ದತ್ತಮಾಲಾ ಅಭಿಯಾನ: ಜಿಲ್ಲಾಡಳಿತ ಷರತ್ತು ನಿಬಂಧನೆ!!
* ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮ!!
* ಹಾನಿಗೊಳಿಸುವ ಚಟುವಟಿಕೆಗಳ ನಿಷೇಧ!
NAMMUR EXPRESS NEWS
ಚಿಕ್ಕಮಗಳೂರು: ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ನ. 4ರಿಂದ 10ರ ವರೆಗೆ ಶ್ರೀರಾಮಸೇನೆಯಿಂದ ಹಮ್ಮಿಕೊಂಡಿರುವ ದತ್ತಮಾಲಾ ಅಭಿಯಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಷರತ್ತು, ನಿಬಂಧನೆಗಳನ್ನು ವಿಧಿಸಿ ಆದೇಶಿಸಿದ್ದಾರೆ.
ಅ. 22ರಂದು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಕರು ಅನುಮತಿ ಪಡೆದುಕೊಳ್ಳಬೇಕು. ಧಾರ್ಮಿಕ ಸಂಸ್ಥೆಗಳ ಕಟ್ಟುಪಾಡಿಗೆ ಷರತ್ತಿಗೆ ಅನುಗುಣವಾಗಿ ನಡೆದುಕೊಳ್ಳಬೇಕು.ಮಾರಕಾಸ್ತ್ರ ಆಯುಧಗಳನ್ನು ಹಿಡಿದು ಓಡಾಡುವುದು, ಸ್ಫೋಟಕ, ಸಿಡಿಮದ್ದುಗಳ ದಾಸ್ತಾನು ಸಾಗಾಟ, ಆಸ್ತಿಪಾಸ್ತಿ ಹಾನಿಗೊಳಿಸುವ ಚಟುವಟಿಕೆ ನಿಷೇಧಿಸಲಾಗಿದೆ. ಪ್ರತಿಭಟನೆ, ಮುಷ್ಕರ ನಿರ್ಬಂಧಿಸಲಾಗಿದೆ.
ದತ್ತಮಾಲಾಧಾರಿಗಳು ಸಾಗುವ ಮಾರ್ಗ ಸ್ಥಳ, ಸಮಯ, ಧಾರ್ಮಿಕ ಸಭೆ ಬಗ್ಗೆ ಆಯೋಜಕರು ಮುಂಚಿತವಾಗಿ ತಹಶೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬೇಕು. ಕೋಮುಸಂಘರ್ಷಮೂಡಿಸುವ ಭಾಷಣ, ಅವಹೇಳಕನಾರಿ ಘೋಷಣೆ, ಪ್ರಚೋದನಕಾರಿ ಭಾಷಣ, ಭಿತ್ತಿಪತ್ರ, ಧ್ವಜಗಳ ಬಳಕೆಯನ್ನು ನಿಷೇಧಿಸಲಾಗಿದೆ. ನಿರ್ಬಂಧಗಳನ್ನು ಉಲ್ಲಂಘಿ ಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.