ದೇಶದಲ್ಲೇ ಚಿಕ್ಕಮಗಳೂರು ನಂಬರ್ 2..!
– ಶಿವಮೊಗ್ಗ ಜಿಲ್ಲೆಗೂ ಟಾಪ್ 10ರಲ್ಲಿ 8ನೇ ಸ್ಥಾನ
– ಶುದ್ಧ ಗಾಳಿ ಇರುವ ಸ್ಥಳಗಳಲ್ಲಿ ಚಿಕ್ಕಮಗಳೂರು ದೇಶದಲ್ಲೇ ಎರಡನೇ ಸ್ಥಾನ
– ಕಾಫಿ, ಪ್ರವಾಸೋದ್ಯಮ, ಶುದ್ಧ ಗಾಳಿ ಎಲ್ಲದರಲ್ಲೂ ಮುಂದು
NAMMUR EXPRESS NEWS
ದೇಶದಲ್ಲೇ ಚಿಕ್ಕಮಗಳೂರು ಎಲ್ಲಾ ಕ್ಷೇತ್ರದಲ್ಲೂ ತನ್ನ ಹೆಜ್ಜೆ ಗುರುತು ಮೂಡಿಸಿದೆ. ಈ ನಡುವೆ ಶುದ್ಧ ಗಾಳಿ ಇರುವ ಸ್ಥಳಗಳಲ್ಲಿ ಚಿಕ್ಕಮಗಳೂರು ದೇಶದಲ್ಲೇ ಎರಡನೇ ಸ್ಥಾನ ಪಡೆದಿದೆ. ಇನ್ನು ಸಂತಸಪಡುವ ವಿಚಾರ ಎಂದರೆ ಮಲೆನಾಡಿನ ಮತ್ತೊಂದು ಜಿಲ್ಲೆ, ಪ್ರವಾಸಿ ತಾಣಗಳ ಬೆರಗು ಶಿವಮೊಗ್ಗ ಜಿಲ್ಲೆಗೆ 8ನೇ ಸ್ಥಾನ ಪಡೆದಿದೆ. ಕಾಫಿ, ಪ್ರವಾಸೋದ್ಯಮ, ಶುದ್ಧ ಗಾಳಿ ಎಲ್ಲದರಲ್ಲೂ ಚಿಕ್ಕಮಗಳೂರು ಮುಂದಿದೆ. ಇದನ್ನು ಜಿಲ್ಲೆಯ ಜನ ಹೆಮ್ಮೆಪಡುವಂತೆ ಮಾಡಿದೆ. ಭಾರತದಲ್ಲಿ ಅತ್ಯಂತ ಶುದ್ಧ ಗಾಳಿ ಇರುವ ಅಗ್ರ 10 ಸ್ಥಳಗಳ ಪೈಕಿ ಕರ್ನಾಟಕ ಮೇಲುಗೈ ಸಾಧಿಸಿದ್ದು, ಅದರಲ್ಲೂ ಕಾಫಿನಾಡು ಚಿಕ್ಕಮಗಳೂರು ಟಾಪ್ 10ರ ಪೈಕಿ 2ನೇ ಸ್ಥಾನ ಲಭಿಸಿದೆ. ರಾಜ್ಯದ 8 ನಗರಗಳಿಗೆ ಈ ಸ್ಥಾನ ದೊರೆಯುವ ಮೂಲಕ ಇಡೀ ದೇಶದಲ್ಲೇ ಕರ್ನಾಟಕ ಅತ್ಯಂತ ಶುದ್ಧಗಾಳಿ ಇರುವ ರಾಜ್ಯವೆಂಬ ಗರಿ ಕರುನಾಡಿಗೆ ಸಿಕ್ಕಿದೆ.
ರೆಸ್ಪೆರರ್ ಲಿವಿಂಗ್ ಸೈನ್ಸಸ್ನ ವರದಿಯಲ್ಲಿ ಈ ಅಂಶ ತಿಳಿದು ಬಂದಿದೆ. ಅತ್ಯಂತ ಶುದ್ಧ ಗಾಳಿ ಇರುವ ನಗರಗಳ ಪಟ್ಟಿಗಳಲ್ಲಿ ಮಿಜೋರಾಂನ ಐಜ್ವಾಲ್ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕರ್ನಾಟಕದ ಚಿಕ್ಕಮಗಳೂರು, ಮೂರನೇ ಸ್ಥಾನದಲ್ಲಿ ಹರಿಯಾಣದ ಮಂಡಿಖೇರಾ ನಗರವಿದೆ. ಉಳಿದಂತೆ 7 ಸ್ಥಾನಗಳಲ್ಲೂ ಕರ್ನಾಟಕವೇ ಇದೆ. ಕ್ರಮವಾಗಿ ಚಾಮರಾಜನಗರ, ಮಡಿಕೇರಿ, ವಿಜಯಪುರ, ರಾಯಚೂರು, ಶಿವಮೊಗ್ಗ, ಗದಗ, ಮೈಸೂರು ಸ್ಥಾನ ಪಡೆದಿವೆ