ಸಾಲ ಬಾಧೆ: ನದಿಗೆ ಹಾರಿ ಆತ್ಮಹತ್ಯೆ!
– ಎನ್. ಆರ್. ಪುರ ತಾಲೂಕಿನ ಮೆಣಸೂರು ಗ್ರಾಮದಲ್ಲಿ ಘಟನೆ
– ಚಿಕ್ಕಮಗಳೂರು ಕರವೇ ಜಿಲ್ಲಾಧ್ಯಕ್ಷ ಕ್ಯಾನ್ಸರ್ ರೋಗಕ್ಕೆ ಬಲಿ: ಗಣ್ಯರ ಸಂತಾಪ
NAMMUR EXPRESS NEWS
ಎನ್. ಆರ್. ಪುರ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನರಸಿಂಹರಾಜಪುರ, ತಾಲ್ಲೂಕಿನ ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳ್ಳಿ ಕೊಪ್ಪದ ಕಾಗಲದಿಬ್ಬದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಸಂತೋಷ್ ಕುಮಾರ್ 32 ಸಾಲಬಾಧೆ ತಾಳಲಾರದೆ ಭದ್ರಾಹಿನ್ನೀರಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂತೋಷ್ ಕುಮಾರ್ ಸೋಮವಾರ ಸಂಜೆ ಮನೆ ಬಿಟ್ಟು ಹೋದವರು ಹಿಂತಿರುಗಿ ಬಂದಿರಲಿಲ್ಲ. ಮಂಗಳವಾರ ಮೆಣಸೂರು ಸೇತುವೆ ಬಳಿ ಸಂತೋಷ್ ಕುಮಾರ್ ಬೈಕ್ ಪತ್ತೆಯಾಗಿದೆ. ನಂತರ ಆತನ ತಂದೆ ಮಂಜಪ್ಪಗೌಡ ಹಾಗೂ ಸಹೋದರ ಮೆಣಸೂರು ಭದ್ರಾ ಹಿನ್ನೀರಿನ ಬಳಿ ಹುಡುಕಾಟ ಮಾಡಿದ್ದಾರೆ. ಆಗ ಚೆಕ್ ಡ್ಯಾಂ ಬಳಿ ಶವ ಪತ್ತೆಯಾಗಿದೆ. ಸಂತೋಷ್ ಕುಮಾರ್ ಬ್ಯಾಂಕ್ ಹಾಗೂ ಖಾಸಗಿ ಯಾಗಿ ರೂ.4ಲಕ್ಷಸಾಲಮಾಡಿದ್ದು ಸಾಲಮರುಪಾವತಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಪೊಲೀಸರು ರೈತ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ತೇಗೂರು ಜಗದೀಶ್ ನಿಧನ
ಕರ್ನಾಟಕ ರಕ್ಷಣಾ ವೇದಿಕೆಯ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ತೇಗೂರು ಜಗದೀಶ್ ಅವರು ಮಂಗಳವಾರ ತಡರಾತ್ರಿ ನಿಧನ ಹೊಂದಿದ್ದು ಕಾಪಿ ನಾಡು ದೊಡ್ಡ ಹೋರಾಟಗಾರನನ್ನು ಕಳೆದುಕೊಂಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕನ್ನಡ ನಾಡು, ನುಡಿ, ನೆಲ-ಜಲ ಪರವಾದ ಹೋರಾಟ ಹಾಗೂ ಸಂಘಟನಾ ಕಾರ್ಯಗಳಲ್ಲಿ ಜನ ಜಾಗೃತಿ ಮತ್ತು ಅರಿವು ಮೂಡಿಸುವಲ್ಲಿ ಶ್ರಮಿಸಿದ್ದರು ಮ್ ಇವರ ಅಕಾಲಿಕ ಮರಣದಿಂದ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳು, ಸಂಘಸಂಸ್ಥೆಗಳು, ಜನಸಾಮಾನ್ಯರು ಕಂಬನಿ ಮಿಡಿದಿದ್ದಾರೆ. ಜಗದೀಶ್ ಅವರು ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆರೋಗ್ಯವಾಗಿಯೇ ಇದ್ದ ಅವರು ಈಗ್ಗೆ ಕೆಲ ತಿಂಗಳ ಹಿಂದೆ ಇದ್ದಕ್ಕಿದಂತೆ ಅನಾರೋಗ್ಯಕ್ಕೀಡಾಗಿದ್ದರು. ಅವರು ಮೆದುಳು ಸಂಬಧಿ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಬುಧವಾರ ಅಂತ್ಯಕ್ರಿಯೆ ನಡೆಯಿತು.