ಕಾಫಿ ನಾಡಲ್ಲಿ ಭೂ ಕಬಳಿಕೆಗೆ ಬ್ರೇಕ್?
– ಭೂ ಮಂಜೂರಾತಿ ನಿಯಮ ಉಲ್ಲಂಘಿಸಿದರೆ ಜೈಲು
– ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಎಚ್ಚರಿಕೆ
– ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಸರ್ಕಾರಿ ಭೂಮಿ ಕಬಳಿಕೆ
NAMMUR EXPRESS NEWS
ಚಿಕ್ಕಮಗಳೂರು: ಕಾಫಿ ನಾಡಲ್ಲಿ ಭೂ ಕಬಳಿಕೆಗೆ ಬ್ರೇಕ್? ಬೀಳುವ ಕಾಲ ಬಂದಿದೆ.
ಭೂ ಮಂಜೂರಾತಿ ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆ ಆಗಲಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಸರ್ಕಾರಿ ಭೂಮಿ ಕಬಳಿಕೆ ನಡೆದಿರುವ ಹಿನ್ನೆಲೆ ಈ ಆದೇಶ ಆಗಿದೆ.
ತಹಸೀಲ್ದಾರ್ ಹೊಣೆ ಎಚ್ಚರಿಕೆ!
ಬಗರ್ ಹುಕುಂ ಸಮಿತಿಯಲ್ಲಿ ಎಷ್ಟೇ ಸದಸ್ಯರಿದ್ದರೂ ನಿಯಮ ಉಲ್ಲಂಘನೆಯಾದಾಗ ಅಧಿಕಾರಿ ಮಾತ್ರ ಜವಾಬ್ದಾರಿ. ತಹಶೀಲ್ದಾರ್ ಹುದ್ದೆಗೆ ವರ್ಗಾವಣೆಯಾಗಲು ಜನಪ್ರತಿನಿಧಿಗಳಿಂದ ಪತ್ರ ಪಡೆದಿದ್ದರೆ ನಿಯಮಗಳನ್ನು ಹೇಳಲು ಧೈರ್ಯ ಇರುವುದಿಲ್ಲ. ಒತ್ತಡಕ್ಕೆ ಒಳಗಾಗಿ ಭೂಮಂಜೂರಾತಿಯಲ್ಲಿ ನಿಯಮ ಉಲ್ಲಂಘಿಸಿದರೆ ತಹಶೀಲ್ದಾರ್ಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಹೇಳಿದ್ದಾರೆ.
ಗೋಮಾಳ ಭೂಮಿಯನ್ನು ಸಾಗುವಳಿಗೆ ಮಂಜೂರು ಮಾಡಲು ಯಾರಿಗೂ ಅಧಿಕಾರ ಇಲ್ಲ. ಒತ್ತಡಕ್ಕೆ ಒಳಗಾಗಿ ನಿಯಮ ಉಲ್ಲಂಘಿಸಿದರೆ ತಹಶೀಲ್ದಾರ್ಗಳು ಜೈಲಿಗೆ ಹೋಗುವುದು ಗ್ಯಾರಂಟಿ ಎಂದು ಎಚ್ಚರಿಕೆ ನೀಡಿದರು. ನಮೂನೆ 50, 53, 57 ರಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಆಧರಿಸಿ ಜಮೀನು ಮಂಜೂರು ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರ ನಿಯಮ ಉಲ್ಲಂಘಿಸಿದ 48 ಪ್ರಕರಣಗಳು ನನ್ನ ಮುಂದೆ ಬಂದಿದ್ದು, ಈ ಪೈಕಿ 9 ಪ್ರಕರಣಗಳಲ್ಲಿ ತಹಶೀಲ್ದಾರ್ ಗಳ ವಿರುದ್ದ ಎಫ್.ಐ.ಆರ್.ಗೆ ಶಿಫಾರಸು ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಉದ್ದೇಶಕ್ಕೆ ಮಂಜೂರು
ಸಾಗುವಳಿ ಮಾಡುತ್ತಿರುವ ಸರ್ಕಾರಿ ಜಮೀನು ಊರಿನ ಸಾರ್ವಜನಿಕ ಉಪಯೋಗಕ್ಕೆ ಅಗತ್ಯವಿದೆ ಎನಿಸಿದರೆ ಅದನ್ನು ಮಂಜೂರು ಮಾಡಬಾರದು. ಅಂಗನವಾಡಿ, ಶಾಲೆ, ಆಸ್ಪತ್ರೆ ಆಟದ ಮೈದಾನಕ್ಕೆ ಜಾಗ ಅಗತ್ಯವಿದ್ದರೆ ಸಾಗುವಳಿ ಬಿಡಿಸಿ ಸಂಬಂಧಪಟ್ಟ ಇಲಾಖೆಗೆ ಮಂಜೂರು ಮಾಡಬೇಕು ಎಂದರು.
ಸರ್ಕಾರಿ ಭೂಮಿ ಒತ್ತುವರಿಯಲ್ಲಿ ಚಿಕ್ಕಮಗಳೂರು ಜಿಲ್ಲೆ ಅಗ್ರಸ್ಥಾನದಲ್ಲಿದೆ. ಜಿಲ್ಲೆಯಾದ್ಯಂತ ಎರಡು ಲಕ್ಷ ಎಕರೆಗೂ ಹೆಚ್ಚು ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು, ಸಾರ್ವಜನಿಕ ಉದ್ದೇಶಕ್ಕೆ ಭೂಮಿ ಸಿಗುವುದು ಕಷ್ಟವಾಗಿದೆ ಎಂದರು. 50 ಎಕರೆ ಜಮೀನು ಹೊಂದಿರುವವರು ಕೂಡ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಮತ್ತು ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಕಟಾರಿಯಾ ಹೇಳಿದ್ದಾರೆ. ಅತಿಕ್ರಮಣದಿಂದ ಸ್ಮಶಾನ ಭೂಮಿ ಮತ್ತು ಇತರ ಸಾರ್ವಜನಿಕ ಕಾರಣಗಳಿಗಾಗಿ ಭೂಮಿಯನ್ನು ಪಡೆಯುವುದು ಕಷ್ಟಕರವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಯೂ ಗಮನ ಹರಿಸಬೇಕು ಎಂದರು.
ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ
HOW TO APPLY : NEET-UG COUNSELLING 2023