ಭಾರತದ 10 ಶುದ್ಧ ಗಾಳಿ ನಗರಗಳಲ್ಲಿ ಕಾಫಿ ನಾಡಿಗೆ ಸ್ಥಾನ!
– ಚಿಕ್ಕಮಗಳೂರಿಗೆ 8ನೇ ಸ್ಥಾನ: ಆದ್ರೂ ಮಾಲಿನ್ಯ ಹೆಚ್ಚಳ
– ಪ್ರವಾಸೋದ್ಯಮದ ತವರು ಆತಂಕದತ್ತ..!
NAMMUR EXPRESS NEWS
ಚಿಕ್ಕಮಗಳೂರು: ಪ್ರಸ್ತುತ ಭಾರತ ದೇಶದ ಸಾಕಷ್ಟು ಪ್ರದೇಶಗಳು ವಾಯು ಮಾಲಿನ್ಯ ಕಲುಷಿತ ವಾತವರಣದ ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ನಡುವೆ ಶುದ್ಧಗಾಳಿ ಮತ್ತು ಅತೀ ಕಲುಷಿತ ಗಾಳಿ ಹೊಂದಿರುವ ನಗರಗಳ ಪಟ್ಟಿಯನ್ನು ಭಾರತದ ಕೇಂದ್ರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದೆ.
ಅಕ್ಟೋಬರ್ 24ರ ಗುರುವಾರ ಶುದ್ಧ ಗಾಳಿಯನ್ನು ಹೊಂದಿರುವ ದೇಶದ 10 ನಗರಗಳ ಪಟ್ಟಿಯನ್ನು ಮಂಡಳಿ ಬಿಡುಗಡೆ ಮಾಡಿದ್ದು ಇದರಲ್ಲಿ ರಾಜ್ಯದ ಮೂರು ಜಿಲ್ಲೆಗಳು ಸೇರಿವೆ, ಕಾಫಿನಾಡು ಚಿಕ್ಕಮಗಳೂರು ದೇಶದ ಶುದ್ಧ ಗಾಳಿಯ ನಗರಗಳ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಪಡೆದಿದೆ. ಚಿಕ್ಕಮಗಳೂರು (ಎಕ್ಯೂಐ) ಶುದ್ಧ ಗಾಳಿಯ ಗುಣಮಟ್ಟದ ಮೌಲ್ಯ 30ಅನ್ನು ಪಡೆದಿದೆ. ಹಾಗೆಯೇ ಕರ್ನಾಟಕದ ಚಿಕ್ಕಬಳ್ಳಾಪುರ 5ನೇ ಸ್ಥಾನದಲ್ಲಿ ಹಾಗು ಮಡಿಕೇರಿ ನಗರ 6ನೇ ಸ್ಥಾನದಲ್ಲಿ ಇದೆ. ಈ ಮೂಲಕ ಭಾರತದ ಶುದ್ಧ ಗಾಳಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ಕರ್ನಾಟಕ ರಾಜ್ಯದ ಮೂರು ನಗರಗಳು ಟಾಪ್ 10ರ ಒಳಗೆ ಸ್ಥಾನ ಪಡೆದಿದೆ. ಈ ಪಟ್ಟಿಗಳು ಬದಲಾವಣೆ ಕೂಡ ಆಗಿರುತ್ತದೆ ಸದ್ಯದ ಗುಣಮಟ್ಟ ಈ ರೀತಿಯಲ್ಲಿದೆ. ಕಳೆದ 4 ತಿಂಗಳ ಹಿಂದೆ ನಮ್ಮ ರಾಜ್ಯದ ಗದಗ ದೇಶದಲ್ಲಿಯೆ 2ನೇ ಸ್ಥಾನವನ್ನು ಪಡೆದು
ಕೊಂಡಿತ್ತು. ಗದಗ ಆ ಸಮಯದಲ್ಲಿ ಶುದ್ಧ ಗಾಳಿಯ ಮೌಲ್ಯ 22ವನ್ನ ಪಡೆದಿತ್ತು.
ಪಟ್ಟಿಯಲ್ಲಿ ಕುಸಿದ ಸ್ಥಾನ!
ಕಳೆದ ಬಾರಿ ಶುದ್ಧ ಗಾಳಿಯ ಪ್ರದೇಶದ ಪಟ್ಟಿ ಬಿಡುಗಡೆ ಮಾಡಿದಾಗ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ 2ನೇ ಸ್ಥಾನ ಪಡೆದುಕೊಂಡಿತ್ತು. ಈಗ ನಗರಗಳ ಪಟ್ಟಿಯಲ್ಲಿ ಚಿಕ್ಕಮಗಳೂರು ದೇಶದಲ್ಲಿ 8ನೇ ಸ್ಥಾನಕ್ಕೆ ಕುಸಿದಿದೆ. ಇದು ಕಾಫಿ ನಾಡು ಚಿಕ್ಕಮಗಳೂರಿನ ಜನರಿಗೆ ಸಂತಸವನ್ನು ತಂದಿದೆ. ಈ ಕುರಿತಾಗಿ ದೇಶದ ಪ್ರಮುಖ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು ಕರ್ನಾಟಕದ ನಗರಗಳು ಟಾಪ್ 10ರ ಒಳಗೆ ಬಂದಿರುವುದನ್ನು ಶ್ಲಾಘನೀಯ ಉಳಿದಂತೆ ಚಿಕ್ಕಮಗಳೂರು ಪಶ್ಚಿಮ ಘಟ್ಟ ಪರ್ವತ ಶ್ರೇಣಿಯನ್ನು ಹೊಂದಿರುವ ಜಿಲ್ಲೆ ಹಾಗೆಯೇ ಜಿಲ್ಲೆಯ ಮುಳ್ಳಯ್ಯಗಿರಿ ರಾಜ್ಯದ ಅತೀ ಎತ್ತರದ ಶಿಖರವನ್ನು ಹೊಂದಿದೆ.
ಕಾಫಿಯ ತವರು ಜಿಲ್ಲೆಯ ಚಾರ್ಮಾಡಿ, ಕೆಮ್ಮಣ್ಣುಗುಂಡಿ, ಕಳಸ, ಕುದುರೆಮುಖ ಸೇರಿದಂತೆ ಹಲವು ಪ್ರದೇಶಗಳು ಪ್ರಕೃತಿ ಸೊಬಗಿನಿಂದ ಜನರನ್ನು ಸೆಳೆಯುತ್ತವೆ. ಬೆಟ್ಟ ಗುಡ್ಡಗಳ ದೂರದಲ್ಲಿ ಚಿಕ್ಕಮಗಳೂರು ನಗರವಿದ್ದು ಕಾಫಿ ತೋಟಗಳು ಮತ್ತು ಅರೆ ಮಲೆನಾಡಿಗೆ ಹೊಂದಿಕೊಂಡಂತೆ ಇದೆ. ಜಿಲ್ಲೆ ರಾಜ್ಯ ಹಾಗು ವಿದೇಶಗಳಿಂದ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಚಿಕ್ಕಮಗಳೂರು ನಗರದಲ್ಲಿ ಮತ್ತಷ್ಟು ಸ್ವಚ್ಛತೆಗೆ ಜಿಲ್ಲಾಡಳಿತ ಒತ್ತು ನೀಡಬೇಕಿದೆ. ಆಗ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಚಿಕ್ಕಮಗಳೂರು ಉತ್ತಮ ಸ್ಥಾನ ಪಡೆಯಲಿದೆ.