ಕಾಡಾನೆ ದಾಳಿಗೆ ರೈತ ಬಲಿ: 20 ಲಕ್ಷ ಪರಿಹಾರ
– ಸ್ಥಳಕ್ಕೆ ಶಾಸಕರು,ಮಾಜಿ ಶಾಸಕರ ಭೇಟಿ
– ಸರ್ಕಾರದಿಂದ ರೂ.15 ಲಕ್ಷ ಇಲಾಖೆಯಿಂದ ರೂ. 5 ಲಕ್ಷ ಪರಿಹಾರ
– ಸಂಬಂಧಿಕರು,ಗ್ರಾಮಸ್ಥರು ಸರ್ಕಾರದಿಂದ 25 ಲಕ್ಷ ರೂ.
– ಮನೆಯವರಿಗೆ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಪಟ್ಟು
– ಕುಟುಂಬದಲ್ಲಿ ಆಕ್ರಂದನ: ಗ್ರಾಮದಲ್ಲಿ ನೀರವ ಮೌನ
NAMMUR EXPRESS NEWS
ಕೊಪ್ಪ: ಕೊಪ್ಪ ತಾಲೂಕಿನ ಸೀತೂರಿನಲ್ಲಿ ಕಾಡಾನೆ ದಾಳಿಗೆ ಬಲಿಯಾದ ರೈತ ಉಮೇಶ್ ಕುಟುಂಬಕ್ಕೆ ಸರ್ಕಾರ ಪರಿಹಾರ ಘೋಷಿಸಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕರಾದ ರಾಜೇಗೌಡ ಹಾಗೂ ಮಾಜಿ ಶಾಸಕ ಡಿ.ಎನ್ ಜೀವರಾಜ್ , ಅನೇಕ ನಾಯಕರು ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸರ್ಕಾರದಿಂದ ಕಾಡುಪ್ರಾಣಿಗಳ ದಾಳಿಯಲ್ಲಿ ಮೃತಪಟ್ಟವರಿಗೆ ನೀಡುವ 15 ಲಕ್ಷ ರೂ.ಗಳ ಪರಿಹಾರ ನೀಡುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದರು.
ಈ ಸಂದರ್ಭ ಕುಟುಂಬಸ್ಥರು,ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು, ಪರಿಹಾರ ಮೊತ್ತವನ್ನು ಏರಿಸುವಂತೆ ಆಗ್ರಹಿಸಿದರು. ಆಗ ಮಾಜಿ ಶಾಸಕ ಡಿ.ಎನ್ ಜೀವರಾಜ್ ಅಧಿಕಾರಗಳನ್ನ ತರಾಟೆಗೆ ತೆಗೆದುಕೊಂಡು ಅಧಿಕಾರಗಳು,ಇಲಾಖೆಯ ನಿರ್ಲಕ್ಷ್ಯದಿಂದ ಒಂದು ಜೀವ ಬಲಿಯಾಗಿದೆ ಕುಟುಂಬಕ್ಕೆ ಆಧಾರವಾಗಿದ್ದ ಉಮೇಶ್ನ ಕಳೆದುಕೊಂಡ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರೂ. ಪರಿಹಾರ, ಮೃತರ ಮನೆಯಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಸ್ಥಳೀಯರೊಡನೆ ಚರ್ಚಿಸಿ ಶಾಸಕರು ಮತ್ತು ಇಲಾಖೆಗೆ ಆಗ್ರಹಿಸಿದರು. ನಂತರ ಸರ್ಕಾರದಿಂದ ನಿಗದಿ ಪಡಿಸಿದ 15 ಲಕ್ಷ ರೂ.ಪರಿಹಾರದೊಡನೆ ಇಲಾಖೆಯಿಂದ 5 ಲಕ್ಷ ರೂ.ಗಳ ಪರಿಹಾರ ಒಟ್ಟು 20 ಲಕ್ಷ ರೂ.ಗಳ ಪರಿಹಾರ ನೀಡುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದರು. 15 ಲಕ್ಷ ರೂ.ಗಳ ಚೆಕ್ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಶಾಸಕರಾದ ಟಿ.ಡಿ ರಾಜೇಗೌಡ ಒಂದು ಲಕ್ಷ ರೂ.ಪರಿಹಾರ ನೀಡುವುದಾಗಿ ಹೇಳಿದರು .ಕುಟುಂಬದಲ್ಲಿ ಒಬ್ಬರಿಗೆ ತಾತ್ಕಾಲಿಕವಾಗಿ ಉದ್ಯೋಗ ನೀಡೋದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.