ಶೃಂಗೇರಿ ಸರ್ಕಾರಿ ಡಿಗ್ರಿ ಕಾಲೇಜಲ್ಲಿ ರಕ್ತದಾನ ಶಿಬಿರ
* ಕಾಲೇಜಿನ ಅನೇಕ ವಿದ್ಯಾರ್ಥಿಗಳಿಂದ ರಕ್ತದಾನ: ಗೌರವ
* ರಕ್ತದಾನಿಗಳು ಶೃಂಗೇರಿ ವಾಟ್ಸ್ ಆಪ್ ಗ್ರೂಪ್ ಹಾಗೂ ಕನ್ನಡ ಜಾನಪದ ಪರಿಷತ್ ಶೃಂಗೇರಿ ಆಶ್ರಯದಲ್ಲಿ ನಡೆದ ಶಿಬಿರ
NAMMUR EXPRESS NEWS
ಶೃಂಗೇರಿ: ಶೃಂಗೇರಿ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನಿಗಳು ಶೃಂಗೇರಿ ವಾಟ್ಸ್ ಆಪ್ ಗ್ರೂಪ್ ಹಾಗೂ ಕನ್ನಡ ಜಾನಪದ ಪರಿಷತ್ ಶೃಂಗೇರಿ ಆಶ್ರಯದಲ್ಲಿ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.
ಸರ್ಕಾರಿ ಪದವಿ ಕಾಲೇಜಿನ ರೆಡ್ ಕ್ರಾಸ್ ಘಟಕ,ಎನ್ ಎಸ್ ಎಸ್ ಘಟಕ ಹಾಗೂ ಕನ್ನಡ ಜಾನಪದ ಪರಿಷತ್ ಶೃಂಗೇರಿ,ರಕ್ತದಾನಿಗಳು ವಾಟ್ಸ್ ಆಪ್ ಗ್ರೂಪ್ ಶೃಂಗೇರಿ,ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಪ್ರಥಮ ದರ್ಜೆ ಕಾಲೇಜು ಮೆಣಸೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ಶಿಬಿರದಲ್ಲಿ ಸಾರ್ವಜನಿಕರು ಸೇರಿದಂತೆ,ಕಾಲೇಜು ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಶೃಂಗೇರಿ ಇದರ ವೈದ್ಯರಾದ ಡಾ.ಲಕ್ಷ್ಮೀನಾರಾಯಣ ಅವರು ರಕ್ತದಾನದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕ ವೃಂದ,ಕನ್ನಡ ಜಾನಪದ ಪರಿಷತ್ ಅಧ್ಯಕ್ಷರಾದ ಆಶೀಶ್ ದೇವಾಡಿಗ ಹಾಗೂ ಪದಾಧಿಕಾರಿಗಳು,ಶೃಂಗೇರಿ ರಕ್ತದಾನಿಗಳು ವಾಟ್ಯ್ ಆಪ್ ಗ್ರೂಪ್ನ ಪ್ರಶಾಂತ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭ ಕಾಲೇಜಿನಲ್ಲಿ ಅತಿಹೆಚ್ಚು ರಕ್ತದಾನ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸುಮಾರು 42 ಯುನಿಟ್ಗಳಷ್ಟು ರಕ್ತದಾನ ಮಾಡಲಾಯಿತು.