ನಿಧನರಾಗಿದ್ದಾರೆ. ದಿನಮಣಿಯವರು ತೀರ್ಥಹಳ್ಳಿಯಲ್ಲಿ ಕಳೆದ ನಲವತ್ತು ವರ್ಷಗಳಿಂದ ವೈದ್ಯ ವೃತ್ತಿಯನ್ನು ಮಾಡುವುದರ ಮೂಲಕ ಜನಾನುರಾಗಿ ವೈದ್ಯರೆನಿಸಿಕೊಂಡಿದ್ದರು.ಇವರು ಕೊಡುತ್ತಿದ್ದ ಔಷಧ ಮಾತ್ರೆ,ಇಂಜೆಕ್ಷನ್ ಗಳು ಸೇರಿದಂತೆ ತಮ್ಮ ಸೇವೆಗೆ ಕೇವಲ ಐದು ರೂಪಾಯಿಗಳಷ್ಟನ್ನೇ ತೆಗೆದುಕೊಳ್ಳುತ್ತಿದ್ದ ಇವರು ಬಡ ರೋಗಿಗಳ ಪ್ರೀತಿ ವಿಶ್ವಾಸ ಗಳಿಸಿದ್ದರು. ಅರವತ್ತರ ದಶಕದಲ್ಲೇ ಎಂಬಿಬಿಎಸ್ ಮಾಡಿದ್ದರೂ ವೈದ್ಯಕೀಯ ವೃತ್ತಿಯ ಘನತೆಗೆ ಬಂಗ ತರದೆ ಐದು ರೂಪಾಯಿಯ ಡಾಕ್ಟರ್ ಎನಿಸಿಕೊಂಡವರು. ಪತ್ನಿ ಮತ್ತು ಪುತ್ರಿಯನ್ನು ಅಗಲಿರುವ ಶ್ರೀಯುತರ ಅಂತಿಮ ದರ್ಶನಕ್ಕೆ ತಮ್ಮ ಸೊಪ್ಪುಗುಡ್ಡೆಯ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಲೆನಾಡಿನ ಇಬ್ಬರಿಗೆ ಮಂಗನ ಕಾಯಲೆ

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಇಬ್ಬರು ವ್ಯಕ್ತಿಗಳಿಗೆ ಕೆಎಫ್‌ಡಿ ಪಾಸಿಟಿವ್ ಬಂದಿದ್ದು, ಮಣಿಪಾಲ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಈ ವರ್ಷದ ಮೊದಲ ಪ್ರಕರಣಗಳಾಗಿವೆ. ತೀರ್ಥಹಳ್ಳಿ ತಾಲ್ಲೂಕಿನ ದೇವಂಗಿ ಭಾಗದ 63 ವರ್ಷದ ವ್ಯಕ್ತಿಗೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಇಬ್ಬರು ವ್ಯಕ್ತಿಗಳಿಗೆ ಪಾಸಿಟಿವ್ ಬಂದಿದೆ. ಸದ್ಯ ಮಣಿಪಾಲ್ ನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.