ಡೈನಾಮೇಟ್ ಬ್ಲಾಸ್ಟ್.,15 ಎಲ್.ಇ.ಡಿ ಟಿ.ವಿ ಭಸ್ಮ..!!?
– ಕಲ್ಲುಗಣಿಗಾರಿಕೆಗೆ ಬಳಸಿದ್ದ ಡೈನಾಮೇಟ್
– ಗೋಡೆಯಲ್ಲಿ ಬಿರುಕು,ಪಾತ್ರೆಗಳು ಚೆಲ್ಲಾಪಿಲ್ಲಿ, ಹಾರಿಹೋದ ಶೀಟ್ಗಳು
NAMMUR EXPRESS NEWS
ಚಿಕ್ಕಮಗಳೂರು: ತಾಲೂಕಿನ ಮರ್ಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಗರಹಳ್ಳಿ, ತಿಮ್ಮನಹಳ್ಳಿ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ಬ್ಲಾಸ್ಟ್ ಗೆ 15 ಎಲ್.ಇ.ಡಿ. ಟಿವಿಗಳು ಬ್ಲಾಸ್ಟ್ ಆಗಿವೆ. ಮನೆಗಳು ಬಿರುಕು ಬಿಟ್ಟಿದ್ದು,ಮನೆಯ ಮೇಲ್ಛಾವಣಿಯ ಶೀಟ್ಗಳು ಹಾರಿಹೋಗಿದೆ. ಅಡುಗೆ ಮನೆಯಲ್ಲಿದ್ದ ಪಾತ್ರೆಗಳು ಮನೆ ತುಂಬಾ ಚೆಲ್ಲಾಪಿಲ್ಲಿಯಾಗಿದ್ದು,ಮನೆಯ ಮೇಲ್ಛಾವಣಿಗೆ ಹಾಕಿದ್ದ ಎಲ್.ಇ.ಡಿ.ಲೈಟ್ ಗಳು ಬ್ಲಾಸ್ಟ್ ಆಗಿವೆ.ಕೆಲ ಮನೆಯ ಕಿಟಕಿಯ ಗಾಜುಗಳು ಪುಡಿ-ಪುಡಿಯಾಗಿದ್ದು, ಬ್ಲಾಸ್ಟ್ನ ತೀವ್ರತೆಗೆ ಸುಮಾರು 5-6 ಸೆಕೆಂಡ್ ಭೂಮಿ ಕಂಪಿಸಿದೆ. ಜ.24 ರ ಸಂಜೆ ಆರು ಗಂಟೆಗೆ 2 ಡೈನಾಮೇಟ್ಗಳು ಬ್ಲಾಸ್ಟ್ ಮಾಡಲಾಗಿದೆ. ವರ್ಷದ ಹಿಂದೆ ಕೂಡ ಇದೇ ಗ್ರಾಮದಲ್ಲಿ ಇದೇ ರೀತಿ ಘಟನೆ ಸಂಭವಿಸಿತ್ತು.
ಇದರಿಂದ ಮರ್ಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಗಣಿಗಾರಿಕೆಯಿಂದ ಆತಂಕ ಸೃಷ್ಠಿಯಾಗಿದೆ.