ಟಾಪ್ ನ್ಯೂಸ್ ಚಿಕ್ಕಮಗಳೂರು
– ಚಿಕ್ಕಮಗಳೂರು: 4.5 ಲಕ್ಷ ಮೌಲ್ಯದ 24 ಮೊಬೈಲ್ ಫೋನ್ ಪತ್ತೆ!
– ಮೂಡಿಗೆರೆ: ಭತ್ತ ಗದ್ದೆಯಲ್ಲಿ ತಂತಿ ತುಳಿದು ರೈತ ಸಾವು!
– ಅಜ್ಜಂಪುರ: ವೈದ್ಯರ ನಿರ್ಲಕ್ಷದಿಂದ ಬಾಲಕ ಬಲಿ
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ಅವರುಗಳನ್ನು ಮೂಲ ಗ್ರಾಹಕರಿಗೆ ಹಿಂತಿರುಗಿಸಲಾಗಿದೆ.
CEIR ಪೋರ್ಟಲ್ ಬಳಸಿ ಪತ್ತೆ ಮಾಡಲಾದ ಸುಮಾರು ರೂ. 4.5 ಲಕ್ಷ ಮೌಲ್ಯದ 24 ಮೊಬೈಲ್ ಫೋನ್ ಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಿಂದಿರುಗಿಸಲಾಗಿರುತ್ತದೆ. ಈ ನಡುವೆ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಮೊಬೈಲ್ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದ್ದು, ಒಂದು ವೇಳೆ ಯಾರಾದರೂ ಮೊಬೈಲ್ ಫೋನ್ ಕಳೆದು ಕೊಂಡಲ್ಲಿ, ಮೊಬೈಲ್ ಫೋನ್ ಗೆ ಸಂಬಂಧಪಟ್ಟ ದಾಖಲಾತಿಗಳು, ಗುರುತಿನ ಪುರಾವೆ, ಪೊಲೀಸ್ ಕಂಪ್ಲೆಂಟ್ ಪ್ರತಿ ಪಡೆದು,CEIR ವೆಬ್ ಪೋರ್ಟಲ್
https://www.ceir.gov.in ರಲ್ಲಿ ವರದಿ ದಾಖಲಿಸಲು ಕೋರಿದೆ. ಇದರಿಂದ ಕಳೆದುಹೋದ ಮೊಬೈಲ್ ಪತ್ತೆ ಹಚ್ಚಲು ಹೆಚ್ಚು ಸಹಾಯಕವಾಗಿದೆ ಎಂದು ತಿಳಿಸಿದ್ದಾರೆ.
ಭತ್ತ ಗದ್ದೆಯಲ್ಲಿ ವಿದ್ಯುತ್ ತಂತಿ ತುಳಿದು ರೈತ ಸಾವು!
ಮೂಡಿಗೆರೆ: ಭತ್ತದ ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೂಡಿಗೆರೆ ತಾಲೂಕಿನ ಕುಂದೂರು ಸಮೀಪದ ಕಾರ್ಲಗದ್ದೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾರ್ಲಗದ್ದೆ ಗ್ರಾಮದ ಕೃಷಿಕ ಸತೀಶ್ ಶೆಟ್ಟಿ ಎನ್ನುವರು ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ದುರ್ದೈವಿ. ಮುಂಜಾನೆ ಎಂದಿನಂತೆ ಗದ್ದೆಗೆ ತೆರಳಿದ್ದ ವೇಳೆ ವಿದ್ಯುತ್ ಪ್ರವಹಿಸಿ ಸತೀಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಈ ಬಗ್ಗೆ ಮೃತರ ಸಹೋದರ ಕೆ.ಎಸ್. ದಿನೇಶ್ ಆಲ್ಲೂರು ಠಾಣೆಗೆ ದೂರು ನೀಡಿದ್ದಾರೆ. 10 ಗಂಟೆ ಸಮಯದಲ್ಲಿ ಹುಡುಕಿಕೊಂಡು ಹೋದಾಗ ಗದ್ದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದಾರೆ. ಆಲ್ಲೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತ ದೇಹದ ಮರಣೋತ್ತರ ಪರೀಕ್ಷೆಗೆ ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಗೆ ರವಾನಿಸಲಾಗಿದೆ. ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಅಜ್ಜಂಪುರ: ವೈದ್ಯರ ನಿರ್ಲಕ್ಷದಿಂದ ಬಾಲಕ ಬಲಿ
ಅಜ್ಜಂಪುರ: ವೈದ್ಯರ ನಿರ್ಲಕ್ಷಕ್ಕೆ 7 ವರ್ಷದ ಬಾಲಕ ಬಲಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ. ಸೋನೇಶ್ ಮೃತ ಪಟ್ಟ ಬಾಲಕ. ಬಿ.ಏ.ಎಂ.ಎಸ್ ಕಲಿತು ಅಜ್ಜಂಪುರ ಪಟ್ಟಣದಲ್ಲಿ ಖಾಸಗಿ ಕ್ಲಿನಿಕ್ ನಡೆಸಿಕೊಂಡಿರುವ ಡಾ. ವರುಣ್ ಓವರ್ ಡೋಸ್ ಇಂಜೆಕ್ಷನ್ ನೀಡಿದ ಕಾರಣ 7 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಬಿ.ಏ.ಎಂ.ಎಸ್ ವೈದ್ಯರು ಚಿಕ್ಕ ಮಕ್ಕಳಿಗೆ ಇಂಜೆಕ್ಷನ್ ಮಾಡುವಂತಿಲ್ಲ ಆದರೂ ಕೂಡ ಏಳು ವರ್ಷದ ಮಗು ಸೋನೇಶ್ ಗೆ ಇಂಜೆಕ್ಷನ್ ನೀಡಿದ್ದಾರೆ. ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಬಾಲಕನ ಮೃತ ದೇಹ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.